Hair Spa: ಹೇರ್ ಸ್ಪಾನಿಂದ ಪ್ರಯೋಜನ ಏನು? ನೀತಾ ಅಂಬಾನಿ ಹೇರ್ ಸ್ಟೈಲಿಸ್ಟ್ ನೀಡಿದ್ದಾರೆ ಟಿಪ್ಸ್

Published : Apr 22, 2025, 03:59 PM ISTUpdated : Apr 22, 2025, 04:21 PM IST
Hair Spa: ಹೇರ್ ಸ್ಪಾನಿಂದ ಪ್ರಯೋಜನ ಏನು? ನೀತಾ ಅಂಬಾನಿ ಹೇರ್ ಸ್ಟೈಲಿಸ್ಟ್ ನೀಡಿದ್ದಾರೆ ಟಿಪ್ಸ್

ಸಾರಾಂಶ

ಕೂದಲು ಆರೈಕೆಗೆ ಹೇರ್ ಸ್ಪಾ ಉತ್ತಮ. ನೆತ್ತಿ, ಕೂದಲು ಪೋಷಿಸುವ ಬಹುಹಂತದ ಚಿಕಿತ್ಸೆ ಇದು. ಶಾಂಪೂ, ಕಂಡಿಷನರ್, ಎಣ್ಣೆ, ಮಸಾಜ್, ಹೇರ್ ಮಾಸ್ಕ್ ಬಳಸಿ ಐದು ಹಂತಗಳಲ್ಲಿ ಪೂರ್ಣ. ತಲೆಹೊಟ್ಟು ನಿವಾರಣೆ, ಕೂದಲು ತೇವಾಂಶ ಕಾಪಾಡಲು, ನೈಸರ್ಗಿಕ ಹೊಳಪಿಗೆ ಸಹಕಾರಿ. ಮನೆಯಲ್ಲೂ ಹೇರ್ ಸ್ಪಾ ಮಾಡಬಹುದು. ತೆಂಗಿನ ಎಣ್ಣೆ ಮಸಾಜ್, ಗಿಡಮೂಲಿಕೆ ಶಾಂಪೂ, ಟೀ ಎಲೆ ನೀರಿನ ಕಂಡಿಷನರ್, ಮೊಟ್ಟೆ, ಜೇನು, ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸಿ.

ತಲೆ ಮೇಲೆ ದಟ್ಟ ಕೂದಲು ಇಟ್ಕೊಳ್ಳೋದೇ ಈಗ ದೊಡ್ಡ ಸವಾಲು. ನಿತ್ಯ ಹೊಟ್ಟೆಗೆ ಊಟ ಹಾಕಿದಂತೆ ಕೂದಲಿನ ಆರೈಕೆ ಮಾಡ್ಬೇಕು. ಇಲ್ಲ ಅಂದ್ರೆ ವಯಸ್ಸು 25 ಆಗೋ ಮೊದಲೇ ತಲೆ ಬೋಳವಾಗುತ್ತೆ. ಇಲ್ಲ ತಲೆ ಮೇಲೆ ಒಂದಿಷ್ಟು ಬಿಳಿ ಕೂದಲು ಕಾಣಿಸಿಕೊಳ್ಳಲು ಶುರುವಾಗುತ್ತೆ. ನಿಮ್ಮ ಕೂದಲಿನ ಆರೈಕೆಗೆ ಹೇರ್ ಸ್ಪಾ ಬಹಳ ಒಳ್ಳೆಯದು.  ಹೇರ್ ಸ್ಪಾ (Hair Spa) ಎಂದರೇನು, ಅದರ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.  

