ನಿಧಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್... "ಅದನ್ನ ಕಳಕೊಂಡೆ, ಇದನ್ನ ಪಡ್ಕೊಂಡೆ" ಎಂದ ಭವ್ಯಗೌಡ!

Published : Nov 11, 2025, 01:09 PM IST
dance karnataka dance

ಸಾರಾಂಶ

Dance Karnataka Dance: 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ‘ಕರುನಾಡನ್ನು ಕುಣಿಸೋಕೆ ಬಂದ ಪ್ರತಿಭೆಗಳ ಡ್ಯಾನ್ಸ್ ಪಯಣಕ್ಕೆ ಹೆಜ್ಜೆ ಹಾಕಿ ಜೊತೆಯಾದ್ರು ಡ್ಯಾನ್ಸ್ ಸೆಲೆಬ್ರಿಟಿಗಳು’ ಎಂದು ಜೀ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದೆ. 

ಮೊನ್ನೆಯಷ್ಟೇ ಜನಪ್ರಿಯ ರಿಯಾಲಿಟಿ ಶೋ 'ಮಹಾನಟಿ' ಯಶಸ್ವಿಯಾಗಿ ಮುಗಿದಿದೆ. ಇದಾದ ನಂತರ ಯಾವ ರಿಯಾಲಿಟಿ ಶೋ ಬರಲಿದೆ ಎಂಬ ಕುತೂಹಲ ವೀಕ್ಷಕರಿಗಿತ್ತು. ಈಗ ಕನ್ನಡ ಕಿರುತೆರೆಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ವೀಕ್ಷಕರ ಮುಂದೆ ಬರಲು ಕ್ಷಣಗಣನೆ ಆರಂಭವಾಗಿದೆ. ಅದೇ ಜೀ ಕನ್ನಡದ ಜನಪ್ರಿಯ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'. 'ಡಿಕೆಡಿ' ಅಂತಲೇ ಫೇಮಸ್ ಆಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೀ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ರಿಯಾಲಿಟಿ ಶೋಗೆ ಪ್ರತ್ಯೇಕ ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ. ಅಂದರೆ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುವ ಈ ಶೋ ವೀಕ್ಷಿಸಲು ದೊಡ್ಡ ವೀಕ್ಷಕರ ಬಳಗವೇ ಇದೆ.

ಯಾವಾಗ ಆರಂಭವಾಗಲಿದೆ?

ಹೌದು.'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಆರಂಭಕ್ಕೆ ದಿನ ಗಣನೆ ಶುರುವಾಗಿದೆ. ಹೊಸ ಸೀಸನ್ ನವೆಂಬರ್ 15 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಶೋನಲ್ಲಿ ಜಡ್ಜ್​ ಆಗಿ ವಿಜಯ್ ರಾಘವೇಂದ್ರ, ರಚಿತಾ ರಾಮ್, ಶಿವಣ್ಣ, ಅರ್ಜುನ್ ಜನ್ಯ ಇದ್ದಾರೆ. ‘ಕರುನಾಡನ್ನು ಕುಣಿಸೋಕೆ ಬಂದ ಪ್ರತಿಭೆಗಳ ಡ್ಯಾನ್ಸ್ ಪಯಣಕ್ಕೆ ಹೆಜ್ಜೆ ಹಾಕಿ ಜೊತೆಯಾದ್ರು ಡ್ಯಾನ್ಸ್ ಸೆಲೆಬ್ರಿಟಿಗಳು’ ಎಂದು ಜೀ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಜೀ ಕನ್ನಡ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಪ್ರೋಮೊ ರಿಲೀಸ್ ಮಾಡಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸ್ಟಾರ್ ತೀರ್ಪುಗಾರರಾಗಿ ಕಾಣಿಸಿಕೊಂಡರೆ, ಮಾತಿನ ಮಲ್ಲಿ ಅನುಶ್ರೀ ನಿರೂಪಕಿಯಾಗಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಮನರಂಜನೆ ನೀಡುವುದಕ್ಕೆ ಮತ್ತೊಂದು ರಿಯಾಲಿಟಿ ಶೋ ಬರುವುದಕ್ಕೆ ರೆಡಿಯಾಗಿದೆ. ಈ ವೇಳೆ ರಚಿತಾ ರಾಮ್ ವಿಶೇಷವಾದ ಫೋಟೋವೊಂದನ್ನು ಹಂಚಿಕೊಂಡಿದ್ದರು.

