ಗರ್ಭಿಣಿಯಾಗಿದ್ದ ಸುದ್ದಿಯನ್ನು ಪತಿಗಿಂತಲೂ ಮೊದ್ಲು ಆ ಸ್ಟಾರ್​ಗೆ ತಿಳಿಸಿದ್ರಂತೆ ಆಲಿಯಾ!

By Suvarna News  |  First Published Aug 12, 2023, 8:55 PM IST

ನಟಿ ಆಲಿಯಾ ಭಟ್​ ತಾವು ಗರ್ಭ ಧರಿಸಿದಾಗ ಆ ವಿಷಯವನ್ನು ಮೊದಲು ಪತಿ ರಣಬೀರ್​ ಕಪೂರ್​ಗೆ ತಿಳಿಸಿರಲಿಲ್ಲ. ಹಾಗಿದ್ದರೆ ಅವರು ಮೊದಲು ಹೇಳಿದ್ದು ಯಾರಿಗೆ? 
 


ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ಕ್ಯೂಟ್​ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. 2022ರ  ಏಪ್ರಿಲ್​ 14ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಸಿರಿತ್ತು. ಬಾಲಿವುಡ್​ನ ಕ್ಯೂಟ್​ ದಂಪತಿ ಎಂದೇ ಇವರು ಫೇಮಸ್​. ಈಗ ಮಗುವೊಂದರ ಅಪ್ಪ-ಅಮ್ಮನೂ ಹೌದು.  2022ರಲ್ಲಿ ಏಪ್ರಿಲ್​ 14ರಂದು ನಟ ರಣಬೀರ್​ ಕಪೂರ್​ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್​ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು.  ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಇದೀಗ ಕುತೂಹಲದ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಆಲಿಯಾ ಭಟ್ ಗರ್ಭಿಣಿಯಾಗಿದ್ದಾಗ ಆ ವಿಷಯವನ್ನು ಮೊದಲಿಗೆ ತಮ್ಮ ಪತಿ ರಣಬೀರ್​ ಕಪೂರ್​ ಅವರಿಗೆ ತಿಳಿಸಿರಲಿಲ್ಲ ಎನ್ನುವ ವಿಷಯ. ಹೌದು! ಹಾಗಿದ್ದರೆ ಆಕೆ ತಿಳಿಸಿದ್ದು ಯಾರಿಗೆ ಎನ್ನುವ ಕುತೂಹಲ ಇರುವುದು ಸಹಜ. ಅದು ಅವರ ಅಪ್ಪ-ಅಮ್ಮನೂ ಅಲ್ಲ. ಬದಲಿಗೆ ಇನ್ನೋರ್ವ ನಟಿಗೆ ತಿಳಿಸಿದ್ದರಂತೆ. ಅಷ್ಟಕ್ಕೂ ಆಗಿದ್ದೇನೆಂದರೆ,  ಆಲಿಯಾ ಭಟ್    ಗರ್ಭಿಣಿಯಾಗಿರುವ ವಿಷಯ ತಿಳಿದಾಗ  ಹಾಲಿವುಡ್ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆರಂಭಿಕ ದಿನಗಳವರೆಗೂ, ಅವರು ಈ ಬಗ್ಗೆ ಯಾರಿಗೂ ತಿಳಿಸಲಿಲ್ಲ. ಅದಾದ ಬಳಿಕ ಅನಿವಾರ್ಯವಾಗಿ ಶೂಟಿಂಗ್​ ಸಮಯದಲ್ಲಿ ಅದನ್ನು ತಿಳಿಸಬೇಕಾಗಿ ಬಂದಂತೆ. ಅಲ್ಲಿಯವರೆಗೆ ತಾವು ಪತಿಗೂ ವಿಷಯ ತಿಳಿಸಿರಲಿಲ್ಲ ಎಂದಿದ್ದಾರೆ ಆಲಿಯಾ. ಶೂಟಿಂಗ್​ ಸೆಟ್​ನಲ್ಲಿ ಇದ್ದ ಹಿನ್ನೆಲೆಯಲ್ಲಿ  ಆಲಿಯಾ ಅವರು ತಮ್ಮ ಸಹ-ನಟಿ ವಂಡರ್ ವುಮನ್ (Wonder Woman ) ಖ್ಯಾತಿಯ ಗಾಲ್ ಗಡೋಟ್ಗೆ ಅದರ ಬಗ್ಗೆ ತಿಳಿಸಿದ್ದರಂತೆ. ಮೊದಲ ಮೂರು ತಿಂಗಳು ಆಗುವವರೆಗೆ ಈ ವಿಷಯವನ್ನು ಹೇಳುವುದು ಸರಿಯಲ್ಲ ಎಂದುಕೊಂಡಿದ್ದರು ಆಲಿಯಾ. ಆ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಕಾರಣಕ್ಕೆ. ಒಮ್ಮೆ ವಿಷಯ ಬಹಿರಂಗಗೊಂಡರೆ ಅದು ಸಾರ್ವಜನಿಕವಾಗುವ ಕಾರಣ, ವಿಷಯವನ್ನು ಮುಚ್ಚಿಡಲು ಬಯಸಿದ್ದರು.

