ಸೌಂದರ್ಯಕ್ಕೆ ಇನ್ನೊಂದು ಹೆಸರು ಮಹಿಳೆ ಎನ್ನುತ್ತಾರೆ. ಹಣೆಗೆ ಬೊಟ್ಟಿಟ್ಟು, ಕೈಗೊಂದಿಷ್ಟು ಬಳೆ ಧರಿಸಿ, ಘಲ್ ಘಲ್ ಎಂದು ಶಬ್ಧ ಮಾಡ್ತಾ ಮನೆ ತುಂಬ ಮಹಿಳೆ ಓಡಾಡ್ತಿದ್ದರೆ ಇದು ಮನೆಗೆ ಏಳ್ಗೆ ತರುತ್ತದೆ ಎಂದೂ ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಬಳೆ ಧರಿಸುವುದು ಫ್ಯಾಷನ್ ಆಗಿದೆ. ನೀವೂ ಬಳೆ ಪ್ರೇಮಿಗಳಾಗಿದ್ದರೆ ಇದನ್ನು ಓದಿ.
ಬಳೆಗಳು (Bangles) ಮಹಿಳೆ (Woman)ಯರ ಅಂದವನ್ನು ಹೆಚ್ಚಿಸುತ್ತವೆ, ಸಾಂಪ್ರದಾಯಿಕ (Traditional) ಬಟ್ಟೆ (Clothes)ಗಳನ್ನು ಧರಿಸಿದಾಗ ಅದಕ್ಕೆ ತಕ್ಕಂತೆ ಮಹಿಳೆಯರು ಬಳೆಗಳನ್ನು ಧರಿಸುತ್ತಾರೆ. ಇದು ಮಹಿಳೆಯರ ಕೈ (Hand) ಸೌಂದರ್ಯ ಹೆಚ್ಚಿಸುತ್ತದೆ. ಹಿಂದೂ ಧರ್ಮ (Hinduism)ದಲ್ಲಿ, ಬಳೆಗಳನ್ನು ವಿವಾಹಿತ (Married) ಮಹಿಳೆಯರ ಹದಿನಾರು ಮೇಕ್ಅಪ್ (Makeup)ನ ಭಾಗವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಮಾತ್ರವಲ್ಲ ಹುಡುಗಿಯರು ಕೂಡ ವಿಶೇಷ ಸಂದರ್ಭಗಳಲ್ಲಿ ಬಳೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಭಾರತದಲ್ಲಿ ಬಳೆಗಳ ಟ್ರೆಂಡ್ ಎಷ್ಟರಮಟ್ಟಿಗೆ ಇದೆಯೆಂದರೆ ನೀವು ಪ್ರತಿಯೊಂದು ರಾಜ್ಯದಲ್ಲೂ ಅವುಗಳಲ್ಲಿ ಹಲವು ವಿಧಗಳನ್ನು ನೋಡಬಹುದು. ಭಾರತದಲ್ಲಿ ಲಭ್ಯವಿರುವ ವಿವಿಧ ರೀತಿಯ ಬಳೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ಭಾರತದಲ್ಲಿ ಸಿಗುವ ವೆರೈಟಿ ಬಳೆಗಳು
ಗಾಜಿನ ಬಳೆ : ಭಾರತದ ಹೆಚ್ಚಿನ ಮಹಿಳೆಯರು ಗಾಜಿನ ಬಳೆಗಳನ್ನು ಧರಿಸುತ್ತಾರೆ. ಈ ಗಾಜಿನ ಬಳೆಯಲ್ಲಿಯೇ ನೀವು ವಿವಿಧತೆ ಕಾಣಬಹುದು. ಅದರ ಬಣ್ಣ,ಕೆತ್ತನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಗಾಜಿನ ಬಳೆಗಳು ಈಗ್ಲೂ ಟ್ರೆಂಡ್ ನಲ್ಲಿವೆ. ಮಹಿಳೆಯರು ತಮ್ಮ ಬಜೆಟ್ ಗೆ ಅನುಗುಣವಾಗಿ ಬಳೆಗಳನ್ನು ಖರೀದಿಸುತ್ತಾರೆ. ಭಾರತದ ಬಹುತೇಕ ಮದುವೆಗಳಲ್ಲಿ ಗಾಜಿನ ಬಳೆಗಳು ಮಹತ್ವ ಪಡೆಯುತ್ತವೆ. ಭಾರತದ ಫಿರೋಜಾಬಾದ್ ನಗರವು ಗಾಜಿನ ಬಳೆಗಳನ್ನು ತಯಾರಿಸಲು ಬಹಳ ಪ್ರಸಿದ್ಧವಾಗಿದೆ.
ಗ್ಲಾಸಿನ ಬಳೆಗಳು : ಬಳೆಗಳ ಮೇಲೆ ಗ್ಲಾಸ್ ಗಳನ್ನು ನೀವು ಕಾಣಬಹುದು. ಇವು ನೋಡಲು ಸುಂದರವಾಗಿರುತ್ತವೆ. ಗ್ಲಾಸ್ ಬಳಕೆಯಾಗಿರುವ ಕಾರಣ ಕೆಲ ಸಮುದಾಯದಲ್ಲಿ ಈ ಬಳೆಗಳನ್ನು ಧರಿಸುವುದಿಲ್ಲ. ಆದ್ರೆ ರಾಜಸ್ತಾನದ ಜೈಪುರದಲ್ಲಿ ಈ ಬಳೆಗಳು ಪ್ರಸಿದ್ಧಿ ಪಡೆದಿವೆ.ಇವು ಗಾಜು ಹಾಗೂ ಲೋಹದ ಬಳೆಗಿಂತ ವೈವಿದ್ಯಮಯವಾಗಿರುತ್ತವೆ.
