ಪ್ರಭಾಸ್ ಮೇಲೆ ಗೌರವಿದೆ, ದಯವಿಟ್ಟು ನನ್ನನ್ನು ಬಿಟ್ಬಿಡಿ; ವಿವೇಕ್ ಅಗ್ನಿಹೋತ್ರಿ ಮನವಿ

Published : Jul 28, 2023, 01:13 PM IST
ಪ್ರಭಾಸ್ ಮೇಲೆ ಗೌರವಿದೆ, ದಯವಿಟ್ಟು ನನ್ನನ್ನು ಬಿಟ್ಬಿಡಿ; ವಿವೇಕ್ ಅಗ್ನಿಹೋತ್ರಿ ಮನವಿ

ಸಾರಾಂಶ

ಟಾಲಿವುಡ್ ಸ್ಟಾರ್ ಪ್ರಭಾಸ್ ಮೇಲೆ ಗೌರವವಿದೆ, ದಯವಿಟ್ಟು ನನ್ನನ್ನು ಬಿಟ್ಬಿಡಿ ಎಂದು ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮನವಿ ಮಾಡಿದ್ದಾರೆ.  

ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ನಡುವಿನ ಶೀತಲ ಸಮರ ಮುಂದುವರೆದಿದೆ. ಪ್ರಭಾಸ್ ನಟನೆಯ ಸಲಾರ್ ಸಿನಿಮಾ ರಿಲೀಸ್ ದಿವನೇ ವಿವೇಕ್ ಅಗ್ನಿಹೋತ್ರಿ ಅವರ ವ್ಯಾಕ್ಸಿನ್ ವಾರ್ ಸಿನಿಮಾ ಬಿಡುಗಡೆಯಾಗುತ್ತಿದೆ ಎನ್ನುವ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ 'ತಾನು ಈಗಾಗಲೇ ಗೆದ್ದಿದ್ದೀನಿ' ಎನ್ನುವ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೈರಲ್ ಸುದ್ದಿ ಬಗ್ಗೆ ನಿರ್ದೇಶಕ ಅಗ್ನಿಹೋತ್ರಿ ಗರಂ ಆಗಿದ್ದು ಇಂಥ ಸುಳ್ಳು ಸುದ್ದಿ ಹಬ್ಬಿಸಬೇಡಿ, ತನಗೆ ಪ್ರಭಾಸ್ ಮೇಲೆ ಗೌರವವಿದೆ, ದಯವಿಟ್ಟು ಹೋಲಿಕೆ ಬೇಡ ಎಂದು ಹೇಳಿದ್ದಾರೆ. 

2022ರಲ್ಲಿ ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಕಾಶ್ಮೀರ್ ಫೈಲ್ಸ್ ರಿಲೀಸ್ ದಿವನೇ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿತ್ತು. ಪ್ರಭಾಸ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳ ಹೆಸರಿಲ್ಲದೆ ಹೋಯಿತು. ಆದರೆ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಜೊತೆಗೆ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಹಿನ್ನಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಈಗಾಗಲೇ ಗೆದ್ದಿದ್ದೀನಿ ಎಂದು ಹೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಹೇಳಿಕೆಯನ್ನು ಅಗ್ನಿಹೋತ್ರಿ ತಳ್ಳಿಹಾಕಿದ್ದಾರೆ. 

ನನ್ನ ಬಗ್ಗೆ ನಖಲಿ ಸುದ್ದಿಗಳನ್ನು ಯಾರು ಮಾಡುತ್ತಿದ್ದಾರೆ? ಮೆಗಾ ಮೆಗಾ ಸಿನಿಮಾಗಳನ್ನು ಮಾಡುತ್ತಿರುವ ಮೆಗಾ ಸ್ಟಾರ್ ಪ್ರಭಾಸ್ ಅವರ ಬಗ್ಗೆ ನನಗೆ ಗೌರವವಿದೆ. ನಾವು ಸ್ಟಾರ್ ಗಳಿಲ್ಲದೆ, ಸಣ್ಣ ಬಜೆಟ್ ಸಿನಿಮಾಗಳನ್ನು ಮಾಡುತ್ತೇವೆ. ನಮ್ಮ ನಡುವೆ ಯಾವುದೇ ಹೋಲಿಕೆ ಮಾಡಬೇಡಿ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ' ಎಂದು ಹೇಳಿದ್ದಾರೆ.  

ಪ್ರಭಾಸ್‌ ಜತೆಗಿದ್ದರೂ ಪ್ರಶಾಂತ್‌ ನೀಲ್‌ಗೆ ಕಾಡುತ್ತಿದೆಯಂತೆ ಭಯ: ಪ್ರಶಾಂತ್ ಹಿಂದೆ ಬಿದ್ದಿರುವ ಅಭಿಮಾನಿಗಳು ಯಾರು?

ಆದಿಪುರುಷ್ ಸಿನಿಮಾ ಟೀಕಿಸಿದ್ದ ಅಗ್ನಿಹೋತ್ರಿ 

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದೆ. ಅಷ್ಟೆಯಲ್ಲದೆ ಆದಿಪುರುಷ್ ಸಿನಿಮಾ ವಿರುದ್ಧ ಅನೇಕ ಟೀಕೆ ಎದುರಾಗಿತ್ತು. ಸಿನಿಮಾ ಬ್ಯಾನ್ ಮಾಡುವಂತೆ ಒತ್ತಡ ಕೂಡ ಇತ್ತು. ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದರು. ಸೀತೆಯಾಗಿ ಕೃತಿ ಸನೊನ್ ಮಿಂಚಿದ್ದರು. ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿವೇಕ್ ಆಗ್ನಿಹೋತ್ರಿ ಪರೋಕ್ಷವಾಗಿ ಕಿಡಿ ಕಾರಿದ್ದರು. ಪ್ರೇಕ್ಷಕರು ಎಲ್ಲರನ್ನೂ ದೇವರೆಂದು ಒಪ್ಪಿಕೊಳ್ಳುವ ಮೂರ್ಖರಲ್ಲ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

'ಆದಿಪುರುಷ್' ರಿಲೀಸ್ ಬೆನ್ನಲ್ಲೇ ದೇಶ ಬಿಟ್ಟಿದ್ದ ಪ್ರಭಾಸ್ ಭಾರತಕ್ಕೆ ವಾಪಾಸ್: ಮತ್ತೆ ಶುರು 'ಸಲಾರ್' ಕೆಲಸ

ವಿವೇಕ್ ಅಗ್ನಿಹೋತ್ರಿ ಸದ್ಯ ದಿ ವ್ಯಾಕ್ಸಿನ್ ವಾರ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ರೈಮಾ ಸೇನ್ ಮತ್ತು ಕಾಂತಾರ ನಟಿ ಸಪ್ತಮಿ ಗೌಡ ನಟಿಸಿದ್ದಾರೆ. ಪಲ್ಲವಿ ಜೋಶಿ ನಿರ್ಮಿಸಿರುವ ವ್ಯಾಕ್ಸಿನ್ ವಾರ್ 2023 ರ ದಸರಾದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ 11 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal
3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