ಉಗುರು ಬಣ್ಣದ ಬಾಟಲ್, ಮಸ್ಕರಾ ಒಣಗಿ ಅಂಟಿಕೊಂಡಿದೆಯೇ?, ಐದೇ ನಿಮಿಷದಲ್ಲಿ ಹೊಸದರಂತೆ ಮಾಡಿ

Published : Sep 11, 2025, 06:55 PM IST
makeup tricks

ಸಾರಾಂಶ

ಲಿಪ್ಸ್ಟಿಕ್ ಕೆಳಗೆ ಬಿದ್ದು ಒಡೆಯುವುದು, ಮರೆತು ಕ್ಯಾಪ್‌ ತೆಗೆದು ಬಿಟ್ಟ ಮಸ್ಕರಾ ಗಾಳಿಗೆ ಒಣಗುವುದು ಅಥವಾ ಉಗುರು ಬಣ್ಣದ ಕ್ಯಾಪ್ ಸಿಲುಕಿಕೊಳ್ಳುವುದು. ಇಂತಹ ಸಮಯದಲ್ಲಿ ಯಾರೂ ಅದನ್ನು ತಕ್ಷಣ ಎಸೆಯಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಮಿಡಲ್ ಕ್ಲಾಸ್ ಜನರು.

ದುಬಾರಿ ಮೇಕಪ್ ಪ್ರಾಡಕ್ಟ್ಸ್ ಇರುವುದು ಸುಂದರವಾಗಿ ಕಾಣಲು ಮಾತ್ರವಲ್ಲ, ನೀವು ಒಂದು ವೇಳೆ ಸರಿಯಾಗಿ ಬಳಸಿದ್ದೇ ಆದಲ್ಲಿ ಅವುಗಳ ಸಂಪೂರ್ಣ ಪ್ರಯೋಜನ ಪಡೆಯಬಹುದು. ಅದರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳೇ ಅವು ಹಾಳಾಗಲು ಕಾರಣವಾಗಬಹುದು. ಉದಾಹರಣೆಗೆ ಲಿಪ್ಸ್ಟಿಕ್ ಕೆಳಗೆ ಬಿದ್ದು ಒಡೆಯುವುದು, ಮರೆತು ಕ್ಯಾಪ್‌ ತೆಗೆದು ಬಿಟ್ಟ ಮಸ್ಕರಾ ಗಾಳಿಗೆ ಒಣಗುವುದು ಅಥವಾ ಉಗುರು ಬಣ್ಣದ ಕ್ಯಾಪ್ ಸಿಲುಕಿಕೊಳ್ಳುವುದು. ಇಂತಹ ಸಮಯದಲ್ಲಿ ಯಾರೂ ಅದನ್ನು ತಕ್ಷಣ ಎಸೆಯಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಮಿಡಲ್ ಕ್ಲಾಸ್ ಜನರು. ಪ್ರತಿಯೊಂದು ಉತ್ಪನ್ನದ ಬೆಲೆ ಗೊತ್ತಿರುವವರಿಗೆ ಈ ದುಬಾರಿ ಉತ್ಪನ್ನವನ್ನ ಉಳಿಸುವುದು ಅಗತ್ಯವಾಗಿರುತ್ತದೆ. ಆದರೆ ಸಣ್ಣ ಟೆಕ್ನಿಕ್ ಮತ್ತು ಸುಲಭವಾದ ಹ್ಯಾಕ್‌ಗಳು ಈ ಸಮಸ್ಯೆಗಳಿಗೆ ಸುಲಭ ಪರಿಹಾರಗಳಾಗಿವೆ.

ಈ ವಿಧಾನ ಅಳವಡಿಸಿಕೊಳ್ಳುವ ಮೂಲಕ ನೀವು ಹೊಸದಾಗಿ ತಂದಂತಹ ನಿಮ್ಮ ದುಬಾರಿ ಉತ್ಪನ್ನಗಳನ್ನು ದೀರ್ಘಕಾಲ ಬಳಸಬಹುದು ಮತ್ತು ಹಣವನ್ನು ಉಳಿಸಬಹುದು. ಆದ್ದರಿಂದ ಪ್ರತಿಯೊಬ್ಬ ಮೇಕಪ್ ಬಳಕೆದಾರರಿಗೆ ಸರಿಯಾದ ಮಾಹಿತಿ ಮತ್ತು ಸಲಹೆಗಳು ಮುಖ್ಯ. (easy ways to fix dried out makeup) 

ಲಿಪ್ಸ್ಟಿಕ್ ಒಡೆದು ಹೋದ್ರೆ ಏನ್‌ ಮಾಡ್ಬೇಕು?

ನಿಮ್ಮ ಬ್ರಾಂಡೆಡ್ ಲಿಪ್ಸ್ಟಿಕ್ ಒಡೆದರೆ, ಭಯಪಡುವ ಅಗತ್ಯವಿಲ್ಲ. ಲೈಟರ್ ತೆಗೆದುಕೊಂಡು ಲಿಪ್ಸ್ಟಿಕ್ ನ ಮುರಿದ ಭಾಗವನ್ನು ಸ್ವಲ್ಪ ಕರಗಿಸಿ. ನಂತರ ಅದನ್ನು ಮತ್ತೆ ಯಥಾ ಸ್ಥಿಯಲ್ಲಿ ಇರಿಸಿ 15 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಡಿ. ಇದು ಲಿಪ್ಸ್ಟಿಕ್ ಅನ್ನು ಜಿಗುಟಾಗಿಸಿ ಅದರ ಮೂಲ ಆಕಾರಕ್ಕೆ ಮರಳುವಂತೆ ಮಾಡುತ್ತದೆ.

