
ಮುಖದಲ್ಲಿ ಬೇರೆಲ್ಲ ಅಂಗಗಳಿಗಿಂತ ಸ್ವಲ್ಪ ಹೆಚ್ಚೇ ಆಗಿ ಗಮನ ಸೆಳೆಯುವ ಅಂಗವೆಂದರೆ ತುಟಿಗಳು. ತುಟಿಗಳಲ್ಲೂ ಎಷ್ಟೊಂದು ವಿಧ! ಕೆಲವರ ತುಟಿಗಳು ಬಾಗಿದಂತಿದ್ದರೆ, ಕೆಲವರದ್ದು ಕಡ್ಡಿಯಂತೆ ನೇರವಾಗಿರುತ್ತದೆ. ಕೆಲವರದ್ದು ಮೇಲ್ಮುಖವಾಗಿದ್ದರೆ, ಹಲವರದ್ದು ಕೆಳಮುಖವಾಗಿರುತ್ತದೆ. ದಪ್ಪಗಿರುವ, ಪುಟ್ಟದಾಗಿರುವ, ತೆಳ್ಳಗಿರುವ ತುಟಿಗಳು… ಹೀಗೆ ಎಷ್ಟು ನಮೂನೆ! ಅಲ್ಲವೇ? ಹಾಗೆಯೇ ಬಣ್ಣಗಳಲ್ಲೂ ಹಲವು ವಿಧ. ಕೆಲವರದ್ದು ಮುಖಕ್ಕೆ ಹೊಂದುವ ಬಣ್ಣದಲ್ಲಿದ್ದರೆ ಕೆಲವರದ್ದು ಗುಲಾಬಿ, ಕೆಲವರ ತುಟಿ ಕೆಂಪು ಬಣ್ಣದಲ್ಲಿರುತ್ತದೆ. ಸುಂದರವಾದ ತುಟಿಗಳು ಬೇಕೆಂದು ಯಾವ ಹುಡುಗಿ ತಾನೇ ಬಯಸುವುದಿಲ್ಲ ಹೇಳಿ. ಇದಕ್ಕಾಗಿ ನೈಸರ್ಗಿಕವಾಗಿ ಮಾಡಬಹುದಾದ ಹಲವು ವಿಧಾನಗಳನ್ನು ಅನುಸರಿಸುತ್ತಾರೆ.
ಹಾಗೆಯೇ ಇಲ್ಲೊಬ್ಬ ಯುವತಿ ಚಿಲ್ಲಿ ಲಿಪ್ ಗ್ಲಾಸ್ ಟ್ರೈ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ. ಇದರಲ್ಲಿ ಹುಡುಗಿ ಯಾವುದೇ ಲಿಪ್ ಗ್ಲಾಸ್ ಅಥವಾ ಗುಲಾಬಿ ದಳಗಳನ್ನು ಬಳಸುವುದಿಲ್ಲ ಬದಲಿಗೆ ತನ್ನ ತುಟಿಗೆ (Lips) ಚಿಲ್ಲಿ ಫ್ಲೇಕ್ಸ್‌ನ್ನು ಬಯಸುತ್ತಾಳೆ.
ಹೇಗಾಯ್ತೋ ಹಾಗೆ ಹಚ್ಚಿದರೆ ತುಟಿಗೆ ಒಪ್ಪೋಲ್ಲ ಲಿಪ್‌ಸ್ಟಿಕ್, ಅದಕ್ಕೂ ರೀತಿ ನೀತಿ ಇದೆ!
