
ಸಿನಿಮಾ ಹಿಟ್ ಆಗ್ಲಿ ಫ್ಲಾಪ್ ಆಗ್ಲೀ ನಟ, ನಟಿಯರಿಂಗತೂ ಹೇಳಿದ ಸಂಭಾವನೆ ಕೊಡಲೇ ಬೇಕು. ಇದರಲ್ಲಿ ಮಾತ್ರ ಯಾವುದೇ ತಕರಾರಿಲ್ಲ. ಆದರೆ ನಟಿ ಸಾಯಿ ಪಲ್ಲವಿ ಡಿಫರೆಂಟ್. ಚೆನ್ನಾಗಿ ನಟಿಸಲಿಲ್ಲ ಎಂದು ಸಂಭಾನೆ ಮರಳಿಸೋ ಮಾತಾಡ್ತಿದ್ದಾರೆ ಪ್ರೇಮಂ ಚೆಲುವೆ
ಸಾಯಿ ಪಲ್ಲವಿ ಸರಳ ನಟಿ. ಅನುಕಂಪ ತೋರಿಸುವ ಸೆಲೆಬ್ರಟಿ. ಸಿನಿಮಾ, ಜೀವನ, ಇಂಟರ್‌ವ್ಯೂ ಎಲ್ಲ ಕಡೆಯೂ ಆಕೆ ಸಹಜವಾಗಿಯೇ ಇರುತ್ತಾರೆ. ಇದೀಗ ಪಡಿ ಪಡಿ ಲೆಚೆ ಮನಸು ಸಿನಿಮಾದಲ್ಲಿ ಚೆನ್ನಾಗಿ ನಟಿಸಿಲ್ಲ ಎಂದು ಸ್ವತಃ ನಟಿಯೇ ಸಂಭಾವನೆಯನ್ನು ನಿರ್ಮಾಪಕರಿಗೆ ಕೊಡೋಕೆ ನಿರ್ಧರಿಸಿದ್ದಾರೆ.
ಸಾಯಿ ಪಲ್ಲವಿ ದಿನವೂ ನಗುತ್ತಾ ಎದ್ದೆಳಲು ಕಾರಣವೇ ಇದಂತೆ!
ಆದರೆ ನಟಿ ಸಂಭಾವನೆ ಹಿಂತಿರುಗಿಸಲು ನಿರ್ಧರಿಸಿದರೂ, ನಿರ್ಮಾಪಕರೂ ಮಾತ್ರ ಸಂಭಾವಣೆ ಮರಳಿ ಪಡೆಯಲು ನಿರಾಕರಿಸಿದ್ದಾರೆ. ಸಂಭಾವನೆ ಮರಳಿಸಲು ಬಂದ ನಟಿಯಿಂದ ಸಂಭಾನೆ ಮರಳಿ ಪಡೆಯಲು ನಿರಾಕರಿಸಿದ ನಿರ್ಮಾಪಕರು ಇದನ್ನು ಮುಂದಿನ ಸಿನಿಮಾದ ಅಡ್ವಾನ್ಸ್ ಅನ್ಕೊಳಿ, ಮರಳಿ ಕೊಡ್ಬೇಡಿ ಅಂತ ಹೇಳಿದ್ದಾರೆ.
ಸಾಯಿ ಪಲ್ಲವಿ ಅವರ ತಾಯಿ ಮಧ್ಯೆ ಮಾತನಾಡಿ ಕೊನೆಗೂ ಎಲ್ಲವೂ ಮಾತು ಕತೆಯಲ್ಲಿ ಮುಗಿದಿದೆ. ಸಂಭಾವನೆ ಮರಳಿಸಿದ ನಟಿ, ಸಿನಿಮಾಗೆ ಬಂಡವಾಳ ಹಾಕಿದ ಹಣ ನಿಮಗೆ ಮರಳಿ ಸಿಕ್ಕಿದ ಮೇಲೆ ನನಗೆ ಸಂಭಾವನೆ ಕೊಡಿ, ಇಲ್ಲದಿದ್ದರೂ ಪರವಾಗಿಲ್ಲ ಎಂದಿದ್ದಾರೆ.
ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!
ನಿರ್ಮಾಪಕರ ಮುಂದಿನ ಸಿನಿಮಾ ರಾಣಾ ದಾಗುಬಾಟಿ ಮಾಡಲಿದ್ದು, ಸಾಯಿ ಪಲ್ಲವಿ ಹಾಗೂ ರಾಣಾ ವಿರಾಟ ಪರ್ವ ಸಿನಿಮಾದಲ್ಲಿ ತೆರೆ ಹಂಚಿಕೊಳ್ಲಲಿದ್ದಾರೆ. ನಿರ್ಮಾಪಕ ಸುಧಾಕರ ಚೆರುಕುರಿ ಅವರು ಸಿನಿಮಾ ನಿರ್ಮಿಸಲಿದ್ದಾರೆ. ಸಿನಿಮಾದಲ್ಲಿ ಪ್ರಿಯಾಮಣಿ ಹಾಗೂ ನಂದಿತಾ ದಾಸ್ ಅವರೂ ಕಾಣಿಸಿಕೊಳ್ಳಲಿದ್ದಾರೆ. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್ ಆರಂಭವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.