ಶಾರುಖ್ ಕೈಬರಹದ ಹಳೆದ ಪತ್ರ ವೈರಲ್ ಆಗಿದ್ದು, ಇದರಲ್ಲಿ ಅವರ ಬಾಲ್ಯ, ನಟನಾ ಕೌಶಲದ ಆರಂಭ ಕುರಿತು ಹಲವು ವಿಷಯಗಳು ಇವೆ.
ಶಾರುಖ್ ಖಾನ್ (Shahrukh Khan) ತಮ್ಮ ನಟನಾ ಕೌಶಲ್ಯಕ್ಕೆ ಮಾತ್ರವಲ್ಲ, ಅವರ ಬುದ್ಧಿವಂತಿಕೆ ಮತ್ತು ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಇದನ್ನು ಅವರ ಹಳೆಯ ಕೈಬರಹದ ಪತ್ರವು ಪುನರುಚ್ಚರಿಸಿದೆ. ಶಾರುಖ್ ಅವರು ಕಾಲೇಜಿನಲ್ಲಿದ್ದಾಗ ಬರೆದ ಆರು ಪುಟಗಳ ಉದ್ದದ ಟಿಪ್ಪಣಿಯನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿ ಬರೆದ ದಿನಾಂಕ ಇಲ್ಲದಿದ್ದರೂ, ಶಾರುಖ್ ಅವರು ದೆಹಲಿಯ ಹನ್ಸ್‌ನಲ್ಲಿ ಪದವಿಯ ಕೊನೆಯ ವರ್ಷದಲ್ಲಿದ್ದಾಗ ಬರೆದಿರುವುದು ತಿಳಿದು ಬಂದಿದೆ. ಪತ್ರದಲ್ಲಿ ಶಾರುಖ್ ಖಾನ್ ಅವರು ತಮ್ಮ ಬಾಲ್ಯ, ಕುಟುಂಬ, ಶಾಲೆ ಮತ್ತು ನಟನೆಯ ಮೇಲಿನ ಪ್ರೀತಿ ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಮಾತನಾಡಿದ್ದಾರೆ. ಅವರ ನಟನಾ ಕೌಶಲದ ಹಲವು ಸೀಕ್ರೇಟ್ಗಳು ಈ ಪತ್ರದಲ್ಲಿದೆ. ಅದರಲ್ಲಿ ಅವರು, ತಮ್ಮ ಕ್ರೀಡಾ ಸಾಧನೆ ಕುರಿತು ವಿವರಣೆ ನೀಡಿದ್ದಾರೆ. ಫುಟ್‌ಬಾಲ್, ಹಾಕಿ ಮತ್ತು ಕ್ರಿಕೆಟ್‌ನಲ್ಲಿ ಹೇಗೆ ಉತ್ತಮ ಸಾಧನೆ ಮಾಡಿದ್ದೆ ಎಂಬ ಕುರಿತು ಪತ್ರದಲ್ಲಿ ವಿವರಿಸಲಾಗಿದೆ.
ಇದೇ ಪತ್ರದಲ್ಲಿ ಶಾರುಖ್, ನಟನೆಯ ಮೇಲಿನ ತಮ್ಮ ಪ್ರೀತಿಯ ಕುರಿತೂ ಮಾತನಾಡಿದ್ದಾರೆ. 'ನನ್ನ ಶಾಲಾ ದಿನಗಳಲ್ಲಿ, ನನಗೆ ನಟನೆಯ ಹುಚ್ಚು ಹಿಡಿಯಲು ಶುರುವಾಯಿತು. ವಾಸ್ತವವಾಗಿ, ನಾನು ಯಾವಾಗಲೂ ಜನರನ್ನು ನಕಲು ಮಾಡುವುದರಲ್ಲಿ ಮತ್ತು ಅನುಕರಿಸುವಲ್ಲಿ ತುಂಬಾ ಒಳ್ಳೆಯವನಾಗಿದ್ದೆ. ಅದು ಹೇಮಾ ಮಾಲಿನಿಯಿಂದ ಪ್ರಾರಂಭವಾಯಿತು ಮತ್ತು ನಾನು ದೇವ್ ಆನಂದ್ ಅವರಿಂದ ನಟನೆಯಲ್ಲಿ ಪದವಿ ಪಡೆದೆ. ಪೃಥ್ವಿ ರಾಜ್ ಕಪೂರ್ ಮತ್ತು ರಾಜ್ ಬಬ್ಬರ್ (Raj Babbar) ಅವರಿಂದಲೂ ಸಾಕಷ್ಟು ಕಲಿತಿದ್ದೇನೆ ಎಂದು ಶಾರುಖ್ ಬರೆದಿದ್ದಾರೆ.
JAWAN: ನಯನತಾರಾ ಜತೆ ನಟಿಸುವಾಗ ಶಾರುಖ್ಗೆ ಅವ್ರ ಮೇಲೆ ಮನಸ್ಸಾಗಿತ್ತಾ? ನಟ ಹೇಳಿದ್ದೇನು?
