
ಮಹಾಕುಂಭ ಮೇಳ 2025 (Mahakumbh Mela 2025) ರಲ್ಲಿ ಈ ಬಾರಿ ಮಣಿ ಮಾಲೆ ಮಾರಾಟ ಮಾಡುವ ಸುಂದರ ಕಣ್ಣಿನ ಹುಡುಗಿಯದ್ದೇ ಸುದ್ದಿ. ಎಲ್ಲಿ ನೋಡಿದ್ರೂ ಮೊನಾಲಿಸಾ (Monalisa) ಹೆಸರು ರಾರಾಜಿಸ್ತಿದೆ. ಗೂಗಲ್ ನಲ್ಲಿ ಮೊನಾಲಿಸ ಅಂತ ಸರ್ಚ್ ಮಾಡಿದ್ರೆ ಇದೇ ಸುಂದರ ಕಣ್ಣಿನ ಹುಡುಗಿ ಕಾಣಿಸ್ತಿದ್ದಾಳೆ. ಜನರು ಸೆಲ್ಫಿಗಾಗಿ ಆಕೆ ಹಿಂದೆ ಬಿದ್ದಿದ್ದಾರೆ. ಇನ್ನು ಮೀಡಿಯಾಗಳು ತಮ್ಮ ವೀವ್ಸ್ ಜಾಸ್ತಿ ಮಾಡ್ಕೊಳ್ಳೋಕೆ ಆಕೆ ಸಂದರ್ಶನ ತೆಗೆದುಕೊಳ್ತಿದ್ದಾರೆ. ಮೊನಾಲಿಸಾಗೆ ಮೇಕ್ ಓವರ್ ಕೂಡ ಮಾಡಿಯಾಗಿದೆ. ಸಹಜ ಸುಂದರಿ ಅಂತ ಫೇಮಸ್ ಆಗಿದ್ದ ಮೊನಾಲಿಸಾ ಕಣ್ಣು, ತುಟಿಗೆ ಒಂದಿಷ್ಟು ಬಣ್ಣ ಬಡಿದು, ಸಿನಿಮಾದಲ್ಲಿ ಆಫರ್ ನೀಡಿದ್ರೆ ಹೇಗೆ ಎಂಬ ಚರ್ಚೆ ನಡೆಯುತ್ತಿದೆ. ಈಗಾಗಲೇ ಮೊನಾಲಿಸಾಗೆ ಫಿಲ್ಮಂನಲ್ಲಿ ಆಫರ್ ಕೂಡ ಬಂದಿದೆ. ಆಕೆ ಮುಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಥವಾ ಕ್ರಮಬದ್ಧವಾಗಿ ಬ್ಯುಸಿನೆಸ್ ಶುರು ಮಾಡಿದ್ರೆ ಲೋಗೋ ಹೇಗಿರಬೇಕು ಅಂತ ಜನರು ಚರ್ಚೆ ಕೂಡ ಶುರು ಮಾಡಿದ್ದಾರೆ. ಇಷ್ಟು ದಿನ ತನ್ನ ವ್ಯಾಪಾರದಲ್ಲಿ ಬ್ಯುಸಿ ಇದ್ದ ಮೊನಾಲಿಸಾಗೆ ಈಗ ಪ್ರಸಿದ್ಧಿ ಒಂದ್ಕಡೆ ಲಾಭ ತಂದ್ರೆ ಇನ್ನೊಂದ್ಕಡೆ ಸಂಕಷ್ಟ ತಂದಿದೆ. ಜನರ ಗುಂಪನಿಂದ ತಪ್ಪಿಸಿಕೊಳ್ಳೋದೇ ಆಕೆಗೆ ದೊಡ್ಡ ಸಮಸ್ಯೆ ಆಗಿದೆ.
ಮಣಿ ಮಾಲೆ (Mani Mala) ಮಾರಾಟ ಮಾಡ್ತಿದ್ದ ಹುಡುಗಿ ಏಕಾಏಕಿ ಇಷ್ಟೊಂದು ಪ್ರಸಿದ್ಧಿಗೆ ಬಂದು, ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯುತ್ತಾಳೆ ಅಂದ್ರೆ ಅದು ಸುಮ್ಮನೆ ಅಲ್ಲ. ಇದ್ರಲ್ಲಿ ಮೋನಾಲಿಸ ಪ್ರಯತ್ನ ಹೆಚ್ಚೇನೂ ಇಲ್ಲ. ಆಕೆ ನಾಲ್ಕೈದು ಸ್ನೇಹಿತೆಯರು ಮತ್ತೆ ಸಹೋದರಿಯರನ್ನು ಹೊಂದಿದ್ದಾಳೆ. ಅವ್ರಲ್ಲೂ ಸುಂದರ ಹುಡುಗಿಯರಿದ್ದಾರೆ. ಆದ್ರೆ ಎಲ್ಲರಿಗಿಂತ ಹೆಚ್ಚಾಗಿ ಮೊನಾಲಿಸಾ ಪ್ರಸಿದ್ಧಿಗೆ ಬರಲು ಕಾರಣ ಏನು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮೋನಾಲಿಸಾ ಗ್ರಹಗಳೇ ಇದಕ್ಕೆ ಕಾರಣ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಸಹಜ ಸುಂದರಿ ಅಂತ ಹೊಗಳ್ತಾ ಇದ್ರೆ ಆ ಪೆದ್ದು ಹೋಗಿ ಬ್ಯೂಟಿ ಪಾರ್ಲರ್‌ನಲ್ಲಿ ಕುಂತೈತೆ!
ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ಬಹಳ ಮಹತ್ವ ನೀಡಲಾಗುತ್ತದೆ. ನಮ್ಮ ಜಾತಕದಲ್ಲಿರುವ ಗ್ರಹಗಳು ಉತ್ತಮ ಮನೆಗೆ ಬಂದಾಗ ನಮ್ಮ ಅದೃಷ್ಟ ಬದಲಾಗುತ್ತದೆ. ನಾವೇನು ಮಾಡ್ದೆ ಹೋದ್ರೂ ನಮ್ಮ ಪ್ರಸಿದ್ಧಿ, ಆರ್ಥಿಕ ಸ್ಥಿತಿ, ಆರೋಗ್ಯ ಸುಧಾರಿಸುತ್ತದೆ. ಈಗ ಮೋನಾಲಿಸಾ ಇಷ್ಟೊಂದು ಫೇಮಸ್ ಆಗಲು ಆಕೆ ಗ್ರಹದಲ್ಲಿನ ಬದಲಾವಣೆ ಕಾರಣ.
ಕುಂಭ ರಾಶಿಯ ಸಹೋದ ಗುರು, ಶುಕ್ರನ ರಾಶಿ ಚಕ್ರ ವೃಷಭ ರಾಶಿಗೆ ಬಂದಾಗ ಮತ್ತು ಸೂರ್ಯ ಮಕರ ರಾಶಿಯಲ್ಲಿ ಬಂದಾಗ ಇದು ಸಂಭವಿಸುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಜನವರಿ 10 ರ ನಂತರ ಸೂರ್ಯ ಉತ್ತರದ ಕಡೆಗೆ ಚಲಿಸಿದಾಗ, ದೈವಿಕ ಶಕ್ತಿಗಳು ಜಾಗೃತಗೊಂಡಿವೆ. ಈ ಸಮಯದಲ್ಲಿ ಕಣ್ಣುಗಳ ಅಂಶವಾದ ಸೂರ್ಯ, ಮತ್ತು ಶುಕ್ರನ ಅಂಶ ಸೌಂದರ್ಯ ಪ್ರಸಿದ್ಧಿಗೆ ಬಂದಿದೆ. ಸುಂದರ ಕಣ್ಣುಗಳನ್ನು ಹೊಂದಿರುವ ಮೊನಾಲಿಸಾ ಇದೇ ಕಾರಣಕ್ಕೆ ವೈರಲ್ ಆಗಿದ್ದಾಳೆ. ಬಡ ಕುಟುಂಬದಿಂದ ಬಂದಿರುವ, ಇಷ್ಟು ದಿನ ಯಾರ ಕಣ್ಣಿಗೂ ಕಾಣದ ಮೊನಾಲಿಸಾ ಈಗ ದೇಶ- ವಿದೇಶದಲ್ಲಿ ಪ್ರಸಿದ್ಧಿಯಾಗಲು ಗ್ರಹವೇ ಕಾರಣ.
ಮೊನಾಲಿಸಾಳ ಮೇಕಪ್ ರಹಿತ ವಿಡಿಯೋ ವೈರಲ್: ಎರ್‍ರಾ ಬಿರ್‍ರಿ ಹೊಗಳ್ದೋರೇ ಉಲ್ಟಾ ಹೊಡೀಯೋದಾ?
ರಾನು ಮಂಡಲ್ ವಿಷಯದಲ್ಲೂ ಇದು ಸಂಭವಿಸಿತ್ತು ಎಂದು ಜ್ಯೋತಿಷ್ಯಿಗಳು ಹೇಳಿದ್ದಾರೆ. ಆ ಸಮಯದಲ್ಲಿ ಬುಧನು ಕ್ರಿಯಾಶೀಲನಾಗಿದ್ದನು. ಹಾಡಿನ ಮೂಲಕ ಆಕೆ ಹೆಚ್ಚು ಪ್ರಸಿದ್ಧಳಾದಳು. ರಾಹು, ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾರನ್ನು ನೆಲದಿಂದ ಎತ್ತಿ ಬಡವನಿಂದ ಶ್ರೀಮಂತ ಮಾಡ್ತಾನೆ ಎಂಬುದು ತಿಳಿಯೋದು ಕಷ್ಟ ಎಂದು ಜ್ಯೋತಿಷ್ಯಿಗಳು ಹೇಳ್ತಾರೆ. ಗ್ರಹಗತಿ ಚೆನ್ನಾಗಿದ್ರೆ ಕೋಲು ಕೂಡ ಬಂಗಾರವಾಗೋದ್ರಲ್ಲಿ ಅನುಮಾನವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.