ಫ್ಯಾಷನ್ ಶೋದಲ್ಲಿ ಗುರುತೇ ಸಿಗದಂತಾದ ದೀಪಿಕಾ ಪಡುಕೋಣೆ: ರೇಖಾಗೆ ಹೋಲಿಸಿದ ನೆಟ್ಟಿಗರು

Published : Jan 26, 2025, 02:32 PM IST
ಫ್ಯಾಷನ್ ಶೋದಲ್ಲಿ ಗುರುತೇ ಸಿಗದಂತಾದ ದೀಪಿಕಾ ಪಡುಕೋಣೆ: ರೇಖಾಗೆ ಹೋಲಿಸಿದ ನೆಟ್ಟಿಗರು

ಸಾರಾಂಶ

ಮಗಳು ಹುಟ್ಟಿದ ನಂತರ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಿದ್ದಾರೆ. ಆದರೆ ಅವರ ಲುಕ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ದೀಪಿಕಾ  ಗುರುತಿಸಲಾದಂತೆ ಕಾಣಿಸುತ್ತಿದ್ದಾರೆ. 

ಬಾಲಿವುಡ್‌ನ ಲೇಡಿ ಸೂಪರ್‌ಸ್ಟಾರ್‌ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆ ಮಗಳು ಹುಟ್ಟಿದ ನಂತರ ಇದೇ ಮೊದಲ ಬಾರಿಗೆ ಫ್ಯಾಷನ್‌ ಶೋವೊಂದರಲ್ಲಿ ಭಾಗವಹಿಸಿದ್ದಾರೆ. ಆದರೆ ಅವರ ಲುಕ್ ಅಭಿಮಾನಿಗಳಿಗೆ ಅಚ್ಚರಿಯಾಗುವಂತೆ ಮಾಡಿದೆ. ಏಕೆಂದರೆ ಅದು ದೀಪಿಕಾ ಪಡುಕೋಣೆ ಎಂಬುದನ್ನು ಗುರುತಿಸಲಾರದಷ್ಟು ಅವರ ಲುಕ್ ಬದಲಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ವೀಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಖ್ಯಾತ ಡಿಸೈನರ್‌ ಸಭ್ಯಸಾಚಿ ಮುಖರ್ಜಿ 25ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಶನಿವಾರ ಸಂಜೆ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಈ ಅದ್ದೂರಿ ಫ್ಯಾಷನ್ ಶೋ ಮೂಲಕ  ಪ್ರಸಿದ್ಧ ವಿನ್ಯಾಸಕ ಸಭ್ಯಸಾಚಿ ಮುಖರ್ಜಿತಮ್ಮ 25 ವರ್ಷಗಳ ಮೈಲಿಗಲ್ಲನ್ನು ಆಚರಿಸಿದರು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ರಾಂಪ್ ಮೇಲೆ ಹೆಜ್ಜೆ ಹಾಕಿ ಗಮನಸೆಳೆದರು. 

ಸೊಬಗು ಮತ್ತು ಅತ್ಯಾಧುನಿಕತೆ ಎರಡನ್ನೂ ಹೊರಹಾಕುವ ಚಿಕ್ ಏಕವರ್ಣದ ಬಿಳಿ ಉಡುಪನ್ನು ತೊಟ್ಟು ದೀಪಿಕಾ ಪಡುಕೋಣೆ ಈ ಕಾರ್ಯಕ್ರಮವನ್ನು ಅಲಂಕರಿಸಿದರು ದೀಪಿಕಾ ಧರಿಸಿದ ಧಿರಿಸಿನಲ್ಲಿ ಟೇಲರ್ಡ್ ಪ್ಯಾಂಟ್,  ಟಾಪ್ ಮತ್ತು  ಟ್ರೆಂಚ್ ಕೋಟ್ ಇತ್ತು. ಜೊತೆಗೆ ಹಲವು ಎಳೆಗಳ ಹಾರಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು, ಅದರಲ್ಲಿ ಆಕರ್ಷಕವಾದ ಮಾಣಿಕ್ಯ ಮತ್ತು ವಜ್ರದ ಚೋಕರ್ ಮತ್ತು ಅಡ್ಡ ಪೆಂಡೆಂಟ್‌ಗಳು ಇದ್ದವು. ತನ್ನ ಲುಕನ್ನು ಇನ್ನಷ್ಟು ಚೆಂದಗಾಣಿಸಲು ದೀಪಿಕಾ ಕಪ್ಪು ಚರ್ಮದ ಕೈಗವಸುಗಳ ಮೇಲೆ ಹೊಂದಿಕೆಯಾಗುವ ಬಳೆಗಳನ್ನು ಧರಿಸಿದ್ದರು ಜೊತೆಗೆ ಫ್ಯಾಶನ್ ಹೆಡ್‌ಬ್ಯಾಂಡ್ ಅವರ ಲುಕ್ ಅನ್ನು ಪೂರ್ತಿಗೊಳಿಸಿತು. ಇವರ ಲುಕ್ ಬಾಲಿವುಡ್‌ನ ಫ್ಯಾಷನಲ್ ಲೋಕಕ್ಕೆ ಓಕೆ ಎನಿಸಿದರು ಜನರಿಗೆ ಅಷ್ಟೊಂದು ಇಷ್ಟವಾದಂತೆ ಕಾಣುತ್ತಿಲ್ಲ. 

