ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

Suvarna News   | Asianet News
Published : Aug 05, 2020, 07:45 PM IST
ಆನ್‌ಸ್ಕ್ರೀನ್ ಈ ಸೂಪರ್ ಜೋಡಿ ನಿಜ ಜೀವನದಲ್ಲಿ ಒಂದಾಗಲೇ ಇಲ್ಲ!

ಸಾರಾಂಶ

ಕೆಲವು ರೊಮ್ಯಾಂಟಿಕ್‌ ಜೋಡಿಗಳನ್ನು ಸ್ಕ್ರೀನ್‌ ಮೇಲೆ ನೋಡಿದಾಗಲೆಲ್ಲ, ಛೆ, ಇವರು ನಿಜಜೀವನದಲ್ಲೂ ಜೋಡಿಗಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಲ್ಲಾ ಅಂತ ಅನಿಸುತ್ತೆ. ಆದರೆ ಯಶ್- ರಾಧಿಕಾ ಥರ ಎಲ್ಲೋ ಕೆಲವು ಮಾತ್ರ ಆಗ್ತವೆ.  

ರೊಮ್ಯಾಂಟಿಕ್‌ ಮೂವಿಗಳು ಎಲ್ರಿಗೂ ಇಷ್ಟ. ಅಲ್ಲಿ ಬರೋ ಜೋಡಿಗಳು ಕೂಡ. ಅದರಲ್ಲೂ ನಾವು ದಕ್ಷಿಣ ಭಾರತೀಯರು, ತೆರೆ ಮೇಲೆ ಬರುವ ರೊಮ್ಯಾಂಟಿಕ್‌ ಜೋಡಿಗಳು ನಿಜ ಜೀವನದಲ್ಲೂ ಒಂದಾಗಬಹುದು ಎಂಬ ನಿರೀಕ್ಷೆಯಲ್ಲೇ ಜೀವನ ಕಳೆದುಬಿಡ್ತೀವಿ. ಸಿನಿಮಾದಲ್ಲಿ ಅವರು ಎಷ್ಟೋ ಕಷ್ಟ ಪಟ್ಟು, ಕೊನೆಗೆ ಒಂದಾಗುತ್ತಾರೆ. ಆಮೇಲೆ ಅವರು ಸುಖವಾಗಿದ್ದರಾ ಎಂಬುದಕ್ಕೆ ಸಾಕ್ಷಿ ನಿಜಜೀವನದಲ್ಲಿ ಸಿಗುವುದೇ ಇಲ್ಲ. 

ಉದಾಹರಣೆಗೆ ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ತುಂಬಾ ಕ್ಯೂಟ್ ಜೋಡಿ ಆಗಿದ್ದರು. ಇಬ್ಬರೂ ರಿಯಲ್‌ ಲೈಫ್‌ನಲ್ಲೂ ಒಂದಾಗುತ್ತಾರೆ, ಮದುವೆಯಾಗುತ್ತಾರೆ  ಎಂಬ ನಿರೀಕ್ಷೆ ಇತ್ತು. ಆದರೆ ಹಾಗಾಗಲಿಲ್ಲ. ರಶ್ಮಿಕಾ ತಮಿಳು- ತೆಲುಗಿಗೆ ಹೋದರು. ರಕ್ಷಿತ್‌ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾದರು. ರಶ್ಮಿಕಾ ಕನ್ನಡಕ್ಕೆ ಮರಳಲೇ ಇಲ್ಲ. 


ಹಾಗೇ ಸದ್ದು ಮಾಡಿದ್ದ ಮಲಯಾಳ ಫಿಲಂ ಬೆಂಗಳೂರ್‌ ಡೇಸ್‌ ನೀವೂ ನೋಡಿರಬಹುದು. ಅದರಲ್ಲಿ ದುಲ್ಖರ್‌ ಸಲ್ಮಾನ್‌ ಅರ್ಜುನ್ ಆಗಿ ಹಾಗೂ ಆರ್‌ಜೆ ಸಾರಾ ಆಗಿ ಪಾರ್ವತಿ ನಟಿಸಿದ್ದರು. ಇವರ ಮುದ್ದಾದ ಲವ್‌ ಸ್ಟೋರಿ ಎಲ್ಲರ ಮನಸ್ಸು ಸೂರೆ ಮಾಡಿತ್ತು. ಸಿನಿಮಾದಲ್ಲಿ ಕೊನೆಗೂ ಅರ್ಜುನ್‌ನ ಪ್ರೀತಿಗೆ ಸಾರಾ ಒಪ್ಪಿಕೊಳ್ಳುತ್ತಾಳೆ. ನಿಜಜೀವನದಲ್ಲೂ ಇವರನ್ನು ಜೋಡಿಯಾಗಿ ನೋಡಬಯಸಿದವರು ಸಾಕಷ್ಟು ಮಂದಿ.

