
ಚೆನ್ನೈ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳಿನ ನಟ ಅಭಿನಯ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ಅಭಿನಯ್ ಸೋಮವಾರ ಮುಂಜಾನೆ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಅಭಿನಯ್
ಬಹಳ ಸಮಯದಿಂದ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದ ಅಭಿನಯ್ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ಆರ್ಥಿಕ ತೊಂದರೆಗಳಿಂದಾಗಿ ಅವರ ಆರೋಗ್ಯ ಹದಗೆಟ್ಟಿದ್ದರೂ ಕೆಲಸ ಮುಂದುವರಿಸಿದ್ದರು. ನಟ ಧನುಷ್ ಅವರ ಚೊಚ್ಚಲ ಚಿತ್ರ 'ತುಳ್ಳುವದೋ ಇಲ್ಲಮೈ' ಚಿತ್ರದಲ್ಲಿ ನಟಿಸಿದ್ದ ಅಭಿನಯ್ ಅವರಿಗೆ ಈ ಸಿನಿಮಾ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಅಭಿನಯ್ ಅವರ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದ ಕಾರಣಕ್ಕೆ ನಟರಾದ ನಟರಾದ ಧನುಷ್ ಮತ್ತು ಕೆಪಿವೈ ಬಾಲಾ ಅವರು ಅಭಿನಯ್ ಅವರಿಗೆ ಈ ಹಿಂದೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ್ದರು. ಸೋಮವಾರ ಬೆಳಗಿನ ಜಾವ 4.00 ಗಂಟೆ ಸುಮಾರಿಗೆ ನಿಧನರಾದ ನಟನ ಪಾರ್ಥಿವ ಶರೀರವನ್ನು ಅವರು ವಾಸವಿದ್ದ ಕೊಡಂಬಕ್ಕಂನ ಸ್ಥಳದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ತುಳ್ಳುವಧೋ ಇಲ್ಲಮೈ ಚೊಚ್ಚಲ ಸಿನಿಮಾ
ಅಭಿನಯ್ ಅವರಿಗೂ ತುಳ್ಳುವಧೋ ಇಲ್ಲಮೈ ಮೊದಲ ಸಿನಿಮಾವಾಗಿತ್ತು. ಈ ಚಿತ್ರವನ್ನು ಧನುಷ್ ಅವರ ಸಹೋದರ ಸೆಲ್ವರಾಘವನ್ ಬರೆದು ಅವರ ತಂದೆ ಕಸ್ತೂರಿ ರಾಜ ನಿರ್ದೇಶಿಸಿದ್ದರು. ಆರು ಪ್ರೌಢಶಾಲಾ ವಿದ್ಯಾರ್ಥಿಗಳ ಸುತ್ತ ಸುತ್ತುವ ಕಥೆಯಿರುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಅಭಿನಯ್ ಅವರು ನಿರ್ವಹಿಸಿದರು.
ವಾಣಿಜ್ಯಿಕವಾಗಿ ಭಾರಿ ಯಶಸ್ಸನ್ನು ಕಂಡ ಈ ಚಿತ್ರ ಧನುಷ್ ಮತ್ತು ಅಭಿನಯ್ ಇಬ್ಬರಿಗೂ ಸಾಕಷ್ಟು ಪ್ರಸಿದ್ಧಿ ನೀಡಿತ್ತು. ಅಭಿನಯ್ 2014 ರವರೆಗೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಡಬ್ಬಿಂಗ್ ಕಲಾವಿದನಾಗಿಯೂ ಕೆಲಸ ಮಾಡುತ್ತಿದ್ದ ಅಭಿನಯ್, ಈ ವರ್ಷ ನಿರ್ದೇಶಕ ಅಭಿಷೇಕ್ ಲೆಸ್ಲಿ ಅವರ ತಮಿಳು ಚಿತ್ರ 'ಗೇಮ್ ಆಫ್ ಲೋನ್ಸ್' ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು.
ಅಕ್ಟೋಬರ್‌ನಲ್ಲಿ ನಡೆದ ಈ ಗೇಮ್ ಆಫ್ ಲೋನ್ಸ್ ಚಿತ್ರದ ಪತ್ರಿಕಾಗೋಷ್ಠಿಗೆ ಅಭಿನಯ್ ಬಂದಿದ್ದರು. ಈ ಸಿನಿಮಾದಲ್ಲಿ ನಿವಾಸ್ ಆದಿತನ್, ಎಸ್ಟರ್ ನೊರೊನ್ಹಾ ಮತ್ತು ಅಥ್ವಿಕ್ ಜಲಂಧರ್ ಅವರೊಂದಿಗೆ ಅಭಿನಯ್ ನಟಿಸಿದ್ದಾರೆ. ಈ ಚಿತ್ರಕ್ಕೆ ಜೋ ಕೋಸ್ಟಾ ಸಂಗೀತ ಮತ್ತು ಸಬರಿ ಛಾಯಾಗ್ರಹಣ ನೀಡಿದ್ದಾರೆ. ಪ್ರದೀಪ್ ಜೆನಿಫರ್ ಅವರ ಸಂಕಲನ ಮತ್ತು ಸಾಜನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರದ ಕಥೆ ಹಿಂದಿನಿಂದ ಇಂದಿನವರೆಗೆ ಸಾಲ ಪಡೆದವರ ದುಃಸ್ಥಿತಿಯ ಸುತ್ತ ಸುತ್ತುತ್ತದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಶೌಚಾಲಯದ ಹೊರಗೆ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ ಯುವಕ
ಇದನ್ನೂ ಓದಿ: ಎಲ್‌ಪಿಜಿ ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಸಿಲಿಂಡರ್ ಸ್ಫೋಟಕ್ಕೆ ಸುಟ್ಟು ಕರಕಲಾದ ಟ್ರಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.