ಒಂದೇ ಕಲರ್​ ಡ್ರೆಸ್​ನಲ್ಲಿ ಕಾಣಿಸಿಕೊಂಡ ಅರ್ಬಾಜ್​ ದಂಪತಿ: ಪ್ಯಾಂಟ್​ ಇಲ್ದೇ ನಾಚಿಕೊಂಡ್ರಾ ಶುರಾ ಖಾನ್​?

Published : Jan 10, 2024, 04:42 PM IST
ಒಂದೇ ಕಲರ್​ ಡ್ರೆಸ್​ನಲ್ಲಿ ಕಾಣಿಸಿಕೊಂಡ ಅರ್ಬಾಜ್​ ದಂಪತಿ:   ಪ್ಯಾಂಟ್​ ಇಲ್ದೇ ನಾಚಿಕೊಂಡ್ರಾ ಶುರಾ ಖಾನ್​?

ಸಾರಾಂಶ

ಅರ್ಬಾಜ್​ ಖಾನ್​ ಮತ್ತು ಶುರಾ ಖಾನ್​ ಒಂದೇ ಕಲರ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಶುರಾ ಅವರ ಡ್ರೆಸ್​ ನೋಡಿ ಹೀಗೆಲ್ಲಾ ಹೇಳೋದಾ?   

 ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಇತ್ತೀಚೆಗೆ  ಮದುವೆಯಾಗಿದ್ದು, ನವವಧುವಿನ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್​ ಖಾನ್​ ಅವರು ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್​ ಅವರ ಕೈಹಿಡಿದಿದ್ದಾರೆ.   ಪತ್ನಿಯ ಹೆಸರು  ಶುರಾ ಖಾನ್​. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ.  ಶುರಾ ಖಾನ್ ಮತ್ತು  ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ  ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಖಾನ್​ ಅವರು,  ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. 
 
ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್​ ಟ್ರೋಲ್​​ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್​ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುವುದನ್ನು ನೋಡಬಹುದು. ಇತ್ತೀಚೆಗೆ  ಏರ್​ಪೋರ್ಟ್​ನಲ್ಲಿ ಜೋಡಿ ಕಾಣಿಸಿಕೊಂಡಿತ್ತು.  ಈ ಸಂದರ್ಭದಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಜೋಡಿ ಸೆರೆಯಾಗಿದೆ. ತಮ್ಮ ಫೋಟೋ, ವಿಡಿಯೋ ಮಾಡುವುದನ್ನು ಮೊದಲೇ ಅರಿತಿರುವ ಶುರಾ ಖಾನ್​ ಅವರು ಕ್ಯಾಪ್​ ಧರಿಸಿ ಬಂದಿದ್ದರು. ಈ ಕ್ಯಾಪ್​ ಹಾಕಿಕೊಂಡು ತಮ್ಮ ಮುಖ ಮರೆಮಾಚುವುದು ಅವರ ಉದ್ದೇಶ. ಅದೇ ರೀತಿ ತಲೆಯನ್ನು ಬಗ್ಗಿಸಿಕೊಂಡು ಕ್ಯಾಪ್​ನಲ್ಲಿ ಮುಖ ಎಲ್ಲಿಯೂ ಕಾಣದಂತೆ ಮಾಡಿದ್ದರು. ಅರ್ಬಾಜ್​ ಖಾನ್​ ಹಸನ್ಮುಖರಾಗಿ ಕ್ಯಾಮೆರಾಕ್ಕೆ  ಪೋಸ್​ ನೀಡುತ್ತಿದ್ದರೆ, ಶುರಾ ಮಾತ್ರ ಅಪ್ಪಿತಪ್ಪಿಯೂ ಮುಖ ತೋರಿಸಿರಲಿಲ್ಲ.  ಇದರಿಂದ ಅವರು ಸಕತ್​ ಟ್ರೋಲ್​ಗೆ ಒಳಗಾಗಿದ್ದರು.
 

ಹೃತಿಕ್ ರೋಷನ್​ @59: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್​ 10 ಸುಂದರ ನಟ!