ಅನೇಕರು ದೀಪಿಕಾ ಪಡುಕೋಣೆ ಅವರ ಲುಕ್ ಅನ್ನು 80 ರ ದಶಕದ 'ಖೂನ್ ಭಾರಿ ಮಾಂಗ್' ಸಿನಿಮಾದಲ್ಲಿ ರೇಖಾ ಅವರ ಲುಕ್ ಗೆ ಹೋಲಿಸಿದರೆ, ಇನ್ನು ಕೆಲವರು ದೀಪಿಕಾ ಹೊಸಬರಂತೆ ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಈಕೆಯನ್ನು ಖೂನ್ ಭಾರಿ ಮಾಂಗ್' ಸಿನಿಮಾದ ರೇಖಾ ಎಂದು ಭಾವಿಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಏಕೆ ಇಷ್ಟೊಂದು ಎಳೆಗಳು??? ಯಾಕೆ ಇಷ್ಟೊಂದು ದೊಡ್ಡ ಕನ್ನಡಕ?? ಯಾಕೆ ಆ ವಿಚಿತ್ರ ಕೂದಲು?? ಎಷ್ಟೊಂದು ಪ್ರಶ್ನೆಗಳು ಎಂದು ಮತ್ತೊಬ್ಬರು ದೀಪಿಕಾ ಅವರ ಪ್ರತಿಯೊಂದನ್ನು ಪ್ರಶ್ನೆ ಮಾಡಿದ್ದಾರೆ. ದೀಪಿಕಾ ಒಂದು ಕಾಲದಲ್ಲಿ ಮಾಡೆಲ್ ಆಗಿರಲಿಲ್ಲವೇ? ಆದರೂ ಅವಳು ಹೊಸಬನಂತೆ ನಡೆಯುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಗೆಯೇ ಮತ್ತೆ ಕೆಲವರು ಆಕೆ ಒಮ್ಮೆ ನನಗೆ ಅಮಿತಾಭ್ ರೀತಿ ಕಂಡಳು ಎಂದು ಕಾಮೆಂಟ್ ಮಾಡಿದ್ದಾರೆ. 

ಬಹುಶಃ ನಾನು ಹೈ-ಎಂಡ್ ಫ್ಯಾಷನ್ ಅನ್ನು ಅರ್ಥಮಾಡಿಕೊಳ್ಳುವಷ್ಟು ಸುಸಂಸ್ಕೃತನಲ್ಲದ ಕಾರಣ ಇರಬಹುದು, ಆದರೆ ಫ್ಯಾಷನ್ ವಿನ್ಯಾಸಕರು ರ‍್ಯಾಂಪ್ ವಾಕ್‌ಗಳಲ್ಲಿ ಅಂತಹ ಬಕ್ವಾಸ್ ಉಡುಪುಗಳನ್ನೇ  ಏಕೆ ಪ್ರದರ್ಶಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ಉಡುಪು ಡಿಪಿಯಂತಹವರಿಗೆ ಚೆಂದ ಕಾಣದೇ ಹೋದರೆ ಬೇರೆ  ಯಾರಾದರೂ ಅದನ್ನು ಏಕೆ ಪಡೆಯಲು ಬಯಸುತ್ತಾರೆ? ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.  ದೀಪಿಕಾ ಪಡುಕೋಣೆಯವರ ಈ ಹೊಸ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!