ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ತಾರಾಗಣದಲ್ಲಿರುವ ಸೋನು ಸೂದ್ ಹಾಗೂ ಡ್ಯಾನಿಶ್ ಆಖ್ತರ್ ಉತ್ತರ ಭಾರತದ ನಟರು. ‘ಕುರುಕ್ಷೇತ್ರ’ಕ್ಕೆ ಈ ಇಬ್ಬರು ನಟರ ಆಯ್ಕೆ ನಿರ್ದೇಶಕರದ್ದಲ್ಲ. ಅವರನ್ನು ಹಾಕಿಕೊಳ್ಳಲು ಹೇಳಿದ್ದು ದರ್ಶನ್ ಹಾಗೂ ರಾಕ್‌ಲೈನ್ ವೆಂಕಟೇಶ್.
ದೈತ್ಯ ಪ್ರತಿಭೆ ಡ್ಯಾನಿಸ್ ಆಖ್ತರ್ ಕುರುಕ್ಷೇತ್ರದಲ್ಲಿ ಭೀಮ. 6.6 ಅಡಿ ಎತ್ತರ, 135 ಕೆಜಿ ತೂಕದ ದೈತ್ಯ ದೇಹ ಡ್ಯಾನಿಸ್, ಭೀಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಕಲಾವಿದ. ‘ಕುರುಕ್ಷೇತ್ರ’ದಲ್ಲಿ ಅವರೇ ಭೀಮನಾಗಿ ಕಾಣಿಸಿಕೊಳ್ಳುವುದಕ್ಕೆ ಮೂಲ ಕಾರಣ ದರ್ಶನ್.
ಫ್ಯಾಮಿಲಿ ಜೊತೆ 'ಕುರುಕ್ಷೇತ್ರ' ವೀಕ್ಷಿಸಿದ ದಾಸ!
‘ಚಕ್ರವರ್ತಿ ಸಿನಿಮಾ ಚಿತ್ರೀಕರಣಕ್ಕೆ ಹೈದರಾಬಾದ್‌ಗೆ ಹೋಗಿದ್ದೆವು. ಒಂದು ದಿನ ಚಿತ್ರೀಕರಣ ಮುಗಿಸಿ, ಸಂಜೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಡ್ಯಾನಿಸ್ ಕೂಡ ಅಲ್ಲಿದ್ದರು. ಸರಿ ಸುಮಾರು 300 ಕೆಜಿ ತೂಕದ ಭಾರ, ಅದರ ಮೇಲೆ ಇಬ್ಬರು ಹುಡುಗರನ್ನು ಹೊತ್ತುಕೊಂಡು ವರ್ಕೌಟ್ ಮಾಡುತ್ತಿದ್ದರು. ಇವರಾರು ಅಂತ ಅಚ್ಚರಿ ಎನಿಸಿತು. ಪರಿಚಯ ಮಾಡಿಕೊಂಡಿದ್ದೆ. ಅವತ್ತು ನೋಡಿದ್ದ ಕಲಾವಿದನ ಬಗ್ಗೆ ಮತ್ತೆ ಸಂಪರ್ಕ ಮಾಡಲು ಬಯಸಿದ್ದು ನಿರ್ದೇಶಕ ಭೀಮನ ಪಾತ್ರಕ್ಕೆ ಕಲಾವಿದರು ಬೇಕು ಎಂದಾಗ. ಡ್ಯಾನಿಸ್ ಅಂತ ಒಬ್ಬ ಕಲಾವಿದ ಇದ್ದಾರೆ. ಅವರು ಈ ಪಾತ್ರಕ್ಕೆ ಸೂಕ್ತ. ಅವರನ್ನು ಭೇಟಿ ಮಾಡಿ ಕೇಳಿ ಅಂತ ಹೇಳಿದ್ದೆ. ಆ ಮೂಲಕ ಡ್ಯಾನಿಸ್ ‘ಕುರುಕ್ಷೇತ್ರ’ಕ್ಕೆ ಬಂದರು’ ಅಂತ ವಿವರಿಸುತ್ತಾರೆ ದರ್ಶನ್.
ಕುರುಕ್ಷೇತ್ರ ಒಪ್ಪದಿದ್ದರೆ ನನ್ನಂಥ ಮುಠ್ಠಾಳ ಮತ್ತೊಬ್ಬ ಇರುತ್ತಿರಲಿಲ್ಲ!
‘ಕುರುಕ್ಷೇತ್ರ’ದಲ್ಲೀಗ ಅರ್ಜುನನಾಗಿ ಕಾಣಿಸಿಕೊಂಡಿರುವ ಸೋನುಸೂದ್ ತೆಲುಗಿನ ‘ಅರುಂಧತಿ ’ಚಿತ್ರದಿಂದ ಮನೆಮಾತಾದರು. ‘ವಿಷ್ಣುವರ್ಧನ’ ಚಿತ್ರದೊಂದಿಗೆ ಕನ್ನಡಕ್ಕೂ ಬಂದಿದ್ದರು. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನನ ಪಾತ್ರಕ್ಕೆ ಬಾಲಿವುಡ್ ನಟರಿದ್ದರೆ ಚೆನ್ನಾಗಿರುತ್ತೆ ಅಂತ ಮಾತುಕತೆ ನಡೆದಿತ್ತು. ಆಗ ಅವರಿಗೆ ಸೋನುಸೂದ್ ಕುರಿತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೋನು ಸೂದ್ ಹೆಸರು ಸೂಚಿಸುತ್ತಾರೆ’ಎನ್ನುತ್ತಾರೆ ನಾಗಣ್ಣ.
ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!