ಹೇರ್ ಸ್ಪಾ ಎಂದರೇನು? : ಹೇರ್ ಸ್ಪಾ,  ಒಂದು ರೀತಿಯ ಕೂದಲ ಚಿಕಿತ್ಸೆ. ಹೇರ್ ಸ್ಪಾ ವಾಸ್ತವವಾಗಿ ನಿಮ್ಮ ನೆತ್ತಿ ಮತ್ತು ನಿಮ್ಮ ಕೂದಲು ಎರಡನ್ನೂ ಪೋಷಿಸುವ ಬಹು-ಹಂತದ ಚಿಕಿತ್ಸೆ. ಈ ಪ್ರಕ್ರಿಯೆ  ಶಾಂಪೂ, ಕಂಡಿಷನರ್, ಎಣ್ಣೆ, ಮಸಾಜ್ ಮತ್ತು ಹೇರ್ ಮಾಸ್ಕ್ನೊಂದಿಗೆ ಐದು ಹಂತಗಳಲ್ಲಿ ಪೂರ್ಣಗೊಳ್ಳುತ್ತೆ. ಇದು ತಲೆಗೆ ಮಸಾಜ್ ನೀಡುವುದಲ್ಲದೆ ಕೂದಲನ್ನು ಪೋಷಿಸುತ್ತೆ. ಸೆಲೆಬ್ರಿಟಿ ಕೇಶ ವಿನ್ಯಾಸಕ ಅಮಿತ್ ಠಾಕೂರ್ (Hair stylist Amit Thakur)  ಹೇರ್ ಸ್ಪಾ ಬಗ್ಗೆ ಸಲಹೆ ನೀಡಿದ್ದಾರೆ. ಸಲೂನ್ಗಳು ಸಾಮಾನ್ಯವಾಗಿ ಕೂದಲು ಉದುರುವಿಕೆಗೆ ಪರಿಹಾರವಾಗಿ ಹೇರ್ ಸ್ಪಾ ಚಿಕಿತ್ಸೆಯನ್ನು ಪ್ರಚಾರ ಮಾಡುತ್ತವೆಯಾದ್ರೂ ಅದು ತಾತ್ಕಾಲಿಕ ಎಂದು ಅಮಿತ್ ಹೇಳಿದ್ದಾರೆ. 

ಹೇರ್ ಸ್ಪಾ ಪ್ರಯೋಜನ : ಕೂದಲು ರಕ್ಷಣೆಗೆ ಕೆರಾಟಿನ್ ಅಥವಾ ಬೊಟಾಕ್ಸ್ನಂತಹ ಇತರ ಚಿಕಿತ್ಸೆಗಳಿಗಿಂತ ಹೇರ್ ಸ್ಪಾ ಒಳ್ಳೆಯದು ಎಂದು ಅಮಿತ್ ಹೇಳಿದ್ದಾರೆ.  ಹೇರ್ ಸ್ಪಾ ಕೂದಲಿನ ನೈಸರ್ಗಿಕ ರಚನೆಯನ್ನು ಬದಲಾಯಿಸುವುದಿಲ್ಲ.  ಕೂದಲು ಉದುರುವಿಕೆ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನೆತ್ತಿಯನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.  ಇದು ಕಾಲಾನಂತರದಲ್ಲಿ ಆರೋಗ್ಯಕರ ಕೂದಲಿಗೆ ಕಾರಣವಾಗುತ್ತೆ ಎಂದಿದ್ದಾರೆ. ಕೂದಲಿನ ನೈಸರ್ಗಿಕ ರಚನೆ ಮೇಲೆ ಪರಿಣಾಮ ಬೀರುವ ಇತರ ಚಿಕಿತ್ಸೆಗಿಂದ ಹೇರ್ ಸ್ಪಾ ಆಯ್ಕೆ ಒಳ್ಳೆಯದು ಎಂದಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಇಂತಹ ಸಮಸ್ಯೆಗೆಲ್ಲಾ ದುಬಾರಿ ಕ್ರೀಮ್ ಬಳಸೋದಿಲ್ವಂತೆ..!

ಹೇರ್ ಸ್ಪಾ ಮಾಡಿಸಿದ್ರೆ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ತಲೆಹೊಟ್ಟಿಗೆ ಮುಖ್ಯ ಕಾರಣ ಮಲಸೇಜಿಯಾ ಗ್ಲೋಬೋಸಾ (1) ಎಂಬ ಶಿಲೀಂಧ್ರ.  ಹೇರ್ ಸ್ಪಾ ಸಮಯದಲ್ಲಿ ಬಳಸುವ ಬೇವಿನಂತಹ ಪದಾರ್ಥಗಳು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿವೆ.  ಇದು ತಲೆಹೊಟ್ಟನ್ನು ನಿವಾರಿಸುತ್ತದೆ.  ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಹೇರ್ ಸ್ಪಾ ಪ್ರಯೋಜನಕಾರಿ. ಹೇರ್ ಸ್ಪಾ  ವೇಳೆ ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲನ್ನು ಬಳಸಿದ್ರೆ ಅದು ಕೂದಲಿಗೆ ತೇವಾಂಶ ನೀಡುತ್ತದೆ. ಕೂದಲಿಗೆ ಆಳವಾದ ಕಂಡೀಷನಿಂಗ್ ನೀಡಲು ಇದು ಸಹಕಾರಿ.ಹೇರ್ ಸ್ಪಾ  ಕೂದಲನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದ್ರಿಂದ ಕೂದಲಿಗೆ ನೈಸರ್ಗಿಕ ಹೊಳಪು ಸಿಗುತ್ತದೆ.  ಹೇರ್ ಸ್ಪಾ ಕೂದಲಿನ ಸೌಂದರ್ಯ ಹೆಚ್ಚಿಸುವುದಲ್ಲದೆ  ಒತ್ತಡ ಕಡಿಮೆ ಮಾಡುತ್ತದೆ. ತಲೆ ಮಸಾಜ್ ನಿಂದ ಒತ್ತಡ ಕಡಿಮೆ ಮಾಡ್ಬಹುದು ಎಂದು ಅನೇಕ ಸಂಶೋಧನೆಗಳು ಹೇಳಿವೆ.   

