3 ಮಕ್ಕಳಿದ್ದರೂ ವಿಚ್ಛೇದನ ಪಡೆದು 15 ವರ್ಷದ ಗೆಳೆಯನ ಜೊತೆ ಹಸೆಮಣೆ ಏರಿದ ಗಾಯಕಿ!

Published : May 29, 2022, 09:37 AM IST
3 ಮಕ್ಕಳಿದ್ದರೂ ವಿಚ್ಛೇದನ ಪಡೆದು 15 ವರ್ಷದ ಗೆಳೆಯನ ಜೊತೆ ಹಸೆಮಣೆ ಏರಿದ ಗಾಯಕಿ!

ಸಾರಾಂಶ

ಲಂಡನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಕನಿಕಾ ಕಪೂರ್. ತಮ್ಮ ಮೂವರು ಮಕ್ಕಳಿಗೆ ಈ ವಿಚಾರ ಹೇಳಿದ್ದು ಹೇಗೆ? 

ಬಾಲಿವುಡ್‌ ಟಾಪ್ ಹಾಡುಗಳಾದ ಬೇಬಿ ಡಾಲ್ ಮತ್ತು ಚಿಟ್ಟಿಯಾನ್ ಕಲೈಯಾನ್ ಗಾಯಕಿ ಕನಿಕಾ ಕಪೂರ್ ಎನ್‌ಆರ್‌ಐ ಉದ್ಯಮಿ ಗೌತಮ್ ಹಾಥಿರಾಮನಿ ಜೊತೆ ಲಂಡನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ಕನಿಕಾ ಭಾವುಕರಾಗಿದ್ದಾರೆ. ಈ ಹಿಂದೆ ಕನಿಕಾ ಲಂಡನ್‌ ಮೂಲದ ಉದ್ಯಮಿ ರಾಜ್ ಚಂದೋಕ್‌ರನ್ನು ಮದುವೆಯಾಗಿ 2012ರಲ್ಲಿ ವಿಚ್ಛೇದನ ಪಡೆದುಕೊಂಡರು. ಇದೀಗ ತಮ್ಮ ಹೊಸ ಮದುವೆ ಜರ್ನಿ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ.

'ಗೌತಮ್ ಮತ್ತು ನಾನು 15 ವರ್ಷಗಳಿಂದ ಸ್ನೇಹಿತರು. ಸದಾ ನನ್ನ ಬೆನ್ನಿಂದೆ ನಿಂತು ಸಪೋರ್ಟ್ ಮಾಡುವ ಬೆಸ್ಟ್‌ ಫ್ರೆಂಡ್‌, ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ನಾವು ಹಂಚಿಕೊಳ್ಳುತ್ತೇವೆ. ನಾನು ಇರುವ ಪರಿಸ್ಥಿತಿನ ಅರ್ಥ ಮಾಡಿಕೊಂಡು ನನ್ನನ್ನು ಒಪ್ಪಿಕೊಳ್ಳುವಂತ ವ್ಯಕ್ತಿ ಸಿಗುವುದು ತುಂಬಾನೇ ಕಷ್ಟ. ನನ್ನನ್ನು ತಾಯಿಯಾಗಿ, ಕಲಾವಿದೆಯಾಗಿ, ಮಗಳಾಗಿ ಮತ್ತು ಸ್ನೇಹಿತೆಯಾಗಿ ನನ್ನನ್ನು ಗೌತಮ್ ಒಪ್ಪಿಕೊಂಡು ಪ್ರಪೋಸ್ ಮಾಡಿದ್ದರು. ನನಗಿದ್ದ ಕೆಲವೊಂದು ಅನುಮಾನಗಳಿಂದ ನಾನು ಪ್ರಪೊಸಲ್‌ ಒಪ್ಪಿಕೊಳ್ಳುವುದಕ್ಕೆ ಚಿಂತಿಸುತ್ತಿದ್ದೆ.  ಎಲ್ಲಾ ಮಹಿಳೆಯರಿಗೆ ನಾನು ಒಂದು ವಿಷಯ ಹೇಳಬೇಕು, ಜೀವನದಲ್ಲಿ ನೀವು ಎಷ್ಟೇ ಕಷ್ಟ ನೋಡುತ್ತಿದ್ದರೂ ಕೊನೆಯಲ್ಲಿ ಸಂತೋಷ ಕಾಯುತ್ತಿರುತ್ತದೆ' ಎಂದು ಕನಿಕಾ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ನನ್ನನ್ನು ಮದುವೆ ಆಗಲೇ ಬೇಕೆಂದು ಮಧ್ಯರಾತ್ರಿ ನಟನ ಮನೆ ಮುಂದೆ ಹೈಡ್ರಾಮಾ ಮಾಡಿದ ಕಿರುತೆರೆ ನಟಿ!

ಗೌತಮ್‌ ಜೊತೆ ಸ್ನೇಹ:

