Fashion

ಐಸ್ ಕ್ಯೂಬ್

ಇದನ್ನ ಕಣ್ಣಿನ ಸುತ್ತಲೂ ರಬ್ ಮಾಡೋದ್ರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತೆ, ಇದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತೆ. 
 

Image credits: Freepik

ಚೆನ್ನಾಗಿ ನಿದ್ರೆ ಮಾಡಿ

ಸರಿಯಾಗಿ ನಿದ್ರೆ ಮಾಡದೇ ಇದ್ರೆ ಕಣ್ಣುಗಳು ದಪ್ಪಗಾಗುತ್ತವೆ, ಜೊತೆಗೆ ಕಪ್ಪಾಗುತ್ತೆ, ಇದನ್ನ ನಿವಾರಿಸಲು ಪ್ರತಿದಿನ  8  ಗಂಟೆ ನಿದ್ರೆ ಮಾಡಿ.
 

Image credits: Freepik

ಆಲೂಗಡ್ಡೆ

ಫ್ರಿಜ್ನಲ್ಲಿಟ್ಟ ಆಲೂಗಡ್ಡೆ ತೆಳುವಾಗಿ ಕತ್ತರಿಸಿ ಕಣ್ಣುಮುಚ್ಚಿ ಕಣ್ಣಿನ ಮೇಲೆ 15 ನಿಮಿಷ ಇಡಿ. ಇದರಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಕಡಿಮೆಯಾಗುತ್ತೆ.
 

Image credits: Freepik

ಬಾದಾಮಿ ಎಣ್ಣೆ

ಮಲಗುವ ಮುನ್ನ 2-3 ಬಾದಾಮಿ ಎಣ್ಣೆಯ ಹನಿ ಕಣ್ಣಿನ ಸುತ್ತಲು ಹಾಕಿ ಚೆನ್ನಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ರಾತ್ರಿ ಹಾಗೆ ಬಿಟ್ಟು ಮುಂಜಾನೆ ಮುಖ ತೊಳೆಯಿರಿ. 
 

Image credits: Freepik

ಸೌತೆಕಾಯಿ

ಚಿಲ್ಡ್ ಸೌತೆಕಾಯಿ ಕತ್ತರಿಸಿ, ಕಣ್ಣಿನ ಮೇಲೆ 15 ನಿಮಿಷ ಇಡಿ. ಇದರಿಂದ ಡಾರ್ಕ್ ಸರ್ಕಲ್ & ಕಣ್ಣು ಊದಿಕೊಳ್ಳುವುದು ಕಡಿಮೆಯಾಗುತ್ತದೆ. 
 

Image credits: Freepik

ಟೀ ಬ್ಯಾಗ್

ಗ್ರೀನ್ ಟೀ ಕುಡಿದ ಮೇಲೆ ಅದರ ಬ್ಯಾಗ್ ಬಿಸಾಕಬೇಡಿ, ಕಣ್ಣಿನ ಮೇಲೆ 10 ನಿಮಿಷ ಇಡಿ. ಇದರಿಂದ ಕಣ್ಣಿನ ಸುತ್ತಲಿನ ಕಪ್ಪು ಬಣ್ಣ ನಿವಾರಣೆಯಾಗಿ, ಕಣ್ಣು ತಂಪಾಗುತ್ತೆ. 
 

Image credits: Freepik

ಟೋಮ್ಯಾಟೋ ಮತ್ತು ನಿಂಬೆ ರಸ

ಟೋಮ್ಯಾಟೋ ಮತ್ತು ನಿಂಬೆ ರಸ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕಣ್ಣಿನ ಸುತ್ತಲು ಹಚ್ಚಿ, 10 ನಿಮಿಷ ಬಿಟ್ಟು ಕಣ್ಣನ್ನು ತಣ್ಣಿರಿನಿಂದ ತೊಳೆಯಿರಿ. ಸಮಸ್ಯೆ ನಿವಾರಣೆಯಾಗುತ್ತೆ. 
 

Image credits: Freepik
Find Next One