ಕೂದಲು ಬೆಳ್ಳಗಾಗೋದು ಈಗ ಮಾಮೂಲಿ. ಯುವಕರೂ ಹೇರ್ ಡೈ ಬಳಸೋದು ಕೂಡ ಅನಿವಾರ್ಯವಾಗಿದೆ. ಕೂದಲಿಗೆ ಹಾನಿಯಿಲ್ಲದೆ ಕೂದಲ ಬಣ್ಣ ಬದಲಾಗಬೇಕೆಂದ್ರೆ ನೀವು ಈ ಟಿಪ್ಸ್ ಫಾಲೋ ಮಾಡಿ.
ವರ್ಷ ನಲವತ್ತು ದಾಟುತ್ತಿದ್ದಂತೆ ಹಿಂದಿನ ಕಾಲದ ಮಂದಿ ತಲೆ ಕೂದಲು ಅಲ್ಲಲ್ಲಿ ಬೆಳ್ಳಗಾಗ್ತಿತ್ತು. ಈಗ 18ರ ಹರೆಯದ ಹುಡುಗರ ತಲೆ ಕೂದಲು ಬೆಳ್ಳಗಾಗೋದನ್ನು ನಾವು ಕಾಣ್ಬಹುದು. ತಲೆ ಕೂದಲು ಬೆಳ್ಳಗಾಗಲು ನಾನಾ ಕಾರಣವಿದೆ. ಬಿಳಿ ಕೂದಲು ಕಾಣಿಸಿಕೊಂಡ್ರೆ ನಾಚಿಕೆ ಎನ್ನುವ ಕಾರಣಕ್ಕೆ ಬಹುತೇಕರು ಹೇರ್ ಡೈ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿ ಹೇರ್ ಡೈಗಳನ್ನು ನೀಡು ನೋಡ್ಬಹುದು. ಹಚ್ಚಿದ ಕೆಲವೇ ಕ್ಷಣಗಳಲ್ಲಿ ಕೂದಲು ಕಪ್ಪಗಾಗೋದು ನಿಜ. ಅದು ನಿಮಗೆ ಖಾಯಂ ಪರಿಹಾರ ನೀಡುವುದಿಲ್ಲ. ವಾರ ಕಳೆದಂತೆ ಮತ್ತೆ ಬಿಳಿ ಕೂದಲು ಕಾಣಿಸಲು ಶುರುವಾಗುತ್ತದೆ. ಆಗ ಮತ್ತೆ ಹೇರ್ ಡೈ ಹಚ್ಚಿಕೊಳ್ಳಬೇಕು. ವಾರಕ್ಕೆ ಒಮ್ಮೆ, 15 ದಿನಕ್ಕೊಮ್ಮೆ ನೀವು ಹೇರ್ ಡೈ ಬಳಸಿದ್ರೆ ಅದು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಕೂದಲು ತೆಳ್ಳಗಾಗುತ್ತದೆ. ಕೂದಲು ಉದುರೋದು ಹೆಚ್ಚಾಗುತ್ತದೆ. ಅನೇಕ ಬಾರಿ ತಲೆ ಶುಷ್ಕವಾಗೋದಿದೆ. ಎಲ್ಲರೂ ಈ ಹೇರ್ ಡೈ ಬಳಸಲು ಸಾಧ್ಯವಿಲ್ಲ. ಕೆಲವರಿಗೆ ಇದು ವಿಪರೀತ ಅಲರ್ಜಿ ಉಂಟು ಮಾಡುವ ಕಾರಣ, ತಲೆ, ಮುಖ, ಕತ್ತು ಸೇರಿದಂತೆ ಎಲ್ಲ ಕಡೆ ದದ್ದುಗಳು ಕಾಣಿಸಿಕೊಳ್ಳಬಹುದು. ತುರಿಕೆಯಾಗ್ಬಹುದು. ನೀವು ನಿಮ್ಮ ಕೂದಲು ಕಪ್ಪಾಗಬೇಕೆಂದು ಬಯಸಿದ್ರೆ ಮನೆಯಲ್ಲೇ ಮದ್ದು ಮಾಡಬಹುದು.
ಕೆಲವರು ಬಿಳಿ (White) ಕೂದಲನ್ನು ಮುಚ್ಚಿಡಲು ಮೆಹಂದಿ ಬಳಸ್ತಾರೆ. ಆದ್ರೆ ಇದು ಕೂದಲಿನ ಬಣ್ಣವನ್ನು ಕೇಸರಿ ಮಾಡೋದ್ರಿಂದ ನೋಡಲು ಮತ್ತಷ್ಟು ಅಸಹ್ಯವಾಗಿ ಕಾಣುತ್ತದೆ. ನಿಮ್ಮ ಕೂದಲು (Hair) ಕಪ್ಪಗಿನ ಬಣ್ಣವನ್ನೇ ಪಡೆಯಬೇಕು ಎಂದಾದ್ರೆ ನೀವು ತೆಂಗಿನ ಸಿಪ್ಪೆಯ ನಾರನ್ನು ಬಳಸಬಹುದು. ನಾವಿಂದು ತೆಂಗಿನಕಾಯಿ ನಾರು ಅಥವಾ ಒಣಗಿದ ಸಿಪ್ಪೆಯಿಂದ ಹೇಗೆ ಹೇರ್ ಡೈ ತಯಾರಿಸಬೇಕು ಅನ್ನೋದನ್ನು ಹೇಳ್ತೇವೆ.
