Beauty Care : 30ನೇ ವರ್ಷದಲ್ಲಿ ಮುಖ ಹೊಳಿಬೇಕೆಂದ್ರೆ ಈ ತಪ್ಪು ಮಾಡ್ಬೇಡಿ

By Suvarna News  |  First Published Apr 22, 2023, 5:28 PM IST

ಎಲ್ಲರ ಮುಂದೆ ಆಕರ್ಷಕವಾಗಿ ಕಾಣ್ಬೇಕು ಎನ್ನುವುದು ಮಹಿಳೆಯರ ಕನಸು. ಚರ್ಮ ಸ್ವಲ್ಪ ಸುಕ್ಕುಗಟ್ಟಂತೆ ಕಂಡ್ರೂ ಟೆನ್ಷನ್ ಜಾಸ್ತಿಯಾಗುತ್ತದೆ. ನಿಮ್ಮ ಚರ್ಮ ಬಿಗಿಯಾಗಿ, ಸದಾ ಹದಿಹರೆಯದ ಹುಡುಗಿಯಂತೆ ಕಾಣ್ಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 


ನಿಮಗೆ 35 ವರ್ಷವಾಯ್ತಾ? ಹಾಗೆ ಕಾಣ್ತಾನೆ ಇಲ್ಲ, ತುಂಬಾ ಯಂಗ್ ಆಗಿ ಕಾಣ್ತಿದ್ದೀರಾ.. ನಾನು ಇಪ್ಪತ್ತೈದರ ಆಸುಪಾಸು ಅಂದುಕೊಂಡಿದ್ದೆ ಅಂತಾ ಯಾರಾದ್ರೂ ಮಹಿಳೆ ಮುಂದೆ ಹೇಳಿದ್ರೆ ಕಥೆ ಮುಗಿತು. ಆ ಮಹಿಳೆ ಹಿಗ್ಗಿ ಹೀರೆಕಾಯಿ ಆಗಿರ್ತಾಳೆ. ಯಾವ ಮಹಿಳೆ ಕೂಡ ತನ್ನ ನಿಜವಾದ ವಯಸ್ಸು ಹೇಳಲ್ಲ ಎನ್ನುವ ಮಾತನ್ನು ನೀವು ಕೇರ್ತಿರುತ್ತೀರಿ. ಅದು ಸ್ವಲ್ಪ ಮಟ್ಟಿಗೆ ನಿಜವೂ ಹೌದು. ತನ್ನ ವಯಸ್ಸಿಗಿಂತ ನಾಲ್ಕೋ ಐದೋ ವರ್ಷ ವಯಸ್ಸನ್ನು ಕಡಿಮೆ ಹೇಳೋದು ಕಾಮನ್. ಎಲ್ಲ ಮಹಿಳೆಯರೂ ತಮ್ಮ ವಯಸ್ಸು ಮುಚ್ಚಿಡಲು ನಾನಾ ಕಸರತ್ತು ಮಾಡ್ತಾರೆ.

ವ್ಯಾಯಾಮ (Exercise), ಯೋಗ, ಡಯಟ್ ಜೊತೆಗೆ ವಯಸ್ಸು 30 ಆಗ್ತಿದ್ದಂತೆ ಪಾರ್ಲರ್ (Parlor) ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಮುಖದಲ್ಲಿ ಆಗ್ತಿರುವ ಬದಲಾವಣೆಯನ್ನು ಹೇಗೆ ಮುಚ್ಚಿಡೋದು ಅಂತಾ ಮಹಿಳೆ ಸದಾ ಆಲೋಚನೆ ಮಾಡ್ತಿರುತ್ತಾಳೆ. 30 ವರ್ಷದಲ್ಲೂ ಯಂಗ್ ಆಗಿ ಕಾಣ್ಬೇಕು ಅಂದ್ರೆ ಏನೆಲ್ಲ ಮಾಡ್ಬೇಕು ಎನ್ನುವ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಲಭ್ಯವಾಗುತ್ತೆ. ಆದ್ರೆ ನಿಮ್ಮ ವಯಸ್ಸು 30 ದಾಟುತ್ತಿದ್ದು, 18ರಂತೆ ಆಕರ್ಷಕವಾಗಿ ಕಾಣ್ಬೇಕೆಂದ್ರೆ ಏನು ಮಾಡ್ಬಾರದು, ಮುಖಕ್ಕೆ ಏನು ಹಚ್ಚಬಾರದು ಎಂಬುದನ್ನು ನಾವು ಹೇಳ್ತೇವೆ.

Tap to resize

Latest Videos

TRENDING NEWS : ಕೂದಲಿಗೆ ಬಣ್ಣ ಹಚ್ತಿದ್ದಂತೆ ಸೌಂದರ್ಯ ಕಂಡು ನಕ್ಕು ನಕ್ಕು ಸುಸ್ತಾದ ಅಜ್ಜಿ

30ನೇ ವಯಸ್ಸಿನಲ್ಲಿ ಈ ಅಭ್ಯಾಸ (Practice) ಬಿಟ್ಬಿಡಿ : 

ಬ್ಲೀಚ್ ಮಾಡಿಸ್ಬೇಡಿ : ಬ್ಲೀಚ್ ಚರ್ಮಕ್ಕೆ ಕೆಟ್ಟದ್ದು. ಸುಂದರವಾಗಿ ಕಾಣಲು ಅನೇಕರು ಬ್ಲೀಚ್ (Bleach) ಮಾಡಿಸ್ತಾರೆ. ಆದ್ರೆ 30 ವರ್ಷದ ನಂತ್ರ ಮುಖಕ್ಕೆ ಬ್ಲೀಚ್ ಮಾಡಿದ್ರೆ ಅದು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 30 ವರ್ಷದಲ್ಲಿ ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಬ್ಲೀಚ್ ಮಾಡಿದಾಗ ಸುಕ್ಕು ಮುಚ್ಚುವ ಬದಲು ಎದ್ದು ಕಾಣುತ್ತದೆ. ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. 

