ಹಾರರ್ ಸಿನಿಮಾ ದಿ ಕಂಜ್ಯೂರಿಂಗ್‌ಗೆ ಸ್ಫೂರ್ತಿಯಾಗಿದ್ದ ಮನೆ 11 ಕೋಟಿ ರೂ.ಗೆ ಸೇಲ್

Published : May 29, 2022, 10:07 AM IST
ಹಾರರ್ ಸಿನಿಮಾ ದಿ ಕಂಜ್ಯೂರಿಂಗ್‌ಗೆ ಸ್ಫೂರ್ತಿಯಾಗಿದ್ದ ಮನೆ 11 ಕೋಟಿ ರೂ.ಗೆ ಸೇಲ್

ಸಾರಾಂಶ

ದಾಖಲೆಯೆ ಬೆಲೆಗೆ ಮಾರಾಟವಾದ 'ಕಂಜ್ಯೂರಿಂಗ್ ಹೌಸ್‌' ಪೈಶಾಚಿಕ ವಿಲಕ್ಷಣ ಘಟನೆಗಳಿಗೆ ಸಾಕ್ಷಿಯಾಗಿದ್ದ ಮನೆ ಇಂಗ್ಲೀಷ್‌ ಹಾರರ್‌ ಸಿನಿಮಾ  ದಿ ಕಂಜ್ಯೂರಿಂಗ್‌ಗೆ ಸ್ಫೂರ್ತಿಯಾಗಿದ್ದ ಮನೆ

ನ್ಯೂಯಾರ್ಕ್‌: ದಿ ಕಂಜ್ಯೂರಿಂಗ್‌ ಇಂಗ್ಲೀಷ್ ಹಾರರ್ ಸಿನಿಮಾವನ್ನು ನೀವೆಲ್ಲರೂ ನೋಡಿರಬಹುದು ಈಗ ಆ ಸಿನಿಮಾ ಕತೆಗೆ ಸ್ಪೂರ್ತಿಯಾದ ಮನೆ ಕಂಜ್ಯೂರಿಂಗ್  ಹೌಸ್‌ನ್ನು 11 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ. 2013 ರ ಭೂತಪ್ರೇತಗಳ ಹಾರರ್‌ ಕತೆ ಹೊಂದಿರುವ ಚಲನಚಿತ್ರ 'ದಿ ಕಂಜ್ಯೂರಿಂಗ್'ಗೆ ಸ್ಫೂರ್ತಿ ನೀಡಿದ ಅಮೆರಿಕಾದ ರೋಡ್ ಐಲ್ಯಾಂಡ್‌ನಲ್ಲಿರುವ ಫಾರ್ಮ್‌ಹೌಸ್ 11 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

ರೋಡ್ ಐಲ್ಯಾಂಡ್‌ನಲ್ಲಿರುವ ಈ ಫಾರ್ಮ್‌ಹೌಸ್ ಅನ್ನು ಬೋಸ್ಟನ್ ಡೆವಲಪರ್‌ಗೆ $1.525 ಮಿಲಿಯನ್ (ಅಂದಾಜು 11 ಕೋಟಿ ರೂ.) ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಬರ್ರಿಲ್‌ವಿಲ್ಲೆಯಲ್ಲಿರುವ (Burrillville) 18ನೇ ಶತಮಾನದ ಮನೆಯನ್ನು ಬೋಸ್ಟನ್ ಡೆವಲಪರ್‌ಗೆ (Boston developer) $1.525 ಮಿಲಿಯನ್‌ ಡಾಲರ್‌ಗೆ ಮಾರಾಟ ಮಾಡಲಾಗಿದೆ. ಇದು ಪ್ರಸ್ತುತ ಆ ಜಾಗಕ್ಕೆ ಇರುವ ಬೆಲೆಗಿಂತ  $1.2 ಮಿಲಿಯನ್ ಅಧಿಕ ಬೆಲೆಗೆ ಮಾರಾಟವಾಗಿದೆ. 


 ಭೂತಪ್ರೇತಗಳಿವೆ ಎಂಬ ನಂಬಿಕೆಯ ಕಾರಣಕ್ಕೆ ಈ ಆಸ್ತಿಯ ಬಗ್ಗೆ ಜನರಲ್ಲಿ ಒಂದು ರೀತಿಯ ಭಯ ನಿರ್ಮಾಣವಾಗಿದೆ. ಆದರೆ ಖರೀದಿದಾರರು ಮಾತ್ರ ತಾನೇನು ಹೆದರುವುದಿಲ್ಲ ಮತ್ತು ತನ್ನ ಸ್ವಂತ ನಂಬಿಕೆಗಳ ಕಾರಣದಿಂದ ಅದನ್ನು ಖರೀದಿಸಿದ್ದಾನೆ ಎಂದು ಹೇಳಿದ್ದಾರೆ. ಈ ಖರೀದಿ ನನ್ನ ವೈಯಕ್ತಿಕ ಆಸ್ತಿಯಾಗಿದೆ. ಇದು ರಿಯಲ್ ಎಸ್ಟೇಟ್ ಅಭಿವೃದ್ಧಿ ಅಲ್ಲ. ಇದು ನನ್ನ ಸ್ವಂತ ನಂಬಿಕೆಗಳ ಸುತ್ತಲೂ ಇದೆ. ಎಂದು ವಂಡರ್‌ಗ್ರೂಪ್ ಎಲ್‌ಎಲ್‌ಸಿಯ (WonderGroup LLC) ಮಾಲೀಕರೂ ಆಗಿರುವ ಖರೀದಿದಾರ ಜಾಕ್ವೆಲಿನ್ ನುನೆಜ್ (Jacqueline Nuñez) ದಿ ಬೋಸ್ಟನ್ ಗ್ಲೋಬ್‌ಗೆ (The Boston Globe) ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ನ ವರದಿ ಮಾಡಿದೆ. 