ಇದೀಗ ದಂಪತಿ ಒಂದೇ ಕಲರ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಮೂಲಿನಂತೆ ಶುರಾ ಖಾನ್​ ಮಾಧ್ಯಮಗಳಿಗೆ ಮುಖ ತೋರಿಸಲು ಹಿಂಜರಿಯುವುದನ್ನು ನೋಡಬಹುದು.  ಈ ಜೋಡಿ ನೋಡಿದರೆ ಥೇಟ್​ ಅಪ್ಪ-ಮಗಳಂತೆಯೇ ಇದೆ ಎಂದು ಕಮೆಂಟಿಗರು ಹೇಳುತ್ತಲೇ ಬಂದಿದ್ದಾರೆ. ಬಹುಶಃ ಇಂಥ ಟ್ರೋಲ್​ಗಳಿಂದ ಬೇಸತ್ತೋ ಏನೋ ಸಾಧ್ಯವಾದಷ್ಟು ಮಟ್ಟಿಗೆ ಶುರಾ ಅವರು ಮುಖವನ್ನು ಮುಚ್ಚಿಕೊಳ್ಳುವುದು ಮುಂದುವರೆದಿದೆ.  ಆದರೆ ಪಾಪರಾಜಿಗಳು ಬಿಡಬೇಕಲ್ಲ! ಸಿನಿಮಾ ತಾರೆಯರು ಹೋದಲ್ಲಿ ಬಂದಲ್ಲಿ ಅವರ ಹಿಂದೆಯೇ ಕ್ಯಾಮೆರಾ ತೆಗೆದುಕೊಂಡು ಹೋಗುವ ಪಾಪರಾಜಿಗಳಿಂದ ಸಿನಿಮಾ ನಟರು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಬಿಡಿ.

ಅದೇ ರೀತಿ ಇದೀಗ ಕೇಸರಿ ಬಣ್ಣದ ಡ್ರೆಸ್​ನಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ. ಆದರೆ ಶುರಾ ಖಾನ್​ ಪ್ಯಾಂಟ್​ಲೆಸ್​ ಆಗಿರುವ ಕಾರಣ, ಟ್ರೋಲಿಗರು ಸುಮ್ಮನೇ ಬಿಟ್ಟಾರೆಯೇ? ಪತ್ನಿಯ ಪ್ಯಾಂಟ್​ ಎಲ್ಲಿ ಎಂದು ಅರ್ಬಾಜ್​ ಖಾನ್​ ಕಾಲೆಳೆಯುತ್ತಿದ್ದಾರೆ. ಹೊರಗೆ ಬರುವ ಗಡಿಬಿಡಿಯಲ್ಲಿ ಪ್ಯಾಂಟ್​ ಮರೆತುಬಂದ್ರಾ ಎಂದು ಶುರಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ಶುರಾ ಅವರು ಕ್ಯಾಮೆರಾಕ್ಕೆ ಪೋಸ್​ ನೀಡುವ ಸಂದರ್ಭದಲ್ಲಿ ನಾಚಿಕೊಂಡಿದ್ದರಿಂದ ಪ್ಯಾಂಟ್​ ಬಿಟ್ಟುಬಂದಕ್ಕೆ ನಾಚಿಕೆನಾ ಅಂತ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಟಾಪ್​ನಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಈಗಿನ ಟ್ರೆಂಡ್​ ಆಗಿದೆ. ಆದರೆ ಸಿನಿಮಾ ತಾರೆಯರು ಹೀಗೆ ಕಾಣಿಸಿಕೊಂಡಾಗ ಟ್ರೋಲಿಗರಿಗೆ ಆಹಾರವಾಗುತ್ತಲೇ ಇರುತ್ತಾರೆ. ಇನ್ನು ಅರ್ಬಾಜ್​ ಖಾನ್​ ಮತ್ತು ಶುರಾ ಅವರ ವಯಸ್ಸಿನ ಅಂತರ ಇದನ್ನೆಲ್ಲಾ ಕೇಳಿದ ಮೇಲೆ ಕಾಲೆಳೆಯುವುದು ಇನ್ನೂ ಹೆಚ್ಚೇ ಆಗಿದೆ. 

ಮದ್ವೆಗೆ ಜಿಮ್​ ಡ್ರೆಸ್​, ಪಾರ್ಟಿಗೆ ನೈಟ್​ ಡ್ರೆಸ್​- ಇನ್ನು ಇವ್ರ ಡ್ಯಾನ್ಸ್​ ಅಂತೂ ನೋಡೋಕಾಗ್ತಿಲ್ಲ ಅಂತಿದ್ದಾರೆ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾನ್ಸ್ ಅಂದ್ರೆ ಇದು, 71ನೇ ವಯಸ್ಸಿನಲ್ಲೂ ಯುವಕರನ್ನು ನಾಚಿಸಿದ ರೇಖಾ
ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ: ಆಗಿದ್ದೇನು?