ಸೆಕೆಗಾಲ ಬಂದ್ರೆ ಸಾಕಪ್ಪ ಸಾಕು ಎನ್ನಿಸುವಷ್ಟು ಸಮಸ್ಯೆ ಶುರುವಾಗುತ್ತದೆ. ಒಂದ್ಕಡೆ ಬಿಸಿಲು, ಇನ್ನೊಂದು ಕಡೆ ಬೆವರು, ಮತ್ತೊಂದು ಕಡೆ ಒಂದಿಷ್ಟು ತುರಿಕೆ, ಉರಿ, ಹಾಳಾಗುವ ಚರ್ಮದ ಸೌಂದರ್ಯ. ಈ ಸಮಯದಲ್ಲಿ ಕೆಮಿಕಲ್ ಸೌಂದರ್ಯ ವರ್ದಕ ಬಳಸುವ ಬದಲು ಈ ಟಿಪ್ಸ್ ಫಾಲೋ ಮಾಡಿ.
ಬೇಸಿಗೆ ಧಗೆ ಶುರುವಾಗಿದೆ. ಬೆಳಿಗ್ಗೆ 7 ಆಗ್ತಿದ್ದಂತೆ ಮೈ ಬೆವರು ಶುರುವಾಗುತ್ತೆ. ಮಧ್ಯಾಹ್ನ 12 ಗಂಟೆಯಾಗ್ತಿದ್ದಂತೆ ಚರ್ಮ ಉರಿಯಲು ಶುರುವಾಗುತ್ತದೆ. ಬೇಸಿಗೆ ಕಾಲದಲ್ಲಿ ಅನಾರೋಗ್ಯ ಹೆಚ್ಚು. ಮುಖ ಹೊಳಪು ಕಳೆದುಕೊಳ್ಳುತ್ತದೆ. ಮುಖ ಎಣ್ಣೆಯುಕ್ತವಾಗುತ್ತದೆ. ಮೊಡವೇ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ.
ಬೇಸಿಗೆ (Summer ) ಯಲ್ಲಿ ಟ್ಯಾನ್, ಕಲೆ, ಗುಳ್ಳೆ, ತುರಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತವೆ. ಇದ್ರಿಂದ ಮುಕ್ತಿಪಡೆಯಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ವಿವಿಧ ರೀತಿಯ ಸೌಂದರ್ಯವರ್ಧಕ (Cosmetics) ಗಳನ್ನು ಬಳಸುತ್ತಾರೆ. ಆದ್ರೆ ಯಾವುದೇ ಸೌಂದರ್ಯ ವರ್ದಕ ಬಳಸದೆ ನೀವು ಸರಳವಾಗಿ ಮನೆ ಮದ್ದೊಂದನ್ನು ಮಾಡುವ ಮೂಲಕ ಬೇಸಿಗೆ ಉರಿಯಿಂದ ತಪ್ಪಿಸಿಕೊಳ್ಳಬಹುದು. ಮನೆಯಲ್ಲಿ ಈಗ ಫ್ರಿಜ್ ಸಾಮಾನ್ಯವಾಗಿದೆ. ಫ್ರಿಜ್ ಅಂದ್ಮೇಲೆ ಅದ್ರಲ್ಲಿ ಐಸ್ (Ice) ಇರ್ಲೇಬೇಕು. ಈ ಐಸ್ ನಿಮ್ಮ ಚರ್ಮದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತೆ ಗೊತ್ತಾ?. ಐಸ್ ಚರ್ಮಕ್ಕೆ ಹೊಳಪು ತರುತ್ತದೆ. ಮೊಡವೆ ಟ್ಯಾನಿಂಗ್ ಸಮಸ್ಯೆಯನ್ನು ಕೊನೆಗೊಳಿಸುತ್ತದೆ. ನಾವಿಂದು ಮುಖಕ್ಕೆ ಐಸ್ ಅನ್ವಯಿಸೋದ್ರಿಂದ ಏನೆಲ್ಲ ಪ್ರಯೋಜನ ಎಂಬುದನ್ನು ನಿಮಗೆ ಹೇಳ್ತೇವೆ.
BEAUTY CARE : 30ನೇ ವರ್ಷದಲ್ಲಿ ಮುಖ ಹೊಳಿಬೇಕೆಂದ್ರೆ ಈ ತಪ್ಪು ಮಾಡ್ಬೇಡಿ
ಮುಖಕ್ಕೆ ಐಸ್ ಅನ್ವಯಿಸೋದು ಹೇಗೆ? : ಮುಖಕ್ಕೆ ನೇರವಾಗಿ ಐಸ್ ಮಸಾಜ್ ಮಾಡಬಾರದು. ಹತ್ತಿ ಬಟ್ಟೆ ಅಥವಾ ಕರವಸ್ತ್ರದಲ್ಲಿ ಐಸ್ ತುಂಡುಗಳನ್ನು ಹಾಕಿ ಪ್ಯಾಕ್ ಮಾಡಿ ನಂತ್ರ ಅದನ್ನು ಐಸ್ ಬ್ಯಾಗ್ ರೀತಿ ಬಳಸಿ. ಐಸ್ ಪ್ಯಾಕನ್ನು ಮುಖಕ್ಕೆ ವೃತ್ತಾಕಾರದಲ್ಲಿ ತಿರುಗಿಸಬೇಕು. ದಿನಕ್ಕೆ ಒಂದೇ ಬಾರಿ ನೀವು ಐಸ್ ಮಸಾಜ್ ಮಾಡ್ಬೇಕು ಎಂಬುದು ನೆನಪಿರಲಿ.
