Hit Premanand Govind Maharaj ಮುಖ ಸದಾ ಹೊಳೆಯುತ್ತಿರಬೇಕು, ವಯಸ್ಸನ್ನು ಮುಚ್ಚಿಡಬೇಕು ಎಂದು ಪ್ರತಿಯೊಬ್ಬರೂ ಬಯಸ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಈ ಸ್ವಾಮಿಜಿ ಹೇಳೋದನ್ನು ಪಾಲಿಸಿ. ಈ ರೂಲ್ಸ್ ಅನುಸರಿಸಿದ್ರೆ ಕೆಲವೇ ದಿನಗಳಲ್ಲಿ ಕಾಂತಿಯುತ ಮುಖ ನಿಮ್ಮದಾಗುತ್ತೆ ಎನ್ನುತ್ತಾರೆ ಸ್ವಾಮಿ.
ಸೌಂದರ್ಯದ ಬಗ್ಗೆ ಯಾರಿಗೆ ಕಾಳಜಿ ಇರೊಲ್ಲ ಹೇಳಿ. ಶರೀರದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಹೆಣ್ಣುಮಕ್ಕಳು ನಾನಾ ಬಗೆಯ ಕಸರತ್ತುಗಳನ್ನು ಮಾಡ್ತಾರೆ. ಕೆಲವರು ಆಯುರ್ವೇದ ಪದ್ಧತಿಯನ್ನು ಅನುಸರಿಸಿದ್ರೆ ಕೆಲವರು ಬ್ಯೂಟಿಪಾರ್ಲರ್ ಗಳ ಮೊರೆಹೋಗ್ತಾರೆ. ಇನ್ಕೆಲವರು ಸೌಂದರ್ಯ ತಜ್ಞರ ಸಲಹೆಯನ್ನು ಪಡೆಯುತ್ತಾರೆ. ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ತಮ್ಮ ಪತ್ನಿ ಅನುಷ್ಕಾ (Anushka ) ಹಾಗೂ ಮುದ್ದಿನ ಮಗಳು ವಾಮಿಕಾ ಜೊತೆ ಒಂದು ಆಶ್ರಮಕ್ಕೆ ಭೇಟಿ ನೀಡಿದ್ದರು. ವಿರಾಟ್ ದಂಪತಿ ಆ ಆಶ್ರಮದಲ್ಲಿರುವ ಶ್ರೀ ಹಿತ ಪ್ರೇಮಾನಂದ ಗೋವಿಂದ್ ಶರಣ ಮಹಾರಾಜ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಆ ಸ್ವಾಮಿಗಳು ಅನುಷ್ಕಾ ವಿರಾಟ್ ಅವರಿಗೆ ಮುಖದ ಕಾಂತಿಯನ್ನು ಹೆಚ್ಚಿಸುವ ಕೆಲವು ನೈಸರ್ಗಿಕ ಉಪಾಯಗಳನ್ನು ತಿಳಿಸಿದ್ದಾರೆ. ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಪ್ರೇಮಾನಂದ ಸ್ವಾಮಿ ಸದ್ಯ ವೃಂದಾವನ ಆಶ್ರಮದಲ್ಲಿದ್ದಾರೆ. ಅವರು ಸೌಂದರ್ಯಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಯ ವಿಡಿಯೋ ವೈರಲ್ ಆಗಿದೆ. ಅವರು ಸೌಂದರ್ಯಕ್ಕೆ ಸಂಬಂಧಿಸಿದಂತೆ ಏನೆಲ್ಲ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
undefined
ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರೇಮಾನಂದ ಸ್ವಾಮಿ ನೀಡಿದ್ದಾರೆ ಈ ಎಲ್ಲ ಸಲಹೆ :
ದುಬಾರಿ ಬೆಲೆಯ ಪ್ರಾಡಕ್ಟ್ ಗಳನ್ನು ಬಳಸಬೇಡಿ ಅಂತಾರೆ ಈ ಸ್ವಾಮೀಜಿ : ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬಹುತೇಕರು ಹೆಚ್ಚಿನ ಬೆಲೆಯ ಬ್ಯುಟಿ ಪ್ರೊಡಕ್ಟ್ಸ್ ಗಳನ್ನು ಖರೀದಿಸುತ್ತಾರೆ. ಅಂತಹ ಪ್ರೊಡಕ್ಟ್ ಗಳು ನಿಮ್ಮ ತ್ವಚೆಗೆ ಶಾಶ್ವತ ಸೌಂದರ್ಯವನ್ನು ನೀಡುವುದಿಲ್ಲ. ಅಂತಹ ಪ್ರಾಡಕ್ಟ್ ನಲ್ಲಿ ಬಳಸುವ ರಾಸಾಯನಿಕಗಳಿಂದ ನಿಮ್ಮ ತ್ವಚೆ ಹಾಳಾಗಬಹುದು. ಅದರ ಬದಲು ನೈಸರ್ಗಿಕ ಪದ್ಧತಿಯಲ್ಲಿ ನೀವು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಂಡರೆ ಅದು ಶಾಶ್ವತವಾಗಿರುತ್ತೆ ಎಂದು ಪ್ರೇಮಾನಂದ ಸ್ವಾಮಿಗಳು ಹೇಳಿದ್ದಾರೆ. ನಮ್ಮ ಆಹಾರ, ವ್ಯಾಯಾಮದಲ್ಲೇ ನಮ್ಮ ಸೌಂದರ್ಯ ಅಡಗಿದೆ ಎಂದು ಸ್ವಾಮೀಜಿ ಹೇಳ್ತಾರೆ.
