Divorce Fight ಮದ್ವೆಯಾಗಿ 6 ವರ್ಷವಾದ್ರೂ ನಡೆದಿಲ್ಲ ಫಸ್ಟ್ ನೈಟ್, ಬೀದಿಜಗಳವಾದ ಸೆಲೆಬ್ರೆಟಿ ಡಿವೋರ್ಸ್!

By Suvarna News  |  First Published May 28, 2022, 11:49 PM IST
  • ಮದುವೆಯಾಗಿ 6 ವರ್ಷ, ಇದುವರೆಗೂ ನಡೆದಿಲ್ಲ ಲೈಂಗಿಕ ಸಂಪರ್ಕ
  • ಇನ್ನೂ ಸಹಿಸಲು ಸಾಧ್ಯವಿಲ್ಲ, ಪತ್ನಿ ವಿರುದ್ಧ ಪತಿ ಕಂಡ
  • ಸಂಸದ ಅನುಭವ್ ಹಾಗೂ ನಟಿ ಪ್ರಿಯದರ್ಶಿನಿ ಡಿವೋರ್ಸ್ ಕೇಸ್

ಒಡಿಶಾ(ಮೇ.28): ಒಡಿಶಾ ಸಂಸದ ಅನುಭವವ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ನಡುವೆ ಡಿವೋರ್ಸ್ ಕೇಸ್ ಇದೀಗ ಭಾರತದಲ್ಲೇ ಚರ್ಚೆಯಾಗುತ್ತಿದೆ. ಈ ಸೆಲೆಬ್ರೆಟಿಗಳ ಡಿವೋರ್ಸ್ ಪ್ರಕರಣ ಕೇವಲ ಕೋರ್ಟ್ ಕಟಕಟೆಯಲ್ಲಿ ಮಾತ್ರ ನಿಂತಿಲ್ಲ, ಬೀದಿ ಜಗಳವಾಗಿ ಮಾರ್ಪಟ್ಟಿದೆ. 6 ವರ್ಷವಾದರೂ ಇದುವರೆಗೂ ಪತ್ನಿಯೊಂದಿಗೆ ಸಂಭೋಗವೇ ನಡೆಸಿಲ್ಲ ಎಂದು ಅನುಭವ್ ಬೆಡ್ ರೂಂ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. ಇವರ ರಂಪಾಟ ನೋಡಿದ ಕೋರ್ಟ್, ಇಬ್ಬರಿಗೂ ಖಡಕ್ ವಾರ್ನಿಂಗ್ ನೀಡಿದೆ.

ಅನಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನ ವಿಚ್ಚೇದನ ಕೇಸ್ ಹೈಕೋರ್ಟ್‌ನಲ್ಲಿದೆ. ವಿಚಾರಣೆಯೂ ನಡೆಯುತ್ತಿರುವ ಬೆನ್ನಲ್ಲೇ ಪತ್ನಿಗೆ ಡಿವೋರ್ಸ್ ಯಾಕೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಧಲ್ಲಿ ಅನುಭವ್ ಮೊಹಂತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಾನು ಮದುವೆಯಾಗಿ 6 ವರ್ಷ ಕಳೆದಿದೆ. ಇದುವರೆಗೂ ಲೈಂಗಿಕ ಸಂಪರ್ಕ ನಡೆದಿಲ್ಲ. ದಾಂಪತ್ಯ ಜೀವನದಲ್ಲಿ ಲೈಂಗಿಕತೆ ಅಭಿಭಾಜ್ಯ ಅಂಗವಾಗಿದೆ. ಆದರೆ ಪತ್ನಿ 6 ವರ್ಷಗಳಿಂದ ನಿರಾಕರಿಸುತ್ತಲೇ ಬಂದಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Tap to resize

Latest Videos

25 ಕೋಟಿ ಬೇಕೆಂದು ಬ್ಲ್ಯಾಕ್‌ ಮೇಲ್‌ ಮಾಡ್ತಿರುವ ಚೈತ್ರಾ ಹಳ್ಳಿಕೆರೆ ಬಗ್ಗೆ ಪತಿ ಬಾಲಾಜಿ ಮಾತು!