ರಕ್ತ ಪರಿಚಲನೆ : ಮುಖಕ್ಕೆ ಐಸ್ ಉಜ್ಜುವುದ್ರಿಂದ ಚರ್ಮದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಚರ್ಮದ ಆಯಾಸವನ್ನು ಹೋಗಲಾಡಿಸುತ್ತದೆ. ಮುಖದ ಬಣ್ಣದಲ್ಲಿ ಕೂಡ ಸುಧಾರಣೆಯನ್ನು ನೀವು ಕಾಣ್ಬಹುದು. ಐಸ್ ಮುಖಕ್ಕೆ ಅನ್ವಯ ಮಾಡೋದ್ರಿಂದ ಮುಖದ ಹೊಳಪು ಹೆಚ್ಚಾಗುತ್ತದೆ.
ಮೊಡವೆ ತಡೆಯೋಕೆ ಹರ್ಷಿಕಾ ಪೂಣಚ್ಚ ಮಾಡೋದು ಹೀಗೆ; ಹ್ಯಾಂಡ್‌ಬ್ಯಾಗ್ ಸೀಕ್ರೆಟ್ ರಿವೀಲ್
ಕಣ್ಣುಗಳ ಆರೋಗ್ಯಕ್ಕೆ ಐಸ್ : ಬೇಸಿಗೆಯಲ್ಲಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇದ್ರಿಂದಾಗಿ ಕಣ್ಣುಗಳು ಊದಿಕೊಳ್ಳುತ್ತವೆ. ಕೆಲವರಿಗೆ ಕಣ್ಣು ಊದುವ ಜೊತೆಗೆ ಉರಿ ಕಾಣಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಕಣ್ಣಿನ ಸುತ್ತಲೂ ನೀವು ಐಸ್ ನಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಆಗಾಗ ಕಣ್ಣಿನ ಮೇಲೆ ಐಸ್ ಇಡುತ್ತಿದ್ದರೆ ಕಣ್ಣಿನ ಈ ಸಮಸ್ಯೆ ಕಡಿಮೆಯಾಗುತ್ತದೆ. ಕೆಲವರ ಕಣ್ಣಿನ ಕೆಳ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ನಿಮಗೂ ಈ ಸಮಸ್ಯೆ ಇದ್ರೆ ಕಣ್ಣಿನ ಕೆಳಗೆ ಐಸ್ ಮಸಾಜ್ ಮಾಡಿ.
ಉರಿ, ದದ್ದುಗೆ ಮದ್ದು : ಸೂರ್ಯನ ಬೆಳಕು ಅಥವಾ ಧೂಳಿನ ಕಾರಣಕ್ಕೆ ಬೇಸಿಗೆಯಲ್ಲಿ ಚರ್ಮದ ಸಮಸ್ಯೆ ಮತ್ತಷ್ಟು ಹೆಚ್ಚು. ಚರ್ಮದ ಮೇಲೆ ದದ್ದು, ಉರಿ, ತುರಿಕೆ ಸೇರಿದಂತೆ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೋಡಲು ಇದು ಸಣ್ಣ ದದ್ದು ಎನ್ನಿಸಿದ್ರೂ ಇದ್ರ ಉರಿ ಅನುಭವಿಸೋದು ಕಷ್ಟ. ಈ ಸಮಯದಲ್ಲಿ ನೀವು ಐಸ್ ಬಳಕೆ ಮಾಡಬೇಕು. ನಿಮ್ಮ ಮುಖ ಅಥವಾ ದೇಹದ ಯಾವುದೇ ಭಾಗ ತಂಪಾಗಲು ನೀವು ಐಸ್ ಮಸಾಜ್ ಮಾಡಿ. ಇದು ಉರಿ, ತುರಿಕೆಯನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಂಪು ಬಣ್ಣ ಕೂಡ ಕಡಿಮೆಯಾಗುತ್ತದೆ.
ಮೊಡವೆ ಹೋಗಲಾಡಿಸುತ್ತೆ ಐಸ್ : ಮೊಡವೆ ಸಮಸ್ಯೆ ಇರುವವರು ಕೂಡ ಐಸ್ ಬಳಸಬೇಕು. ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ, ಮುಚ್ಚಿದ್ದ ಚರ್ಮದ ರಂಧ್ರಗಳನ್ನು ತೆರವುಗೊಳಿಸಿ ಮೊಡವೆಯನ್ನು ಕಡಿಮೆ ಮಾಡುತ್ತದೆ.
ವಯಸ್ಸು ಮುಚ್ಚಿಡಲು ಸಹಕಾರಿ : ಐಸ್, ಚರ್ಮಕ್ಕೆ ಪೋಷಣೆ ನೀಡುವ ಕೆಲಸ ಮಾಡುತ್ತದೆ. ನೀವು ಚರ್ಮದ ಮೇಲೆ ಐಸ್ ಮಸಾಜ್ ಮಾಡುತ್ತಿದ್ದಂತೆ ಚರ್ಮ ಚಿಕ್ಕದಾಗಿ ಕಾಣುತ್ತದೆ. ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಅಸ್ಪಷ್ಟವಾಗುತ್ತವೆ.