HAIR BEAUTY: ಬಿಯರ್ ಶ್ಯಾಂಪೂ ಗೊತ್ತು, ಹಾಗೆ ಕೋಕೋ ಕೋಲಾ ಕೂಡ ಕೂದಲಿಗೆ ಬೆಸ್ಟ್
ಪ್ರತಿದಿನ 45 ನಿಮಿಷ ವ್ಯಾಯಾಮ ಮಾಡಿ : ನಮ್ಮ ಶರೀರಕ್ಕೆ ಆಹಾರ ಹೇಗೆ ಮುಖ್ಯವೋ ವ್ಯಾಯಾಮ ಕೂಡ ಅಷ್ಟೇ ಮುಖ್ಯ. ವ್ಯಾಯಾಮದಿಂದ ಶರೀರ ಮತ್ತು ಮೆದುಳು ಎರಡೂ ಆರೋಗ್ಯವಾಗಿರುತ್ತೆ. ಇದರಿಂದ ಮುಖದಲ್ಲೂ ಕಾಂತಿ ಹೆಚ್ಚುತ್ತೆ ಎನ್ನುವುದು ಪ್ರೇಮಾನಂದ ಸ್ವಾಮಿಗಳ ಅಭಿಪ್ರಾಯವಾಗಿದೆ. ಶರೀರದ ಸೌಂದರ್ಯದ ಬಗ್ಗೆ ಮಾತನಾಡುತ್ತ ಸ್ವಾಮಿಗಳು, ನಿಮಗೆ ವ್ಯಾಯಾಮ ಮಾಡುವ ಅಭ್ಯಾಸ ಇಲ್ಲದೇ ಇದ್ದರೆ ದಿನದಲ್ಲಿ ಕೇವಲ 5 ನಿಮಿಷ ವ್ಯಾಯಾಮ ಮಾಡಲು ಆರಂಭಿಸಿ. ಬೆಳಿಗ್ಗೆ ಬೇಗ ಎದ್ದು ಫ್ರೆಶ್ ಆಗಿ ವ್ಯಾಯಾಮ ಮಾಡೋದು ನಿಮ್ಮ ಶರೀರಕ್ಕೆ ನೀವು ಕೊಡುವ ದೊಡ್ಡ ಉಡುಗೊರೆ ಎಂದಿದ್ದಾರೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಒಂದು ವರ್ಷದ ಅವಧಿಯಲ್ಲೇ ನಿಮ್ಮ ಶರೀರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಶರೀರ ಹಾಗೂ ಮುಖದಲ್ಲಿ ಹೆಚ್ಚಿನ ಲವಲವಿಕೆ ಕಂಡುಬರುತ್ತದೆ ಎಂದು ವ್ಯಾಯಾಮದಿಂದ ಉಂಟಾಗುವ ಪ್ರಯೋಜನದ ಬಗ್ಗೆ ಸ್ವಾಮೀಜಿ ಹೇಳಿದ್ದಾರೆ.
ಡಾರ್ಕ್ ಸರ್ಕಲ್ ದೂರ ಮಾಡಲು ಇಲ್ಲಿದೆ ಮ್ಯಾಜಿಕಲ್ ಟಿಪ್ಸ್!
ಶುದ್ಧ ಆಹಾರದಿಂದ ಶಕ್ತಿ ಹಾಗೂ ಸೌಂದರ್ಯ ಸಿಗುತ್ತೆ : ಶುದ್ಧ ಹಾಗೂ ಪೌಷ್ಠಿಕ ಆಹಾರದಿಂದ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ಇದು ಶರೀರಕ್ಕೆ ಬಹಳ ಅವಶ್ಯಕವೂ ಹೌದು. ಸತ್ವಯುತ ಆಹಾರದಿಂದ ದೇಹ, ಬುದ್ಧಿ ಹಾಗೂ ಸೌಂದರ್ಯ ಹೆಚ್ಚುತ್ತದೆ. ಇದರ ಜೊತೆಗೆ ನಿಮ್ಮ ತ್ವಚೆಗೂ ಕೂಡ ನೈಸರ್ಗಿಕ ಹೊಳಪು ಬರುತ್ತದೆ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ನೀವು ಪ್ರತಿದಿನ ಊಟದಲ್ಲಿ ಪ್ರತಿಶತ 30-40 ರಷ್ಟು ಕಚ್ಚಾ ಆಹಾರವನ್ನು ಸೇವಿಸಬೇಕು. ಇಂತಹ ಆಹಾರದಿಂದ ದೇಹ ಸದೃಢವಾಗುವುದರ ಜೊತೆಗೆ ಮುಖದಲ್ಲೂ ಹೊಳಪು ಮೂಡುತ್ತದೆ ಎಂದು ಪ್ರೇಮಾನಂದ ಸ್ವಾಮೀಜಿಗಳು ಹೇಳಿದ್ದಾರೆ.