ಕೊರೋನಾ ಇದ್ರೂ ಬ್ಯೂಟಿಗಾಗಿ ಈ ಸೌಂದರ್ಯವರ್ಧಕ ಚಿಕಿತ್ಸೆಗಳ ಹಿಂದೆ ಬಿದ್ದಿದ್ದಾರೆ ಜನ..!

By Suvarna News  |  First Published Oct 16, 2020, 1:49 PM IST

ಕೊರೋನಾ ಸಂದರ್ಭದಲ್ಲೂ ಬ್ಯೂಟಿ ಕಾನ್ಶಿಯಸ್ ಉಳಿಸ್ಕೊಂಡ ಜನ | 2020ರಲ್ಲಿ ಜನ ಹೆಚ್ಚು ಆರಿಸಿದ ಸೌಂದರ್ಯವರ್ಧಕ ಚಿಕಿತ್ಸೆಗಳು ಯಾವುವು..?


ಸೌಂದರ್ಯವರ್ಧಕ ಉದ್ಯಮದ ಒಂದು ವಿಶೇಷತೆಯೆಂದರೆ ಅದು ಯಾವತ್ತೂ ವಿಕಾಸಗೊಳ್ಳುತ್ತಲೇ ಇರುವುದು. ಸೌಂದರ್ಯದ ಬಗೆಗಿನ ಸಮಾಜದ ವ್ಯಾಖ್ಯಾನ ಸದಾ ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆಯ ಬೆನ್ನಲ್ಲೇ ಸೌಂದರ್ಯವರ್ಧನೆಗೆ ನಾವು ಬಳಸುವ ಮಾರ್ಗೋಪಾಯಗಳು ಕೂಡ ಬದಲಾಗುತ್ತಿರುತ್ತವೆ. ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಅನೇಕ ಹೊಸ ಬಗೆಯ ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಹುಟ್ಟು ಹಾಕುತ್ತಿವೆ. ಮತ್ತು ಜನರು ಕೂಡ ಸಮಾಜ ಅಪೇಕ್ಷಿಸುವ ಸೌಂದರ್ಯವನ್ನು ಗಳಿಸಿಕೊಳ್ಳಲು ಈ ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೆ ಮುಕ್ತ ಮನಸ್ಸಿನಿಂದ ತೆರೆದುಕೊಳ್ಳುತ್ತಿದ್ದಾರೆ.

2020ರಲ್ಲಿ ಸಮಾಜ ಹಂಬಲಿಸುತ್ತಿರುವ ಸೌಂದರ್ಯವರ್ಧಕ ಚಿಕಿತ್ಸೆಗಳು

Latest Videos

undefined

ಡಿಜಿಟೈಜೇಶನ್‌ನ ಕಾರಣದಿಂದಾಗಿ ಹೆಚ್ಚು ಹೆಚ್ಚು ಜನರಿಗೆ ಈಗ ಅನೇಕ ಬಗೆಯ ಮಾಹಿತಿ ಲಭ್ಯವಾಗುತ್ತಿವೆ. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಫಾಲೋ ಮಾಡುವ ಮೂಲಕ  ಅವರು ಬಳಸುವ ಇತ್ತೀಚಿನ ಸೌಂದರ್ಯವರ್ಧಕಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಇತ್ತಿಚಿನ ಇ-ಸೌಂದರ್ಯವರ್ಧಕ ಚಿಕಿತ್ಸೆಗಳು 2020ರಲ್ಲಿ ಹೊಸ ಟ್ರೆಂಡನ್ನು ಹುಟ್ಟು ಹಾಕಲಿವೆ.

1.    ನಿರೋಧಕ (ಪ್ರಿವೆಂಟಿವ್) ಚುಚ್ಚುಮದ್ದುಗಳು. 

ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವುದು ಉತ್ತಮ. ಈ ತಿಳುವಳಿಕೆಯು ಸೌಂದರ್ಯವರ್ಧಕ ಉದ್ಯಮವನ್ನು ಬದಲಾಯಿಸುತ್ತಿದೆ. ಈಗ ಸೌಂದರ್ಯವರ್ಧಕಗಳ ಬೇಡಿಕೆಯು ಕೇವಲ 40ರ ಹರೆಯದಲ್ಲಿರುವ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. 20ರ ಹರೆಯದ ಹೆಣ್ಣು ಮಕ್ಕಳು ಸಹ ವಯಸ್ಸಾಗುವುದನ್ನು ತಡೆಗಟ್ಟುವ ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಬೇಗ ಪ್ರಾರಂಭಿಸಿದಷ್ಟೂ ಅವು ಹೆಚ್ಚು ಪರಿಣಾಮಕಾರಿ ಎಂಬುದನ್ನು ಅರಿತುಕೊಳ್ಳುತ್ತಿದ್ದಾರೆ.

ಡಾರ್ಕ್ ಅಂಡರ್ ಆರ್ಮ್‌ಗೆ ಇಲ್ಲಿವೆ ನೋಡಿ ಮ್ಯಾಜಿಕಲ್ ಹೋಂ ರೆಮಿಡೀಸ್

ಶಸ್ತ್ರಚಿಕಿತ್ಸೆಯನ್ನು ಬಯಸದ (ನಾನ್ ಇನ್ವೇಸಿವ್) ಮತ್ತು ಹೆಚ್ಚು ಸಮಯ ಬೇಡದ ಸಂದರ್ಯವರ್ಧಕ ಚಿಕಿತ್ಸೆಗಳು ಯುವಜನರ ನಡುವೆ ಹೆಚ್ಚು ಜನಪ್ರಿಯವಾಗುತ್ತಿವೆ. ಸುಕ್ಕನ್ನು ಸಪಾಟುಗೊಳಿಸುವ ಬೊಟೊಕ್ಸ್‌ನಂತಹ ಚುಚ್ಚುಮದ್ದು ಚಿಕಿತ್ಸೆಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಯಸುತ್ತಿದ್ದಾರೆ. ಮತ್ತೊಂದು ಹೆಚ್ಚು ಜನಪ್ರಿಯವಾಗುತ್ತಿರುವ ಚಿಕಿತ್ಸೆಯೆಂದರೆ ಪ್ರೆವೆಂಟಿವ್ ಡರ್ಮಲ್ ಫಿಲ್ಲರ್ಸ್. ಈ ಚಿಕಿತ್ಸೆಯ ಮೂಲಕ ಕೆನ್ನೆ, ದವಡೆ ಮತ್ತು ತುಟಿಗಳ ರೂಪ ಮತ್ತು ಗಾತ್ರಗಳನ್ನು ಸರಿಪಡಿಸಲು ಬಳಲಾಗುತ್ತಿದೆ. ತ್ವಚೆಯಲ್ಲಿನ ತೇವಾಂಶವನ್ನು ಸುಧಾರಿಸುವ ಫಿಲ್ಲರ್‌ಗಳು ಕೂಡ ಈಗ ಲಭ್ಯವಾಗುತ್ತಿವೆ. ಇದು ನಿಮ್ಮ ಚರ್ಮ ಸುಕ್ಕಾಗದಂತೆ, ಮುಪ್ಪಾಗದಂತೆ ಕಾಪಾಡುತ್ತದೆ. 

ಟ್ರೆಡ್ ಫೇಸ್‌ಲಿಫ್ಟ್‌ಗಳು: 