' ನನ್ನ ಜೀವನದಲ್ಲಿ ಏನೇ ನಡೆದರೂ ಅದನ್ನು ಗೌತಮ್ ಜೊತೆ ಹಂಚಿಕೊಳ್ಳುವೆ. ನನ್ನಲ್ಲಿರುವ ನೆಗೆಟಿವ್ ಯೋಚನೆಗಳನ್ನು ದೂರು ಮಾಡುತ್ತಾರೆ. ನನ್ನ ವೃತ್ತಿ ಜೀವನವನ್ನು ಗಮನಿಸಿದ್ದಾರೆ, ಬೇಬಿ ಡಾಲ್ ಆರಂಭದಿಂದಲ್ಲೂ ಮೊದಲು ಕೇಳಿರುವುದು ಗೌತಮ್. ಮೂರು ಮಕ್ಕಳ ತಾಯಿಯಾಗಿ ನಾನು ಸಂಸಾರ ಮತ್ತು ಕೆಲಸ ಹೇಗೆ ಮ್ಯಾನೇಜ್‌ ಮಾಡಿದ್ದೀನಿ ಎಂದು ನೋಡಿದ್ದಾರೆ. ಲಂಡನ್‌ನಲ್ಲಿ ಮಕ್ಕಳಿದ್ದರು, ಮುಂಬೈನಲ್ಲಿ ನಾನು ಕೆಲಸ ಮಾಡುತ್ತಿದ್ದೆ ಈ ಸಮಯದಲ್ಲಿ ಗೌತಮ್ ನನ್ನ ಸಪೋರ್ಟ್ ಆಗಿ ನಿಂತರು. 2014 ಬೇಬಿ ಡಾಲ್ ಹಾಡು ರಿಲೀಸ್ ಆದ ಬಳಿಕ ನಾನೇ ಕೇಳಲು ಮುಂದಾದೆ ಆದರೆ ಇದೆಲ್ಲಾ ತಮಾಷೆ ಎಂದುಕೊಂಡು ಗೌತಮ್ ಸುಮ್ಮನಾದ್ದರು.  2020ರಲ್ಲಿ ಮತ್ತೆ ಕೇಳಿದೆ ಆಗ ಗೌತಮ್ ಸೀರಿಯಸ್‌ ಇರಬಹುದು ಅಂದುಕೊಂಡರು. ಅಲ್ಲಿಂದ ನಮ್ಮ ಪ್ರೀತಿ ಶುರುವಾಯ್ತು, ಕಳೆದ ವರ್ಷ ಆಗಸ್ಟ್‌ನಲ್ಲಿ ನನಗೆ ಮೊದಲು ಪ್ರಪೋಸ್ ಮಾಡಿದ್ದರು. ಗಾಯಕಿಯಾಗಿ ಸಾವಿರಾರೂ ಜನರ ನಡುವೆ ಹಾಡಿದರು ಕೆಲಸ ಮಾಡಿದ್ದರೂ ಒಂಟಿತನ ಕಾಡುತ್ತಿತ್ತು. ಈಗ ನಾನು ಕೂಲ್ ಆಗಿರುವೆ' ಎಂದು ಕನಿಕಾ ಹೇಳಿದ್ದಾರೆ. 

Divorce Fight ಮದ್ವೆಯಾಗಿ 6 ವರ್ಷವಾದ್ರೂ ನಡೆದಿಲ್ಲ ಫಸ್ಟ್ ನೈಟ್, ಬೀದಿಜಗಳವಾದ ಸೆಲೆಬ್ರೆಟಿ ಡಿವೋರ್ಸ್!

ಮಕ್ಕಳ ರಿಯಾಕ್ಷನ್:

'ಮಕ್ಕಳಿಗೆ ನಮ್ಮ ಮದುವೆ ವಿಚಾರ ಹೇಳಿದಾಗ ಗಾಬರಿ ಆದ್ದರು.  ಮದುವೆಗೂ ಕೆಲವು ದಿನಗಳ ಹಿಂದೆ ನನ್ನ ಕಿರಿಯ ಪುತ್ರಿ 'ಸ್ವಲ್ಪ ದಿನಗಳಲ್ಲಿ ನಿನ್ನನ್ನು ಕಳುಹಿಸಿ ಬಿಡುತ್ತೇವೆ' ಎಂದು ಹೇಳಿದಳು. ಇಲ್ಲ ನಾನು ಮಾತ್ರವಲ್ಲ ನಾವೆಲ್ಲರೂ ಅವರು ಕುಟುಂಬದ ಜೊತೆ ಜೀವನ ಮಾಡುತ್ತೇವೆ ಎಂದು ಹೇಳಿದೆ. ನಮ್ಮ ಜೀವನದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಬಗ್ಗೆ ಮಕ್ಕಳಿಗೆ ಸಂತಸವಿದೆ. ಅವರಿಗೆ ಗೌತಮ್‌ ಮತ್ತು ಅವರ ಕುಟುಂಬದವರ ಪರಿಚಯವಿದೆ. ನಾನು ಎರಡನೇ ಸಲ ಮದುವೆ ಆಗುವಾಗ ನನ್ನ ಮಕ್ಕಳು ಓಡಾಡುತ್ತಿರುವುದನ್ನು ನೋಡಿ ಭಾವುಕಳಾದೆ. ನಮ್ಮ ಸಂಗೀತ್ ಕಾರ್ಯಕ್ರಮದಲ್ಲಿ ಖುಷಿ ಖುಷಿಯಿಂದ ಡ್ಯಾನ್ಸ್ ಮಾಡಿದ್ದರ. ಸಂಗೀತ ಕ್ಷೇತ್ರದಲ್ಲಿ ಇರುವ ನನ್ನ ಸ್ನೇಹಿತರು ಮದುವೆಗೆ ಬಂದು ಸರ್ಪ್ರೈಸ್ ಕೊಟ್ಟರು' ಎಂದಿದ್ದಾರೆ ಕನಿಕಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಬ್ಬಬ್ಬಾ! ಈ ಸ್ಟಾರ್​ ನಟರು ನೋಡಲು ಸೇಮ್​ ಟು ಸೇಮ್: ಕುತೂಹಲದ ಫೋಟೋಸ್​ ವೈರಲ್​
ಸಿದ್ಧಾರ್ಥ ಮಲ್ಹೋತ್ರ ಕಿಯಾರ ಅಡ್ವಾಣಿ ಹಗ್ಗಿಂಗ್ ಹಳೇ ವಿಡಿಯೋ ವೈರಲ್, ಕಾರಣವೇನು?