ಅಕ್ಷತಾ ಮೂರ್ತಿ ಅವರು 2023 ರಲ್ಲಿ ಬ್ರಿಟನ್‍ನಲ್ಲಿ ಅತ್ಯುತ್ತಮವಾಗಿ ವಸ್ತ್ರ ಧರಿಸಿರುವ ಜನರಲ್ಲಿ ಒಬ್ಬರೆಂಬ ಆಗ್ರಸ್ಥಾನ ಪಡೆಯುವ ಮೂಲಕ ಹಲವಾರು ಗಮನಾರ್ಹ ವ್ಯಕ್ತಿಗಳನ್ನು ಮೀರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಲಂಡನ್: ಬ್ರಿಟನ್‌ನಲ್ಲೇ ಅತ್ಯಂತ ಉತ್ತಮ ಪೋಷಾಕು ತೊಡುವವರ(ಬೆಸ್ಟ್ ಡ್ರೆಸ್ಡ್-2023) ಪಟ್ಟಿಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಸ್ಥಾನ ಪಡೆದಿದ್ದಾರೆ. ಜನಪ್ರಿಯ ನಿಯತಕಾಲಿಕೆಯೊಂದು ಇದನ್ನು ಬಿಡುಗಡೆ ಮಾಡಿದೆ. ಬ್ರಿಟನ್‌ನ ಟ್ಯಾಟ್ಲರ್ ನಿಯತಕಾಲಿಕೆ 'ಬೆಸ್ಟ್ ಡ್ರೆಸ್ಡ್-2023' ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಬ್ರಿಟನ್ ಮಹಿಳಾ ಉದ್ಯಮಿಗಳು, ನಟ, ನಟಿಯರು ಸೇರಿ 25 ಮಂದಿಯ ಹೆಸರಿದೆ. ನಿಯತಕಾಲಿಕೆಯ ಸೆಪ್ಟೆಂಬರ್‌ನ ಸಂಚಿಕೆಯಲ್ಲಿ ಇದು ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.
ಅಕ್ಷತಾ ಮೂರ್ತಿ ಅವರು 2023 ರಲ್ಲಿ ಬ್ರಿಟನ್‍ನಲ್ಲಿ ಅತ್ಯುತ್ತಮವಾಗಿ ವಸ್ತ್ರ (Dress) ಧರಿಸಿರುವ ಜನರಲ್ಲಿ ಒಬ್ಬರೆಂಬ ಆಗ್ರಸ್ಥಾನ ಪಡೆಯುವ ಮೂಲಕ ಹಲವಾರು ಗಮನಾರ್ಹ ವ್ಯಕ್ತಿಗಳನ್ನು ಮೀರಿಸಿದ್ದಾರೆ. ಪಟ್ಟಿಯಲ್ಲಿ ಅಕ್ಷತಾ ಮೂರ್ತಿ ಹೆಸರು ಮೊದಲಿಗಿದ್ದು, ಅಕ್ಷತಾ ಅವರ ಜೊತೆಗೆ ಕೆನಡಾದ ಉದ್ಯಮಿ ಯಾನಾ ಪೀಲ್, ಲೇಡಿ ಡಾಲ್ಮೆನಿ, ಪ್ರಿನ್ಸೆಸ್ ಬೀಟ್ರಿಸ್ ಅವರ ಪತಿ ಎಡೋರ್ಡೊ ಮಾಪೆಲ್ಲಿ ಮೊಝಿ ಮತ್ತು ನಟಿ ಬಿಲ್ ನಿಘಿ ಅವರ ಹೆಸರು ಕೂಡ ಇದೆ ಎಂದು ತಿಳಿದುಬಂದಿದೆ.
