
ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ಆಗ್ತಿದ್ದಂತೆ ರಕ್ಷಿತಾ (Rakshita) ಕಾಲ್ಗುಣದ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ವು. ಬಿಗ್ ಬಾಸ್ 12ರ ಮನೆಗೆ ಎಂಟ್ರಿಯಾಗಿ ಕೆಲವೇ ಗಂಟೆಗೆ ರಕ್ಷಿತಾ ಮನೆಯಿಂದ ಹೊರ ಬಂದಿದ್ದರು., ಒಂದು ವಾರಗಳ ಕಾಲ ಸಿಕ್ರೇಟ್ ರೂಮಿನಲ್ಲಿದ್ದ ರಕ್ಷಿತಾ, ಮತ್ತೆ ಮನೆಯೊಳಗೆ ಹೋಗೋ ಮುನ್ನ, ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಹಾಕ್ತೇನೆ ಎಂದಿದ್ರು. ಅದೇನಾಯ್ತೋ ಗೊತ್ತಿಲ್ಲ, ರಕ್ಷಿತಾ ಹೇಳಿದಂತೆ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರ ಬಿದ್ದಿದ್ದರು. ಮಾಲಿನ್ಯದ ಹೆಸರಿನಲ್ಲಿ ಬಿಗ್ ಬಾಸ್ ಶೋ ನಡೆಯುತ್ತಿದ್ದ ಮನೆಗೆ ಬೀಗ ಬಿದ್ದಿತ್ತು. ಇದಾಗಿದ್ದೇ ಆಗಿದ್ದು, ರಕ್ಷಿತಾ ಹೇಳಿದಂತೆ ಆಗಿದೆ, ಒಳಗೆ ಹೋಗಿ ಎಲ್ಲರನ್ನೂ ಹೊರಗೆ ಹಾಕಿದ್ದಾರೆ ಅಂತ ಜನ ಟ್ರೋಲ್ ಮಾಡೋಕೆ ಶುರು ಮಾಡಿದ್ರು. ಈಗ ರಕ್ಷಿತಾ ಕೂಡ ಇಂಥದ್ದೇ ವಿಷ್ಯ ಮಾತನಾಡಿದ್ದಾರೆ.
ರಕ್ಷಿತಾ ಆಪ್ತರಾದ್ರೆ ಆಪತ್ತು ಗ್ಯಾರಂಟಿಯಾ ಎನ್ನುವ ಪ್ರಶ್ನೆಯೊಂದು ಜನಕ್ಕಲ್ಲ ರಕ್ಷಿತಾಗೇ ಶುರುವಾದಂತಿದೆ. ತನ್ನ ಮನಸ್ಸಿನಲ್ಲಿರುವ ವಿಷ್ಯವನ್ನು ರಕ್ಷಿತಾ ಗಿಲ್ಲಿ ಹಾಗೂ ರಘು ಮುಂದೆ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅತಿ ಹೆಚ್ಚು ಸಮಯ ಕಳೆದಿದ್ದು ಮಲ್ಲಮ್ಮ ಅವರ ಜೊತೆ. ಮಲ್ಲಮ್ಮ ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಮಲ್ಲಮ್ಮ ಅವರನ್ನು ಅತಿಯಾಗಿ ಹಚ್ಚಿಕೊಂಡಿದ್ದ ರಕ್ಷಿತಾ, ಅವರ ಜೊತೆಯೇ ಊಟ ಮಾಡ್ತಿದ್ರು. ಅವರ ಜೊತೆಯೇ ಮಲಗ್ತಿದ್ದರು. ಅವರ ಜೊತೆ ಸಾಕಷ್ಟು ಹರಟೆ ಹೊಡೆಯುತ್ತಿದ್ದರು. ಮಲ್ಲಮ್ಮ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದಾಗ ಒಂಟಿತನ ಅನುಭವಿಸಿದ್ದು ರಕ್ಷಿತಾ. ಅನೇಕ ಬಾರಿ ಕ್ಯಾಮರಾ ಮುಂದೆಯೂ ರಕ್ಷಿತಾ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ.
