ಗೌರಿಯವರನ್ನು ಮದುವೆಯಾಗಲು ನಟ ಶಾರುಖ್ ಖಾನ್ ಹಿಂದೂ ಹೆಸರು ಇಟ್ಟುಕೊಂಡಿದ್ದರು. ಇದಕ್ಕೆ ಕಾರಣ ಈಗ ಬಹಿರಂಗಗೊಂಡಿದೆ.
ನಟ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪತ್ನಿ ಗೌರಿ ಖಾನ್ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗುತ್ತಾ ಬಂದಿವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಶಾರುಖ್ ಖಾನ್ ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. ಕೆಲ ತಿಂಗಳ ಹಿಂದೆ ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಅವರು ಬರೆದಿರುವ ಪುಸ್ತಕದ ಬಿಡುಗಡೆಯಾಗಿದೆ.
ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಅಂದಹಾಗೆ, ಆ ವೇಳೆ 'ರಾಜು ಬನ್ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್ ಖಾನ್‌ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.
ಪತ್ನಿಗೆ 5 ನಿಮಿಷಕ್ಕೊಮ್ಮೆ ಶಾರುಖ್ ಫೋನ್ಕಾಲ್: ಹೆಂಡ್ತಿ ಮೇಲೆ ಅಷ್ಟು ಡೌಟಾ, ಭಯನಾ?
ಇದೀಗ ಇವರಿಬ್ಬರ ಮದುವೆ ಕುರಿತು ಸಕತ್ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ, ಶಾರುಖ್ ಖಾನ್ ಅವರು, ಹಿಂದೂ ಯುವತಿ ಗೌರಿ ಅವರನ್ನು ಮದುವೆಯಾಗಲು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು ಎನ್ನುವ ವಿಷಯ! ಹೌದು. ಶಾರುಖ್ ಮದುವೆಗಾಗಿ ಜಿತೇಂದ್ರ ಕುಮಾರ್ ತುಲ್ಲಿ (Jitendrakumar Tulli) ಎಂದು ಹೆಸರು ಬದಲಿಸಿಕೊಂಡಿದ್ದರಂತೆ. ಮುಷ್ತಾಕ್ ಶೇಖ್ ಅವರು ಬರೆದಿರುವ ಪುಸ್ತಕದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಹಿಂದೂ ಯುವತಿಯನ್ನು ಆರ್ಯ ಸಮಾಜದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಲು ಶಾರುಖ್ ಹೆಸರು ಬದಲಿಸಿಕೊಂಡಿದ್ದರಂತೆ. ಅಷ್ಟಕ್ಕೂ ಅವರು ಈ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಕಾರಣ, ಅವರ ಅಜ್ಜಿಯೆಂದು ಪುಸ್ತಕದಲ್ಲಿ ಬರೆಯಲಾಗಿದೆ. ಇಬ್ಬರು ಮಹಾನ್ ಹಿರಿಯ ನಟರ ಹೆಸರು ಇಟ್ಟುಕೊಳ್ಳುವಂತೆ ತಮ್ಮ ಅಜ್ಜಿ ಹೇಳಿರುವುದಾಗಿ ಶಾರುಖ್ ಹೇಳಿದ್ದಾರೆ. ನಟರಾದ ಜೀತೇಂದ್ರ ಹಾಗೂ ರಾಜೇಂದ್ರ ಕುಮಾರ್ (ಇವರ ಪೂರ್ತಿ ಹೆಸರು ರಾಜೇಂದ್ರ ಕುಮಾರ್ ತುಲ್ಲಿ) ಅವರ ಹೆಸರನ್ನು ಸೇರಿಸಿಕೊಂಡು ತಮ್ಮ ಹೆಸರನ್ನು ಇಟ್ಟುಕೊಂಡಿದ್ದರಂತೆ! ಅಜ್ಜಿ ಯಾವಾಗಲೂ ನೀನು ನೋಡೋಕೆ ಜಿತೇಂದ್ರ ರೀತಿಯೇ ಕಾಣುತ್ತಿ ಎನ್ನುತ್ತಿದ್ದರು. ಅದೇ ಕಾರಣಕ್ಕೆ ಆ ಹೆಸರನ್ನು ಆರಿಸಿಕೊಂಡೆ ಎಂದು ನಟ ಹಿಂದೊಮ್ಮೆ ಹೇಳಿದ್ದಾರೆ.
ಅಂದಹಾಗೆ ಸದ್ಯ, ಗೌರಿ ಅವರು, ಇಂಟೀರಿಯರ್ ಡಿಸೈನಿಂಗ್ ಹೊರತಾಗಿಯೂ ಗೌರಿ ಖಾನ್ 1999ರಲ್ಲಿ ಸಿನಿಮಾ ನಿರ್ಮಾಣಕ್ಕಿಳಿದರು. ಗೌರಿ (Gowri Khan) ಪೂರ್ಣಪ್ರಮಾಣದಲ್ಲಿ ನಿರ್ಮಾಣ ಮಾಡಿದ ಮೊದಲ ಸಿನಿಮಾ 'ಮೈ ಹೂಂ ನಾ'. ಆ ಸಿನಿಮಾ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಆನಂತರ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ (Banner) ಮೂಲಕ 'ಪಹೇಲಿ' , 'ಓಂ ಶಾಂತಿ ಓಂ', 'ಮೈ ನೇಮ್ ಈಸ್ ಖಾನ್', 'ರಾ ಓನ್', 'ಚೆನ್ನೈ ಎಕ್ಸ್‌ಪ್ರೆಸ್', 'ಹ್ಯಾಪಿ ನ್ಯೂ ಇಯರ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಗೌರಿ ನಿರ್ಮಿಸಿದ್ದಾರೆ.
JAWAN: 'ಜಿಂದಾ ಬಂದಾ' ಹಾಡಲ್ಲಿ ಸಾವಿರಾರು ಲಲನೆಯರು- ಖರ್ಚು 15 ಕೋಟಿ ರೂ!