ನೀತಾ ಅಂಬಾನಿ ಅವರು ಧರಿಸುವ ಸೀರೆ ಎಲ್ಲಾ ಲಕ್ಷ, ಕೋಟಿ ರೂಪಾಯಿ ಲೆಕ್ಕದಲ್ಲೇ ಇರುತ್ತದೆ. ಹಿಂದೊಮ್ಮೆ ಅವರು ಅಹಮದಾಬಾದ್‌ನಲ್ಲಿ ನಡೆದ ರಿಲಯನ್ಸ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಿಇಒ ಅವರ ಮಗನ ಮದುವೆಯಲ್ಲಿ 40 ಲಕ್ಷ ಮೌಲ್ಯದ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ವಿನ್ಯಾಸಗೊಳಿಸಿದ್ದು ಮತ್ತಾರೂ ಅಲ್ಲ, ಚೆನ್ನೈ ಸಿಲ್ಕ್ಸ್‌ನ ನಿರ್ದೇಶಕ ಶಿವಲಿಂಗಂ. ಇದು ನೋಡಲಿಕ್ಕೆ ವಿವಾಹ್ ಪಟುವಿನಂತೆಯೇ ಇತ್ತು. ನೀತಾ ಅಂಬಾನಿ ಧರಿಸಿದ್ದ ಅತ್ಯಂತ ದುಬಾರಿ ಸೀರೆಯ ಬ್ಲೌಸ್‌ನ ಹಿಂಭಾಗದಲ್ಲಿ ನಾಥವಾಡ ದೇವರ ಚಿತ್ರವಿತ್ತು.
ಆದರೆ ನಿಮಗೆ ನಿನಪಿದೆಯಾ ಈ ಹಿಂದೆ ಇದೇ ಚೆನ್ನೈ ಸಿಲ್ಕ್ಸ್‌ನ ಸೀರೆಯೊಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ. ಮತ್ತೇಕೆ ತಡ ಆ ಸೀರೆಯ ವೈಶಿಷ್ಟ್ಯದ ಬಗ್ಗೆ ಒಮ್ಮೆ ತಿಳಿದುಕೊಳ್ಳೋಣ ಬನ್ನಿ...
ಚೆನ್ನೈ ಸಿಲ್ಕ್‌ನ ರವಿ ವರ್ಮಾ ಪೇಂಟಿಂಗ್ ಸೀರೆ ವಿಶ್ವದ ಅತ್ಯಂತ ದುಬಾರಿ ಸೀರೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಬೆಲೆ ಬರೋಬ್ಬರಿ 39,31,627ರೂ. 'ವಿಶ್ವದ ಅತ್ಯಂತ ದುಬಾರಿ ಸೀರೆ' ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಿಂದ ಗುರುತಿಸಲ್ಪಟ್ಟ ಇದನ್ನು, ಜವಳಿ ಸಂಸ್ಥೆ ' ದಿ ಚೆನ್ನೈ ಸಿಲ್ಕ್ಸ್' ನ ಕೈಮಗ್ಗ ನೇಕಾರರು ವಿನ್ಯಾಸಗೊಳಿಸಿದ್ದಾರೆ . ಮುಖ್ಯ ಚಿತ್ರವು ವರ್ಮಾ ಅವರ ಪ್ರಸಿದ್ಧ 'ಗ್ಯಾಲಕ್ಸಿ ಆಫ್ ಮ್ಯೂಸಿಷಿಯನ್ಸ್' ನ ಪ್ರತಿರೂಪವಾಗಿದೆ. ಇದನ್ನು ತಯಾರಿಸಲು ಒಟ್ಟು 4760 ಗಂಟೆ ಬೇಕಾಯಿತು.
ಸೀರೆಯಲ್ಲಿರುವ ಪದಾರ್ಥಗಳ ಪಟ್ಟಿ
1. ಚಿನ್ನ 59 ಗ್ರಾಂ 700 ಮಿಲಿ ಗ್ರಾಂ
2. ವಜ್ರ 3 ಕ್ಯಾರೆಟ್ 913 ಸೆಂಟ್ಸ್
3. ಪ್ಲಾಟಿನಂ-120 ಮಿಲಿ ಗ್ರಾಂ
4. ಬೆಳ್ಳಿ - 5 ಗ್ರಾಂ
5. ರೂಬಿ 2 ಕ್ಯಾರೆಟ್ 985 ಸೆಂಟ್
6. ಪಚ್ಚೆ -55 ಸೆಂಟ್
7. ಹಳದಿ ನೀಲಮಣಿ - 3 ಸೆಂಟ್
8. ನೀಲಮಣಿ - 5 ಕ್ಯಾರೆಟ್
9. ಕ್ಯಾಟ್ ಐ - 14 ಸೆಂಟ್
10. ಟೊಪಜ್ -10 ಸೆಂಟ್
11. ಮುತ್ತು - 2 ಗ್ರಾಂ
12. ಕೋರಲ್ - 400 ಮಿಲಿಗ್ರಾಂ
ಸುಮಾರು 8 ಕೆಜಿ ತೂಕದ ಈ 'ವಿವಾಹ್ ಪಟು ' ಸೀರೆ ವಿಶ್ವದ ಅತ್ಯಂತ ದುಬಾರಿ ಸೀರೆಯಾಗಿತ್ತು. ಇದರಲ್ಲಿ ಪ್ರಸಿದ್ಧ ಭಾರತೀಯ ವರ್ಣಚಿತ್ರಕಾರ ರಾಜಾ ರವಿವರ್ಮ ಅವರ 11 ವರ್ಣಚಿತ್ರಗಳಿವೆ. ಇದನ್ನೂ ಚೆನ್ನೈ ಸಿಲ್ಕ್ಸ್ ನಿರ್ದೇಶಕ ಶಿವಲಿಂಗಂ ವಿನ್ಯಾಸಗೊಳಿಸಿದ್ದರು. ಚೆನ್ನೈ ಸಿಲ್ಕ್ಸ್ 2007 ರಲ್ಲಿ ಇದೇ ರೀತಿಯ ಸೀರೆಯನ್ನು ವಿನ್ಯಾಸಗೊಳಿಸಿ, ಜನವರಿ 5, 2008 ರಂದು ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿತ್ತು. ಅವರು ತಮ್ಮ 10 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆ ಸೀರೆಯನ್ನು ಖರೀದಿಸಿದರು. ಒಂದು ವರ್ಷದ ನಂತರ, ಕುವೈತ್ ಮೂಲದ ಉದ್ಯಮಿಯೊಬ್ಬರು ವಿವಾಹ್ ಪಟುಗಾಗಿ ಅವರನ್ನು ಸಂಪರ್ಕಿಸಿದರು. ಅದನ್ನು ಅವರು 40 ಲಕ್ಷ ರೂ.ಗೆ ಖರೀದಿಸಿದರು.
