ರಾಕುಲ್ ಪ್ರೀತ್ ಹೊಟ್ಟೆಗೇನು ತಿಂದು, ಇಷ್ಟು ಚೆಂದ ಇರೋದು?

By Suvarna News  |  First Published Oct 11, 2023, 3:51 PM IST

ಸೆಲೆಬ್ರಿಟಿಗಳು ಸಾಕಷ್ಟು ಡಯಟ್ ಮಾಡ್ತಾರೆ ಎಂಬ ನಂಬಿಕೆ ನಮಗಿದೆ. ಒಂದು ಹೊತ್ತಿನ ಊಟ ಬಿಟ್ಟು, ಸರಿಯಾಗಿ ವರ್ಕ್ ಔಟ್ ಮಾಡ್ತಾರೆ ಅಂತಾ ಅನೇಕರು ಅಂದುಕೊಂಡಿದ್ದಾರೆ. ಆದ್ರೆ ಎಲ್ಲರೂ ಹಾಗಲ್ಲ. ಕೆಲವರು ಡಯಟ್ ನಿಂದ ದೂರವಿದ್ರೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರಲ್ಲಿ ರಾಕುಲ್ ಪ್ರೀತ್ ಕೂಡ ಒಬ್ಬರು.
 


ರಾಕುಲ್ ಪ್ರೀತ್, ಪ್ರಸಿದ್ಧ ಬಾಲಿವುಡ್ ನಟಿಯರಲ್ಲಿ ಒಬ್ಬರು. ರಾಕುಲ್ ಪ್ರೀತ್  ನಟನೆ ಮತ್ತು ಸೌಂದರ್ಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಅವರ ಫಿಟ್ನೆಸ್ ಬಗ್ಗೆಯೂ ಅಭಿಮಾನಿಗಳು ಕುತೂಹಲ ಹೊಂದಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸುವ ರಾಕುಲ್ ಪ್ರೀತ್,  ಫಿಟ್ನೆಸ್ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ರಾಕುಲ್ ಯಾವತ್ತೂ ವರ್ಕೌಟ್ ಮಿಸ್ ಮಾಡಿಕೊಳ್ಳುವುದಿಲ್ಲ. ಇದರ ಹೊರತಾಗಿ ತೆಳ್ಳಗಿನ ದೇಹವನ್ನು ಹೊಂದಲು ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ರಾಕುಲ್ ಪ್ರೀತ್. ಇದೇ ತಿಂಗಳು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಾಕುಲ್ ಪ್ರೀತ್, ತಮ್ಮ ಫಿಟ್ನೆಸ್ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ. 

ರಾಕುಲ್ ಪ್ರೀತ್ (Rakul Preet) ಫಿಟ್ನೆಸ್ ಗುಟ್ಟೇನು ಗೊತ್ತಾ? :  ರಾಕುಲ್ ಪ್ರೀತ್ ಸಿನಿಮಾಗಳಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲೂ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್ (Instagram) ಲೈವ್‌ನಲ್ಲಿ ರಾಕುಲ್ ಪ್ರೀತ್ ಡಯಟ್ ಬಗ್ಗೆ ಮಾತನಾಡಿದ್ದರು. ಡಯಟ್ (Diet) ಎಂಬ ಪದವನ್ನು ಅವರು ದ್ವೇಷಿಸುತ್ತಾರಂತೆ. ಇದು ಖಿನ್ನತೆಯ ಪದ ಎನ್ನುತ್ತಾರೆ ಅವರು. ಸಮತೋಲಿತ ಆಹಾರದಲ್ಲಿ ನಂಬಿಕೆ ಇಟ್ಟಿದ್ದಾರೆ ರಾಕುಲ್.  ಸಮತೋಲಿತ ಆಹಾರ ಅವರ ಜೀವನಶೈಲಿಯ ಭಾಗವಾಗಿದೆ. ಫಿಟ್ ಆಗಿರಲು ಆಹಾರವನ್ನು ತೊರೆಯುವ ಅಗತ್ಯವಿಲ್ಲ.  ಸಮತೋಲನ ಆಹಾರ ಸೇವಿಸುವಂತೆ ಅಭಿಮಾನಿಗಳಿಗೆ ರಾಕುಲ್  ಸಲಹೆ ನೀಡಿದ್ದಾರೆ.  ಫಿಟ್ನೆಸ್  ಫ್ಯಾಶನ್ ಅಲ್ಲ. ನೀವು ಪ್ರತಿ ದಿನ ಆಹಾರ ಸೇವನೆ ಮಾಡಬೇಕು ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ ರಾಕುಲ್. ಸಮತೋಲನ ಆಹಾರವನ್ನು ತೆಗೆದುಕೊಳ್ಳುವ ಮೂಲಕ  ವ್ಯಾಯಾಮವನ್ನು ನಿಮ್ಮ ದಿನಚರಿ ಮಾಡಿಕೊಳ್ಳಿ ಎನ್ನುತ್ತಾರೆ ರಾಕುಲ್.