undefined
ಓಣಂ ಡ್ರೆಸ್‌ನಲ್ಲಿ ಮಂಜು ವಾರಿಯರ್, ಕಾಲೇಜ್ ಹುಡ್ಗಿ ಬಂದ್ಲು ಎಂದ ಫ್ಯಾನ್ಸ್
ತೆಂಗಿನಕಾಯಿ (Coconut ) ನಾರಿನಿಂದ ಹೇರ್ ಡೈ : ಮೊದಲು ಮನೆಯಲ್ಲಿರುವ ತೆಂಗಿನ ಕಾಯಿ ಸಿಪ್ಪೆ ಬಿಡಿಸಿ, ನಾರನ್ನು ಒಂದು ಕಡೆ ತೆಗೆದಿಡಿ. ನಂತ್ರ ನೀವು ಅದನ್ನು ಸುಡಬೇಕು. ಒಂದು ಕಬ್ಬಿಣದ ಬಾಣಲೆಗೆ ನೀವು ತೆಂಗಿನ ನಾರನ್ನು ಹಾಕಿ. ಅದನ್ನು ಗ್ಯಾಸ್ ಒಲೆ ಮೇಲಿಟ್ಟು ನೀವು ಬಿಸಿ ಮಾಡ್ಬೇಕು. ನಾರು ಬಿಸಿಯಾದ ನಂತ್ರ ನೀವು ನಾರಿಗೆ ಸ್ವಲ್ಪ ಬೆಂಕಿ ತಾಗಿಸಿದ್ರೆ ಅದು ಹೊತ್ತಿ ಉರಿಯುತ್ತದೆ. ನಾಲ್ಕೈದು ಬಾದಾಮಿ ಹಾಗೂ ಎರಡು ಕರ್ಪೂರವನ್ನು ಹಾಕಿಯೂ ನೀವು ನಾರನ್ನು ಸುಡಬಹುದು. ಒಂದು ಸೌಟ್ ನಿಂದ ನೀವು ಬೆಂಕಿ ಮೇಲೆ ಬರದಂತೆ ಎಚ್ಚರಿಕೆಯಿಂದ ಕೈ ಆಡಿದಿ, ನಾರು ಸರಿಯಾಗಿ ಉರಿಯುವಂತೆ ನೋಡಿಕೊಳ್ಳಿ. ನಾರು ಉರಿದು ಪುಡಿಯಾಗ್ತಿದ್ದಂತೆ ಗ್ಯಾಸ್ ಬಂದ್ ಮಾಡಿ ನೀವು ಅದನ್ನು ತಣ್ಣಗಾಗಲು ಬಿಡಿ. ನಂತ್ರ ಅದನ್ನು ಸೋಸಿಕೊಳ್ಳಿ. ಈ ಪುಡಿಯನ್ನು ನೀವು ಒಂದು ಡಬ್ಬದಲ್ಲಿ ಹಾಕಿ ಸಂಗ್ರಹಿಸಿಟ್ಟುಕೊಳ್ಳಬಹುದು.
ಕನ್ನಡ ಸೀರಿಯಲ್‌ನ ಅತ್ಯಂತ ಕಿರಿಯ ವಯಸ್ಸಿನ ನಾಯಕಿ ಯಾರು ಗೊತ್ತೇ.? ಇಲ್ಲಿದೆ ನಿಮ್ಮಿಷ್ಟದ ನಟಿಯರ ವಿವರ...
ಪಾರ್ಟಿಗೆ ಹೋಗುವ ಸಂದರ್ಭದಲ್ಲಿ ಸ್ವಲ್ಪ ಸಮಯದಲ್ಲೇ ನಿಮ್ಮ ಕೂದಲು ಕಪ್ಪಾಗ್ಬೇಕು ಎಂದಾದ್ರೆ ನೀವು ಸ್ವಲ್ಪ ತೆಂಗಿನ ನಾರಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಲೋವೇರಾ ಜೆಲ್ ಹಾಕಿ ಮಿಕ್ಸ್ ಮಾಡಿ, ಅದನ್ನು ಬಿಳಿ ಕೂದಲಿಗೆ ಹಚ್ಚಿ. ಅದು ಒಣಗಿದ ಮೇಲೆ ನೀವು ಕೂದಲಿನ ಬಣ್ಣ ಪರಿಶೀಲಿಸಿ.
ನೀವು ಇನ್ನೊಂದು ವಿಧಾನದಲ್ಲೂ ಇದನ್ನು ಬಳಸಬಹುದು. ನೀವು ತೆಂಗಿನ ನಾರಿನ ಪುಡಿಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಅದನ್ನು ನಿಮ್ಮ ತಲೆಯಲ್ಲಿರುವ ಬಿಳಿ ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಕೂದಲನ್ನು ಸ್ವಚ್ಛಗೊಳಿಸಿ. ನಿಮ್ಮ ಬಿಳಿ ಕೂದಲು ಕಪ್ಪಗಾಗೋದನ್ನು ನೀವು ನೋಡ್ಬಹುದು. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲದ ಕಾರಣ ನೀವು ಇದನ್ನು ಆರಾಮವಾಗಿ ಬಳಕೆ ಮಾಡ್ಬಹುದು.