ಅಂದಹಾಗೆ ಸೀರೆಯು ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದಿರುವುದು ಅದರಲ್ಲಿರುವ ಅಮೂಲ್ಯ ಕಲ್ಲುಗಳಿಂದಲ್ಲ, ಬದಲಾಗಿ ರವಿಕೆ ಮತ್ತು ಪಲ್ಲುವಿನ ಮೇಲೆ ಕಾಣಿಸಿಕೊಂಡಿರುವ ರವಿವರ್ಮ ಅವರ ಪ್ರಸಿದ್ಧ ವರ್ಣಚಿತ್ರಗಳಿಂದಾಗಿ ಎಂಬುದು ನಮಗೆ ತುಂಬಾ ಹೆಮ್ಮೆಯ ಸಂಗತಿ. ಪಲ್ಲುವು 16 ಬಣ್ಣಗಳು ಮತ್ತು 64 ಶೇಡ್‌ನ ಬಣ್ಣದ ಪ್ಯಾಲೆಟ್‌ನೊಂದಿಗೆ ಮಹಿಳಾ ಗಾಯಕವೃಂದವನ್ನು ಒಳಗೊಂಡ ಸೊಗಸಾದ ರಾಜಾ ರವಿವರ್ಮ ಚಿತ್ರಕಲೆ 'ಲೇಡಿ ಮ್ಯೂಸಿಷಿಯನ್ಸ್' ಅನ್ನು ಒಳಗೊಂಡಿದೆ.
ಈ ಸೀರೆ ನೇಯುವುದು ಸುಲಭದ ಕೆಲಸವಾಗಿರಲಿಲ್ಲ. ಇದನ್ನು ಪೂರ್ಣಗೊಳಿಸಲು 36 ನುರಿತ ನೇಕಾರರು ಸುಮಾರು ಒಂದೂವರೆ ವರ್ಷ ತೆಗೆದುಕೊಂಡರು. ಬಾರ್ಡರ್ ಅಮೂಲ್ಯವಾದ ನಾಗಸು ಆಭರಣಗಳಿಂದ ಸುತ್ತುವರೆದಿದೆ. ವಿಶ್ವದ ಅತ್ಯಂತ ದುಬಾರಿ ಸೀರೆ 40 ಲಕ್ಷಕ್ಕೆ ಮಾರಾಟವಾಗಿರುವುದು ಕಾಲಾತೀತ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಇನ್ನೂ ಬೇಡಿಕೆಯಲ್ಲಿವೆ ಎಂಬುದಕ್ಕೆ ಪುರಾವೆಯಾಗಿದೆ.
ಈ ರವಿವರ್ಮ ಪೇಂಟಿಂಗ್ ಸೀರೆಯ ಅತ್ಯುತ್ತಮ ಅಂಶವೆಂದರೆ ಇದು ಇತರ ಯಾವುದೇ ಸಾಮಾನ್ಯ ಪಟ್ಟು ಸೀರೆಯಂತೆ ಧರಿಸಬಹುದಾದದ್ದು. ಇದು ಅವರ ಮೊದಲ ನಾವೀನ್ಯತೆಯಲ್ಲ. ಹಿಂದೆ ಅವರು ಸುಗಂಧ ದ್ರವ್ಯದ ಸೀರೆಗಳನ್ನು ತಯಾರಿಸುತ್ತಿದ್ದರು.
ವಿಶ್ವದ ಅತ್ಯಂತ ನವೀನ ಸೀರೆಗಳ ತಯಾರಕರಾಗುವ ಪ್ರಯತ್ನದಲ್ಲಿ, ಚೆನ್ನೈ ಸಿಲ್ಕ್ 8 ಕೆಜಿ ತೂಕದ ಈ ವಿವಾಹ್ ಪಟ್ಟು ಸೀರೆಯನ್ನು ರೂಪಿಸಿತು, ಅದು ಅಂತಿಮವಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶ ಪಡೆಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.