
ಆಯುರ್ವೇದದಲ್ಲಿ ಕೇವಲ ಒಂದು ಅಥವಾ ಎರಡು ಸಮಸ್ಯೆಗಳಿಗೆ ಅಲ್ಲ, ನೂರಾರು ಕಾಯಿಲೆಗಳಿಗೆ ಚಿಕಿತ್ಸೆಯಿದೆ. ಪ್ರಪಂಚದಾದ್ಯಂತ ಆಯುರ್ವೇದಕ್ಕೆ ಒಂದು ವಿಶಿಷ್ಟ ಗುರುತಿದೆ. ಇಂದಿಗೂ ಜನರು ಆರೋಗ್ಯಕ್ಕಾಗಿ ಅನೇಕ ಕಡೆ ಟ್ರೀಟ್‌ಮೆಂಟ್ ತೆಗೆದುಕೊಂಡ ನಂತರ ಕೊನೆಗೆ
ಆಯುರ್ವೇದದ ಹಾದಿಯನ್ನೇ ಹಿಡಿಯುತ್ತಾರೆ. ಅಂದಹಾಗೆ ಚರ್ಮ ಮತ್ತು ಕೂದಲಿನ ಸಮಸ್ಯೆ ತಡೆಗಟ್ಟಲು ಮೊದಲಿನಿಂದಲೂ ಆಯುರ್ವೇದವನ್ನೇ ಬಳಸಲಾಗುತ್ತಿದೆ. ಕೊನೆಗೆ ಬಂದ ಫಲಿತಾಂಶ ನೋಡಿ ನಾವಿದನ್ನೇ ಮೊದಲೇಕೆ ಟ್ರೈ ಮಾಡಲಿಲ್ಲ ಅಂದುಕೊಳ್ಳುತ್ತಾರೆ. ಈ ಲೇಖನದಲ್ಲಿ ನಾವು ಚರ್ಮಕ್ಕೆ ಸಂಬಂಧಿಸಿದ ಒಂದು ಸಾಮಾನ್ಯ ಸಮಸ್ಯೆಗೆ ಆರ್ಯುವೇದಲ್ಲಿ ಅದ್ಭುತ ಪರಿಹಾರವಿರುವುದನ್ನು ಹೇಳಲಿದ್ದೇವೆ.
ನಮ್ಮ ತ್ವಚೆಯ ಮೇಲೆ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ ಮೊಡವೆಗಳು ಮತ್ತು ಅವುಗಳ ಗುರುತುಗಳು. ಇವುಗಳನ್ನು ಇಂಗ್ಲಿಷ್‌ನಲ್ಲಿ Acne ಎಂದು ಕರೆಯಲಾಗುತ್ತದೆ. ಮೊಡವೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಕೆಲವು ಮೊಡವೆಗಳು ಮುಖದ ಮೇಲೆ ತಮ್ಮ ಗುರುತು ಬಿಡುತ್ತವೆ. ಇದರಿಂದ ಎಷ್ಟೇ ಸೌಂದರ್ಯವತಿಯಾದರೂ ಮುಖವೂ ಒಂದು ರೀತಿ ಕಳೆಗುಂದಿದಂತೆ ಕಾಣುತ್ತದೆ.
ಇಂದಿನ ಲೇಖನದಲ್ಲಿ ಪೌಷ್ಟಿಕತಜ್ಞೆ ಶ್ವೇತಾ ಶಾ ಅವರು ಅತ್ಯುತ್ತಮ ಮನೆಮದ್ದಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಟ್ರೈ ಮಾಡುವುದರಿಂದ ಒಬ್ಬ ವ್ಯಕ್ತಿಯು 7 ದಿನಗಳಲ್ಲಿ ಫಲಿತಾಂಶ ಪಡೆಯಬಹುದು.
