ಫ್ರಾಂಚೈಸಿ ಹೆಸ್ರಲ್ಲಿ ಮೋಸ, ತಲೆಮರೆಸಿಕೊಂಡಿದ್ದ ಇಡ್ಲಿ ಗುರು ಹೋಟೆಲ್ ಮಾಲೀಕ ಮುಂಬೈನಲ್ಲಿ ಅರೆಸ್ಟ್!

By Suvarna NewsFirst Published Feb 14, 2024, 3:19 PM IST
Highlights

ಫ್ರಾಂಚೈಸಿ ಹೆಸ್ರಲ್ಲಿ ಮೋಸ ಮಾಡಿರುವ ಆರೋಪದ ಹಿನ್ನೆಲೆ ಇಡ್ಲಿ ಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕಾಮಾಕ್ಷಿಪಾಳ್ಯ ಪೊಲೀಸರು ಮುಂಬೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. 

ಬೆಂಗಳೂರು (ಫೆ.14): ಫ್ರಾಂಚೈಸಿ ಹೆಸ್ರಲ್ಲಿ ಮೋಸ ಮಾಡಿರುವ ಆರೋಪದ ಹಿನ್ನೆಲೆ ಇಡ್ಲಿ ಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕಾಮಾಕ್ಷಿಪಾಳ್ಯ ಪೊಲೀಸರು ಮುಂಬೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ. 

ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಚೇತನ್ ಎಂಬುವರಿಗೆ ವಂಚಿಸಿದ್ದು, ಈ ಸಂಬಂಧ ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಮಾತ್ರವಲ್ಲ ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐ ಆರ್  ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದ‌ರು.

ಕಾಟೇರ ನಿರ್ಮಾಪಕ ರಾಕ್ ಲೈನ್‌ಗೆ ಬೆಳ್ಳಂಬೆಳಗ್ಗೆ ಶಾಕ್‌, 11 ಕೋಟಿ ತೆರಿಗೆ ಬಾಕಿ ಮಾಲ್‌, ಥೀಯೇಟರ್‌ ಸೀಲ್‌!

ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಚೇತನ್  ಅವರಿಂದ ಮೂರು ಲಕ್ಷ ರೂ  ಹಣ ಪಡೆದಿದ್ದರು. ಫುಡ್ ಕಾರ್ಟ್ ತಂದು ನಿಲ್ಲಿಸಿ ಸ್ವಲ್ಪ ದಿನಗಳ ಬಳಿಕ ವ್ಯಾಪಾರ ಆಗುತ್ತಿಲ್ಲ ಬೇರೆಡೆ ವ್ಯಾಪಾರ ಮಾಡೋಣ ಅಂತಾ ಶಿಫ್ಟ್ ಮಾಡಿದ್ರು. ನಂತರ ಕಮಿಷನ್ ನೀಡುವುದಾಗಿ ಹೇಳಿ. ಯಾವುದೇ ಕಮಿಷನ್ ನೀಡದೆ ವಂಚನೆ ಮಾಡಿದ್ದಾರೆ. ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ಮೋಸ ಮಾಡಿದ್ದಾರೆ. ಆರೋಪಿಗಳನ್ನ ಭೇಟಿಯಾಗಿ ವಿಚಾರಿಸಿದಾಗ ಜೀವ ಬೆದರಿಕೆ ಹಾಕಿದ್ದರು ಎಂದು ಚೇತನ್‌ ದೂರಿನಲ್ಲಿ ತಿಳಿಸಿದ್ದಾರೆ.

14 ವಯಸ್ಸಿಗೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ ಅನುಭವಿಸಿದ ಮುದ್ದಾದ ನಟಿಯ ಬಿಗ್‌ಬಾಸ್‌ ಸಂಭಾವನೆ 2.5 ಕೋಟಿ!

click me!