ಒಂದೊಂದು ಬಿಳಿ ಕೂದಲು ಸಹ ಬೇರಿನಿಂದಲೇ ಕಪ್ಪಾಗುತ್ತೆ… ನೀವು ಮಾಡಬೇಕಾದ್ದು ಸಿಂಪಲ್

Published : Feb 01, 2025, 02:08 PM ISTUpdated : Feb 01, 2025, 07:25 PM IST
ಒಂದೊಂದು ಬಿಳಿ ಕೂದಲು ಸಹ ಬೇರಿನಿಂದಲೇ ಕಪ್ಪಾಗುತ್ತೆ… ನೀವು ಮಾಡಬೇಕಾದ್ದು ಸಿಂಪಲ್

ಸಾರಾಂಶ

ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆ. ರಾಸಾಯನಿಕ ಬಣ್ಣಗಳ ಬದಲು, ನೈಸರ್ಗಿಕ ಪರಿಹಾರಗಳಿವೆ. ತೆಂಗಿನ ನಾರಿನ ಹೊಟ್ಟನ್ನು ಸುಟ್ಟು ಪುಡಿಮಾಡಿ, ಪೆಟ್ರೋಲಿಯಂ ಜೆಲ್ಲಿ ಅಥವಾ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆದರೆ ಕೂದಲು ಕಪ್ಪಾಗುತ್ತದೆ.  

ಕೂದಲಿಗೆ ಸಂಬಂಧಿಸಿದ ಸಮಸ್ಯೆ ಸಾಮಾನ್ಯವಾಗಿದೆ, ಅದರಲ್ಲೂ ಕೂದಲು ವಯಸ್ಸಲ್ಲದ ವಯಸ್ಸಲ್ಲಿ ಬಿಳಿಯಾದರೆ (white hair), ನಾವು ಅದನ್ನು ಮರೆಮಾಡಲು ವಿವಿಧ ಬಣ್ಣಗಳು ಮತ್ತು ಕೆಮಿಕಲ್ ಯುಕ್ತ ಹೇರ್ ಕಲರ್ ಬಳಕೆ ಮಾಡ್ತೀವಿ. ಆದರೆ ಒಮ್ಮೆ ರಾಸಾಯನಿಕಗಳನ್ನು ನೆತ್ತಿಗೆ ಹಚ್ಚಿದ ನಂತರ, ಕೂದಲು ಅದಕ್ಕೆ ಒಗ್ಗಿಕೊಳ್ಳುತ್ತದೆ ಮತ್ತು ರಾಸಾಯನಿಕಗಳ (chemicals)ಪರಿಣಾಮದಿಂದಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ನೈಸರ್ಗಿಕ ಪದಾರ್ಥಗಳಿಂದ ಕೂದಲನ್ನು ಕಪ್ಪಾಗಿಸುವುದು ಅತ್ಯಗತ್ಯ.

ಬಿಳಿ ಕೂದಲನ್ನು ಕಪ್ಪಾಗಾಗಿಸುತ್ತೆ ಈ ಬೀಟ್‌ರೂಟ್‌ ಹೇರ್‌ ಡೈ, ನೀವೂ ಒಮ್ಮೆ ಟ್ರೈ ಮಾಡಿ

ಇವತ್ತು ನಿಮಗೆ ಇನ್’ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋ ಬಗ್ಗೆ ತಿಳಿಸುತ್ತಿದ್ದೇವೆ. ತೆಂಗಿನ ನಾರಿನಿಂದ ತಯಾರಿಸುವಂತಹ ಬಿಳಿ ಕೂದಲನ್ನು ಕಪ್ಪಾಗಿಸುವ ಒಂದು ಟಿಪ್ಸ್ ಬಗ್ಗೆ ಹೇಳ್ತೀವಿ. ಇದೊಂದು ಎಫೆಕ್ಟಿವ್ ಪರಿಣಾಮವಾಗಿದ್ದು,ಅದನ್ನು ಮಾಡೋದು ಹೇಗೆ? ಇದರಿಂದ ಯಾವ ರೀತಿ ಕೂದಲನ್ನು ಕಪ್ಪಾಗಿಸಬಹುದು (hair color) ಅನ್ನೋದನ್ನು ನೋಡೋಣ. 

ತೆಂಗಿನ ನಾರಿನಿಂದ ಪುಡಿ ತಯಾರಿಸಲು ಏನು ಬೇಕು? 
ತೆಂಗಿನ ಸಿಪ್ಪೆ, 
ಪೆಟ್ರೋಲಿಯಂ ಜೆಲ್ಲಿ, ಅಥವಾ ನೀವು ಯಾವುದೇ ಎಣ್ಣೆ ಅಥವಾ ಅಲೋವೆರಾ ಜೆಲ್ ಬಳಸಬಹುದು.

ದುಬಾರಿ ಪ್ರಾಡಕ್ಟ್ ಬಿಡಿ, ಬಿಳಿ ಕೂದಲಿಗೆ ಈ ಎಣ್ಣೆ ಹಚ್ಚಿದ್ರೆ ಶಾಶ್ವತವಾಗಿ ಕಪ್ಪಾಗುತ್ತೆ!

ಕೂದಲಿಗೆ ಕಪ್ಪು ಬಣ್ಣ ಹಚ್ಚುವ ವಿಧಾನ ಇಲ್ಲಿದೆ
ಮೊದಲಿಗೆ, ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನ ನಾರನ್ನು ಹಾಕಿ, ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಅದನ್ನು ಹುರುಯಿರಿ
ಅದರ ನಂತರ,  ಹೊಟ್ಟನ್ನು ಪುಡಿ ಮಾಡಿ.
ಈಗ, ಪುಡಿಯನ್ನು ಪೆಟ್ರೋಲಿಯಂ ಜೆಲ್ಲಿ ಅಥವಾ ತೆಂಗಿನ ಎಣ್ಣೆಯೊಂದಿಗೆ ಒಂದು ಬಟ್ಟಲಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ.
ತಯಾರಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಒಣಗಲು ಬಿಡಿ.
ನಂತರ, ನಿಮ್ಮ ಕೂದಲನ್ನು ತೊಳೆಯಿರಿ ಮತ್ತು ಪ್ರತಿ ಎಳೆ ಹೇಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ನೋಡಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!