ಸೌಂದರ್ಯ ವರ್ಧಕಗಳನ್ನು ಬಳಸುವುದು ಮುಖ್ಯವಲ್ಲ, ಹೇಗೆ ಬಳಸ್ಬೇಕು ಎಂಬುದು ಗೊತ್ತಿರಬೇಕು. ಸೌಂದರ್ಯ ವರ್ಧಕಗಳನ್ನು ಖರೀದಿ ಮಾಡುವಾಗ ಅದರ ಮುಕ್ತಾಯದ ಅವಧಿಯನ್ನೂ ನೋಡ್ಬೇಕು. ಅವಧಿ ಮುಗಿದ ನಂತ್ರ ನೇಲ್ ಪಾಲಿಶ್ ಬಳಸಿದ್ರೆ ಆರೋಗ್ಯ ಹಾಳಾಗುತ್ತದೆ.
ಚಂದ (Beauty)ದ ಉಗುರಿ (Nail)ಗೆ ಸುಂದರ ನೇಲ್ ಪಾಲಿಶ್ (Nail Polish) ಹಚ್ಚಿದ್ರೆ ಅದರ ಮೆರಗು ಮತ್ತಷ್ಟು ಹೆಚ್ಚುತ್ತದೆ. ಹುಡುಗಿ (girl)ಯರ ಬಳಿ ಬಗೆ ಬಗೆಯ ನೇಲ್ ಪಾಲಿಶ್ ಗಳನ್ನು ನಾವು ನೋಡ್ಬಹುದು. ಅನೇಕರು ಡ್ರೆಸ್ ಗೆ ತಕ್ಕಂತೆ ನೇಲ್ ಪಾಲಿಶ್ ಹಚ್ಚುತ್ತಾರೆ. ನೇಲ್ ಪಾಲಿಶ್ ನಲ್ಲಿ ಅನೇಕ ಬ್ರಾಂಡ್ ಇದೆ. ಹಾಗೆ ನೇಲ್ ಪಾಲಿಶ್ ನಲ್ಲಿ ಹೊಸ ಹೊಸ ಡಿಸೈನ್ ಗಳನ್ನು ಮಾಡಲಾಗುತ್ತದೆ. ಹುಡುಗಿಯರಿಗೆ ಅಚ್ಚುಮೆಚ್ಚಾಗಿರುವ ಈ ನೇಲ್ ಪಾಲಿಶ್ ಕೂಡ ಎಕ್ಸ್ ಪೈರಿ ಡೇಟ್ ಹೊಂದಿದೆ. ದಿನಾಂಕ ಮುಗಿದ ನೇಲ್ ಪಾಲಿಶ್ ಹಚ್ಚಿದ್ರೆ ಉಗುರಿಗೆ ಹಾನಿಯಾಗುತ್ತದೆ. ಇಂದು ನೇಲ್ ಪಾಲಿಶ್ ಕೊನೆ ಡೇಟ್ ಹೇಗೆ ಪರಿಶೀಲನೆ ಮಾಡ್ಬೇಕು ಹಾಗೂ ಅದನ್ನು ರಕ್ಷಿಸುವುದು ಹೇಗೆ ಎಂಬುದನ್ನು ಹೇಳ್ತೇವೆ.ಎಷ್ಟು ದಿನಗಳವರೆಗೆ ನೇಲ್ ಪಾಲಿಶ್ ಬಳಸಬಹುದು? : ತಜ್ಞರ ಪ್ರಕಾರ, ಸಾಮಾನ್ಯ ನೇಲ್ ಪಾಲಿಶ್ಗಳು 18-24 ತಿಂಗಳವರೆಗೆ ಬಾಳಿಕೆ ಬರುತ್ತವೆ. ಜೆಲ್ ನೇಲ್ ಪಾಲಿಶ್ಗಳನ್ನು 24-36 ತಿಂಗಳವರೆಗೆ ಬಳಸಬಹುದು. ಈ ಅವಧಿ ಮುಗಿದ ಮೇಲೂ ನೇಲ್ ಪಾಲಿಶ್ ಬಳಸುವುದರಿಂದ ನಿಮ್ಮ ಉಗುರುಗಳಿಗೆ ಹಾನಿಯಾಗುತ್ತದೆ.
ನೇಲ್ ಪಾಲಿಶ್ನ ಮುಕ್ತಾಯ ದಿನಾಂಕದ ಪರಿಶೀಲನೆ ಹೇಗೆ? :
ಲೇಬಲ್ : ನೇಲ್ ಪೇಂಟ್ ಅಥವಾ ನೇಲ್ ಪಾಲಿಶ್ ಲೇಬಲ್ ಅನ್ನು ಪರಿಶೀಲಿಸಬೇಕು. ನೇಲ್ ಪಾಲಿಶ್ ಖರೀದಿ ಮಾಡುವಾಗ ಹಾಗೂ ಮನೆಯಲ್ಲಿರುವ ಹಳೆಯ ನೇಲ್ ಪಾಲಿಶ್ ಬಳಸುವಾಗ ಅದರ ಲೇಬಲ್ ಪರಿಶೀಲನೆ ಮಾಡಿ. ಅದ್ರಲ್ಲಿ ಮುಕ್ತಾಯದ ದಿನಾಂಕವನ್ನು ನಮೂದಿಸಲಾಗಿರುತ್ತದೆ.