ಬ್ರಷ್‌ನ ಸಹಾಯದಿಂದ ತುಟಿಗೆ ಚಿಲ್ಲಿ ಫ್ಲೇಕ್ಸ್ ಹಚ್ಚುವ ಯುವತಿ
ಈ ವೈರಲ್ ಮೇಕ್ಅಪ್ ಹ್ಯಾಕ್ ಅನ್ನು Instagram ನಲ್ಲಿ fancy.pinks ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ ಹುಡುಗಿಯೊಬ್ಬಳು ಮೊದಲು ಮೇಕಪ್ ಪ್ಯಾಲೆಟ್‌ಗೆ ಸ್ವಲ್ಪ ಲಿಪ್ ಗ್ಲಾಸ್ ಹಾಕುತ್ತಾಳೆ ಮತ್ತು ಚಿಲ್ಲಿ ಫ್ಲೇಕ್ಸ್ ಅನ್ನು ಸೇರಿಸುವ ಮೂಲಕ ಮಿಶ್ರಣ ಮಾಡುವುದನ್ನು ನೋಡಬಹುದು. ನಂತರ ಬ್ರಷ್‌ನ ಸಹಾಯದಿಂದ ಅದನ್ನು ತನ್ನ ತುಟಿಗಳಿಗೆ ಹಚ್ಚುತ್ತಾಳೆ. ಸ್ವಲ್ಪ ಸಮಯ ಇಟ್ಟುಕೊಂಡ ನಂತರ, ಅವಳು ಟಿಶ್ಯೂ ಪೇಪರ್‌ನಿಂದ ತನ್ನ ತುಟಿಗಳನ್ನು ಸ್ವಚ್ಛಗೊಳಿಸುತ್ತಾಳೆ (Clean). ಅದರ ನಂತರ ಅವಳ ತುಟಿಗಳು ಹೆಚ್ಚು ಗುಲಾಬಿಯಾಗಿ ಕಾಣುತ್ತವೆ. ವಾಸ್ತವವಾಗಿ, ಮೆಣಸಿನಕಾಯಿಯ ತೀಕ್ಷ್ಣತೆಯಿಂದಾಗಿ ತುಟಿಗಳ ಮೇಲೆ ಹಚ್ಚಿದ ನಂತರ ಕಿರಿಕಿರಿಯ ಅನುಭವವಾಗುವುದನ್ನು ಕಾಣಬಹುದು.
ವೈರಲ್ ಆಗಿರುವ ಈ ಬ್ಯೂಟಿ ಹ್ಯಾಕ್ ನೋಡಿ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ಮೆಣಸಿನಕಾಯಿ ಹೆಚ್ಚುವ ಹೊತ್ತಿಗೆ ಬೆರಳೆಲ್ಲಾ ಉರಿಯುತ್ತದೆ. ಇನ್ನು ಮೃದುವಾದ ತುಟಿಗೆ ಹೀಗೆ ಮೆಣಸಿನ ಹುಡಿ(Chilli flakes) ಅಂಟಿಸಿಕೊಳ್ಳುವುದೆಂದರೆ ಹುಚ್ಚಲ್ಲವೇ ಎಂದಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾಳೋ ಈ ಹುಡುಗಿ ಎಂದು ನೆಟ್ಟಿಗರೆಲ್ಲ ತಲೆ ಕೆಡಿಸಿಕೊಂಡಿದ್ದಾರೆ.
ವಿಶ್ವದ ಅತಿ ದೊಡ್ಡ ತುಟಿ ಹೊಂದಿರುವ ಮಹಿಳೆಯೀಕೆ, 34ಕ್ಕೂ ಹೆಚ್ಚು ಇಂಜೆಕ್ಷನ್ ಹಾಕಿಸಿಕೊಂಡಿದ್ದಾಳಂತೆ!
ಸೋಷಿಯಲ್ ಮೀಡಿಯಾದಲ್ಲಿ ಬ್ಯೂಟಿ ಬ್ಲಾಗರ್ ವಿಡಿಯೋ ವೈರಲ್
ಚಿಲ್ಲಿ ಫ್ಲೇಕ್ಸ್‌ನೊಂದಿಗೆ ಲಿಪ್‌ಸ್ಟಿಕ್ ಹಚ್ಚುವ ಈ ಹ್ಯಾಕ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ ಮತ್ತು ಇದುವರೆಗೆ 30 ಸಾವಿರಕ್ಕೂ ಹೆಚ್ಚು ಜನರು ಅದನ್ನು ಲೈಕ್ ಮಾಡಿದ್ದಾರೆ. ಜನರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ. ಇದರ ಬದಲಾಗಿ ನೀವು ತುಟಿಗೆ ಝಂಡೂ ಬಾಮ್‌ನ್ನು ಅನ್ವಯಿಸಬಹುದು ಎಂದು ಒಬ್ಬ ಬಳಕೆದಾರರು (User) ಬರೆದಿದ್ದಾರೆ. ಇನ್ನೊಬ್ಬರು ಇದನ್ನು ಹುಚ್ಚುತನ ಎಂದು ಕರೆದಿದ್ದಾರೆ. ಮತ್ತೆ ಕೆಲವರು ಇಂಥಾ ಮೇಕ್ಅಪ್ ಹ್ಯಾಕ್‌ಗಳು ತಮ್ಮನ್ನು ತಾವು ಹಾನಿಗೊಳಿಸುತ್ತವೆ ಎಂದು ಹೇಳಿದರು. ಫ್ಯಾಶನ್ ಹೆಸರಿನಲ್ಲಿ ಜನರು ಏನು ಬೇಕಾದರೂ ಮಾಡುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ವೈರಲ್ ಆಗಿರುವ ವಿಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.