ರಾಣಿಯರ ಮಾತು ಬಂದರೆ ಸಾಕು, ಅವರ ಸೌಂದರ್ಯ ವರ್ಣನೆ ಇರಲೇಬೇಕು. ಸ್ಕಿನ್ ಕೇರ್ ಉತ್ಪನ್ನಗಳು, ಮೇಕಪ್ ಸಾಮಗ್ರಿಗಳೊಂದೂ ಇರದ ಕಾಲದಲ್ಲಿ ಅವರು ತಮ್ಮ ತ್ವಚೆಯ ಆರೋಗ್ಯವನ್ನು ಹೇಗೆಲ್ಲ ಕಾಪಾಡುತ್ತಿದ್ದರು ಗೊತ್ತಾ? ನೀವೂ ಆ ವಿಧಾನಗಳನ್ನು ಟ್ರೈ ಮಾಡಬಹುದು. ಏಕೆಂದರೆ ಅವು ಪರಿಣಾಮಕಾರಿಯಷ್ಟೇ ಅಲ್ಲ, ಅಗ್ಗದ ದಾರಿ ಕೂಡಾ.
ಬಹಳ ಬಹಳ ಹಿಂದೆ ಅಂದರೆ ಒಂದಾನೊಂದು ಕಾಲದಲ್ಲಿ- ರಾಜ ರಾಣಿಯರ ಕಾಲದಲ್ಲಿ ಈಗಿನಷ್ಟು ಆಧುನಿಕ ಸೌಲಭ್ಯಗಳಿರಲಿಲ್ಲ. ಕೇವಲ ಸೌಂದರ್ಯದ ವಿಷಯಕ್ಕೆ ಬಂದ್ರೂ ಫೇಸ್‌ವಾಶ್, ಹೇರ್‌ಜೆಲ್, ಸೋಪ್, ಮಾಯಿಶ್ಚರೈಸರ್, ಆ್ಯಂಟಿ ಏಜಿಂಗ್ ಕ್ರೀಂ, ಪೌಡರ್, ಫೌಂಡೇಶನ್ ಯಾವೊಂದು ಸೌಂದರ್ಯ ಸಾಧನಗಳೂ ಇರಲಿಲ್ಲ. ಹಾಗಿದ್ದೂ ರಾಣಿಯರೆಂದರೆ ಅತಿ ಲೋಕ ಸುಂದರಿಯರೆಂಬ ವರ್ಣನೆಯೇ ಎಲ್ಲೆಡೆ ಕೇಳಿರುತ್ತೇವೆ. ಹೀಗಾಗಿ ಅವರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು, ಈ ಮೂಲಕ ರಾಜನ ಚಿತ್ತ ತಮ್ಮ ಮೇಲಲ್ಲದೆ ಬೇರಾವ ಸಖಿ ಅಥವಾ ಸವತಿಯ ಮೇಲೂ ಹೋಗದಂತೆ ನೋಡಿಕೊಳ್ಳಲು ಪ್ರಾಕೃತಿಕವಾದ ಸೌಂದರ್ಯ ಸಾಧನಗಳ ಮೇಲೆ ಅವಲಂಬಿತರಾಗಿದ್ದರು. ಅವು ಈಗಿನ ಸೌಂದರ್ಯ ಸಾಮಗ್ರಿಗಳಿಗಿಂತ ಎಷ್ಟೋ ಉತ್ತಮವಾಗಿದ್ದವು, ಏಕೆಂದರೆ, ಅವುಗಳಿಂದ ಯಾವುದೇ ಅಡ್ಡ ಪರಿಣಾಮವೂ ಇರುತ್ತಿರಲಿಲ್ಲ. ಹಾಗಿದ್ದರೆ ರಾಣಿಯರ ಸೌಂದರ್ಯವರ್ಧಕ ವಿಧಾನಗಳೇನೇನು ನೋಡೋಣ. ಅವನ್ನು ನೀವೂ ಬಳಸಿ ನಿಮ್ಮ ರಾಜನ ಮೆಚ್ಚುಗೆಯ ನೋಟಕ್ಕೆ ಪಾತ್ರರಾಗಿ.
