
ಫ್ಯಾಷನ್‌ಲೋಕದಲ್ಲಿ ಕ್ಯಾಟ್‌ವಾಕ್ ಮಾಡಬೇಕಾದರೆ ಮಾಡೆಲ್‌ಗಳಿಗೆ ಹಲವು ನಿಯಮಗಳು ಮಾನದಂಡಗಳಿವೆ. ದೇಹ ಹೀಗೆಯೇ ಇರಬೇಕು, ಎತ್ತರ ಇಷ್ಟೇ ಇರಬೇಕು ಮೇಕಪ್ ಆಟಿಟ್ಯೂಡ್ ಹೇರ್‌ಸ್ಟೈಲ್ ಹೀಗೆ ಪ್ರತಿಯೊಂದು ಕೂಡ ಚರ್ಚಿಸುವ ವಿಷಯವೇ ಆಗಿರುತ್ತದೆ. ಬೆಕ್ಕಿನ ನಡಿಗೆಯ ಮೂಲಕ ರಾಂಪ್ ಮೇಲೆ ಹೆಜ್ಜೆ ಇಡುವ ಮಾಡೆಲ್‌ಗಳು ಇದೆಲ್ಲಾ ಮಾನದಂಡಗಳನ್ನು ಪಾಲಿಸಿಯೇ ಮುಂದೆ ಹೋಗುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಫ್ಯಾಷನ್ ರಾಂಪ್ ವಾಕ್ ಮೇಲೆ ತಮ್ಮ ಸುಟ್ಟಕಲೆಗಳಿರುವ ದೇಹದ ಪ್ರದರ್ಶನ ಮಾಡಿದ್ದಾರೆ.
ಅವರು ಬೇರಾರು ಅಲ್ಲ, ಸೆಲಬ್ರಿಟಿ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಅವರ ಪತ್ನಿ ನಕಿರತ್ ಸೋಧಿ, ಹೌದು ವಿಶ್ವದೆಲ್ಲೆಡೆ ಫ್ಯಾಷನ್ ಲೋಕದ ಗಣ್ಯರ ಗಮನ ಸೆಳೆಯುವ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬೆಂಕಿ ಅನಾಹುತದಿಂದಾಗಿ ಸಾವು ಬದುಕಿನ ನಡುವೆ ತೊಳಲಾಡಿದ್ದ ನಕಿರತ್ ಸೋಧಿ ಅವರೇ ಮುಂದೆ ಪತಿ ಗೌರವ್ ಗುಪ್ತಾ ಅವರ ಹೊಸ ಫ್ಯಾಷನ್‌ಗಳಿಗೆ ಸ್ಪೂರ್ತಿಯಾದರು. ಕವಿಯೂ ಆಗಿರುವ ನವಕಿರತ್ ಸೋಧಿ ಅವರು ಆನಾಹುತಕಾರಿ ಬೆಂಕಿ ಅಪಘಾತದ ನಂತರ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಪತಿಯ ಡಿಸೈನ್ಸ್‌ಗಳಿಗೆ ಮಾಡೆಲ್ ಆದರು.
ಕಳೆದ ಬುಧವಾರ, ಗೌರವ್ ಗುಪ್ತಾ ಪ್ಯಾರಿಸ್ ಫ್ಯಾಷನ್ ವೀಕ್ 2025 ರಲ್ಲಿ ತಮ್ಮ ಸ್ಪ್ರಿಂಗ್ 2025 ಕೌಚರ್ ಶೋ ಅನ್ನು ಅನಾವರಣಗೊಳಿಸಿದರು. 'ಅಕ್ರಾಸ್ ದಿ ಫೈರ್' ಹೆಸರಿನ ಈ ವಿನ್ಯಾಸಗಳ ಸಂಗ್ರಹವು ಪ್ರೀತಿ, ಆಘಾತ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ಹೊಂದಿರುವ ಭಾವುಕ ಕತೆಯಾಗಿದ್ದು, ಬೆಂಕಿ ಅನಾಹುತದಿಂದ ಪಾರಾಗಿ ಬಂದ ಪತ್ನಿ ನಕಿರತ್ ಅವರಿಂದ ಪ್ರೇರಣೆ ಪಡೆದಿದೆ. ವಿನ್ಯಾಸಕಾರ ಗೌರವ್ ಗುಪ್ತಾ ತಾವು ಪ್ರದರ್ಶಿಸಿದ ಕೌಚರ್ ಉಡುಪುಗಳ ಮೂಲಕ ಕಥೆ ಹೇಳಿದರು. ಈ ಸಂಗ್ರಹಕ್ಕಾಗಿ, ಗೌರವ್ ತಮ್ಮ ಪತ್ನಿ ಮತ್ತು ಕವಿ ನವಕಿರತ್ ಸೋಧಿ ಅವರನ್ನು ತಮ್ಮ ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿದ್ದರು. ಇದೇ ವೇಳೆ ಗೌರವ್ ಗುಪ್ತಾ ಅವರು ಬೆಂಕಿ ಅನಾಹುತದಲ್ಲಿ ತಮ್ಮ ಪತ್ನಿಯ ದೇಹದ ಶೇಕಡಾ 55 ಭಾಗ ಸುಟ್ಟು ಹೋಗಿರುವ ವಿಚಾರವನ್ನು ಬಹಿರಂಗಪಡಿಸಿದರು.