ನಿಮಗೆ ಬೇಕಾಗಿರುವ ಪದಾರ್ಥಗಳು
ಬೇವಿನ ಮರದ ಎಲೆಗಳು
ಲವಂಗ
ನಿಂಬೆಹಣ್ಣು
ಜೇನುತುಪ್ಪ
(ಗಮನಿಸಿ:ಪದಾರ್ಥಗಳ ಪ್ರಮಾಣವನ್ನು ಕಡಿಮೆ ಇರಿಸಿ)
ನೀವೀಗ ರಾತ್ರಿ 3 ರಿಂದ 4 ಲವಂಗವನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಎದ್ದ ನಂತರ ನೀವು ಈ ಲವಂಗವನ್ನು ಕುಟ್ಟಬೇಕು. ಕುಟ್ಟಿದ ಲವಂಗಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ಇದಕ್ಕೆ 8-10 ತಾಜಾ ಬೇವಿನ ಎಲೆಯ ಪೇಸ್ಟ್ ಸೇರಿಸಿ. ನೀವು ಈ ಎಲ್ಲಾ ಪದಾರ್ಥವನ್ನು ಚೆನ್ನಾಗಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ 7 ದಿನಗಳವರೆಗೆ ಸೇವಿಸಬೇಕು.
ಈ ಕಾಂಬಿನೇಶನ್ ಆರೋಗ್ಯ ಮತ್ತು ತ್ವಚೆ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ರಕ್ತವನ್ನು ಶುದ್ಧವಾಗಿರಿಸುತ್ತದೆ, ಉಲ್ಬಣಗೊಂಡ ಪಿತ್ತರಸವನ್ನು ಶಮನಗೊಳಿಸುತ್ತದೆ, ನಿರಂತರ ಮೊಡವೆಗಳನ್ನು ಒಳಗಿನಿಂದ ತೆರವುಗೊಳಿಸುತ್ತದೆ. ಇದರ ಹೊರತಾಗಿ, ಈ ಸಂಯೋಜನೆಯು ಮೃದು, ನಯವಾದ ಮತ್ತು ಹೊಳೆಯುವ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈಗ ಪದಾರ್ಥಗಳ ಇತರ ಪ್ರಯೋಜನಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
*ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬೇವಿನ ಎಲೆಗಳನ್ನು ಸೇವಿಸುವುದು ದೇಹ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತ್ವಚೆಗೂ ಪ್ರಯೋಜನವನ್ನು ನೀಡುತ್ತದೆ. ಇದನ್ನು ತಿನ್ನುವುದು ದೇಹವನ್ನು ನಿರ್ವಿಷಗೊಳಿಸುತ್ತದೆ. ರಕ್ತವನ್ನು ಶುದ್ಧೀಕರಿಸುವಲ್ಲಿಯೂ ಸಹಾಯ ಮಾಡುತ್ತದೆ. ಈ ಎಲೆಗಳು ಮೊಡವೆ, ಹುಣ್ಣುಗಳು ಮತ್ತು ಚರ್ಮದ ಸೋಂಕುಗಳಂತಹ ಸಮಸ್ಯೆಗಳನ್ನು ತಡೆಯುತ್ತದೆ .
*ಲವಂಗವು ಅತ್ಯುತ್ತಮ ಆಯುರ್ವೇದ ಪದಾರ್ಥವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಲವಂಗವನ್ನು ತಿನ್ನುವುದರಿಂದ ಚರ್ಮದ ಮೇಲಿನ ಉರಿಯೂತ, ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
*ನಿಂಬೆಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ಕಾಲಜನ್ ಅನ್ನು ಹೆಚ್ಚಿಸುವ ಮೂಲಕ ಸ್ಕಿನ್ ಅನ್ನು ಟೈಟಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಚರ್ಮವನ್ನು ನಿರ್ವಿಷಗೊಳಿಸುತ್ತದೆ.
*ಜೇನುತುಪ್ಪವನ್ನು ತಿನ್ನುವುದರಿಂದ ದೇಹವು ಹೈಡ್ರೇಟೆಡ್ ಆಗಿರುತ್ತದೆ. ಇದು ದೇಹದಲ್ಲಿ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.