BBK 12: ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ತಿರುಗಿಬಿದ್ದ ರಾಶಿಕಾ ಶೆಟ್ಟಿ, ಕಾವ್ಯ ಶೈವ
ಮಲ್ಲಮ್ಮ ಮನೆಯಿಂದ ಹೊರ ಹೋದ್ಮೇಲೆ ರಕ್ಷಿತಾ, ಚಂದ್ರಪ್ರಭ ಅವರ ಜೊತೆ ಹೆಚ್ಚು ಮಾತನಾಡ್ತಿದ್ದರು. ತಮ್ಮ ನೋವು, ಖುಷಿಯನ್ನು ಚಂದ್ರಪ್ರಭ ಬಳಿ ಹಂಚಿಕೊಂಡಿದ್ದರು. ಆದ್ರೆ ಮಲ್ಲಮ್ಮನ ನಂತ್ರ ಚಂದ್ರಪ್ರಭ ಮನೆಯಿಂದ ಹೊರಗೆ ಹೋಗಿದ್ದಾರೆ. ಇಬ್ಬರೂ ಆಪ್ತರು ಮನೆಯಿಂದ ಹೊರಗೆ ಹೋಗ್ತಿದ್ದಂತೆ ರಕ್ಷಿತಾಗೆ ಅನುಮಾನ ಶುರುವಾಗಿದೆ. ನನಗೆ ಆಪ್ತರಾದವರೆಲ್ಲ ಮನೆಯಿಂದ ಹೊರಗೆ ಹೋಗ್ತಿದ್ದಾರಲ್ಲ ಎನ್ನುವ ಪ್ರಶ್ನೆ ಕಾಡಿದೆ. ಈ ಬಗ್ಗೆ ರಕ್ಷಿತಾ ಬಹಿರಂಗವಾಗಿ ಮಾತನಾಡಿದ್ದಾರೆ.
ʻʻಸತ್ಯ ಹೇಳ್ತಿದೆನೆ ಅಜ್ಜಿ ಜೊತೆ ಕ್ಲೋಸ್ ಇದ್ದೆ ಅವರು ಹೋದ್ರು. ಚಂದ್ರಣ್ಣ ಜೊತೆ ಕೋಸ್ ಆದೆ ಅವರು ಹೋದ್ರುʼʼ ಹಿಂಗಂತ ರಕ್ಷಿತಾ ಹೇಳ್ತಾರೆ. ಇದನ್ನು ಕೇಳಿದ ಗಿಲ್ಲಿ, ನೆಕ್ಸ್ಟ್ ಅಶ್ವಿನಿ ಮೇಡಂ ಜೊತೆ ಕ್ಲೋಸ್ ಇರು, ಅವರು ಹೋಗ್ಬಿಡಲಿ ಅಂತ ಗಿಲ್ಲಿ ಹೇಳ್ತಾರೆ.
Bigg Boss Kannada Season 12: ಸ್ಪಂದನಾ ಕಿವಿ ಕಚ್ಚಿದ ಗಿಲ್ಲಿ, ನೋಡಿದೋರಿಗೆ ಅನುಮಾನ ಬರೋದು ಗ್ಯಾರಂಟಿ
ಈ ವಿಡಿಯೋ ನೋಡಿದ ಫ್ಯಾನ್ಸ್ ತಮ್ಮ ಆಯ್ಕೆ ನೀಡೋಕೆ ಶುರು ಮಾಡಿದ್ದಾರೆ. ಕೆಲವರು ಅಶ್ವಿನಿ ಜೊತೆ ಕ್ಲೋಸ್ ಆಗಿರಿ ಅಂದ್ರೆ ಮತ್ತೆ ಕೆಲವರು ಧ್ರುವಂತ್ ಜೊತೆ ಕ್ಲೋಸ್ ಆಗಿ, ಅವರು ಹೋಗ್ಲಿ ಎನ್ನುತ್ತಿದ್ದಾರೆ. ನೀವು ಮನೆಗೆ ಕಾಲಿಟ್ಟ ಗಳಿಗೆ ಹಾಗಿದೆ, ಮೊದಲು ಎಲ್ಲರೂ ಹೋದ್ರು, ಈಗ ಒಬ್ಬೊಬ್ಬರೇ ಹೋಗ್ತಿದ್ದಾರೆ ಅಂತ ರಕ್ಷಿತಾ ಕಾಲೆಳೆದಿದ್ದಾರೆ. ಸ್ಪಾಟಲ್ಲಿ ಗಿಲ್ಲಿ ಹೇಳಿದೆ ಡೈಲಾಗ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಸೀರಿಯಸ್ ವಿಷ್ಯವನ್ನು ತಮಾಷೆಯಾಗಿ ತೆಗೆದುಕೊಳ್ಳುವ ಗಿಲ್ಲಿಗೆ ಫ್ಯಾನ್ಸ್ ಸಲಹೆ ನೀಡಿದ್ದಾರೆ. ನೀವು ಮಾತ್ರ ರಕ್ಷಿತಾಗೆ ಹತ್ತಿರ ಆಗ್ಬೇಡಿ ಎಂದಿದ್ದಾರೆ. ಇದೆಲ್ಲ ಕೇಳಿದ್ಮೇಲೂ ಗಿಲ್ಲಿ, ರಘು ರಕ್ಷಿತಾ ಹತ್ತಿರ ಹೋಗ್ತಾರಾ? ರಕ್ಷಿತಾ ಹೇಳಿದ ಮಾತಿನಂತೆ ಈ ಬಾರಿ ರಕ್ಷಿತಾಗೆ ಹತ್ತಿರ ಆದೋರು ಮನೆಯಿಂದ ಹೊರಗೆ ಹೋಗ್ತಾರಾ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.