ವಿಡಿಯೋದಲ್ಲಿ ಗೌರವ್ ಗುಪ್ತಾ ಅಪಘಾತದ ಬಗ್ಗೆ ಮಾತನಾಡಿದ್ದು, ಸುಮಾರು 8 ತಿಂಗಳ ಹಿಂದೆ ನಮ್ಮ ಜೀವನವನ್ನೇ ಬದಲಾಯಿಸುವ ಅನಾಹುತವೊಂದು ಸಂಭವಿಸಿತ್ತು. ನಾವು ಬೆಂಕಿ ಅನಾಹುತದಲ್ಲಿ ಸಿಲುಕಿದ್ದೆವು. ಬೆಂಕಿಯನ್ನು ಕೈಯಿಂದ ನಂದಿಸಲು ಹೋದಾಗ ಕೈಗಳು ಸುಟ್ಟುಹೋದವು. ಇತ್ತ ಪತ್ನಿ ನವಕಿರತ್ ಶೇಕಡಾ 55ರಷ್ಟು ಸುಟ್ಟು ಹೋಗಿದ್ದರಿಂದ 2.5 ತಿಂಗಳ ಕಾಲ ಐಸಿಯುನಲ್ಲಿದ್ದರು. ಆಕೆ ಬದುಕುಳಿಯುವ ಸಾಧ್ಯತೆ ಶೇಕಡಾ 50 ಮಾತ್ರ ಎಂದು ವೈದೈರು ಹೇಳಿದ್ದರು. ಆದರೆ ಅವಳೊಬ್ಬಳು ಹೋರಾಟಗಾರ್ತಿ ಆಕೆ ಬದುಕುಳಿದಳು, ಅವಳೊಬ್ಬಳು ದೇವತೆ ಎಂದು ಅವರು ಗೌರವ್ ಗುಪ್ತಾ ಹೇಳಿದ್ದಾರೆ.
ಇತ್ತ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ನವಕಿರತ್ ಅವರು ಕ್ರೀಮ್ ಬಣ್ಣದ ಡ್ರಾಪ್ಡ್ ಕಾರ್ಸೆಟ್ ಗೌನ್ ಧರಿಸಿ ರ‍್ಯಾಂಪ್ ವಾಕ್ ಮಾಡಿದರು, ಅವರ ತೋಳುಗಳು ಮತ್ತು ಕಾಲುಗಳ ಮೇಲೆ ಸುಟ್ಟ ಗಾಯದ ಗುರುತುಗಳು ಸಂಪೂರ್ಣವಾಗಿ ಗೋಚರಿಸುತ್ತಿದ್ದವು. ತಮ್ಮ ಈ ವಿನ್ಯಾಸಗಳ ಸಂಗ್ರಹದೊಂದಿಗೆ, ವಿನ್ಯಾಸಕರು ಬೆಂಕಿಯ ಲೋಹವನ್ನು ಕರಗಿಸುವ ಶಕ್ತಿ ಬಟ್ಟೆಯ ಮೂಲಕ ಎಲ್ಲವನ್ನೂ ಬೂದಿಯಾಗಿಸುವ ಶಕ್ತಿಯನ್ನು ವಿವರಿಸಿದರು..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.