ಓಕೆ- ಓ ಕಾದಲ್‌ ಕಣ್ಮಣಿ ತಮಿಳು ಸಿನಿಮಾ ಹಿಂದಿಯಲ್ಲೂ ರಿಮೇಕ್ ಆಯ್ತು. ಇದರ ಆದಿ ಮತ್ತು ತಾರಾ ಜೋಡಿ ಆಧುನಿಕ ಕಾಲದ ಲಿವ್ ಇನ್‌ ರಿಲೇಶನ್‌ಶಿಪ್‌ನ ಪ್ರತೀಕವೇ ಆಗಿಹೋದರು. ಆದರೂ, ಕೊನೆಗೂ ಅವರಿಬ್ಬರೂ ಮದುವೆಯ ಬಂಧನದಲ್ಲಿ ಒಂದಾದರು. ಅದಕ್ಕಾಗಿ ತಮ್ಮ ಕೆರಿಯರ್‌ಗಳನ್ನು ಸೀಮಿತಗೊಳಿಸಿಕೊಳ್ಳಲು ಮುಂದಾದರು. ದುಲ್ಖರ್ ಸಲ್ಮಾನ್‌ ಮತ್ತು ನಿತ್ಯಾ ಮೆನನ್, ಆದಿ ಮತ್ತು ತಾರಾ ಪಾತ್ರಗಳಿಗೆ ಜೀವ ತುಂಬಿದರು. ಆದರೆ ಇವರೂ ನಿಜಜೀವನದಲ್ಲಿ ಒಂದಾಗಲು ಸಾಧ್ಯವಿದ್ದ ಜೋಡಿಯಾಗಲಿಲ್ಲ. 

ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್‌ನ ಈ ಜೋಡಿ 

ತೆಲುಗಿನಲ್ಲಿ ಗೀತ ಗೋವಿಂದ ಎಂಬ ಚಿತ್ರ ಬಂತು. ಅದರಲ್ಲಿ ನಮ್ಮ ಕನ್ನಡದಿಂದ ಹೋದ ರಶ್ಮಿಕಾ ಮಂದಣ್ಣ ನಾಯಕಿಯಾಗಿ, ವಿಜಯ್‌ ದೇವರಕೊಂಡ ನಾಯಕನಾಗಿ ನಟಿಸಿದ್ದರು. ಇದರಲ್ಲಿ ವಿಜಯ್‌ ಪಾತ್ರ ಸ್ವಲ್ಪ ರೌಡಿ ಸ್ವಭಾವದ್ದು ಹಾಗೂ ರಪ್ ಆಂಡ್‌ ಟಫ್ ಆಗಿದ್ದರೂ, ಕೊನೆಗೆ ಅದು ರಶ್ಮಿಕಾಗೆ ಮನಸೋಲುತ್ತದೆ. ಈತನಿಗೆ ಮನಸೋಲಬಾರದು ಎಂದುಕೊಂಡಿದ್ದ ರಶ್ಮಿಕಾ ಕೂಡ ಚೇಂಜಾಗುತ್ತಾಳೆ. ಇದೂ ಕೂಡ ಹ್ಯಾಪಿ ಎಂಡಿಂಗ್ ಇರುವ ಸಿನಿಮಾ. 

ಹಾಗೆ ನೋಡುತ್ತಾ ಹೋದರೆ ಕನ್ನಡದಲ್ಲೂ ಕೆಲವು ಜೋಡಿಗಳನ್ನು ಗಮನಿಸಬಹುದು. ರಚಿತಾ ರಾಮ್ ಮತ್ತು ನಿಖಿಲ್ ಹೆಸರು ಜೊತೆಯಾಗಿ ಒಂದಷ್ಟು ಕಾಲ ಓಡಾಡಿಕೊಂಡಿತ್ತು. ಸೀತಾರಾಮ ಕಲ್ಯಾಣದಲ್ಲಿ ಇವರಿಬ್ಬರೂ ಜೊತೆಯಾಗಿ ನಟಿಸಿದ್ದರು. ಜೋಡಿ ಚೆನ್ನಾಗಿದೆ ಅಂತಲೂ ಅನ್ನಿಸಿಕೊಂಡಿತ್ತು. ಆದರೆ ಅಂದುಕೊಂಡಿದ್ದೆಲ್ಲ ನಿಜ ಆಗುವುದಿಲ್ಲವಲ್ಲ! 

ರಶ್ಮಿಕಾ ಅಷ್ಟು ಚಂದ ಕಾಣೋದಕ್ಕೆ ಇದೇ ಕಾರಣ 

ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌ ಮತ್ತು ರೇಖಾ ನಿಜಕ್ಕೂ ಒಳ್ಳೆಯ ಜೋಡಿಯಾಗಬಲ್ಲ ಸಿನಿ ಜೋಡಿಯಾಗಿತ್ತು. ಆದರೆ ಜೀವನ ತೆರೆಯ ಮೇಲಿನ ಹಾಗಿರುವುದಿಲ್ಲವಲ್ಲ. ಸಿನಿಮಾದಲ್ಲಿ ಸಕ್ಸಸ್‌ ಆದ ಪ್ರತಿಯೊಂದು ಜೋಡಿಯೂ ಪ್ರೇಕ್ಷಕನ ಮನಸ್ಸಿನಲ್ಲಿ ಜೋಡಿಯಾಗಿ ಸದಾ ಇರುತ್ತದೆ. ಅದು ನಿಜಜೀವನಕ್ಕೆ ಇಳಿದರೆ ಇಲ್ಲದ ತರಲೆ ತಾಪತ್ರಯಗಳೆಲ್ಲ ಶುರು ಆಗುತ್ತವೆ. ಶಾರುಖ್‌ ಖಾನ್‌- ಕಾಜೋಲ್‌ ಜೋಡಿ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೇದಲ್ಲಿ ಇದ್ದರೆ ಮಾತ್ರವೇ ಚಂದ. ನಿಜಜೀವನದಲ್ಲಿ ಅಲ್ಲ.

40ರ ಹತ್ರ ತಲುಪಿದ್ರೂ ಮದ್ವೆ ಬಗ್ಗೆ ತಲೆಕೆಡಿಸಿಕೊಳ್ಳದ ಕೂಲ್ ನಟಿಯರಿವರು..! ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!