ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬರೀ ಪತಿ ಹೆಸರಿನಿಂದ ಗುರುತು ಪಡೆದವರಲ್ಲ. ಅವರ ಕೆಲಸ, ಜವಾಬ್ದಾರಿ, ಫ್ಯಾಷನ್ ಎಲ್ಲವೂ ಜನರ ಗಮನ ಸೆಳೆಯುತ್ತದೆ. ಸೆಲೆಬ್ರಿಟಿಯರಲ್ಲಿ ಒಬ್ಬರಾಗಿರುವ ನೀತಾ ಬಳಿ ಧರಿಸುವ ವಾಚ್ ಬೆಲೆ ಹುಬ್ಬೇರಿಸುವಂತೆ ಮಾಡುತ್ತದೆ.
ಸೆಲೆಬ್ರಿಟಿಗಳು ಎಂದ ಮೇಲೆ ಅವರ ಉಡುಪು, ಅವರು ಧರಿಸುವ ವಾಚ್, ನೆಕ್ಲೆಸ್, ಹ್ಯಾಂಡ್ ಬ್ಯಾಗ್ ಅವರು ಓಡಾಡುವ ಕಾರು ಎಲ್ಲವೂ ದುಬಾರಿ. ಅದರಲ್ಲೂ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರು ತಮ್ಮ ಲೈಫ್ ಸ್ಟೈಲ್ ಹಾಗೂ ದುಬಾರಿ ವಸ್ತುಗಳ ಕಲೆಕ್ಷನ್ ನಿಂದ ಸದಾ ಸುದ್ದಿಯಲ್ಲಿರುತ್ತಾರೆ.
ನೀತಾ ಅಂಬಾನಿ (Nita Ambani ) ಯವರು ಪತ್ನಿಯಾಗಿ, ಉದ್ಯಮಿಯಾಗಿ, ನೃತ್ಯಗಾರ್ತಿಯಾಗಿ ಹಾಗೂ ತಾಯಿಯಾಗಿ ಎಲ್ಲ ರಂಗದಲ್ಲಿಯೂ ಸಕ್ಸಸ್ ಆಗಿದ್ದಾರೆ. ಈ ವಯಸ್ಸಿನಲ್ಲೂ ಅವರಿಗಿರುವ ಫ್ಯಾಷನ್ (fashion) ಹಾಗೂ ಅವರ ದುಬಾರಿ ಕಲೆಕ್ಷನ್ ಗಳು ಫ್ಯಾಷನ್ ಪ್ರಿಯರ ನಿದ್ದೆಗೆಡಿಸುತ್ತದೆ. ಅವರು ಧರಿಸುವ ಉಡುಪು, ನೆಕ್ಲೆಸ್, ಅವರು ಬಳಸುವ ಹ್ಯಾಂಡ್ ಬ್ಯಾಗ್, ಚಪ್ಪಲಿ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಸಧ್ಯಕ್ಕೆ ನೀತಾ ಅಂಬಾನಿಯವರು ಕಟ್ಟಿಕೊಂಡ ದುಬಾರಿ ಬೆಲೆಯ ಕಾರ್ಟಿಯರ್ ವಾಚ್ ಎಲ್ಲರ ಗಮನ ಸೆಳೆಸಿದೆ.
Sudha Murthy: ಸುಧಾ ಮೂರ್ತಿ ಅಗ್ಗದ ಸೀರೆ ಖರೀದಿ ಮಾಡೋದೇಕೆ?
ನೀತಾ ಅಂಬಾನಿಯವರ ದುಬಾರಿ ಬೆಲೆ ವಾಚ್ (Watch) : ಜಗತ್ತಿನ ಅನೇಕ ದುಬಾರಿ ಬೆಲೆಯ ವಸ್ತುಗಳ ಕಲೆಕ್ಷನ್ ನೀತಾ ಅಂಬಾನಿಯವರ ಬಳಿ ಇದೆ. ಅಂಬಾನಿ ಕುಟುಂಬ ವಾಸಿಸುವ ಮನೆ ಆಂಟಿಲಿಯಾ ಕೂಡ ಭಾರತದ ಅತ್ಯಂತ ಪ್ರಸಿದ್ಧ ಮತ್ತು ದುಬಾರಿ ಮನೆಗಳಲ್ಲಿ ಒಂದಾಗಿದೆ. ಹಾಗೆಯೇ ಅವರು ಬಳಸುವ ಒಂದೊಂದು ವಸ್ತುವಿನ ಬೆಲೆಯೂ ದಂಗುಬಡಿಸುತ್ತದೆ. ನೀತಾ ಅಂಬಾನಿ ಕೆಲ ದಿನಗಳ ಹಿಂದೆ ತಮ್ಮ ವಿಭಿನ್ನ ಲುಕ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಆ ಸಂದರ್ಭದಲ್ಲಿ ನೀತಾ ಅಂಬಾನಿ ನೀಲಿ ಬಣ್ಣದ ಟಾಪ್ ಒಂದನ್ನು ಧರಿಸಿದ್ದರು. ಆ ಟಾಪ್ ಮೇಲೆ ಚಿನ್ನದ ಕಸೂತಿಯಿಂದ MI ಎಂದು ಬರೆಯಲಾಗಿತ್ತು. ಇದರ ಜೊತೆಗೆ ಅವರು ಬಳಸಿದ್ದ ಹ್ಯಾಂಡ್ ಬ್ಯಾಗ್ ಮತ್ತು ವಾಚ್ ಎಲ್ಲರ ಕಣ್ಣುಕುಕ್ಕುವಂತಿತ್ತು.