ಮನೆಯಲ್ಲಿ ಹೇರ್ ಸ್ಪಾ ಮಾಡೋದು ಹೇಗೆ? : ನೀವು ಹೇರ್ ಸ್ಪಾಗೆ ಪಾರ್ಲರ್ ಗೆ ಹೋಗ್ಬೇಕು ಅಂತೇನಿಲ್ಲ. ಮನೆಯಲ್ಲೇ ನೀವು ಹೇರ್ ಸ್ಪಾ ಮಾಡಬಹುದು.   ಹೇರ್ ಸ್ಪಾದ ಮೊದಲ ಹಂತವೆಂದರೆ ತಲೆ ಮಸಾಜ್. ಇದಕ್ಕಾಗಿ ನೀವು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು. ಮೊದಲು ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದನ್ನು ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.  ನಂತ್ರ ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಅದ್ದಿ.   ಟವಲ್ ನಲ್ಲಿರುವ ನೀರನ್ನು ಹಿಂಡಿ ನಿಮ್ಮ ಕೂದಲಿನ ಸುತ್ತಲೂ ಕಟ್ಟಿಕೊಳ್ಳಿ. ಈ ಪ್ರಕ್ರಿಯೆಯಿಂದ, ಕೂದಲಿಗೆ ಹಚ್ಚುವ ಎಣ್ಣೆಯು ನೆತ್ತಿಯ ಆಳಕ್ಕೆ ತಲುಪುತ್ತದೆ, ಇದು ಕೂದಲನ್ನು ಪೋಷಿಸುತ್ತದೆ.ಆ ನಂತ್ರ ಗಿಡಮೂಲಿಕೆ ಶಾಂಪೂ ಬಳಸಿ ಕೂದಲನ್ನು ಸ್ವಚ್ಛಗೊಳಿಸಿ. ತಣ್ಣನೆಯ ನೀರಿನಲ್ಲಿ ನೀವು ಕೂದಲನ್ನು ತೊಳೆಯಬೇಕು. 

ಬಜೆಟ್ ಕಮ್ಮಿ ಇದೆಯೇ? ಮಾರುಕಟ್ಟೆಗೆ ಬಂದಿವೆ ಬೆಳ್ಳಿ

ಕೂದಲು ಸ್ವಚ್ಛಗೊಳಿಸಿದ ನಂತ್ರ ಕಂಡಿಷನರ್ ಹಚ್ಚಲು ಮರೆಯಬೇಡಿ. ಇದಕ್ಕಾಗಿ ಟೀ ಎಲೆ ನೀರನ್ನು ಬಳಸಬಹುದು. ಚಹಾ ಎಲೆಯ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಅದನ್ನು ಇಡೀ ಕೂದಲಿಗೆ ಚೆನ್ನಾಗಿ ಹಚ್ಚಿ. ಹೇರ್ ಮಾಸ್ಕ್ ಹೇರ್ ಸ್ಪಾದ ಕೊನೆಯ ಮತ್ತು ಪ್ರಮುಖ ಹಂತವಾಗಿದೆ.  

ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ.  ಅದಕ್ಕೆ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.   ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಅದನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ 20 ನಿಮಿಷಗಳ ನಂತ್ರ  ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2-3 ತಿಂಗ್ಳು ಸಾಕು.. ಕೂದಲು ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ, ಶಾಂಪೂ ಜೊತೆ ಇದನ್ನ ಮಿಕ್ಸ್ ಮಾಡಿ
Baby Gold Pendant: ಜಸ್ಟ್ 2 ಗ್ರಾಂ ಚಿನ್ನದಲ್ಲಿ ಕ್ಯೂಟ್ ಬೇಬಿ ಪೆಂಡೆಂಟ್