Viral News: ಮದುವೆ ವೇಳೆ 70 ಕೆ.ಜಿ ಚಿನ್ನದಲ್ಲಿ ಮಗಳ ತೂಗಿದ ತಂದೆ

By Suvarna NewsFirst Published Jul 25, 2023, 6:09 PM IST
Highlights

ದುಬೈನಲ್ಲಿ ನಡೆದ ಪಾಕಿಸ್ತಾನಿ ಮದುವೆಯೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಒಂದ್ಕಡೆ ದೇಶ ಬಡತನದಲ್ಲಿ ಅಳ್ತಿದ್ದರೆ ಇತ್ತ ಚಿನ್ನದ ಬಿಸ್ಕತ್ ತಕ್ಕಡಿಯಲ್ಲಿ ತೂಗುತ್ತಿದ್ದನ್ನು ನೋಡಿ ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ.
 

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ, ಎರಡು ಆತ್ಮಗಳ ಸಮ್ಮಿಲನ ಎಂದೆಲ್ಲ ನಮ್ಮ ಹಿರಿಯರು ಹೇಳ್ತಿದ್ದರು. ಹೆಣ್ಣು ಹುಟ್ಟುತ್ತಿದ್ದಂತೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ತಿದ್ದ ಜನರು ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಲು ಸಾಕಷ್ಟು ಕಷ್ಟಪಡ್ತಿದ್ದರು. ಮದುವೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ನಂತ್ರ ಪರದಾಡಿದ ಈಗ್ಲೂ ಪರದಾಡುತ್ತಿರುವ ಅನೇಕ ಕುಟುಂಬಗಳಿವೆ. 

ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಈಗಿನ ಮದುವೆ (Marriage) ಗಳಿಗೆ ಅಜಗಜಾಂತರ ವ್ಯತ್ಯಾಸವನ್ನು ನೀವು ನೋಡ್ಬಹುದು. ಜಾತಕ, ಎರಡು ಕುಟುಂಬಗಳ ಒಪ್ಪಿಗೆಗಿಂತ ಈಗಿನ ಮದುವೆಯಲ್ಲಿ ಆಡಂಭರ, ಹೊಸ ತನಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈಗಿನ ಮದುವೆಗಳು ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಿರುತ್ತವೆ. ಈಗ ಪಾಕಿಸ್ತಾನಿ ಮದುವೆಯೊಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. 

Latest Videos

ಚಿತ್ರ ವಿಚಿತ್ರ ಫ್ಯಾಷನ್‌ನಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಮೇಕಪ್ ಇಲ್ಲದೇ ಕಾಣಿಸೋದು ಹೀಗೆ!

ದುಬೈ (Dubai) ನಲ್ಲಿ ಈ ಮದುವೆ ನಡೆದಿದೆ. ಪಾಕಿಸ್ತಾನಿ (Pakistani) ವಧುವಿಗೆ ಮದುವೆಯ ದಿನ ತಂದೆ ನೀಡಿದ ಉಡುಗೊರೆ ನೋಡಿ ಜನರು ಕಂಗಾಲಾಗಿದ್ದಾರೆ. ತಂದೆ, ತನ್ನ ಮಗಳ ತುಲಾಭಾರ ಮಾಡಿದ್ದಾನೆ. ಅಂದ್ರೆ ಮಗಳನ್ನು ಒಂದು ತಕ್ಕಡಿಯಲ್ಲಿ ಕುಳಿಸಿ, ಆಕೆ ಭಾರಕ್ಕೆ ತಕ್ಕಷ್ಟು ಚಿನ್ನವನ್ನು ಇನ್ನೊಂದು ನಾಣ್ಯದಲ್ಲಿಟ್ಟು ತೂಗಿದ್ದಾನೆ. ಮಗಳ ತೂಕಕ್ಕೆ ತಕ್ಕಂತೆ  70 ಕೆಜಿ ಚಿನ್ನದ ಬಿಸ್ಕತ್ತನ್ನು ಮಗಳಿಗೆ ನೀಡಿದ್ದಾರೆ. ದೇಶವು ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಸಂದರ್ಭದಲ್ಲಿ ಮಗಳಿಗೆ ಬಂಗಾರ ನೀಡಿದ ತಂದೆಯ ಈ ಉಡುಗೊರೆ  ಆಘಾತಕಾರಿಯಾಗಿದೆ.  

ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ಫೋಟೋ, ವಿಡಿಯೋದಲ್ಲಿ ಬಹುವರ್ಣದ ಚೋಲಿ ಮತ್ತು ಕೆಂಪು ಬಣ್ಣದ ದುಪಟ್ಟಾದೊಂದಿಗೆ ಸುಂದರವಾದ ಹಸಿರು ಬಣ್ಣದ ಲೆಹೆಂಗಾದಲ್ಲಿ ವಧು ಕಾಣಿಸಿಕೊಂಡಿದ್ದಾಳೆ. ಆಕೆ ಒಂದು ಕಡೆ ಕುಳಿತಿದ್ರೆ ತಕ್ಕಡಿಯ ಇನ್ನೊಂದು ಭಾಗದಲ್ಲಿ ನೀವು ಚಿನ್ನವನ್ನು ನೋಡ್ಬಹುದು. 