ಡಿಂಪಲ್ ಕ್ವೀನ್ ರಚಿತಾ ರಾಮ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಡಿಕೆಡಿ ಮೊದಲ ದಿನದ ಶೂಟಿಂಗ್ ಆರಂಭ ಆಗಿದ್ದು, ಸೆಟ್‌ನಲ್ಲಿ ಶಿವಣ್ಣ, ವಿಜಯ ರಾಘವೇಂದ್ರ, ಅರ್ಜುನ್ ಜನ್ಯಾ ಹಾಗೂ ಆಂಕರ್ ಅನುಶ್ರೀಯೊಂದಿಗೆ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, "ಲೈಟ್ಸ್, ಕ್ಯಾಮರಾ, ಡ್ಯಾನ್ಸ್.. ಫಸ್ಟ್ ಡೇ.. ಫಸ್ಟ್ ಫ್ರೇಮ್.. ಸದಾ ನೆನಪಿನಲ್ಲಿ ಉಳಿಯುತ್ತೆ.. ಎಂತಹ ಅದ್ಭುತ ಸ್ಟಾರ್ಟ್" ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.

ಯಾರೆಲ್ಲಾ ಭಾಗವಹಿಸಲಿದ್ದಾರೆ?

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನ ಶೂಟಿಂಗ್ ಅದ್ಧೂರಿಯಾಗಿ ಶುರುವಾಗಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳ ಜೊತೆಗೆ ಕಿರುತೆರೆಯ ಜನಪ್ರಿಯ ನಟ-ನಟಿಯರು ಈ ಶೋನಲ್ಲಿ ಭಾಗವಹಿಸಿರುವುದು ಶೋಗೆ ಮತ್ತಷ್ಟು ಕಿಕ್ ಕೊಡಲಿದೆ. ವಾಹಿನಿ ರಿಲೀಸ್ ಮಾಡಿರುವ ಪ್ರೊಮೊದಲ್ಲಿ ತೋರಿಸಿರುವ ಪ್ರಕಾರ, 'ಲಕ್ಷ್ಮೀನಿವಾಸ' ಖ್ಯಾತಿಯ ಸಿದ್ದೇಗೌಡ, 'ಬ್ರಹ್ಮಗಂಟು' ನಟಿ ಸಂಜನಾ, ಅನನ್ಯ, ಅಣ್ಣಯ್ಯ ಖ್ಯಾತಿಯ ಗುಂಡಮ್ಮ, 'ಶ್ರಾವಣಿ ಸುಬ್ರಹ್ಮಣ್ಯ' ನಾಯಕ ಸುಬ್ಬು, ಜಗ್ಗಪ್ಪ ಮುಂತಾದವರು ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ವೀಕ್ಷಕರಿಗೆ ಹೆಚ್ಚು ಖುಷಿ ಕೊಟ್ಟಿರುವುದು ಕರ್ಣ ಧಾರಾವಾಹಿ ಖ್ಯಾತಿಯ ನಿಧಿ ಪಾತ್ರಧಾರಿ ಭವ್ಯಗೌಡ ಶೋನಲ್ಲಿ ಭಾಗವಹಿಸಿರುವುದು.

ಪ್ರೊಮೊದಲ್ಲಿ ತೋರಿಸಿರುವ ಹಾಗೆ ಭವ್ಯ ಗೌಡ ಶಿವಣ್ಣ ಬಳಿ "ಅದನ್ನ ಕಳಕೊಂಡೆ, ಇದನ್ನ ಪಡ್ಕೊಂಡೆ"ನ ಎಂದು ಕಲರ್‌ಫುಲ್ ದಿರಿಸಿನಲ್ಲಿ ಮುದ್ದು ಮುದ್ದಾಗಿ ಹೇಳುವುದನ್ನ ನೀವು ನೋಡಬಹುದು.

ಜೀ ಕನ್ನಡ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ. ಈಗಾಗಲೇ 'ಕಾಮಿಡಿ ಕಿಲಾಡಿಗಳು' ಶೋ ಆರಂಭ ಆಗಿದೆ. ಮೊದಲ ವಾರವೇ ಬ್ಲಾಕ್ ಬಸ್ಟರ್ ಪರ್ಫಾಮೆನ್ಸ್ ಕೊಟ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದಕ್ಕೆ ಸಜ್ಜಾಗಿದೆ. 'ಕಾಮಿಡಿ ಕಿಲಾಡಿಗಳು' ಜೊತೆಗೆ ಈಗ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಸೇರಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟ ಎಂಟರ್‌ಟೇನರ್‌ ಅಲ್ಲ, ವಿಷಕಾರಿ ಹಾವು? ಖಾಸಗಿ ಕಂಪೆನಿ HR ಹೇಳುತ್ತಿರೋದೇನು?
Bigg Boss Kannada 12: ಸೂರಜ್​ ಎದುರೇ ರಾಶಿಕಾ, ರಜತ್​ ಜೊತೆ ರೊಮಾನ್ಸ್​ ಮಾಡೋದಾ? ಛೇ ಧ್ರುವಂತ್​ಗೆ ಇದೇನಾಯ್ತು?