ಜಾಕ್ವೆಲಿನ್ ನುನೆಜ್ ಅವರಿಗೆ ಈ ಆಸ್ತಿಯನ್ನು ಮಾರಾಟ ಮಾಡಿರುವ ವಿಚಾರವನ್ನು ಆಸ್ತಿ ಮಾಲೀಕರಾಗಿದ್ದ ಕೋರಿ (Cory) ಮತ್ತು ಜೆನ್ನಿಫರ್ ಹೈನ್ಜೆನ್ (Jennifer Heinzen) ದಂಪತಿ ಜಂಟಿಯಾಗಿ ಫೇಸ್‌ಬುಕ್‌ನಲ್ಲಿ  ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಖರೀದಿದಾರರಾದ  ಜಾಕ್ವೆಲಿನ್ ನುನೆಜ್ ಕೂಡ ಇದ್ದರು. 

Weight Loss: ಡಯಟ್ ಬಿಟ್ಟು ಹಾರರ್ ಮೂವಿ ನೋಡಿ, ತೂಕ ಇಳಿಯುತ್ತೆ!
ಆಸ್ತಿಯ ಹಿಂದಿನ ಮಾಲೀಕರಾಗಿದ್ದ ಕೋರಿ ಮತ್ತು ಜೆನ್ನಿಫರ್ ಹೈನ್ಜೆನ್ ದಂಪತಿ ಪ್ರಾರಂಭಿಸಿದ ಸಾಮಾನ್ಯ ವ್ಯವಹಾರವನ್ನು ಮುಂದುವರಿಸಲು ಈ ಆಸ್ತಿಯ ಹೊಸ ಮಾಲಕರಾಗಿರುವ ನುನೆಜ್  ಚಿಂತನೆ ನಡೆಸಿದ್ದು, ಇಲ್ಲಿಗೆ ಬರುವ ಅತಿಥಿಗಳು ರಾತ್ರಿಯ ವಿಚಿತ್ರ ಘಟನೆಗಳನ್ನು ತನಿಖೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಇಲ್ಲಿಗೆ ದಿನದ ಪ್ರವಾಸಗಳು ಪುನರಾರಂಭಗೊಳ್ಳುತ್ತವೆ ಮತ್ತು ಲೈವ್‌ಸ್ಟ್ರೀಮ್ ಈವೆಂಟ್‌ಗಳು ಇಲ್ಲಿ ಎಂದಿನಂತೆ ಇರುತ್ತವೆ. 2019 ಈ ಮನೆಯನ್ನು ಜೆನ್ನಿಫರ್ ಹೈನ್ಜೆನ್ ದಂಪತಿ ಖರೀದಿಸಿದ್ದರು. 

ಶ್ ಸಿನಿಮಾದಿಂದ ಅವತಾರ್ ಪುರುಷವರೆಗೂ; ಕನ್ನಡಿಗರನ್ನು ಬೆಚ್ಚಿಬೀಳಿಸಿದ ಹಾರರ್ ಚಿತ್ರಗಳು

ಇಲ್ಲಿ ಪೈಶಾಚಿಕ ಶಕ್ತಿ ಇದೇ ಎಂಬುದನ್ನು ನಾನು ನಂಬುವುದಿಲ್ಲ. ಇಲ್ಲಿ ಘಟನೆಗಳು ನಡೆಯುತ್ತವೆ, ಅದು ನನ್ನನ್ನು ಬೆಚ್ಚಿಬೀಳಿಸುತ್ತದೆ. ಆದರೆ ನನಗೆ ಹಾನಿ ಮಾಡುವುದಿಲ್ಲ ಎಂದು ಹೊಸ ಮಾಲಕ ನುನೆಜ್ ಹೇಳಿದ್ದಾರೆ. ನಾನು ಈ ವಿಚಿತ್ರ ಘಟನೆಗಳನ್ನು ಅನುಭವಿಸಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. 'ದಿ ಕಂಜ್ಯೂರಿಂಗ್' ಶೀರ್ಷಿಕೆಯ ಭಯಾನಕ ಚಲನಚಿತ್ರವನ್ನು ಈ ಮನೆಯಲ್ಲಿ ಚಿತ್ರೀಕರಿಸಲಾಗಿಲ್ಲ ಆದರೆ 1970 ರ ದಶಕದಲ್ಲಿ ಇಲ್ಲಿ ವಾಸಿಸುತ್ತಿದ್ದ ಕುಟುಂಬದ ಅನುಭವಗಳನ್ನು ಈ ಸಿನಿಮಾ ಆಧರಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?