ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಪೂರ್ಣ ಬೆತ್ತಲಾದ ಮಾಡೆಲ್​? ಮುಂದೇನಾಯ್ತು ನೋಡಿ: ವಿಡಿಯೋ ವೈರಲ್​

Published : Feb 04, 2025, 04:29 PM ISTUpdated : Feb 04, 2025, 04:33 PM IST
ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಪೂರ್ಣ ಬೆತ್ತಲಾದ ಮಾಡೆಲ್​? ಮುಂದೇನಾಯ್ತು ನೋಡಿ: ವಿಡಿಯೋ ವೈರಲ್​

ಸಾರಾಂಶ

ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ಚರ್ಮದ ಬಣ್ಣದ ಉಡುಪು ಧರಿಸಿ ಬೆತ್ತಲಾಗಿರುವಂತೆ ಕಾಣಿಸಿಕೊಂಡು ಸಂಚಲನ ಮೂಡಿಸಿದರು. ಕೆಲವರು ಇದನ್ನು ಅಸಭ್ಯ ನಡವಳಿಕೆ ಎಂದು ಟೀಕಿಸಿದರು. ಆಯೋಜಕರು ಅವರನ್ನು ಮತ್ತು ಪತಿ ಕಾನ್ಯೆ ವೆಸ್ಟ್‌ರನ್ನು ಕಾರ್ಯಕ್ರಮದಿಂದ ಹೊರಹಾಕಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವಾರ್ಡ್​ ಕಾರ್ಯಕ್ರಮಗಳಿಗೆ ಹೋಗುವಾಗ ಸೆಲೆಬ್ರಿಟಿಗಳು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಬಟ್ಟೆ, ಆಭರಣಗಳನ್ನು ತೊಟ್ಟು ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಮಾಡೆಲ್​ ಸಂಪೂರ್ಣ ಬೆತ್ತಲಾಗಿ ಹೋಗಿ ಕೋಲಾಹಲ ಸೃಷ್ಟಿಸಿದ್ದಾಳೆ! ಅದು ಅಂತಿಂಥ ಕಾರ್ಯಕ್ರಮವಲ್ಲ, ಬದಲಿಗೆ ಗ್ರ್ಯಾಮಿ ಅವಾರ್ಡ್​ ಫಂಕ್ಷನ್​ನಲ್ಲಿ! ಹೀಗೆ ಬೆತ್ತಲಾಗಿ ಹೋಗಿ ಸಂಚಲನ ಸೃಷ್ಟಿಸಿದಾಕೆ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ. ಇದರ ವಿಡಿಯೋ ವೈರಲ್​ ಆಗುತ್ತಿದ್ದು, ಅಬ್ಬಬ್ಬಾ ಎನ್ನುವಂತಿದೆ!

ಅಷ್ಟಕ್ಕೂ ಆಗಿದ್ದೇನೆಂದರೆ, ಅವಾರ್ಡ್​ ಕಾರ್ಯಕ್ರಮದಲ್ಲಿ  ಅಮೆರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು  ಅವರ ಪತ್ನಿ ಬಿಯಾಂಕಾ ಸೆನ್ಸೋರಿ ರೆಡ್ ಕಾರ್ಪೆಟ್ ಮೇಲೆ ಬಂದರು. ಆ ಸಂದರ್ಭದಲ್ಲಿ ಬಿಯಾಂಕಾ ಕಪ್ಪು ಉದ್ದನೆಯ ಕೋಟ್‌ ಧರಿಸಿದ್ದರು. ಆಗ ಒಳಗೆ ಏನಿದೆ ಎನ್ನುವುದು ಯಾರಿಗೂ ಕಾಣಿಸುತ್ತಿರಲಿಲ್ಲ. ಇದೇ ಉಡುಪಿನಲ್ಲಿ ಕಾನ್ಯೆ ವೆಸ್ಟ್ ಜೊತೆ ಫೋಟೋಗಳಿಗೆ ಪೋಸ್​ ಕೊಟ್ಟರು. ಕೆಲವೇ ನಿಮಿಷಗಳ ಬಳಿಕ ಅವರು ಅಸಲಿ ರೂಪ ತೋರಿಸಿದರು. ಹಿಂದಕ್ಕೆ ತಿರುಗಿ ಆ ಕಪ್ಪನೇ ಕೋಟ್​ ತೆಗೆಯುತ್ತಿದ್ದಂತೆಯೇ ಕ್ಯಾಮೆರಾಮೆನ್​ಗಳು ಓಡೋಡಿ ಬಂದು ಚಕಚಕಚಕ ಎಂದು ಫೋಟೋ ಕ್ಲಿಕ್ಕಿಸಿದರು. ಇದಕ್ಕೆ ಕಾರಣ, ಅವರು ಸಂಪೂರ್ಣ ಬೆತ್ತಲಾಗಿರುವಂತೆ ಕಂಡದ್ದು! ದೇಹದ ಎಲ್ಲಾ ಭಾಗಗಳೂ ಕಾಣಿಸುತ್ತಿದ್ದುದರಿಂದ ಅವರು ಸಂಪೂರ್ಣವಾಗಿ ಬೆತ್ತಲಾಗಿಯೇ ಬಂದಿದ್ದಾರೆ ಎಂದು ಅಂದುಕೊಂಡವರೇ ಎಲ್ಲಾ.

ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು... ನಟ ದೀಪಕ್​ ಹೇಳಿದ್ದೇನು ಕೇಳಿ...

ಅಸಲಿಗೆ ಇದು ಹೇಳಿಕೊಳ್ಳಲು ಬೆತ್ತಲೆಯಲ್ಲ. ಏಕೆಂದರೆ ಅವರು ಚರ್ಮದ ಬಣ್ಣದ ಮೈಗೆ ಅಂಟುವ ಉಡುಪು ಧರಿಸಿ ಎಲ್ಲಿ ಬೇಕೋ ಅಲ್ಲಿ ಮುಚ್ಚಿಕೊಂಡಿದ್ದರು. ಆದರೆ ಅದು ಹೆಸರಿಗೆ ಮಾತ್ರ ಬಟ್ಟೆಯಾಗಿತ್ತೇ ವಿನಾ ಅದನ್ನು ಆ ಅವಾರ್ಡ್​ ಫಂಕ್ಷನ್​ ಬೆಳಕಿನಲ್ಲಿ ನೋಡಿದರೆ ಸಂಪೂರ್ಣ ಬೆತ್ತಲ ಅವತಾರವೇ ಆಗಿತ್ತು. ಇದರಿಂದಾಗಿ ಅಲ್ಲಿ ಕೆಲ ಕ್ಷಣ ಕೋಲಾಹಲ ಸೃಷ್ಟಿಯಾಯಿತು. ಕೆಲವೇ ಕ್ಷಣಗಳಲ್ಲಿ ಬಹುತೇಕ ಮಂದಿ ತಮ್ಮ ಮೊಬೈಲ್​ ಫೋನ್​ ಎತ್ತಿಕೊಂಡು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾಗಳಲ್ಲಿಯೂ ಹರಿಬಿಟ್ಟರು! 

  ಅಲ್ಲಿ ಬಹುತೇಕ ಮಂದಿ ಇದರಿಂದ ಶಾಕ್​ಗೆ ಒಳಗಾದರು. ಗಲಾಟೆ ಆರಂಭವಾಯಿತು. ಟೀಕೆಗಳು ಕೇಳಿಬಂದವು. ಇಂಥ ದೊಡ್ಡ ಅವಾರ್ಡ್​ ಫಂಕ್ಷನ್​ನಲ್ಲಿ ಈ ರೀತಿಯ ಅಸಭ್ಯ ನಡವಳಿಕೆಯನ್ನು ಸಹಿಸಲು ಆಯೋಜಕರು  ಕಾನ್ಯೆ ಮತ್ತು ಅವರ ಪತ್ನಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರಹಾಕಿ ಮುಂದಿನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.  ಆದರೆ ಈ ವಿಡಿಯೋ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಥಹರೇವಾರಿ ಶೀರ್ಷಿಕೆ, ಕಮೆಂಟ್ಸ್​ ಜೊತೆ ಹರಿದಾಡುತ್ತಲೇ ಇದೆ. 

ಮಗಳ ಹೊಕ್ಕಳು ಕಾಣದಂತೆ ವೇದಿಕೆ ಮೇಲೆಯೇ ಶಾರುಖ್​ ಏನ್​ ಮಾಡಿದ್ರು ನೋಡಿ! ನಟನಿಗೆ ಅಪಾರ ಮೆಚ್ಚುಗೆ

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!