
ಮುಂಬೈ[ಆ. 06] ಬಾಲಿವುಡ್ ನಲ್ಲಿ ಒಂದು ಕಾಲಕ್ಕೆ ಬಿಚ್ಚಮ್ಮ ಎಂದೇ ಕರೆಸಿಕೊಂಡಿದ್ದ ರಾಖಿ ಸಾವಂತ್ ಮದುವೆಯಾಗಿದ್ದಾರೆ. ತಮ್ಮ ವಿಚಿತ್ರ ಮ್ಯಾನರಿಸಂಗೆ ರಾಖಿ ಹೆಸರುವಾಸಿ.
ತಾನು ಮದುವೆಯಾಗಿರುವ ವ್ಯಕ್ತಿಯ ಪರಿಚಯವನ್ನು ರಾಖಿ ಸೋಶಿಯಲ್ ಮೀಡಿಯಾದ ಮುಖೇನ ಮಾಡಿಕೊಟ್ಟಿದ್ದಾರೆ. ನಾನು ವಿವಾಹವಾಗಿರುವವರ ಹೆಸರು ರಿತೇಶ್. ಭಾರತ ಮೂಲದ ಅವರು ಈಗ ಇಂಗ್ಲೆಂಡ್ ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!
ನನ್ನ ಟಿವಿ ಶೋ ಕೆಲಸಗಳು ನಿರಂತರ. ಅದ್ಭುತ ಪತಿ ಸಿಕ್ಕಿರುವುದಕ್ಕೆ ಜೀಸಸ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಭು ಚಾವ್ಲಾ ಜೊತೆಗಿನ ಮೊದಲ ಸಂದರ್ಶನ ನೋಡಿದ್ದಾಗಿನಿಂದಲೂ ಆತ ನನ್ನ ಅಭಿಮಾನಿಯಾಗಿದ್ದು, ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದರು. ನಂತರ ಅವರೊಂದಿಗೆ ಮಾತನಾಡಿದ ನಂತರ ಸ್ನೇಹಿತರಾಗಿ ಈಗ ಮದುವೆಯಾಗಿದ್ದೇವೆ ಎಂದಿದ್ದಾರೆ.
ಮದುವೆ ಎಂದರೆ ಮೊದಲು ಭಯಗೊಂಡಿದ್ದೆ. ಆದರೆ ಈಗ ವಿವಾಹ ಬಂಧನಕ್ಕೆ ಒಳಗಾಗಿದ್ದೇನೆ ಎನ್ನುತ್ತ ಸಂಭ್ರಮದಿಂದ ಪೋಟೋಗಳನ್ನು ಶೇರ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.