ಪ್ರೀತಿ, ಸಂಸಾರ ಉಳಿಸಿಕೊಳ್ಳಲು ಕಳೆದ 6 ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಇನ್ನು ಸಾಧ್ಯವಿಲ್ಲ. ಪತ್ನಿಯ ಅಸಲಿ ಮುಖವನ್ನು ಮುಂದಿನ ವಿಡಿಯೋದಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಅನುಭವ್ ಮೊಹಂತಿ ಹೇಳಿದ್ದರು. ಇದರ ಬೆನ್ನಲ್ಲೇ ಕೋರ್ಟ್‌ಗೆ ಮನವಿ ಮಾಡಿದ ನಟಿ ವರ್ಷಾ ಪ್ರಿಯದರ್ಶಿನಿ, ತನ್ನ ವಿರುದ್ಧ ಪತಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಮಾನ ಹಾನಿ ಮಾಡಲು ಯತ್ನಿಸುತ್ತಿದ್ದಾರೆ. ಇದರಿಂದ ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ವಿಡಿಯೋ ಹಾಕದಂತೆ ನಿರ್ಬಂಧಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

ವಿಚಾರಣೆ ಹಾಜರಾದ ಅನುಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನಿಗೆ ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ಡಿವೋರ್ಸ್ ಅರ್ಚಿ ವಿಚಾರಣೆ ಹಂತದಲ್ಲಿದೆ. ಈ ವಿಚಾರಣೆ ಅಂತ್ಯವಾಗುವ ವರೆಗೂ ಪತ್ನಿ ವಿರುದ್ಧ ಪತಿ ಅಥವಾ ಪತಿ ವಿರುದ್ಧ ಪತ್ನಿ ಆರೋಪ ಪ್ರತ್ಯಾರೋಪ ಮಾಡವಂತಿಲ್ಲ. ಸಾಮಾಜಿಕ ಜಾಲಾಣದಲ್ಲಿ ವಿಡಿಯೋ, ಪೋಸ್ಟ್ ಹಾಕುವಂತಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್

ಮೇ. 22 ಹಾಗೂ 25 ರಂದು ಪತಿ ಅನುಭವ್ ಮೊಹಂತಿ ವಿರುದ್ಧ ನಟಿ ಪ್ರಿಯದರ್ಶಿನಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ. 

ಐಶ್ವರ್ಯಾ ಜತೆ ಡಿವೋರ್ಸ್‌ಗೆ ಧನುಷ್‌ ಕೆಲಸದ ಗೀಳು ಕಾರಣ?
ರಜನೀಕಾಂತ್‌ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್‌ 18 ವರ್ಷದ ಸುದೀರ್ಘ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಧನುಷ್‌ ಕೆಲಸದ ಗೀಳು ಹೊಂದಿರುವ ವ್ಯಕ್ತಿ ಆಗಿರುವುದೇ ಇದಕ್ಕೆ ಕಾರಣ ಎಂದು ಧನುಷ್‌ ಹಾಗೂ ಐಶ್ವರ್ಯಾಗೆ ಆಪ್ತರಾದವರು ತಿಳಿಸಿದ್ದಾರೆ. ಧನುಷ್‌ ತಮ್ಮ ಕೆಲಸಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಹೀಗಾಗಿ ಕುಟುಂಬದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಐಶ್ವರ್ಯಾರೊಂದಿಗೆ ಜಗಳವಾದ ಸಂದರ್ಭದಲ್ಲಿ, ಮನಸ್ತಾಪ ಬಗೆಹರಿಸಿಕೊಳ್ಳದೇ, ಹೊಸ ಸಿನಿಮಾ ಕೈಗೆತ್ತಿಕೊಂಡು ಕುಟುಂಬದಿಂದ ದೂರ ಹೋಗುತ್ತಿದ್ದರು. ಇದೇ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.ವಿಚ್ಛೇದನದ ನಂತರವೂ ಮಕ್ಕಳಾದ ಲಿಂಗಾ ಹಾಗೂ ಯಾತ್ರಾರ ಸಹ ಪೋಷಕರಾಗಿ ಧನುಷ್‌ ಐಶ್ವರ್ಯಾ ಮುಂದುವರೆಯಲಿದ್ದಾರೆ. ಇಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ತಿಳಿಸಿದ್ದಾರೆ.

click me!