Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

Published : Oct 14, 2018, 12:51 PM ISTUpdated : Oct 14, 2018, 02:58 PM IST
Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

ಸಾರಾಂಶ

ಭಾರೀ ಸದ್ದು ಮಾಡುತ್ತಿದೆ ಮೀ  ಟೂ ಅಭಿಯಾನ | ಬಾಲಿವುಡ್ ಆಯ್ತು, ರಾಜಕೀಯ ಆಯ್ತು ಈಗ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದೆ ಮೀ ಟೂ ಬಿಸಿ |  

ಬೆಂಗಳೂರು (ಅ. 14): ಮೀ ಟೂ ಅಭಿಯಾನ ದೊಡ್ಡ ಮಟ್ಟದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ದೊಡ್ಡ ದೊಡ್ಡವರ ಹೆಸರು ಕೇಳಿ ಬರುತ್ತಿದೆ. ತನುಶ್ರೀ ದತ್ತಾ ಶುರು ಮಾಡಿದ ಈ ಭಿಯಾನದಿಂದ ಸ್ಫೂರ್ತಿಗೊಂಡ ಅನೇಕ ಮಹಿಳೆಯರು ಇದಕ್ಕೆ ದನಿಗೂಡಿಸಿದ್ದಾರೆ. ಬಾಲಿವುಡ್, ರಾಜಕೀಯದಲ್ಲೂ ಇದು ಬಾರೀ ಸದ್ದು ಮಾಡಿದೆ. ಇದೀಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ. 

ಚೇತನ್‌ ಭಗತ್‌, ಸುಹೇಲ್‌ ಸೇಠ್‌ ‘ಮಾನ ಹರಾಜು’ ಹಾಕಿದ ಇರಾ ತ್ರಿವೇದಿ

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳೆಂದರೆ ರೊಮ್ಯಾನ್ಸ್ ಗೇನೂ ಕಮ್ಮಿ ಇರಲ್ಲ. ಅವರೂ ಕೂಡಾ ರೊಮ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ. ಅವರು ಸಿನಿಮಾ ಸೆಟ್ ಗಳಲ್ಲಿ ನಟಿಯರೊಂದಿಗೆ ಹೇಗಿರುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ನಟಿ ಖುಷ್ಬು ಸುಂದರ್ ಮಾಡಿರುವ ಟ್ವೀಟ್  ವೊಂದಕ್ಕೆ ಪ್ರತಿಕ್ರಯಿಸುವಾಗ ಟ್ವೀಟಿಗರೊಬ್ಬರು ಈ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಖುಷ್ಬು ಕೊಟ್ಟ ಉತ್ತರ ಬಹಳ ಮಜವಾಗಿದೆ. 

ನನ್ನ 40 ವರ್ಷಗಳ ಸಿನಿ ಜರ್ನಿಯಲ್ಲಿ ಇಂತದ್ದೊಂದು ಘಟನೆ ನಡೆಯಲೇ ಇಲ್ಲ ಎಂದು #MeToo ಗೆ ಪ್ರತಿಕ್ರಿಯಿಸಿದ್ದಾರೆ. ಆಗ ರವಿಚಂದ್ರನ್ ಜೊತೆಗಿನ ಅನುಭವ ಕೇಳಿದಾಗ ಖುಷ್ಬು ಪ್ರತಿಕ್ರಿಯಿಸಿದ್ದು ಹೀಗೆ; 

ರವಿಚಂದ್ರನ್ ಹೆಸರು ಹೇಳುತ್ತಿದ್ದಂತೆ ಗರಂ ಆದ ಖುಷ್ಬು, ನಿನಗೇನು ಅವರ ಬಗ್ಗೆ ಗೊತ್ತಾ?  ಪಬ್ಲಿಸಿಟಿಗಾಗಿ ಬಾಯಿಗೆ ಬಂದಂತೆ ಮಾತನಾಡಬೇಡ  ಎಂದು ಖಡಕ್ಕಾಗಿ ಹೇಳಿದರು. 

 

ನನ್ನ ತಾಯಿ ಇಂದು ಬದುಕಿದ್ದರೆ ಅದಕ್ಕೆ ರವಿಚಂದ್ರನ್ ಹಾಗೂ ತಂದೆಯೇ ಕಾರಣ ಎಂದು ಹೇಳಿದರು. ಅವರು ತುಂಬಾ ಒಳ್ಳೆಯವರು ಎಂದು ಶ್ಲಾಘಿಸಿದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!