ಒಣಗಿದ ಮಸ್ಕರಾಗೆ ಸುಲಭವಾದ ಮಾರ್ಗ
ಮಸ್ಕರಾ ಒಣಗಿದರೆ, ಅದರೊಳಗೆ 2-3 ಹನಿ ಐ ಡ್ರಾಪ್ ಅಥವಾ ಲೆನ್ಸ್ ಲಿಕ್ವಿಡ್ ಹಾಕಿ. ಇದರ ನಂತರ ಮಸ್ಕರಾ ಡಬ್ಬಿ ಮುಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಈ ವಿಧಾನವು ಮಸ್ಕರಾವನ್ನು ಮರುಬಳಕೆ ಮಾಡುವಂತೆ ನೋಡಿಕೊಳ್ಳುತ್ತದೆ.

ಒಣಗಿ ಅಂಟಿಕೊಂಡಿರುವ ಉಗುರು ಬಣ್ಣ ಬಳಸುವುದು ಹೇಗೆ
ನಿಮ್ಮ ಉಗುರು ಬಣ್ಣದ ಮುಚ್ಚಳ ಗಟ್ಟಿಯಾಗಿದ್ದರೆ ಬಾಟಲಿಯನ್ನು ಬಿಸಿ ನೀರಿನಲ್ಲಿ 5 ನಿಮಿಷಗಳ ಕಾಲ ನೆನೆಸಿಡಿ. ನಂತರ ಮುಚ್ಚಳದ ಮೇಲೆ ರಬ್ಬರ್ ಕಟ್ಟಿ ನಿಧಾನವಾಗಿ ತಿರುಗಿಸಿ. ಮುಚ್ಚಳ ತೆರೆದ ನಂತರ ಬಾಟಲಿಯ ಕುತ್ತಿಗೆಗೆ ಸ್ವಲ್ಪ ಕ್ರೀಮ್ ಹಚ್ಚಿ ಇದರಿಂದ ಅದು ಭವಿಷ್ಯದಲ್ಲಿ ಮತ್ತೆ ಸಿಲುಕಿಕೊಳ್ಳುವುದಿಲ್ಲ.

ನಿಮ್ಮ ಐಲೈನರ್ ಒಣಗಿದಾಗ ಅದನ್ನು ಬಳಸುವುದು ಹೇಗೆ?
ಒಣಗಿದ ಐಲೈನರ್ ಅನ್ನು ಎಸೆಯುವ ಅಗತ್ಯವಿಲ್ಲ. ಅದಕ್ಕೆ 2 ಹನಿ ಐ ಡ್ರಾಪ್ ಸೇರಿಸಿ ಅಥವಾ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ. ಬಾಟಲಿಯನ್ನು ಅಲ್ಲಾಡಿಸಿ. ಇದು ಐಲೈನರ್ ಅನ್ನು ಮರುಬಳಕೆ ಮಾಡುವಂತೆ ಮಾಡುತ್ತದೆ ಮತ್ತು ಕಣ್ಣುಗಳಿಗೆ ಹಾನಿ ಮಾಡುವುದಿಲ್ಲ.

ನೇಲ್ ಪೇಂಟ್ ಬಾಟಲ್ ಒಣಗದಂತೆ ಟಿಪ್ಸ್ 

ನೇಲ್ ಪೇಂಟ್ ಬಾಟಲ್ ಒಣಗಿದರೆ, 2-3 ಹನಿ ನೇಲ್ ಪಾಲಿಶ್ ರಿಮೂವರ್ ಸೇರಿಸಿ ಚೆನ್ನಾಗಿ ಬೆರೆಸಿ. ಇದು ನೇಲ್ ಪೇಂಟ್ ಹೊಸದಾಗಿರುವಂತೆ ಮಾಡುತ್ತದೆ ಮತ್ತು ಸುಲಭವಾಗಿ ಹಚ್ಚಬಹುದು.

ಇದು ಪ್ರತಿಯೊಬ್ಬ ಮಹಿಳೆಗೆ ಸಹಕಾರಿ
ಇಂತಹ ಸಣ್ಣ ಪುಟ್ಟ ಸಲಹೆಗಳು ಕೂಡ ದುಬಾರಿ ಮೇಕಪ್ ಉಳಿಸುವುದಲ್ಲದೆ, ಹಣವನ್ನೂ ಉಳಿಸುತ್ತದೆ. ಇದಲ್ಲದೆ, ಅವು ದೈನಂದಿನ ಸಣ್ಣ ಸಮಸ್ಯೆಗಳನ್ನು ಸುಲಭಗೊಳಿಸುತ್ತವೆ. ಬಿರುಕು ಬಿಟ್ಟ ಅಥವಾ ಒಣಗಿದ ಮೇಕಪ್ ಸರಿಪಡಿಸಲು ಈ ಸಲಹೆಗಳು ಪ್ರತಿಯೊಬ್ಬ ಮಹಿಳೆಗೆ ತುಂಬಾ ಸಹಾಯಕವಾಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?