ಲೋಹದ ಬಳೆ : ಲೋಹದ ಬಳೆಗಳು ಎಲ್ಲರಿಗೂ ತುಂಬಾ ಇಷ್ಟ. ಗಾಜಿನ ಬಳೆಗಳಂತೆ ಲೋಹದ ಬಳೆಗಳ ಬೆಲೆ ಕಡಿಮೆಯಿರುತ್ತದೆ. ಬಳೆ ಪ್ರೇಮಿಗಳು ನೀವಾಗಿದ್ದರೆ ನಿಮ್ಮ ವಾರ್ಡ್ರೋಬ್ ಗೆ ಲೋಹದ ಬಳೆಗಳನ್ನು ಸೇರಿಸಬಹುದು. ಇದು ದೀರ್ಘಕಾಲ ಬಾಳಿಕೆ ಬರುತ್ತದೆ. ಇದನ್ನು ಧರಿಸುವುದು ಕೂಡ ತುಂಬ ಸಲಭ. ಲೋಹದ ಬಳೆಗಳಲ್ಲಿ ಅನೇಕ ರೀತಿಯ ವಿನ್ಯಾಸಗಳನ್ನು ನಾವು ಕಾಣಬಹುದು. ಎಲ್ಲ ರೀತಿಯ ಡ್ರೆಸ್ ಗೆ ಇದು ಹೊಂದುತ್ತದೆ.
Lifestyle Tips : ನಿಮ್ಮ ಅಂದ ಹೆಚ್ಚಿಸುವ ಡ್ರೆಸ್ಸಿಂಗ್ ರೂಮಿಗೂ ಬೇಕು ಮೇಕಪ್!
ಚೂಡಾ ಬಳೆ :ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಪಂಜಾಬಿ ಮಹಿಳೆಯರು ಈ ಬಳೆಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಅಲ್ಲಿನ ಮದುವೆಗಳಲ್ಲಿ ಈ ಬಳೆ ಇರ್ಲೇಬೇಕು. ಚೂಡಾ ಬಳೆಗಳು ಆಕರ್ಷಕವಾಗಿರುತ್ತವೆ.
ಅಮೇರಿಕನ್ ಡೈಮಂಡ್ ಬಳೆಗಳು : ಇತ್ತೀಚಿನ ದಿನಗಳಲ್ಲಿ ಅಮೇರಿಕನ್ ಡೈಮಂಡ್ ಜ್ಯುವೆಲ್ಲರಿಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಅವು ನಿಮಗೆ ಅತ್ಯಂತ ಶ್ರೀಮಂತ ಮತ್ತು ಪುರಾತನ ನೋಟವನ್ನು ನೀಡುತ್ತವೆ. ಅಮೇರಿಕನ್ ವಜ್ರದಿಂದ ಮಾಡಿದ ಬಳೆಗಳು ಪಾರ್ಟಿ ಸಂದರ್ಭಕ್ಕೆ ಸೂಕ್ತವಾದ ಆಯ್ಕೆಯಾಗಿದೆ. ಅವು ತುಂಬಾ ಹಗುರವಾಗಿ ಮತ್ತು ಧರಿಸಲು ಕ್ಲಾಸಿಯಾಗಿ ಕಾಣುತ್ತವೆ. ಹಾಗಾಗಿ ನಿಮ್ಮ ವಾರ್ಡ್ರೋಬ್ ನಲ್ಲಿ ಒಂದಾದ್ರೂ ಈ ಬಳೆಯನ್ನು ಇಟ್ಟುಕೊಂಡಿರಿ. ಗೌನ್ ಮೇಲೆಯೂ ನೀವು ಈ ಬಳೆಗಳನ್ನು ಧರಿಸಬಹುದು. ಇಂಡೋ-ವೆಸ್ಟರ್ನ್ ಡ್ರೆಸ್ ಗೂ ಈ ಬಳೆಗಳು ಹೊಂದಿಕೆಯಾಗುತ್ತವೆ.
FASHION TIPS: ಸ್ಟೈಲಾಗಿ ಕಾಣಲು ಬಟ್ಟೆ ಆಯ್ಕೆ ಮಾಡುವ ಮುನ್ನ ಈ ವಿಷಯಗಳನ್ನು ನೆನಪಿಡಿ..
ಥ್ರೆಡ್ ಬಳೆಗಳು : ಥ್ರೆಡ್ ಬಳೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್‌ನಲ್ಲಿವೆ. ಈ ಬಳೆಗಳನ್ನು ರೇಷ್ಮೆ ಅಥವಾ ಉಣ್ಣೆಯ ಎಳೆಗಳಿಂದ ತಯಾರಿಸಲಾಗುತ್ತದೆ. ಇವು ಸಾಕಷ್ಟು ತಿಳಿ ಮತ್ತು ವರ್ಣಮಯವಾಗಿರುತ್ತವೆ. ಪಾರ್ಟಿ ವೇರ್ ಸಂದರ್ಭದಲ್ಲಿ ಇದು ಉತ್ತಮ ಆಯ್ಕೆಯಾಗಿದೆ. ಈ ಬಗೆಯ ಬಳೆಗಳಲ್ಲಿ ದಾರದ ಹೊರತಾಗಿ ಜರಿ, ಮುತ್ತು,ಮಣಿ ಮುಂತಾದ ವಸ್ತುಗಳನ್ನು ಬಳಸುತ್ತಾರೆ. ಸಾಂಪ್ರದಾಯಿಕ ಉಡುಪು ಧರಿಸಿದಾಗ ಇದು ನಿಮ್ಮ ಕೈ ಅಂದವನ್ನು ಹೆಚ್ಚಿಸುತ್ತದೆ.