Tap to resize

Latest Videos

undefined

ಕಪ್ಪಗೆ, ದಪ್ಪಗಿದ್ದ ರೇಖಾಗೆ ಕಪ್ಪು ಬಾತು ಕೋಳಿ ಎನ್ನುತ್ತಿದ್ದ ಬಾಲಿವುಡ್, ಬೆಳೆದ ಪರಿಗೆ ಸರಿಸಾಟಿಯೇ ಇಲ್ಲ!

ರಾಕುಲ್ ಏನು ತಿನ್ನುತ್ತಾರೆ ಗೊತ್ತಾ? : ರಾಕುಲ್ ಎರಡು ಗ್ಲಾಸ್ ಬಿಸಿ ನೀರು ಸೇವನೆ ಮಾಡುವ ಮೂಲಕ ತಮ್ಮ ದಿನಚರಿ ಶುರು ಮಾಡ್ತಾರೆ. ನಂತ್ರ  ಬುಲೆಟ್ ಕಾಫಿ ಕುಡಿಯುತ್ತಾರೆ ನಟಿ. ಆ ನಂತ್ರ ವರ್ಕೌಟ್ ಶುರು ಮಾಡ್ತಾರೆ. ಬೆಳಗಿನ ಉಪಾಹಾರಕ್ಕಾಗಿ  ಮೊಟ್ಟೆಯ ಬಿಳಿಭಾಗ ಹಾಗೂ ಮಲ್ಟಿಗ್ರೇನ್ ಬ್ರೆಡ್  ಸೇರಿದಂತೆ ಆರೋಗ್ಯಕ ಆಹಾರ ಸೇವನೆ ಮಾಡುತ್ತಾರೆ ನಟಿ. ಮಧ್ಯಾಹ್ನದ ಊಟವನ್ನು ರಾಕುಲ್ ಮಿಸ್ ಮಾಡಿಕೊಳ್ಳೋದಿಲ್ಲ. ಮನೆಯಲ್ಲಿ ತಯಾರಿಸಿದ ಊಟ ಸೇವನೆ ಮಾಡುವ ಅವರು ರೊಟ್ಟಿ, ದಾಲ್, ಮೀನು, ತರಕಾರಿ , ಸಲಾಡ್ ಮತ್ತು ಚಿಕನ್ ಜೊತೆ ಬ್ರೌನ್ ರೈಸ್ ಇಷ್ಟಪಡ್ತಾರೆ.  ರಾತ್ರಿಯ ಊಟಕ್ಕೆ ಬೇಯಿಸಿದ ಮೀನು, ಸಲಾಡ್, ಸೂಪ್ ಮತ್ತು ಬೇಯಿಸಿದ ತರಕಾರಿ ತಿನ್ನುತ್ತಾರೆ ರಾಕುಲ್. 

ಮೊಸರಿನೊಂದಿಗೆ ಈ ವಸ್ತು ಬೆರೆಸಿ ಸೇವಿಸಿದ್ರೆ ಕೂದಲು ಉದುರಲ್ವಂತೆ!

ವರ್ಕ್ ಔಟ್ ಬಿಡೋದಿಲ್ಲ ರಾಕುಲ್ : ವರ್ಕ್ ಔಟ್ ನಮ್ಮ ಜೀವನದ ಒಂದು ಭಾಗವಾಗ್ಬೇಕು ಎನ್ನುತ್ತಾರೆ ರಾಕುಲ್. ಇವರು ಒಂದು ದಿನವೂ ವರ್ಕ್ ಔಟ್ ಮಾಡೋದನ್ನು ಮರೆಯೋದಿಲ್ಲ. ಇದೇ ಕಾರಣಕ್ಕೆ ಸದಾ ಫಿಟ್ ಆಂಡ್ ಸ್ಮಾರ್ಟ್ ಆಗಿದ್ದಾರೆ ರಾಕುಲ್. ಪ್ರತಿದಿನ ಕಾರ್ಡಿಯೋ ವ್ಯಾಮಾ ಹಾಗೂ ಇತರೆ ಕೆಲ ವ್ಯಾಯಾಮ ರಾಕುಲ್ ಮಾಡ್ತಾರೆ. ಸೈಕ್ಲಿಂಗ್, ಸ್ಕಿಪ್ಪಿಂಗ್ ಮತ್ತು ಕಿಕ್ ಬಾಕ್ಸಿಂಗನ್ನು ತಮ್ಮ ಕಾರ್ಡಿಯೋ ವ್ಯಾಯಾಮದಲ್ಲಿ ಸೇರಿಸಿಕೊಂಡಿದ್ದಾರೆ ನಟಿ.
ಇಷ್ಟೇ ಅಲ್ಲದೆ  ರಾಕುಲ್, ಧ್ಯಾನ, ಚಕ್ರಾಸನ, ಸೂರ್ಯನಮಸ್ಕಾರ, ಶಿರ್ಶಾಸನದಂತಹ ಯೋಗ ಆಸನಗಳನ್ನು ಸಹ ಮಾಡುತ್ತಾರೆ.
 

click me!