ಈ ವೇಳೆ ನೀತಾ ಅಂಬಾನಿಯವರು ಧರಿಸಿದ್ದ ಕೈ ಗಡಿಯಾರ ಕ್ಲೆ ಡಿ ಕಾರ್ಟಿಯರ್ ಕಂಪನಿಯದ್ದು ಎಂಬುದು ಪತ್ತೆಯಾಗಿದೆ. ಇದು ಗುಲಾಬಿ ಬಣ್ಣದ ವಾಚ್ ಆಗಿದ್ದು 18 ಕ್ಯಾರೆಟ್ ಚಿನ್ನದ ಅನ್ ಕಟ್ ಡೈಮಂಡ್ ಬ್ರೆಸ್ಲೆಟ್ ಅನ್ನು ಹೊಂದಿದೆ. ಈ ಐಷಾರಾಮಿ ವಾಚ್ ಫ್ಲಿಂಕ್ ಸನ್ ರೇ ಎಫೆಕ್ಟ್ ಡಯಲ್ ಮತ್ತು ನೀಲಿ ರೋಮನ್ ನ್ಯುಮರಲ್ ಹವರ್ ಮಾರ್ಕರ್ ಗಳನ್ನು ಹೊಂದಿದೆ. ಇದರ ಹೊರತಾಗಿ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ ಈ ವಾಚ್ ಬೆಲೆ ಬರೋಬ್ಬರಿ 25,35,940 ರೂಪಾಯಿ.
ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!
ಯಶಸ್ಸಿನ ಉತ್ತುಂಗದಲ್ಲಿರುವ ನೀತಾ ಅಂಬಾನಿ, ರಾಣಿಯಂತೆ ಬದುಕುತ್ತಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನವೆಂಬರ್ 1, 1963 ರಂದು ಜನಿಸಿದ ನೀತಾ ಅಂಬಾನಿ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಫೋರ್ಬ್ಸ್‌ನ ಏಷ್ಯಾದ ಅತ್ಯಂತ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ನೀತಾ ಅಂಬಾನಿ ಹೆಸರಿದೆ. ಹೆಸರಾಂತ ಉದ್ಯಮಿಯಾಗುವುದರ ಹೊರತಾಗಿ, ನೀತಾ ತನ್ನ ಮೂವರು ಮಕ್ಕಳಾದ ಅನಂತ್ ಅಂಬಾನಿ, ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರಿಗೆ ಪ್ರೀತಿಯ ತಾಯಿಯೂ ಹೌದು. ಅಂಬಾನಿ ಕುಟುಂಬದ ಶಕ್ತಿಯಾಗಿರುವ ನೀತಾ ಅಂಬಾನಿ ಭಾರತದ ನಾಲ್ಕನೇ ಶ್ರೀಮಂತ ಮಹಿಳೆಯಾಗಿದ್ದಾರೆ. ನೀತಾ ಅಂಬಾನಿಯವರ ಒಟ್ಟೂ ಆಸ್ತಿ ಸುಮಾರು 21,000 ಕೋಟಿಯಾಗಿದೆ. ನಾನು ಮುಖೇಶ್ ಹೆಂಡತಿಯಾಗಿ ಒಳ್ಳೆಯ ಜೀವನ ನಡೆಸುತ್ತಿದ್ದೇನೆ. ಒಟ್ಟಿಗೆ ಪ್ರೀತಿಯಿಂದ ಇರುವುದು ಹಾಗೂ ಜೊತೆಯಾಗಿ ಕೆಲಸವನ್ನು ಮಾಡುವುದೇ ಜೀವನ ಎಂದು ನೀತಾ ಅಂಬಾನಿ ತಮ್ಮ ವೈವಾಹಿಕ ಜೀವನದ ಬಗ್ಗೆ ಹೇಳ್ತಿರುತ್ತಾರೆ.