undefined
ನಾನು ನನ್ನ ಗಂಡನ ಉದ್ಯಮಿ ಮಾಡಿದೆ, ನನ್ನ ಮಗಳು ಆಕೆ ಗಂಡನ ಪ್ರಧಾನಿ ಮಾಡಿದ್ಲು: ಸುಧಾಮೂರ್ತಿ
ಇನ್ಫೊಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿ ಮತ್ತು, ಸುಧಾಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿ ಮೊದಲ ಸ್ಥಾನ ಪಡೆದಿದ್ದಾರೆ. ಟ್ಯಾಟ್ಲರ್‌ನ ಅತ್ಯುತ್ತಮ ಉಡುಪುಗಳ ಪಟ್ಟಿಯಲ್ಲಿ ಅಸ್ಕರ್ ನಂಬರ್ ಒನ್ ಸ್ಥಾನವು ಡೌನಿಂಗ್ ಸ್ಟ್ರೀಟ್‍ನ ಚಟೇಲೈನ್ ಹಾಗೂ ಅಕ್ಷತಾ ಮೂರ್ತಿಗೆ ಲಭಿಸಿದೆ ಎಂದು ಟ್ಯಾಟ್ಲರ್‍ನ ಶೈಲಿ ಸಂಪಾದಕ (Editor) ಚಾಂಡ್ಲರ್ ಟ್ರೆಗಾಸ್ಕೆಸ್ ಹೇಳಿದರು. 122 ವರ್ಷ ಇತಿಹಾಸ ಹೊಂದಿರುವ ಟ್ಯಾಟ್ಲರ್ ಮ್ಯಾಗಜೀನ್‍ನ ಪಟ್ಟಿಯಲ್ಲಿ ಕೆನಡಿಯನ್ನರಾದ ಯಾನಾ ಪೀಲ, ಡೊಮಿನಿಕ್ ಸೆಬಾಗಮಾಂಟೆಫಿಯೋರ್ ಮತ್ತು ಒಪೆರಾ ಗಾಯಕ ಡೇನಿಯಲ್ ಡಿ ನೀಸೆ ಕೂಡ ಸೇರಿದ್ದಾರೆ. ಮಾತ್ರವಲ್ಲ ಲವ್ ಆಕ್ಚುಲಿ ಸ್ಟಾರ್ ಬಿಲ್ ನಿಘಿ, ಚೋಲ್ಮೊಂಡೆಲಿಯ ಮಾರ್ಚಿಯೋನೆಸ್ ಮತ್ತು ಪ್ರಿನ್ಸೆಸ್ ಬೀಟ್ರಿಸ್ ಅವರ ಪತಿ ಎಡೋರ್ಡೊ ಮಾಪೆಲ್ಲಿ ಮೊಝಿ ಕೂಡ ಸೇರಿದ್ದಾರೆ.
2007ರಲ್ಲಿ ಅಕ್ಷತಾ ಅವರು ಲಾಸ್ ಏಜಂಲಿಸ್‌ನ 'ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್'ನಲ್ಲಿ ಅಧ್ಯಯನ ಮಾಡಿದ್ದರು. ಫ್ಯಾಷನ್ ಬಗ್ಗೆ ಹೆಚ್ಚಿನ ಆಸಕ್ತಿ (Interest) ಹೊಂದಿರುವ ಅಕ್ಷತಾ ಜಪಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪಿಂಕ್ ಟಾಪ್ ಜೊತೆಗೆ ಬ್ಲ್ಯಾಕ್ ಟ್ರೌಸರ್ ಧರಿಸಿ ಮಿಂಚಿದ್ದರು. ಬ್ರಿಟನ್ ರಾಜ ಚಾರ್ಲ್ಸ್ ಅವರ ಪಟ್ಟಾಭಿಷೇಕದಲ್ಲಿಯೂ ಅವರ ಉಡುಗೆ ಎಲ್ಲರ ಗಮನ ಸೆಳೆದಿತ್ತು.
Infosys Share Price: ಯುಕೆ ಪ್ರಧಾನಿ ಪತ್ನಿ ಅಕ್ಷತಾಗೆ ಒಂದೇ ದಿನದಲ್ಲಿ 500 ಕೋಟಿಗೂ ಹೆಚ್ಚು ನಷ್ಟ..!
ಆದರೆ ಅಕ್ಷತಾ ಮತ್ತು ರಿಷಿ ಸುನಕ್ ಇಬ್ಬರೂ ಕಾಸ್ಟ್ಲೀ ಡಿಸೈನರ್ ಉಡುಪುಗಳನ್ನು ಧರಿಸಿದ್ದಕ್ಕಾಗಿ ಟೀಕೆಗೊಳಗಾಗಿದ್ದರು. ಕಳೆದ ಜುಲೈನಲ್ಲಿ ಟೀಸ್ಸೈಡ್ನಲ್ಲಿ ಪ್ರಚಾರಕ್ಕಾಗಿ ಪ್ರಧಾನಿಯವರು 3,500 ಪೌಂಡ್ (ರೂ. 3,69,848) ಸೂಟ್ ಮತ್ತು 490 ಪೌಂಡ್ (ರೂ. 51,778) ಪ್ರಾಡಾ ಶೂಗಳನ್ನು ಧರಿಸಿದ್ದಕ್ಕಾಗಿ ಟೀಕೆಯನ್ನು ಎದುರಿಸಬೇಕಾಯಿತು. ಆ ನಂತರ ಅಕ್ಷತಾ ತನ್ನ ದುಬಾರಿ ವಾರ್ಡ್‌ರೋಬ್ ಕಲೆಕ್ಷನ್‌ನ್ನು ಕೆಲವು ಬ್ರಿಟಿಷ್ ಬ್ರ್ಯಾಂಡ್‌ಗಳೊಂದಿಗೆ ಬದಲಾಯಿಸಿದರು ಎಂದು ತಿಳಿದುಬಂದಿದೆ.