ಕತ್ತೆ ಹಾಲಿನ ಸ್ನಾನ(Bathe with donkey’s Milk)
ಎಲಿಜಬೆತ್ ಬಾತೋರಿ ಎಂಬ ರಾಣಿಯೊಬ್ಬಳು ತನ್ನ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಕನ್ಯೆಯರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಇದು ವಿಕೃತಿಯೇ. ಆಕೆ ಸೈಕೋ ಇರಬೇಕು. ಆದರೆ ಉಳಿದ ರಾಣಿಯರು ಹಾಗಲ್ಲ. ಅವರು ಕತ್ತೆಹಾಲಿನ ಸ್ನಾನದ ಮೊರೆ ಹೋಗಿದ್ದರು.
ಕತ್ತೆ ಹಾಲಿನಲ್ಲಿ ಆ್ಯಂಟಿ ಏಜಿಂಗ್ ಪ್ರಾಪರ್ಟೀಸ್ ಇರುತ್ತದೆ. ಹಾಗಾಗಿ ರಾಣಿಯರು ಕತ್ತೆ ಹಾಲಿಗೆ ಸ್ವಲ್ಪ ಜೇನುತುಪ್ಪ, ಮತ್ತೆ ಸ್ವಲ್ಪ ಆಲಿವ್ ಆಯಿಲ್ ಹಾಕಿಕೊಂಡು ಅದರಲ್ಲಿ ಸ್ನಾನ ಮಾಡುತ್ತಿದ್ದರು. ಇದರಿಂದ ಅವರ ತ್ವಚೆ ಹೊಳಪನ್ನು ಪಡೆಯುತ್ತಿತ್ತು. ಜೊತೆಗೆ, ವಯಸ್ಸಿಗಿಂತಾ ಚಿಕ್ಕವರಂತೆ ಕಾಣಿಸುತ್ತಿದ್ದರು. ಸ್ನಾನ ಮಾಡುವಷ್ಟು ಕತ್ತೆ ಹಾಲು ಖರೀದಿಸುವುದು ನಿಮಗೆ ಕಷ್ಟವಾಗಬಹುದು. ಆದರೆ, ಮುಖಕ್ಕೆ ಹಚ್ಚುವಷ್ಟಂತೂ ಕೊಳ್ಳಬಹುದು.
undefined
ಜೇನುತುಪ್ಪ ಹಾಗೂ ಆಲಿವ್ ಆಯಿಲ್(Honey and Olive Oil)
ಜೇನುತುಪ್ಪ ಹಾಗೂ ಆಲಿವ್ ಆಯಿಲ್ ತ್ವಚೆಗೆ ಹಾಗೂ ಕೂದಲಿಗೆ ಅತ್ಯುತ್ತಮವಾಗಿವೆ. ರಾಣಿಯರು ಇವೆರಡನ್ನೂ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ಸ್ನಾನ ಮಾಡುತ್ತಿದ್ದರು. ಇದರಿಂದ ಕೂದಲು ಹೊಳಪು ಪಡೆಯುವ ಜೊತೆಗೆ ರೇಶ್ಮೆಯಂತೆ ನುಣುಪಾಗಿತ್ತು. ಕೂದಲುದುರುವ ಸಮಸ್ಯೆಗೂ ಇದು ಉತ್ತಮ ಪರಿಹಾರವಾಗಿತ್ತು. ಹನಿ ಹಾಗೂ ಆಲಿವ್ ಆಯಿಲ್ ಬೆರೆಸಿ ಕೂದಲಿಗೆ ಪ್ಯಾಕ್ ಮಾಡಿ ಹಚ್ಚಿ ನೋಡಿ.
