Dhanush Birthday: ಧನುಷ್ ಬರ್ತಡೇಗೆ 'ಕ್ಯಾಪ್ಟನ್ ಮಿಲ್ಲರ್' ಟೀಸರ್ ರಿಲೀಸ್: ಶಿವಣ್ಣನ ನೋಡಿ ಫ್ಯಾನ್ಸ್ ಫುಲ್ ಖುಷ್

By Shruthi Krishna  |  First Published Jul 28, 2023, 12:14 PM IST

ತಮಿಳು ಸ್ಟಾರ್ ಧನುಷ್ ನಟನೆಯ ಬಹುನಿರೀಕ್ಷೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಟೀಸರ್ ಆಗಿದೆ. ಧನುಷ್ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ರಿಲೀಸ್  ಮಾಡಲಾಗಿದೆ. ಶಿವಣ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 


ಸೌತ್ ಸ್ಟಾರ್ ಧನುಷ್ ಅವರಿಗೆ ಇಂದು (ಜುಲೈ 28) ಹುಟ್ಟುಹಬ್ಬದ ಸಂಭ್ರಮ. 40ನೇ ವರ್ಷದ ಸಂಭ್ರಮದಲ್ಲಿರುವ ಧನುಷ್ ಅವರಿಗೆ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಅದ್ಭುತ ಸಿನಿಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ನಟ ಧನುಷ್. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಧನುಷ್ ಸದ್ಯ ಕ್ಯಾಪ್ಟನ್ ಮಿಲ್ಲರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇಂದು ಹುಟ್ಟುಹ್ಬಬದ ಪ್ರಯುಕ್ತ ಧನುಷ್ ನಟನೆಯ ಬಹುನಿರೀಕ್ಷೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಿಂದ ಟೀಸರ್ ರಿಲೀಸ್ ಮಾಡಲಾಗಿದೆ. 

Tap to resize

Latest Videos

ಸದ್ಯ ರಿಲೀಸ್ ಆಗಿರುವ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದೆ. ಸ್ವಾತಂತ್ರ ಪೂರ್ವದ ಕಥೆ ಇದಾಗಿದ್ದು ಧನುಷ್ ಲುಕ್‌ ಕ್ರೇಜಿಯಾಗಿದೆ. ವಿಶೇಷ ಎಂದರೆ ಕ್ಯಾಪ್ಟನ್ ಮಿಲ್ಲರ್ ಕನ್ನಡಿಗರಿಗೂ ತುಂಬನೆ ವಿಶೇಷವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ನಟ ಧನುಷ್ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಶಿವಣ್ಣ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದು ಧನುಷ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಆಕ್ಷನ್ ದೃಶ್ಯಗಳು ವೈರಲ್ ಆಗಿದೆ. ಶಿವಣ್ಣ ಮತ್ತು ಧನುಷ್ ಇಬ್ಬರೂ ಹೈ ವೋಲ್ಟೇಟ್ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ.

ಧನುಷ್ ಇನ್ನು ರೊಮ್ಯಾಂಟಿಕ್​ ಸಿನಿಮಾ ಮಾಡೋಲ್ವಂತೆ, ಕಾರಣ ಕೇಳಿ ಬೇಸರಗೊಂಡ ಫ್ಯಾನ್ಸ್

ಕ್ಯಾಪ್ಟನ್ ಮಿಲ್ಲರ್ ಸಿನಿಮಾಗೆ ಅರುಣ್ ಮಾದೇಶ್ವರನ್ ಆಕ್ಷನ್ ಕಟ್ ಹೇಳಿದ್ದಾರೆ.  1980 ರ ದಶಕದ ಕಥೆ ಇದಾಗಿದೆ. ಈ ಸಿನಿಮಾದಲ್ಲಿ ಧನುಷ್ ಮತ್ತು ಶಿವಣ್ಣ ಜೊತೆ ಪ್ರಿಯಾಂಕಾ ಮೋಹನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುತ್ತಿದೆ. ಡಿಸೆಂಬರ್ 15ಕ್ಕೆ ರಿಲೀಸ್ ಆಗುತ್ತಿದೆ.

ರೈಲ್ವೆ ಮಾಸ್ಟರ್ ಪಾತ್ರದಲ್ಲಿ ಶಿವಣ್ಣ: ಯಾವ ಸಿನಿಮಾದ ಲುಕ್ ಇದು?
   
ಇನ್ನು ನಟ ಶಿವಣ್ಣ, ಧನುಷ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂಚಿತವಾಗಿಯೇ ಧನುಷ್‌ಗೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ಶಿವಣ್ಣ ಕ್ಯಾಪ್ಟನ್ ಮಿಲ್ಲರ್ ಜೊತೆಗೆ ತಮಿಳಿನ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲೂ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಎರಡು  ತಮಿಳು ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.  

click me!