ಪೂಜೆಯ ವಿಷಯದಲ್ಲೂ ಅಂಬಾನಿ ಕುಟುಂಬ ಮುಂಚೂಣಿಯಲ್ಲಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಆಂಟಿಲಿಯಾದಲ್ಲಿ ಬಪ್ಪನನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಎಷ್ಟು ಚೆನ್ನಾಗಿ ಕಾಣುತ್ತಿದ್ದರೆಂದರೆ ಉಳಿದವರೆಲ್ಲರೂ ಅವರ ಮುಂದೆ ಏನೂ ಇಲ್ಲ ಬಿಡಿ. ಈ ಸಮಯದಲ್ಲಿ ನೀತಾ ಹೊಳೆಯುವ ಕಿತ್ತಳೆ ಬಣ್ಣದ ಸೀರೆಯೊಂದಿಗೆ ಕುತ್ತಿಗೆಗೆ ತುಂಬಾ ದುಬಾರಿ ನೆಕ್ಲೇಸ್ ಧರಿಸಿರುವುದು ಕಂಡುಬರುತ್ತದೆ. ಇದು 200 ವರ್ಷ ಹಳೆಯದು. ಈ ಹಿಂದೆಯೂ ಸಹ, ನೀತಾ ಅಂಬಾನಿ ವಿದೇಶಗಳಿಗೆ ಹೋದಾಗ ಈ ನೆಕ್ಲೇಸ್ ಧರಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ವರದಿಯ ಪ್ರಕಾರ, ನೀತಾ 2,510 ಕೋಟಿ ಸಂಪತ್ತನ್ನು ಹೊಂದಿದ್ದಾರೆ. ಅವರ ಬಳಿ ಹಲವು ದುಬಾರಿ ನೆಕ್ಲೇಸ್‌ಗಳಿವೆ. ಆದರೆ ಇನ್ನೂ ಅವರು ಈ ನೆಕ್ಲೇಸ್ ಅನ್ನ ಮತ್ತೆ ಮತ್ತೆ ಏಕೆ ಧರಿಸುತ್ತಾರೆ?
ಅಂದಹಾಗೆ ನೀತಾ ಅಂಬಾನಿಯವರ ಈ ಫೋಟೋಗಳನ್ನು ಗಾಯಕಿ ಹರ್ಷದೀಪ್ ಕೌರ್ ಹಂಚಿಕೊಂಡಿದ್ದಾರೆ. ಅವರು ಅನೇಕ ಸೂಪರ್‌ಹಿಟ್ ಹಾಡುಗಳನ್ನು ನೀಡಿದ್ದು, ಗಣೇಶ ಉತ್ಸವದ ಸಂದರ್ಭದಲ್ಲಿ ಅವರು ಆಂಟಿಲಿಯಾಗೆ ತೆರಳಿದ್ದರು. ಹಾಗಾದರೆ ನೀತಾ ಅಂಬಾನಿಯವರ ಈ ಕಿತ್ತಳೆ ಬಣ್ಣದ ಸೀರೆ ಮತ್ತು ಆ ನೆಕ್ಲೇಸ್‌ನ ವಿಶೇಷತೆ ಏನೆಂದು ನೋಡೋಣ ಬನ್ನಿ..
ಕಿತ್ತಳೆ ಬಣ್ಣದ ಬನಾರಸಿ ರೇಷ್ಮೆ ಸೀರೆಯಲ್ಲಿ ಏನೇನಿದೆ ?
