ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್ ಗುಂಡೇಟಿಗೆ ಬಲಿ, ಕೋರ್ಟ್ ಆವರಣದಲ್ಲೇ ಅನ್ಸಾರಿ ಆಪ್ತನ ಹತ್ಯೆ!

By Suvarna NewsFirst Published Jun 7, 2023, 5:56 PM IST
Highlights

ಪಾತಕಿ, ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ಕೊಲೆ ಪ್ರಕರಣದ ಮತ್ತೊರ್ವ ಪ್ರಮುಖ ಆರೋಪಿ, ಅನ್ಸಾರಿ ಆಪ್ತನ ಮೇಲೆ ಗುಂಡಿನ ದಾಳಿ ನಡೆದಿದೆ. ಕೋರ್ಟ್ ಆವರಣದಲ್ಲೇ ಈ ಘಟನೆ ನಡೆದಿದ್ದು ಅನ್ಸಾರಿ ಆಪ್ತ ಹತ್ಯೆಯಾಗಿದ್ದಾನೆ.

ಲಖನೌ(ಜೂ.07): ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ , ಮಾಫಿಯಾ  ಹತ್ತಿಕ್ಕಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸತತ ದಾಳಿ ನಡೆಸುತ್ತಲೇ ಇದ್ದಾರೆ. ಇತ್ತ ಗ್ಯಾಂಗ್‌ಸ್ಟರ್‌ಗಳ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೊಂದು ಗುಂಪುಗಳು ಯತ್ನಿಸುತ್ತಲೇ ಇದೆ. ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಜೀವಾವಧಿ ಶಿಕ್ಷೆಗಗೆ ಗುರಿಯಾಗಿರುವ ಮಾಜಿ ಶಾಸಕ, ಪಾತಕಿ ಮುಖ್ತಾರ್ ಅನ್ಸಾರಿ ಆಪ್ತ, ಗ್ಯಾಂಗ್‌ಸ್ಟರ್ ಸಂಜೀವ್ ಜೀವಾ ಮೇಲೆ ಗುಂಡಿನ ದಾಳಿ ನಡೆದಿದೆ. ಕೋರ್ಟ್ ಆವರಣದಲ್ಲೇ ಸಂಜೀವ್ ಜೀವಾ ಮೇಲೆ ದಾಳಿಯಾಗಿದೆ. ಸತತ ಗಂಡಿನ ದಾಳಿಯಲ್ಲಿ ಸಂಜೀವ್ ಜೀವಾ ಸ್ಥಳದಲ್ಲೇ ಹತ್ಯೆಯಾಗಿದ್ದಾನೆ. ಇತ್ತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಶಾಕ ಬ್ರಹ್ಮದತ್ ದ್ವಿವೇದಿ ಕೊಲೆ ಪ್ರರಕರಣದಲ್ಲಿ ಸಜೀವ್ ಜೀವಾ ಹಾಗೂ ಮುಖ್ತಾರ್ ಅನ್ಸಾರಿ ಪ್ರಮುಖ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಲಖನೌ ಕೋರ್ಟ್ ತಲುಪಿದ್ದರು. ಈ ವೇಳೆ ಆರೋಪಿ ವಕೀಲರ ವೇಷದಲ್ಲಿ ಇದೇ ಕೋರ್ಟ್ ಆವರಣದಲ್ಲಿ ಹಾಜರಿದ್ದ. ಸಂಜೀವ್ ಜೀವಾ ಆಗಮಿಸುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡ ಸಂಜೀವ್ ಜೀವಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

32 ವರ್ಷದ ಹಿಂದಿನ ಕೊಲೆ ಕೇಸ್‌: ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

ಈ ದಾಳಿಯಲ್ಲಿ ಯುವತಿ ಹಾಗೂ ಪೊಲೀಸ್ ಪೇದೆಯೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಸಂಜೀವ್ ಜೀವಾ ವಿಚಾರಣೆಗೆಗಾಗಿ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ದಾಳಿ ನಡೆದಿದೆ. ಆರೋಪಿಯನ್ನು ವಿಜಯ್ ಯಾದವ್ ಎಂದು ಗುರುತಿಸಲಾಗಿದೆ.