ನೇಲ್ ಪಾಲಿಶ್ ಬಣ್ಣದಲ್ಲಿ ಬದಲಾವಣೆ : ನೇಲ್ ಪಾಲಿಶ್ ಬಣ್ಣ ಬದಲಾದರೆ ಅದು ಕೆಟ್ಟು ಹೋಗಿದೆ ಎಂದರ್ಥ. ಆದ್ದರಿಂದ ತಕ್ಷಣ ಅದನ್ನು ಎಸೆಯಿರಿ. ಕೆಟ್ಟು ಹೋದ ನೇಲ್ ಪಾಲಿಶ್ ಬಳಸುವುದ್ರಿಂದ ಉಗುರು ಹಾಳಾಗುತ್ತದೆ.
ದಪ್ಪಗಾದ ನೇಲ್ ಪಾಲಿಶ್ : ಅನೇಕ ಬಾರಿ ನೇಲ್ ಪಾಲಿಶ್ ಬಾಟಲಿಯನ್ನು ಅಲ್ಲಾಡಿಸಿದಾಗ ಚೆನ್ನಾಗಿ ಮಿಕ್ಸ್ ಆಗುವುದಿಲ್ಲ. ನೇಲ್ ಪಾಲಿಶ್ ಹೊರಗೆ ತೆಗೆದಾಗ ಅದು ದಪ್ಪಗಾಗಿ, ಸರಿಯಾಘಿ ಉಗುರಿಗೆ ತಾಗುವುದಿಲ್ಲ. ಆಗ ನಿಮ್ಮ ನೇಲ್ ಪಾಲಿಶ್ ಹಾಳಾಗಿದೆ ಎಂದರ್ಥ.
HEALTH TIPS: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ
ನೇಲ್ ಪಾಲಿಶ್ ತೆಳ್ಳಗಾದ್ರೆ : ಸಾಮಾನ್ಯವಾಗಿ ನೇಲ್ ಪಾಲಿಶ್ ದಪ್ಪಗಾದ್ರೆ ನಾವೆಲ್ಲರೂ ಅದನ್ನು ಬಳಸುವುದಿಲ್ಲ. ಆದ್ರೆ ತೆಳ್ಳಗಾದ್ರೂ ಅದನ್ನು ಬಳಸಬಾರದು. ಉಗುರಿಗೆ ಅದನ್ನು ಹಚ್ಚುತ್ತಿದ್ದಂತೆ ಅದು ಅಂಟಿಕೊಳ್ಳುವುದಿಲ್ಲ. ಆಗ ಪಾಲಿಶ್ ಹಾಳಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
ನೇಲ್ ಪಾಲಿಶ್ ಬಾಟಲ್ : ಸಾಮಾನ್ಯವಾಗಿ ನೇಲ್ ಪಾಲಿಶ್ ಬಾಟಲ್ ತೆಗೆಯುವುದು ಕಷ್ಟವಾಗುತ್ತದೆ. ಮುಚ್ಚಳ ಗಟ್ಟಿಯಾಗಿರುತ್ತದೆ. ಇದಕ್ಕೂ ನೇಲ್ ಪಾಲಿಶ್ ಅವಧಿ ಮುಗಿದಿದೆ ಎಂಬುದೇ ಕಾರಣವಾಗಿರುತ್ತದೆ.
ನೇಲ್ ಪಾಲಿಶ್ ವಾಸನೆ : ಅವಧಿ ಮುಗಿದ ನೇಲ್ ಪಾಲಿಶ್ ಗಳಿಂದ ವಾಸನೆ ಬರಲು ಶುರುವಾಗುತ್ತದೆ. ಆಗ ಅದನ್ನು ಅಪ್ಪಿತಪ್ಪಿಯೂ ಬಳಸಬೇಡಿ. ಇದು ನಿಮ್ಮ ಉಗುರಿನ ಆರೋಗ್ಯವನ್ನು ಹಾಳು ಮಾಡುತ್ತದೆ.
Breast Milk Jewellery: ತಾಯಿ, ಮಗುವಿನ ಬಾಂಧವ್ಯದ ಎದೆಹಾಲಿನ ಆಭರಣ
ನೇಲ್ ಪಾಲಿಶ್ ರಕ್ಷಣೆ ಹೇಗೆ? : ಬಣ್ಣ ಬಣ್ಣದ ನೇಲ್ ಪಾಲಿಶ್ ಖರೀದಿ ಮಾಡ್ತೇವೆ. ಒಂದೆರಡು ಸಲ ಅದನ್ನು ಬಳಸಲಿ ನಂತ್ರ ಬೀರುವಿನಲ್ಲಿ ಇಡ್ತೇವೆ. ಅದು ಗಟ್ಟಿಯಾಗಿ ಬಳಕೆಗೆ ಅಯೋಗ್ಯವಾಗುತ್ತದೆ. ಅದ್ರ ಬದಲು ಅದನ್ನು ಸರಿಯಾಗಿ ಇಟ್ಟಲ್ಲಿ ಅನೇಕ ದಿನ ಬಳಸಬಹುದು. ನೇಲ್ ಪಾಲಿಶನ್ನು ಯಾವಾಗ್ಲೂ ಫ್ರಿಜ್ ನಲ್ಲಿ ಇಡಬೇಕು. ಹಾಗೆಯೇ ನೇಲ್ ಪಾಲಿಶ್ ಬಾಟಲಿಯನ್ನು ನೇರವಾಗಿ ಇಡಬೇಕು. ಯಾವಾಗಲೂ ಉತ್ತಮ ಬ್ರ್ಯಾಂಡ್ ಮತ್ತು ಗುಣಮಟ್ಟದ ನೇಲ್ ಪಾಲಿಶ್ ಬಳಸಬೇಕು.