ಆಲಿಯಾ ಭಟ್ ಅಂದ್ರೆ ತುಂಬಾ ಇಷ್ಟ, ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದೇನು?
ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಸರಳತೆಗೆ ಫೇಮಸ್ ಆದವರು. ಇವರ ಸರಳ ಮಾತು ಹಾಗೂ ಅವರ ಸರಳ ನಡೆ-ನುಡಿಗಾಗಿಯೇ ಜನರು ಅವರನ್ನು ಇಷ್ಟಪಡುವುದು ಇದೆ. ಸಾಕಷ್ಟು ಸಾಮಾಜಿಕ ಸೇವೆಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು ಸುಧಾಮೂರ್ತಿ. ಇವರನ್ನು ಸಂದರ್ಶಿಸುವುದು ಎಂದು ಅಂತರಾಷ್ಟ್ರೀಯ ಮಾಧ್ಯಮಗಳಿಗೂ ಖುಷಿಯ ವಿಚಾರ. ಇದೀಗ ಸಿನಿಮಾದ ಬಗ್ಗೆ ಅವರಿಗೆ ಕೆಲವು ಪ್ರಶ್ನೆ ಎದುರಾಗಿದ್ದು, ತಮ್ಮ ನೆಚ್ಚಿನ ಸಿನಿಮಾ ಹಾಗೂ ನಟಿಯ ಕುರಿತು ಸುಧಾ ಮೂರ್ತಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಕ್ಷೇತ್ರದವರೊಂದಿಗೆ ತಾವು ಉತ್ತಮ ಬಾಂಧವ್ಯವನ್ನು ಹೊಂದಿರುವುದಾಗಿ ಹೇಳಿರುವ ಸುಧಾ ಮೂರ್ತಿ ಅವರು, ಆಗ್ಗಾಗೆ ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
ಇದೀಗ ಖ್ಯಾತ ಪತ್ರಕರ್ತೆ ಶೇರಿನ್ ಭಾನ್ ನಡೆಸಿದ ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಸಿನಿಮಾ ಕ್ಷೇತ್ರದ ಕುರಿತು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ತಾವು ಹಿಂದಿ ಸಿನಿಮಾಗಳನ್ನು ಹೆಚ್ಚು ನೋಡುವುದಾಗಿ ತಿಳಿಸಿರುವ ಸುಧಾ ಅವರು, ತಮ್ಮ ನೆಚ್ಚಿನ ನಟ, ನಟಿಯ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಓಟಿಟಿಯಲ್ಲಿ ನೋಡಿದ ವೆಬ್‌ಸರಣಿಗಳ ಬಗ್ಗೆಯೂ ಚರ್ಚಿಸಿದ್ದಾರೆ. ಜೊತೆಗೆ ಇತ್ತೀಚಿನ ಹಿಂದಿ ಚಲನಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಅಂದಹಾಗೆ, ಸುಧಾ ಅವರಿಗೆ ತುಂಬಾ ಅಚ್ಚುಮೆಚ್ಚಿನ ನಾಯಕಿ ಎಂದರೆ ಆಲಿಯಾ ಭಟ್ ಅಂತೆ. ಈ ಹಿಂದೆ ಕೂಡ ಸುಧಾ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ಸಿನಿಮಾಗಳಲ್ಲಿ ಎಷ್ಟು ಎಮೋಷನಲ್ ಸೀನ್‌ಗಳನ್ನು ನೋಡಿದ್ದರೂ ಕಣ್ಣೀರು ಹಾಕಿರದ ತಾವು ರಾಝಿ ಸಿನಿಮಾದಲ್ಲಿ ಅಲಿಯಾ ಭಟ್ ನಟನೆ ನೋಡಿ ಅಳು ಬಂತು ಎಂದು ಹೇಳಿದ್ದರು. ಇದೀಗ ನಟಿ ಆಲಿಯಾ ಅವರನ್ನು ಸುಧಾ ಅವರು ಪುನಃ ಕೊಂಡಾಡಿದ್ದಾರೆ.
'ಅನಿಮಲ್' ಯಶಸ್ಸು ಡೇಂಜರಸ್ ಎಂದ ಜಾವೇದ್ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ
"ನಾನು 1950ರ ದಶಕದ ವೈಜಯಂತಿಮಾಲಾ ಅವರಿಂದ ಹಿಡಿದು ಇಂದಿನ ಆಲಿಯಾ ಭಟ್‌ವರೆಗಿನ ಎಲ್ಲ ನಟಿಯರ ಸಿನಿಮಾಗಳನ್ನು ನೋಡಿದ್ದೆನೆ. ಅವರೆಲ್ಲರ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಆದರೆ ರಾಝಿಯಲ್ಲಿ ಆಲಿಯಾ ಅವರ ನಟನೆ ನಾನು ಭಾವುಕಳಾಗುವಂತೆ ಮಾಡಿದೆ, ಅವರೊಬ್ಬರು ಒಳ್ಳೆಯ ನಟಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಆಲಿಯಾ ಅವರ, ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼಯನ್ನು ಹೊಗಳಿದ್ದಾರೆ. ತಮಗೆ ಆಲಿಯಾ ಭಟ್ ಎಂದರೆ ತುಂಬಾ ಇಷ್ಟ ಎಂದಿರುವ ಅವರು, ನಂಗೆ ಹಿಂದಿಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ನಟನೆ ಇಷ್ಟ. ಆಲಿಯಾ ಎಂದರೆ ನನಗೆ ತುಂಬಾ ಇಷ್ಟ, ನಾನು ಇತ್ತೀಚೆಗೆ ರಾಕಿ ಔರ್ ರಾಣಿ ಪ್ರೇಮ್ ಕಹಾನಿ ಸಿನಿಮಾ ನೋಡಿದೆ ಎಂದಿದ್ದಾರೆ. ಇದೇ ವೇಳೆ ಆಲಿಯಾ ಅವರು ಅಭಿನಯವನ್ನು ಹೊಗಳಿದ್ದಾರೆ.
ಇದೇ ವೇಳೆ, ಇಂಗ್ಲಿಷ್ ಸಿನಿಮಾಗಳನ್ನು ನೋಡುವುದಿಲ್ಲ ಎಂದಿರುವ ಅವರು, ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುವುದಿಲ್ಲ. ಆದರೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ದಿನವೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.
ಹೃತಿಕ್ ರೋಷನ್ @59: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್ 10 ಸುಂದರ ನಟ!