ಬಾಲಿವುಡ್ನ ಹಿರಿಯ ನಟ ರಾಜ್ ಬಬ್ಬರ್ ಬಗ್ಗೆ ಪ್ರಸ್ತಾಪಿಸುತ್ತಾ, ನಾನು ನಿಜವಾಗಿಯೂ ನಟನೆಯಲ್ಲಿ ಹೇಗೆ ಆಸಕ್ತಿ ಹೊಂದಿದ್ದೇನೆ ಎಂಬುದು ನನಗೆ ನೆನಪಾಯಿತು. ನನ್ನ ತಂದೆ ದೆಹಲಿ ಮತ್ತು ಸುತ್ತಮುತ್ತಲಿನ ರೆಸ್ಟೋರೆಂಟ್ ಹೊಂದಿದ್ದರು. ನಾನು ಅವರ ಹೋಟೆಲ್ಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಈ ಸಂದರ್ಭದಲ್ಲಿ ರಾಜ್ ಬಬ್ಬರ್ ಅವರ ಎಲ್ಲಾ ನಾಟಕಗಳನ್ನು ನೋಡುತ್ತಿದ್ದೆ. ಇದು ನನ್ನ ನಟನೆಗೆ ಸಹಕಾರಿಯಾಯಿತು ಎಂದು ಪತ್ರದಲ್ಲಿ ಶಾರುಖ್ ಉಲ್ಲೇಖಿಸಿದ್ದಾರೆ. ಮಹಾನ್ ನಿರ್ದೇಶಕರಾದ ಇಬ್ರಾಹಿಂ ಅಲ್ಕಾಜಿ, ರಾಜ್ ಬಬ್ಬರ್, ರೋಹಿಣಿ ಹತ್ತಂಗಡಿ, ಅಜಿತ್ ವಾಚನಿ, ಸುರೇಖಾ ಸಿಕ್ರಿ ಮುಂತಾದವರ ಕಾಲದಲ್ಲಿ ಮತ್ತು ಆ ದಿನಗಳಲ್ಲಿ, (ನನಗೆ ಬಹುಶಃ ಆಗ 9-10 ವರ್ಷ ವಯಸ್ಸಾಗಿರಬೇಕು) ನಾನು ಉರ್ದು ದ್ವಿಪದಿಗಳನ್ನು ಬರೆಯುತ್ತಿದ್ದೆ. ನನ್ನ ಡಿಂಪಲ್‌ಗಳೊಂದಿಗೆ ತುಂಬಾ ಮುದ್ದಾಗಿ ಕಾಣುತ್ತಿದ್ದೆ ಮತ್ತು ಹೀಗಾಗಿ ಈ ನಟರು ಮತ್ತು ನಿರ್ದೇಶಕರು ನನ್ನ ಮೇಲೆ ಸಾಕಷ್ಟು ಗಮನ ಸೆಳೆದಿದ್ದರು. ಇವರಿಂದ ನನಗೆ ನಟನೆಯಲ್ಲಿ ಪ್ರೋತ್ಸಾಹ ಸಿಕ್ಕಿತು ಎಂದು ಶಾರುಖ್ ನೆನಪಿಸಿಕೊಂಡಿದ್ದಾರೆ.
ಅಂದಹಾಗೆ 1989ರಲ್ಲಿ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಫೌಜಿ ಧಾರಾವಾಹಿಯೊಂದಿಗೆ ಶಾರುಖ್ ಕಿರುತೆರೆಗೆ ಪದಾರ್ಪಣೆ ಮಾಡಿದರು. ಸರ್ಕಸ್ ಧಾರಾವಾಹಿ ಕೂಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ನಂತರ 1992ರಲ್ಲಿ ಬಿಡುಗಡೆಯಾದ ದೀವಾನಾ (Deewana) ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈಗ ಅವರಿಗೆ 57 ವರ್ಷ ವಯಸ್ಸು. ಆದರೆ ಈ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವ ಫಿಟ್ನೆಸ್ ಹೊಂದಿರುವ ಕಾರಣ, ನಾಯಕನಾಗಿಯೇ ಮುಂದುವರೆದಿದ್ದಾರೆ. ಅವರ ಅದ್ಭುತ ನಟನೆಗೆ ಸಾಕ್ಷಿಯಾದದ್ದು ಪಠಾಣ್ ಚಿತ್ರ. ಮುಂದಿನ ತಿಂಗಳು ತೆರೆ ಕಾಣಲಿರುವ ಜವಾನ್ ಚಿತ್ರದ ಮೇಲೂ ನಟ ಹಾಗೂ ಅವರ ಫ್ಯಾನ್ಸ್ ಸಾಕಷ್ಟು ಹೋಪ್ಸ್ ಇಟ್ಟುಕೊಂಡಿದ್ದಾರೆ.
ಅಪ್ಪ ಶಾರುಖ್ ಜೊತೆ 120 ಕೋಟಿಯನ್ನೂ ರಿಜೆಕ್ಟ್ ಮಾಡಿದ ಪುತ್ರ ಆರ್ಯನ್ ಖಾನ್?