ವೈಪ್ಸ್ ಬಳಕೆ ಮಾಡ್ಬೇಡಿ : ಸಾಮಾನ್ಯವಾಗಿ ಎಲ್ಲರೂ ಮೇಕಪ್ (Makeup) ತೆಗೆಯೋಕೆ ವೈಪ್ಸ್ ಬಳಕೆ ಮಾಡ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ವೈಪ್ಸ್ ಚರ್ಮ (Skin) ವನ್ನು ಸಡಿಲಗೊಳಿಸುವ ಕೆಲಸ ಮಾಡುತ್ತದೆ. ಅಲ್ಲದೆ ಚರ್ಮದ ಸುಕ್ಕು ಸ್ಪಷ್ಟವಾಗಿ ಕಾಣಲು ಇದು ಕಾರಣವಾಗುತ್ತದೆ. ಮೇಕಪ್ ತೆಗೆಯಲು ನೀವು ತೆಂಗಿನ ಎಣ್ಣೆ ಬಳಸಬಹುದು. ಇಲ್ಲವೆ ಮೇಕ್ಅಪ್ ಕ್ಲೆನ್ಸರ್ ಅನ್ನು ನೀವು ಬಳಸಬಹುದು. 

ಮೊಡವೆ ತಡೆಯೋಕೆ ಹರ್ಷಿಕಾ ಪೂಣಚ್ಚ ಮಾಡೋದು ಹೀಗೆ; ಹ್ಯಾಂಡ್‌ಬ್ಯಾಗ್‌ ಸೀಕ್ರೆಟ್‌ ರಿವೀಲ್

ಇದನ್ನು ಬಿಡಬೇಡಿ : ತಜ್ಞರು ಎಂದಿಗೂ ಸಿಟಿಎಂ ಬಿಡಬೇಡಿ ಎನ್ನುತ್ತಾರೆ. ಸಿಟಿಎಂ ಅಂದ್ರೆ ಕ್ಲೆಂಜಿಂಗ್, ಟೋನಿಂಗ್ ಹಾಗೂ   ಮಾಯಿಶ್ಚರೈಸರಿಂಗ್ ಆಗಿದೆ. ಚರ್ಮಕ್ಕೆ ಮಾಯಿಶ್ಚರೈಸ್ ಮಾಡೋದು ಬಹಳ ಮುಖ್ಯ. ವಯಸ್ಸು ಎಷ್ಟೇ ಆಗಿರಲಿ, ಪ್ರತಿ ದಿನ ಮುಖಕ್ಕೆ ಮಾಯಿಶ್ಚರೈಸರ್ ಮಾಡಿ ಮಸಾಜ್ ಮಾಡಿ. ಮುಖಕ್ಕೆ ಯಾವುದೇ ಕ್ರೀಂ ಬಳಸುವ ಮೊದಲು ನೀವು ಪ್ಯಾಚ್ ಪರೀಕ್ಷೆ ಮಾಡಬೇಕಾಗುತ್ತದೆ. ಚರ್ಮದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ತಕ್ಷಣ ಚರ್ಮ ತಜ್ಞರನ್ನು ಭೇಟಿಯಾಗಿ.

ಏನೇನು ಮಾಡ್ಬೇಕು ಗೊತ್ತಾ? : 30 ವರ್ಷದ ದಾಟಿದ ಮೇಲೆ ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಮೊದಲು ಸನ್ ಸ್ಕ್ರೀಮ್ ಬಳಕೆ ಮಾಡಿ. ಎಸ್ ಪಿಎಫ್ ಬಗ್ಗೆಯೂ ಹೆಚ್ಚು ಕಾಳಜಿವಹಿಸುವುದು ಮುಖ್ಯ. ಮುಖದ ಮೇಲೆ ಮಸಾಜ್ ಮಾಡುವುದು ಕೂಡ ಮುಖ್ಯವಾಗುತ್ತದೆ. ಸರಿಯಾದ ವಿಧಾನದಲ್ಲಿ ಮಸಾಜ್ ಮಾಡಿದ್ರೆ ಚರ್ಮ ಸಡಿಲವಾಗುವುದಿಲ್ಲ. ಚರ್ಮದ ಸುಕ್ಕು ತಡೆಯಲು, ಸೂಕ್ಷ್ಮ ರೇಖೆಯನ್ನು ಹೋಗಲಾಡಿಸಲು ಮಸಾಜ್ ಸಹಾಯ ಮಾಡುತ್ತದೆ. ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಆಗಾಗ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಶುದ್ಧ ನೀರಿನಲ್ಲಿ ಮುಖವನ್ನು ತೊಳೆಯುತ್ತಿರಬೇಕು. 
 

click me!