ನೀತಾ ಅಂಬಾನಿಯವರನ್ನು ಕಿತ್ತಳೆ ಬಣ್ಣದ ಸೀರೆಯ ಲುಕ್‌ನಲ್ಲಿ ನೋಡಿದ್ರೆ ಅವರಿಗೆ 60 ವರ್ಷ ವಯಸ್ಸು ಎಂದು ಯಾರೂ ಹೇಳುವುದಿಲ್ಲ. ಸೀರೆ ಮತ್ತು ಬ್ಲೌಸ್ ಆ ನಂತರ ಗಮನಕ್ಕೆ ಬರುತ್ತವೆ. ಮೊದಲನೆಯದಾಗಿ, ಅವರ ದೇಸಿ ಉಡುಪಿನ ಬಣ್ಣವು ಅವರ ಮುಖವನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತಿದೆ. ಲುಕ್ ಅನ್ನು ವಿಶೇಷವಾಗಿಸುವುದರ ಜೊತೆಗೆ, ಕಿತ್ತಳೆ ಬಣ್ಣವು ಇನ್ನೊಂದು ಕಾರಣಕ್ಕಾಗಿ ತುಂಬಾ ವಿಶೇಷವಾಗಿದೆ. ಅಂದರೆ, ಕಿತ್ತಳೆ ಬಣ್ಣವನ್ನು ಉತ್ಸಾಹ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ನೀತಾ ಕಿತ್ತಳೆ ಬಣ್ಣದ ಸೀರೆಗೆ ಹೊಂದಿಕೆಯಾಗುವ ಬ್ಲೌಸ್ ಧರಿಸಿರುವುದು ಕಂಡುಬರುತ್ತದೆ. ಇದು ಹೈ ನೆಕ್ ವಿನ್ಯಾಸ ಮತ್ತು ದುಂಡಗಿನ ನೆಕ್‌ಲೈನ್ ಹೊಂದಿದೆ. ಇದಕ್ಕೆ ಆಫ್ ಸ್ಲೀವ್ಸ್ ಸಹ ಇದೆ. ತೋಳುಗಳ ಮೇಲಿನ ಗೋಲ್ಡ್ ವರ್ಕ್ ನೀತಾ ಅವರ ಲುಕ್ ಅನ್ನು ರಾಯಲ್ ಆಗಿ ಮಾಡುತ್ತಿದೆ.
ನೀತಾ ಅಂಬಾನಿ ಬನಾರಸಿ ರೇಷ್ಮೆ ಸೀರೆ ಧರಿಸಿದ್ದು, ತುಂಬಾ ಸಿಂಪಲ್ಲಾಗಿದೆ. ಅವರ ಸೀರೆಯ ಅಂಚು ಸಹ ಹೊಳೆಯುವುದನ್ನ ಕಾಣಬಹುದು. ಕಿತ್ತಳೆ ಬಣ್ಣದ ಸೀರೆಯನ್ನು ಸುಂದರವಾಗಿಸಲು, ಅದರ ಬಾರ್ಡರ್‌ನಲ್ಲಿ ಗೋಲ್ಡ್ ವರ್ಕ್ ಮಾಡಲಾಗಿದೆ. ಸ್ಟಾರ್ ಸಹ ಸೇರಿಸಲಾಗಿದೆ. ಇದು ಅವರನ್ನು ಪರ್‌ಫೆಕ್ಟ್ ಆಗಿ ಕಾಣುವಂತೆ ಮಾಡುತ್ತಿದೆ. ನೀತಾ ಸೀರೆಯನ್ನು ಕ್ಲಾಸಿಕ್ ರೀತಿಯಲ್ಲಿ ಧರಿಸಿದ್ದು, ಅದು ಅವರ ಬ್ಲೌಸ್ ಅನ್ನು ಸಹ ಹೈಲೈಟ್ ಮಾಡಿದೆ.
200 ವರ್ಷ ಹಳೆಯದಾದ ನೆಕ್ಲೇಸ್ ಏಕೆ ವಿಶೇಷ?
ನೀತಾ ಅಂಬಾನಿಯವರ ಸೀರೆಯೊಂದಿಗೆ 200 ವರ್ಷ ಹಳೆಯದಾದ ನೆಕ್ಲೇಸ್ ನೋಡಲು ಸುಂದರವಾಗಿದೆ. ಇದು ಅವರ ಆಭರಣ ಸಂಗ್ರಹದಲ್ಲಿ ಅತ್ಯಂತ ಅಮೂಲ್ಯವಾದವುಗಳಲ್ಲಿ ಒಂದಾಗಿದೆ. ಈ ನೆಕ್ಲೇಸ್ ಮೇಲಿನ ಪೆಂಡೆಂಟ್‌ನ ಗಿಳಿಯ ಆಕಾರವು ಅದನ್ನು ಮತ್ತಷ್ಟು ಅದ್ಭುತವಾಗಿಸಿದೆ. ಮತ್ತು ಈ ನೆಕ್ಲೇಸ್ ಐಷಾರಾಮಿ ಮಾಡಲು ಪಚ್ಚೆಗಳು, ಮಾಣಿಕ್ಯಗಳು, ವಜ್ರಗಳು ಮತ್ತು ಮುತ್ತುಗಳನ್ನು ಬಳಸಲಾಗಿದೆ. ಇಂತಹ ನೆಕ್ಲೇಸ್ ಬಹಳ ಅಮೂಲ್ಯವಾದವು ಮತ್ತು ಜಗತ್ತಿನಲ್ಲಿ ಕೆಲವೇ ಜನರು ಅವುಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ನೀತಾ ತನ್ನ ಕೈಯಲ್ಲಿ ಪಚ್ಚೆ ಉಂಗುರ ಮತ್ತು ಬಳೆ ಧರಿಸಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.