Saree Love: ಸಿಂಗರ್ ಉಷಾ ಉತ್ತುಪ್ ಬಳಿ ಇರೋ ಸೀರೆ ಹೇಳುತ್ತೆ ಒಂದೊಂದು ಕಥೆ

ಪಾಕಿಸ್ತಾನಿ ವಧುವಿನ ಈ ವಿಡಿಯೋ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಜನರು ಇದ್ರ ಬಗ್ಗೆ ನಾನಾ ಕಮೆಂಟ್ ಮಾಡ್ತಿದ್ದಾರೆ. ಬಡವರಿಗೆ ಇಷ್ಟು ಹಣ ಹಂಚಿದ್ದರೆ ಅಥವಾ ಅವರ ಮನೆಗೆ ಪಡಿತರವನ್ನು ತಲುಪಿಸಿದ್ದರೆ ಆ ಜನರ ಆಶೀರ್ವಾದ ಸಿಗ್ತಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದರಿಂದ ಏನು ಪ್ರಯೋಜನ. ಈ ರೀತಿಯ ಅವ್ಯವಹಾರ ಮಾಡಿದ ನಂತರವೇ ಮದುವೆ ಆಗಬೇಕಾ? ಇದನ್ನು ಸೂಪರ್ ಮ್ಯಾರೇಜ್ ಎನ್ನುವುದಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಪಾಕಿಸ್ತಾನದ ಊಟ ಮಾಡಲು ಆಹಾರವಿಲ್ಲ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಯಾರೂ ಪಾಕಿಸ್ತಾನಕ್ಕೆ ಸಾಲ ನೀಡ್ತಿಲ್ಲ.  ಈ ಸಂದರ್ಭದಲ್ಲಿ ಇಂಥ ಶೋಕಿ ಬೇಕಿತ್ತಾ ಎಂದು ಅನೇಕರು ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ.

ಈ ಬಗ್ಗೆ ವಧು ಹೇಳಿದ್ದೇನು? : ಪಾಕಿಸ್ತಾನದ ಉದ್ಯಮಿ ದುಬೈನಲ್ಲಿ ಈ ಅದ್ಧೂರಿ ಮದುವೆ ಮಾಡಿದ್ದಾರೆ. ಮದುವೆ 10 ದಿನ ನಡೆದಿದೆ ಎನ್ನಲಾಗಿದೆ. ಸುಮಾರ 1000 ಅತಿಥಿಗಳು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ತುಲಾಭಾರದ ವಿಡಿಯೋ ಬಗ್ಗೆ ಕಮೆಂಟ್ ಬರ್ತಿದ್ದಂತೆ, ಜನರ ಆಕ್ರೋಶ ಆಲಿಸಿದ ವಧು ಕೊನೆಗೂ ತನ್ನ ಪ್ರತಿಕ್ರಿಯೆ ನೀಡಿದ್ದಾಳೆ. ವಧು ಹೆಸರು ಆಯೇಷಾ ತಾಹಿರ್. 70 ಕೆ.ಜಿ ತೂಕವಿರುವ ಬಿಸ್ಕತ್ ಚಿನ್ನದಲ್ಲ ಎಂದು ಆಯೇಷಾ ತಾಹಿರ್ ಹೇಳಿದ್ದಾಳೆ. ಪ್ರಸಿದ್ಧ ಬಾಲಿವುಡ್ ಚಲನಚಿತ್ರ ಜೋಧಾ ಅಕ್ಬರ್‌ನ ಥೀಮ್ ಅನ್ನು ಅಳವಡಿಸಿಕೊಳ್ಳಲು ಅವರು ಚಿನ್ನದ ತೂಕದ ಆಚರಣೆಯನ್ನು ಮಾಡಿದ್ದರಂತೆ. ಜನರು ಇಡೀ ವೀಡಿಯೊವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದನ್ನು ವರದಕ್ಷಿಣೆ ಎಂದು ಕರೆಯುತ್ತಿದ್ದಾರೆ. ಆದ್ರೆ ಇದು ವರದಕ್ಷಿಣೆ ಅಲ್ಲ. ಹಾಗೇ ಇಲ್ಲಿರುವುದು ಚಿನ್ನವೇ ಅಲ್ಲ. ಇವು ಬರೀ ಚಿನ್ನದ ಲೇಪನವನ್ನು ಹೊಂದಿವೆ ಎಂದು ಆಯೇಷಾ ತಾಹಿರ್ ಹೇಳಿದ್ದಾಳೆ. 
 

click me!