 

| Uttar Pradesh: Gangster Sanjeev Jeeva shot outside the Lucknow Civil Court. Further details awaited

(Note: Abusive language) pic.twitter.com/rIWyxtLuC4

— ANI UP/Uttarakhand (@ANINewsUP)

 

ಇತ್ತೀಚೆಗೆ ಸಂಜೀವ್ ಜೀವಾ ಗುರು, ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 32 ವರ್ಷಗಳಷ್ಟುಹಳೆಯದಾದ ಅವ​ಧೇಶ್‌ ರಾಯ್‌ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಾರಾಣ​ಸಿ ಕೋರ್ಚ್‌, ಜೈಲಿನಲ್ಲಿರುವ ಪಾತ​ಕಿ ಕಂ ರಾಜ​ಕಾ​ರಣಿ ಮುಖ್ತಾರ್‌ ಅನ್ಸಾ​ರಿ​ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ 1 ಲಕ್ಷ ರು. ದಂಡವನ್ನೂ ವಿಧಿಸಿದೆ. ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಆರನೇ ಶಿಕ್ಷೆಯಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

 

ರಾಹುಲ್ ಗಾಂಧಿ ಬೆನ್ನಲ್ಲೇ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹ!

ಬಿಎ​ಸ್‌ಪಿ, ಸ್ವತಂತ್ರ ಹಾಗೂ ವಿವಿಧ ಪಕ್ಷ​ಗಳ ಶಾಸ​ಕ​ನಾಗಿ 5 ಬಾರಿ ಆಯ್ಕೆ​ಯಾ​ಗಿದ್ದ. ಈ ಪೈಕಿ 2 ಸಲ ಜೈಲ​ಲ್ಲಿದ್ದೇ ಶಾಸ​ಕ​ನಾ​ಗಿ​ದ್ದ. ಅನ್ಸಾರಿ 1991ರಲ್ಲಿ ವಾರಾ​ಣ​ಸಿಯ ಕಾಂಗ್ರೆಸ್‌ ಮುಖಂಡ ಅಜಯ್‌ ರಾಯ್‌ ಅವರ ಸೋದರ ಅವ​ಧೇಶ್‌ ರಾಯ್‌ ಅವ​ರನ್ನು ಗುಂಡಿಕ್ಕಿ ಕೊಂದ ಪ್ರಕ​ರ​ಣ​ದಲ್ಲಿ ಪ್ರಮುಖ ಆರೋ​ಪಿ​ಯಾ​ಗಿ​ದ್ದ. ಅಪರಾಧ ಎಸಗಿದಾಗ ಮುಖ್ತಾ​ರ್‌ ಅನ್ಸಾರಿ ಶಾಸಕನಾಗಿರಲಿಲ್ಲ.ತೀರ್ಪನ್ನು ಸ್ವಾಗತಿಸಿದ ಅಜಯ… ರಾಯ್‌, ‘ಕುಖ್ಯಾತ ಕ್ರಿಮಿನಲ್‌ ವಿರುದ್ಧದ ನಮ್ಮ 32 ವರ್ಷಗಳ ಹೋರಾಟಕ್ಕೆ ಇದು ಅಂತ್ಯವಾಗಿದೆ, ನಾನು, ನನ್ನ ಪೋಷಕರು, ಅವಧೇಶ್‌ ಅವರ ಮಗಳು ಮತ್ತು ಇಡೀ ಕುಟುಂಬ ತಾಳ್ಮೆಯಿಂದ ಇದ್ದೆವು. ಅದು ಈಗ ಫಲ ನೀಡಿ​¨’ ಎಂದ​ರು.
 

click me!