Tap to resize

Latest Videos

ಆಲಿಯಾ ಮದುವೆ ಮೆಹಂದಿ ಡಿಸೈನ್​ಗಾಗಿ ಮಹಿಳೆಯರ ಕಿತ್ತಾಟ! ವಾದ-ಪ್ರತಿವಾದಗಳ ಸುರಿಮಳೆ

ಆದರೆ ಆ ವೇಳೆ ಶೂಟಿಂಗ್​ನಲ್ಲಿ (Shooting) ಇದ್ದುದರಿಂದ ಅನಿವಾರ್ಯವಾಗಿ ಸಹ ನಟಿಗೆ ಹೇಳಬೇಕಾಯಿತು.  ಮೊದಲ ತ್ರೈಮಾಸಿಕದವರೆಗೆ ಗರ್ಭಧಾರಣೆಯ ಬಗ್ಗೆ ಯಾರಿಗೂ ಹೇಳಬೇಡಿ ಎಂದು ನಾನು ಗಾಲ್ ಗಡೋಟ್ ಅವರಿಗೆ ಹೇಳಿದ್ದೆ. ಅವರನ್ನು ನಾನು  ನಂಬಿ ಈ ವಿಷಯ ತಿಳಿಸಿದ್ದೆ. ಅವರು ಕೂಡ ಇದನ್ನು ಗುಟ್ಟಾಗಿ ಇಟ್ಟಿದ್ದರು ಎಂದಿದ್ದಾರೆ ಆಲಿಯಾ. ನಾನು ಗಡೋಟ್‌ಗೆ ಗರ್ಭಧಾರಣೆಯ ಸುದ್ದಿಯನ್ನು ತಿಳಿಸಿದಾಗ, ಅವರು ತುಂಬಾ ಉತ್ಸುಕಳಾಗಿದ್ದರು, ತುಂಬಾ ಸಂತೋಷವಾಗಿದ್ದರು. ವಿಷಯ ತಿಳಿದ ಬಳಿಕ ಅವರು  ನನ್ನನ್ನು ಸೆಟ್‌ನಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡರು ಎಂದು ಆಲಿಯಾ ಹೇಳಿದ್ದಾರೆ.

ಶೂಟಿಂಗ್​ ಸಮಯದಲ್ಲಿ ಹೇಗೆ ಇರಬೇಕು, ಮಗುವಿಗೆ ತೊಂದರೆಯಾಗದಂತೆ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಗಾಲ್​ ನನಗೆ ತಿಳಿಸಿದರು. ಇದರಿಂದ  ತುಂಬಾ ಸಹಾಯವಾಯಿತು. ಸ್ವಲ್ಪ ಸಮಯದ ಬಳಿಕ ನನ್ನ ಗರ್ಭಧಾರಣೆಯ ಬಗ್ಗೆ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಟಾಮ್ ಹಾರ್ಪರ್ ತಿಳಿಸುವುದು  ಅಗತ್ಯವಾಗಿತ್ತು. ಆಗ ಅವರಿಗೆ ವಿಷಯ ತಿಳಿಸಿದೆ. ಎಲ್ಲರೂ ನನ್ನನ್ನು ಚೆನ್ನಾಗಿ ಬೆಂಬಲಿಸಿದರು ಮತ್ತು ಅದು ನನಗೆ ತುಂಬಾ ಆರಾಮದಾಯಕವಾಗಿತ್ತು ಎಂದು ಗರ್ಭಧಾರಣೆಯ ಸಮಯದ ಶೂಟಿಂಗ್​ ಕುರಿತು ನಟಿ ಆಲಿಯಾ  ಮಾತನಾಡಿದ್ದಾರೆ. 

Wedding Anniversary ದಿನ ಶಾಕಿಂಗ್​ ಹೇಳಿಕೆ ಕೊಟ್ಟ ರಣಬೀರ್​ ಕಪೂರ್​

ಸದ್ಯ ಹಿಂದಿ ಚಿತ್ರರಂಗದ ಯಶಸ್ವಿ ನಟಿಯ ಬಗ್ಗೆ ಹೇಳಿದರೆ ಅದರಲ್ಲಿ ಆಲಿಯಾ ಭಟ್ ಹೆಸರು ಸೇರುವುದು ಖಚಿತ. ಒಂದೆಡೆ ಇಂಡಸ್ಟ್ರಿಯ ಹಲವು ದೊಡ್ಡ ನಟರು ಹಿಟ್ ಚಿತ್ರದ ಹುಡುಕಾಟದಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದೆಡೆ ಆಲಿಯಾ ಒಂದಿಲ್ಲೊಂದು ಹಿಟ್ ನೀಡುತ್ತಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಟಿಯ ಮತ್ತೊಂದು ಯಶಸ್ವಿ ಚಿತ್ರವಾಗಿದೆ. ಈ ಹಿಂದೆ ಆಲಿಯಾ ಅಭಿನಯದ 'ಗಂಗೂಬಾಯಿ ಕಥಿವಾಡಿ' ಮತ್ತು 'ಬ್ರಹ್ಮಾಸ್ತ್ರ' ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿದ್ದವು. ಇವರ ಒಟ್ಟೂ 8 ಚಿತ್ರಗಳು 100 ಕೋಟಿ ಕ್ಲಬ್​ಗೆ ಸೇರಿವೆ. 

click me!