Russia Ukraine Crisis: ಪ್ರಾಣ ಉಳಿಸಿಕೊಳ್ಳುವ ಪಲಾಯನದಲ್ಲಿ ಪ್ರಾಣಿಗಳನ್ನು ಮರೆಯದ ಉಕ್ರೇನಿಯನ್ನರು
ಅವಕಾಡೋ ಮಾಸ್ಕ್(Avocado Mask)
ಬೆಣ್ಣೆ ಹಣ್ಣು ಮೊಡವೆ, ಕಪ್ಪು ಕಲೆ ಸೇರಿದಂತೆ ಮುಖದ ತ್ವಚೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ರಾಣಿಯರು ಈ ಬೆಣ್ಣೆಹಣ್ಣನ್ನು ಮುಖಕ್ಕೆ ಹಚ್ಚಿಕೊಂಡು ಕೊಂಚ ಸಮಯದ ಬಳಿಕ ತೊಳೆದುಕೊಳ್ಳುತ್ತಿದ್ದರು. ಇದರಿಂದ ಅವರ ಕೆನ್ನೆಯೂ ಬೆಣ್ಣೆಯಂತೆ ನಯವಾಗಿ ಹೊಳೆಯುತ್ತಿತ್ತು.
ಬಿಯರ್(Beer, ಮದಿರಾ)
ಬಿಯರ್ ಕೂದಲು ಹಾಗೂ ತ್ವಚೆಗೆ ಅತ್ಯುತ್ತಮವಾಗಿದೆ. ಅದಕ್ಕೇ ಅಲ್ಲವೇ ಈಗ ಬಿಯರ್ ಶಾಂಪೂ, ಫೇಸ್‌ವಾಶ್‌ಗಳು ದೊರೆಯುವುದು. ಆಸ್ಥಾನದಲ್ಲಿ ಮದಿರೆಗೇನೂ ಕೊರತೆ ಇರುವುದಿಲ್ಲ. ರಾಜರು ಮದಿರೆ ಕುಡಿದರೆ ರಾಣಿಯರು ಅವನ್ನು ಕೂದಲು ಹಾಗೂ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದರು. ಮದಿರೆಯನ್ನು ಮೊಟ್ಟೆ, ನಿಂಬೆರಸ, ಹಾಲಿನ ಪುಡಿಯೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದರು. ಇದನ್ನೇ ಹಾಲಿನ ಪುಡಿಯೊಂದರ ಹೊರತಾಗಿ ಮಿಕ್ಸ್ ಮಾಡಿ ಕೂದಲಿಗೂ ಹಚ್ಚಿಕೊಳ್ಳುತ್ತಿದ್ದರು. ಇದು ಅವರ ವಯಸ್ಸನ್ನು ಖಂಡಿತಾ ಕಡಿಮೆ ಮಾಡುತ್ತಿತ್ತು.
Breast Milk Jewellery: ತಾಯಿ, ಮಗುವಿನ ಬಾಂಧವ್ಯದ ಎದೆಹಾಲಿನ ಆಭರಣ
ರೋಸ್ ವಾಟರ್ ಬಾತ್(Rose Water Bath)
ಅರೋಮಾ ಥೆರಪಿ ಗೊತ್ತಲ್ಲ.. ಹಾಗೆಯೇ ಕೆಲಸ ಮಾಡುತ್ತಿತ್ತು ಈ ರೋಸ್ ವಾಟರ್ ಬಾತ್. ಈಗ ಸೌಂದರ್ಯವರ್ಧಕ ಸಾಮಗ್ರಿಯಾಗಿ ರೋಸ್ ವಾಟರ್ ಬಳಸುತ್ತೇವಷ್ಟೇ, ಹಿಂದೆ ಗುಲಾಬಿದಳಗಳನ್ನು ಅದ್ದಿ ತಯಾರಿಸಿದ ನೀರಿನಲ್ಲಿ ರಾಣಿಯರು ಮುಖ ತೊಳೆಯುತ್ತಿದ್ದರು. ಅಷ್ಟೇ ಏಕೆ, ಸ್ನಾನದ ನೀರಿಗೂ ಗುಲಾಬಿ ದಳಗಳನ್ನು ಹಾಕಿಕೊಳ್ಳುತ್ತಿದ್ದರು. ಇದರಿಂದ ತ್ವಚೆ ಮೃದುವಾಗುವ ಜೊತೆಗೆ, ಸ್ನಾನವಾಗುತ್ತಿದ್ದಂತೆಯೇ ಪರಿಮಳ ಸೂಸುವ ಸುಕೋಮಲೆಯರಾಗಿ ಹೊರ ಬರುತ್ತಿದ್ದರು. ಇದರಿಂದ ತ್ವಚೆ ತಾಜಾವಾಗಿರುತ್ತಿತ್ತು.