ಬೆಂಗಳೂರು: ಬಹುನಿರೀಕ್ಷಿತ ಕರ್ಣ ಧಾರಾವಾಹಿ ಸೋಮವಾರದಿಂದ ಪ್ರಸಾರವಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕರ್ಣ ಪ್ರಸಾರವಾಗಿಲ್ಲ. ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ಟಿಎಸ್ ನಾಗಭರಣ ಸೇರಿದಂತೆ ಹಲವು ಕಲಾವಿದರನ್ನು ಕರ್ಣ ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇದೊಂದು ಪ್ರೇಮಕಥೆ ಮತ್ತು ತುಂಬು ಕುಟುಂಬದಲ್ಲಿ ಒಂಟಿಯಾಗಿರುವ ನಾಯಕನನ ಕಥೆ ಎಂದು ಎಲ್ಲರಿಗೂ ಗೊತ್ತಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಕಿರಣ್ ರಾಜ್, ಕಾನೂನು ತೊಡಕುಗಳಿಂದ ಸೀರಿಯಲ್ ಪ್ರಸಾರವಾಗಲಿಲ್ಲ. ಈ ಸಮಸ್ಯೆಯಿಂದ ಶೀಘ್ರದಲ್ಲಿಯೇ ಹೊರ ಬರಲಿದ್ದೇವೆ ಎಂದು ಹೇಳಿದ್ದಾರೆ. ನಾನು ಸಹ ಜೂನ್ 16 ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೆ. ಆದ್ರೆ ಕೆಲವು ಸಮಸ್ಯೆಗಳು ಎದುರಾಗಿವೆ ಎಂದು ನಟ ಕಿರಣ್ ರಾಜ್ ಹೇಳಿದ್ದಾರೆ.
09:23 PM (IST) Jun 17
ಈ ಸಿನಿಮಾ 36 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಮತ್ತು ಅದರ ಬಾಕ್ಸ್ ಆಫೀಸ್ ಸಂಗ್ರಹದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
08:34 PM (IST) Jun 17
ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಜೋಡಿ ಮದುವೆ ಆಗ್ತೀರಾ ಎಂದು ಕೇಳಿದಾಗ, "ಇಲ್ಲ, ನಾವು ಹೀಗೆ ಚೆನ್ನಾಗಿದ್ದೇವೆ" ಎಂದು ಹೇಳಿತ್ತು. ಮಗು ಬಗ್ಗೆ ನೀಡಿದ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
08:23 PM (IST) Jun 17
ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ರಾಧಿಕಾ ಪಂಡಿತ್ ಅವರನ್ನು ಮನೆಗೆ ಕರೆದುಕೊಂಡು ಹೋದಾಗ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ.
06:58 PM (IST) Jun 17
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಮೂಕಿಯಾಗಿ ನಟಿಸ್ತಿರೋ ಪುಟಾಣಿ ಹಿತಾ ಉರ್ಫ್ ಬಾಲಕಿ ಹಿತಾ, ಇದೇ ಸೀರಿಯಲ್ನ ಟೈಟಲ್ ಸಾಂಗ್ ಎಷ್ಟು ಚೆಂದ ಹಾಡಿದ್ದಾಳೆ ನೋಡಿ.
06:46 PM (IST) Jun 17
ಜಗಪತಿಬಾಬು ಮತ್ತು ಸೌಂದರ್ಯ ಲವ್ ಮಾಡುತ್ತಿದ್ದರು, ಮದುವೆ ಆಗುತ್ತಿದ್ದರು ಅಂತ ಗಾಸಿಪ್ ಇತ್ತು ಅಲ್ವಾ? ಈ ಗಾಸಿಪ್ ಎಲ್ಲಿಂದ ಶುರುವಾಯ್ತು ಅಂತ ಸ್ವತಃ ಜಗಪತಿ ಅವರೇ ಹೇಳಿದ್ದಾರೆ.
06:10 PM (IST) Jun 17
ಸೋಶಿಯಲ್ ಮೀಡಿಯಾದಲ್ಲಿ ತನ್ನ ಜೀವನ ತುಂಬ ಚೆನ್ನಾಗಿದೆ, ಒಳ್ಳೆಯ ಸಂಪಾದನೆ, ಮೂವರು ಮಕ್ಕಳು, ಪ್ರೀತಿಸುವ ಗಂಡ ಇದ್ದಾನೆ ಅಂತ ಅಷ್ಮಿತಾ ಬಿಂಬಿಸಿಕೊಳ್ಳುತ್ತಿದ್ದರು. ಈಗ ಗಂಡ-ಹೆಂಡ್ತಿ ಮನಸ್ತಾಪ ಬೀದಿಗೆ ಬಂದಿದೆ.
