ನಟಿ ಶೆರ್ಲಿನ್ ಚೋಪ್ರಾ ಹಸಿರು ಡ್ರೆಸ್ ಧರಿಸಿ ಪಾಪರಾಜಿಗಳಿಗೆ ಹಸಿ ಮೆಣಸಿನ ಥರ ಕಾಣಿಸ್ತಿದ್ದೀನಾ ಎಂದು ಪ್ರಶ್ನಿಸಿದರು. ಅದಕ್ಕೆ ನೆಟ್ಟಿಗರು ಹೇಳಿದ್ದೇನು?
ಎದೆ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಧಾರಾಳವಾಗಿ ಪ್ರದರ್ಶನ ಮಾಡುತ್ತಿರುವ ಕೆಲವು ನಟಿಯರ ಪೈಕಿ ಮೊದಲ ಸ್ಥಾನದಲ್ಲಿರುವವರು ನಟಿ ಶೆರ್ಲಿನ್ ಚೋಪ್ರಾ. ಇನ್ನೋರ್ವ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸ್ನೇಹಿತೆಯೆಂದು ಪೋಸ್ ಕೊಟ್ಟು ಕೊನೆಗೆ ಆಕೆಯ ಗಂಡ ಆದಿಲ್ ಖಾನ್ ದುರ್ರಾನಿಯ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಶೆರ್ಲಿನ್, ಅಂಗಾಂಗ ಪ್ರದರ್ಶನದಿಂದಲೇ ಸದ್ದು ಮಾಡುತ್ತಿರುವ ನಟಿ. ಯಾವುದೇ ಸಂಕೋಚವಿಲ್ಲದೇ ತನ್ನ ಖಾಸಗಿ ಜೀವನದ ಕುರಿತು ಮಾತನಾಡಿದ್ದ ಶೆರ್ಲಿನ್, ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. 'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದೇ ಇನ್ನೊಮ್ಮೆ, ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದ ನಟಿ, ಒಂದು ಕಂಡೀಷನ್ ಹಾಕಿದ್ರು. ಅದೇನೆಂದ್ರೆ, ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ. ಆದ್ರೆ ನನ್ನ ಸರ್ನೇಮ್ ಮಾತ್ರ ಗಾಂಧಿ ಆಗಲ್ಲ, ಚೋಪ್ರಾನೇ ಆಗಿರುತ್ತದೆ. ಈ ಕಂಡೀಷನ್ಗೆ ಒಪ್ಪಿದ್ರೆ ನಾನು ರೆಡಿ ಎಂದಿದ್ದರು.
ಅದಾದ ಬಳಿಕ, ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು.
ಹೃತಿಕ್ ರೋಷನ್ @59: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್ 10 ಸುಂದರ ನಟ!
ಇದೀಗ ಮಾಮೂಲಿನಂತೆ ಧಾರಾಳವಾಗಿ ದೇಹ ಪ್ರದರ್ಶನ ಮಾಡಿ, ಮಿನಿ ಹಸಿರು ಕಲರ್ ಡ್ರೆಸ್ ತೊಟ್ಟು ಬಂದ ಶೆರ್ಲಿನ್ ಚೋಪ್ರಾ ನಾನು ಹಸಿ ಮೆಣಸಿನ ಥರ ಕಾಣಿಸ್ತಾ ಇದ್ದೀನಾ ಎಂದು ಕೇಳಿದರು. ಅದಕ್ಕೆ ನೆಟ್ಟಿಗರು ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಇವಳು ಹೆಣ್ಣು ಕುಲಕ್ಕೇ ಅವಮಾನ, ಯಾಕಿಷ್ಟು ಪ್ರಚಾರ ಕೊಡ್ತೀರಾ ಎಂದು ಹಲವು ನೆಟ್ಟಿಗರು ಕಿಡಿ ಕಾರಿದ್ದಾರೆ. ಇನ್ನು ಕೆಲವರು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು, ಸದ್ಯ ಹಸಿ ಮೆಣಸಿನಕಾಯಿ ರೂಪದಲ್ಲಾದರೂ ನೋಡಲು ಸಿಕ್ರಲ್ಲಾ ಎಂದಿದ್ದಾರೆ. ಇದೇ ಪ್ರಶ್ನೆಯನ್ನು ವಿಡಿಯೋದಲ್ಲಿಯೂ ನಟಿಯ ಫ್ಯಾನ್ಸ್ ಹೇಳೋದನ್ನು ಕೇಳಬಹುದು. ಅದಕ್ಕೆ ಶೆರ್ಲಿನ್ ಒಹೊ ನನ್ನನ್ನು ಅಷ್ಟೆಲ್ಲಾ ಮಿಸ್ ಮಾಡಿಕೊಳ್ತಾ ಇದ್ರಾ ಎಂದು ಖುಷಿಯಿಂದಲೇ ಹೇಳಿದ್ದು, ಹಸಿ ಮೆಣಸಿನ ಕಾಯಿ ಥರ ಕಾಣಿಸ್ತಾ ಇದ್ದೀನಾ ಎಂದು ಕೇಳಿದ್ದಾರೆ. ಅದಕ್ಕೆ ನೆಟ್ಟಿಗರು ಹಸಿ ಮೆಣಸಿನ ಕಾಯಿ ಜೊತೆ ಟೊಮ್ಯಾಟೋನೂ ಕಾಣಿಸ್ತಿದೆ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
ಶೆರ್ಲಿನ್ ತಮ್ಮ ಸ್ತನ ದೊಡ್ಡದಾಗಿ ಕಾಣಿಸಲು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿರುವ ಕಾರಣ ಹಸಿಮೆಣಸು ಎಲ್ಲಿದೆ, ಬರೀ ಪ್ಲಾಸ್ಟಿಕ್ಕೇ ಕಾಣಿಸ್ತಿದೆ ಎಂದಿದ್ದಾರೆ. ಇನ್ನು ಕೆಲವರು ಥೂ ನಿನ್ ಜನ್ಮಕ್ಕೆ ಎಂದು ನಟಿಯ ವಿರುದ್ಧ ಗರಂ ಆಗಿದ್ದರೆ, ನಿನ್ನಂಥವರು ಈ ಭೂಮಿ ಮೇಲೆ ಇರೋಕೆ ಲಾಯಕ್ಕಿಲ್ಲ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ವಿಡಿಯೋ ಅಪ್ಲೋಡ್ ಆದಾಗಲೆಲ್ಲವೂ ನಟಿಯನ್ನು ಬೈದುಕೊಳ್ಳುತ್ತಲೇ ವಿಡಿಯೋ ನೋಡುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆ ಎನ್ನುವದಂತೂ ಸುಳ್ಳಲ್ಲ. ಈ ಹಿಂದೆ ನಟಿ ತಾವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ ಎಂದಿದ್ದರು. ಕಮೆಂಟ್ನಲ್ಲಿ ಈ ವಿಷಯವನ್ನೂ ಕೆಲವರು ಎಳೆದು ತಂದಿದ್ದಾರೆ.