ಇದು ಚರ್ಮ ಸಡಿಲತೆಗೆ ಇತ್ತೀಚಿನ ಪರಿಹಾರ. ತೀರ ಇತ್ತೀಚಿನವರೆಗೂ ಈ ಸಮಸ್ಯೆಗೆ ಪರಿಹಾರ ಶಸ್ತ್ರಚಿಕಿತ್ಸೆ ಮೂಲಕ ಮಾತ್ರವಾಗಿತ್ತು. ಆದರೆ ಮುಂದುವರೆದ  ತಂತ್ರಜ್ಞಾನ ಮುಖ ಮತ್ತು ಕತ್ತಿನ ಮೇಲಿನ ಚರ್ಮದ ಸಡಿಲತೆಯನ್ನು ಕನಿಷ್ಠ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ಸಾಧ್ಯವಾಗಿಸಿದೆ. ಈ ಶಸ್ತ್ರಚಿಕಿತ್ಸೆಯ ಮೂಲಕ ತಾತ್ಕಾಲಿಕವಾಗಿ  ದಾರಗಳನ್ನು ತೂರಿಸಿ ಚರ್ವನ್ನು ಬಿಗಿಗೊಳಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯು ಫೇಸ್ ಲಿಫ್ಟ್ ಚಿಕಿತ್ಸೆಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಅತಿ ದೊಡ್ಡ ಪ್ರಯೋಜನವೆಂದರೆ ಬಹಳ ಬೇಗ ಚೇತರಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಟ್ರೆಡ್ ಲಿಫ್ಟ್ ಚಿಕಿತ್ಸೆಯನ್ನು ಪಡೆದ ತಕ್ಷಣ ನೀವು ನಿಮ್ಮ ಕೆಲಸಗಳಿಗೆ ಮರಳಬಹುದು. ಈ ಚಿಕಿತ್ಸೆಯು ಕನಿಷ್ಠ ಶಸ್ತ್ರಚಿಕಿತ್ಸೆಯಾಗಿರುವುದರಿಂದ ರಕ್ತ ಸ್ರಾವವಾಗುವುದು, ಗಾಯಗಳಾಗುವುದು, ಗಾಯದ ಕಲೆ ಉಳಿತುಕೊಳ್ಲುವುದು ಇತ್ಯಾದಿ ಯಾವ ತೊಂದರೆಗಳೂ ಇರುವುದಿಲ್ಲ. 

ನೋವಿಲ್ಲದ (ಪೇಯ್ನ್‌ಲೆಸ್ ) ಬಾಡಿ ಕಾಂಟೂರಿಂಗ್

ದೇಹದ ಕೊಬ್ಬನ್ನು ಇಳಿಸಲು ಶಸ್ತ್ರಚಿಕಿತ್ಸೆ ಅಲ್ಲದ ಚಿಕಿತ್ಸೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ದೇಹದ ಕೊಬ್ಬನ್ನು ಇಳಿಸಲು ಶಸ್ತ್ರಚಿಕಿತ್ಸೆ ಅಲ್ಲದ ಶಾಖಾಧಾರಿತ ಕೊಬ್ಬು ಕರಗಿಸುವಿಕೆ ಮತ್ತು ಚರ್ಮ ಬಿಗಿಗೊಳಿಸುವಿಕೆಗಳು ಹೆಚ್ಚುತ್ತಿವೆ. ಮಾಂಸಕಂಡಗಳನ್ನು ಬಿಗಿಗೊಳಿಸುವ ಮತ್ತು ಕೊಬ್ಬನ್ನು ಕರಗಿಸಲು ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿಯನ್ನು ಬಳಸಲಾಗುತ್ತದೆ. ಇದು ಬಹಳ ಸರಳ ಚಿಕಿತ್ಸೆಯಾಗಿದ್ದು ಕೂಡಲೇ ಚೇತರಿಸಿಕೊಳ್ಳಬಹುದು. ಆದರೆ ಈ ಚಿಕಿತ್ಸೆ ಪಡೆಯಲು ಹಲವು ಬಾರಿ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕಾಗಬಹುದು. 

ಫೇಶಿಯಲ್ (ಮುಖದ) ಕಾಂಟೂರಿಂಗ್ ಪ್ರೊಸೀಜರ್‌ಗಳು.

ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಾಹಿತಿಯು ಲಭ್ಯವಾಗುತ್ತಿರುವುದರಿಂದ ಮುಖ ಸೌಂದರ್ಯವನ್ನು ಸುಧಾರಿಸಲು ಫೇಶಿಯಲ್ ಕಾಂಟೂರಿಂಗ್ ನಂತಹ ಚಿಕಿತ್ಸೆಗಳು ಬಹಳ ಜನಪ್ರಿಯವಾಗುತ್ತಿವೆ. ಚಪ್ಪೆ ತುಟಿ ಮತ್ತು ಮೂಗುಗಳನ್ನು ಹೊಂದಿರುವವರು ಅವುಗಳನ್ನು ತುಂಬುದುಟಿ ಮತ್ತು ನೀಳವಾದ ಮೂಗುಗಳನ್ನಾಗಿ ಪರಿವರ್ತಿಸಲು ಫಿಲ್ಲರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಫಿಲ್ಲರ್‌ಗಳನ್ನು ಸಣ್ಣ ವಯಸ್ಸಿನಲ್ಲಿ ಮತ್ತು ಇಳಿವಯಸ್ಸಿನಲ್ಲಿ ಕೂಡ ಬಳಸಬಹುದಾಗಿದೆ. ಈ ವರ್ಷ ನೈಸರ್ಗಿಕ ತುಂಬು ತುಟಿಯ ಚಿಕಿತ್ಸೆಗೆ ಅಪಾರ ಬೇಡಿಕೆ ಇರುವುದನ್ನು ನಾವು ಗಮನಿಸಬಹುದು. ತುಟಿಗಳ ಫಿಲ್ಲರ್‌ಗಳ ಕಲೆಗಳು ಕಾಣದಂತೆ ತುಂಬಿದ ತುಟಿಯನ್ನು ಹೊಂದಲು ನೆರವಾಗುವ  ಸೌಂದರ್ಯವರ್ಧಕಗಳು  ತುಟಿ ಚುಚ್ಚುಮದ್ದಿನ ರೂಪದಲ್ಲಿ  ಈಗ ಲಭ್ಯವಾಗಿವೆ. ಹ್ಯಾಲುರೋನಿಕ್ ಆಸಿಡ್‌ನಿಂದ ತಯಾರಿಸಿದ ತಾತ್ಕಾಲಿಕ ಫಿಲ್ಲರ್ ಗಳನ್ನು ಬಳಸುವುದು ಉತ್ತಮ. ಅದು ನಿಮ್ಮ ತುಟಿಗೆ ಸಹಜವಾಗಿ ಕಾಣುವಂತೆ ಮಾಡುತ್ತದೆ ಮತ್ತು ಕಾಲಾಂತರದಲ್ಲಿ ಕರಗಿ ಹೋಗುತ್ತದೆ. 

ಮೈಕ್ರೋ ಬ್ಲೇಡಿಂಗ್

ತುಂಬು ಕಣ್ನು ಹುಬ್ಬುಗಲನ್ನು ಹೊಂದಿರುವುದು ಇತ್ತೀಚಿನ ಟ್ರೆಂಡ್. ಕಣ್ನು ಹುಬ್ಬುಗಳು ದಟ್ಟವಾಗಿ, ಸಹಜವಾಗಿ ಕಾಣಲು ಮತ್ತು ಪ್ರತಿದಿನ ಬ್ರೋ ಪೆನ್ಸಿಲ್ ಬಳಕೆಯನ್ನು ತಪ್ಪಿಸಲು ಹೆಚ್ಚು ಹೆಚ್ಚು ಜನರು ಮೈಕ್ರೋ ಬ್ಲೇಡಿಂಗ್ ಚಿಕಿತ್ಸೆಯತ್ತ ವಾಲುತ್ತಿದ್ದಾರೆ. ಇದು ಸಣ್ಣ ಸಣ್ಣ ಸುಜಿಗಳನ್ನು ಬಳಸಿ ಚರ್ಮಕ್ಕೆ ಬಣ್ಣ ನೀಡುವ ಪಿಗ್ಮೆಂಟಗಳನ್ನು ಸೇರಿಸುವ  ಅರೆ ಖಾಯಂ ಆದ ಹಚ್ಚೆಗಳನ್ನು ಮೂಡಿಸುವ ವಿಧಾನವಾಗಿದೆ. ಇದು ದಪ್ಪವಾದ ಕಣ್ಣು ಹುಬ್ಬನ್ನು ಹೊಂದಿರುವ ಭ್ರಮೆಯನ್ನು ಮೂಡಿಸುತ್ತದೆ. 

ಲೇಖಕರು: ಡಾ. ಪ್ರಿಯಾಂಕ ರೆಡ್ಡಿ, ಚರ್ಮರೋಗ ತಜ್ಞರು, ಸೌಂದರ್ಯ ವರ್ಧನಾ ತಜ್ಞರು, ಟ್ರಿಕಾಲಜಿಸ್ಟ್ (ತಲೆಗೂದಲ ತಜ್ಞೆ) ಮತ್ತು ಸಂಸ್ಥಾಪಕರು, ಡಿಎನ್‌ಎ ಸ್ಕಿನ್ ಕ್ಲಿನಿಕ್, ಬೆಂಗಳೂರು.

click me!