04:24 PM (IST) Jun 17
ಯಾರೇ ನೀ ಮೋಹಿನಿ ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
03:23 PM (IST) Jun 17
02:42 PM (IST) Jun 17
02:23 PM (IST) Jun 17
ಜೂನ್ 16ರಿಂದ ತೆರೆ ಕಾಣಬೇಕಿದ್ದ ಕರ್ಣ ಸೀರಿಯಲ್ ಮುಂದೂಡಿಕೆಯಾಗಿದ್ದು, ಇದಕ್ಕೆ ಕಾರಣವೇನು? ಎದುರಾದ ಕೋರ್ಟ್ ಸಂಕಷ್ಟವೇನು? ನಟರಾದ ಕಿರಣ್ ರಾಜ್, ನಮ್ರತಾ ಗೌಡ ಹೇಳಿದ್ದೇನು?
01:18 PM (IST) Jun 17
ಸದಾ ದೇಹಪ್ರದರ್ಶನದಿಂದಲೇ ಫೇಮಸ್ ಆಗ್ತಿರೋ ನಟಿಯರ ಪೈಕಿ ಬಾಲಿವುಡ್ ನಟಿ ಖುಷಿ ಮುಖರ್ಜಿ ಕೂಡ ಒಬ್ಬರು. ಇದೀಗ ಹರಿದ ಜೀನ್ಸ್ ಪ್ಯಾಂಟ್ನಿಂದ ಟ್ರೋಲ್ ಆಗ್ತಿರೋ ನಟಿ ಆ ಬಗ್ಗೆ ಹೇಳಿದ್ದೇನು ನೋಡಿ...
12:56 PM (IST) Jun 17
ಯಾರ ಹಣೆಬರಹದಲ್ಲಿ ಅದೇನು ಇರುತ್ತದೆಯೋ ಆ ದೇವನೇ ಬಲ್ಲ ಎನ್ನುವುದಕ್ಕೆ ಖ್ಯಾತ ನಟ ಮಿಥುನ್ ಚಕ್ರವರ್ತಿಯವರ ಈ ದತ್ತು ಪುತ್ರಿಯೇ ಸಾಕ್ಷಿ. ಬೇಡ ಎಂದು ಬೀಸಾಕಿದ ಕಂದಮ್ಮ ಇಂದು ಹಾಲಿವುಡ್ನಲ್ಲಿ ಮಿಂಚುತ್ತಿದ್ದು, ಆಕೆಯ ಸ್ಟೋರಿ ಇಲ್ಲಿದೆ...
09:47 AM (IST) Jun 17
ಮೆಗಾಸ್ಟಾರ್ ಚಿರಂಜೀವಿ ತಮ್ಮ ಕೆರಿಯರ್‌ನಲ್ಲಿ ಒಂದು ಸಿನಿಮಾಗಾಗಿ ತುಂಬಾ ಕಷ್ಟಪಟ್ಟರು. ಪ್ರಾಣವನ್ನೇ ಪಣಕ್ಕಿಟ್ಟರು, ಆದರೆ ಅದು ಡಿಸಾಸ್ಟರ್ ಫಲಿತಾಂಶವನ್ನು ಕಂಡಿತು. ಆದರೆ ಥಿಯೇಟರ್‌ನಲ್ಲಿ ನೂರು ದಿನಗಳು ಓಡಿದ್ದು ವಿಶೇಷ.
09:34 AM (IST) Jun 17
ಆಮಿರ್ ಖಾನ್ ಅವರು 'ಪಿಕೆ' ಸಿನಿಮಾದಲ್ಲಿ ಧರ್ಮದ ಬಗ್ಗೆ ಬಂದ ಆರೋಪಗಳಿಗೆ ಮತ್ತು 'ಲವ್ ಜಿಹಾದ್' ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. 'ಪಿಕೆ' ಯಾವ ಧರ್ಮವನ್ನೂ ಅವಮಾನ ಮಾಡಿಲ್ಲ, ಪ್ರತಿಯೊಂದು ಅಂತರ್ಧರ್ಮೀಯ ವಿವಾಹವೂ 'ಲವ್ ಜಿಹಾದ್' ಅಲ್ಲʼ ಅಂತ ಹೇಳಿದ್ದಾರೆ.