
ವಿಜಯ್ ದೇವರಕೊಂಡ- ಸಮಂತಾ ನಟನೆಯ ‘ಖುಷಿ’ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಅಬ್ಬರಿಸೋದಕ್ಕೆ ರೆಡಿಯಾಗಿದೆ. ಸದ್ಯ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ವಿಜಯ್- ಸಮಂತಾ ಪ್ರೀತಿ, ಗುದ್ದಾಟ, ಮುನಿಸು ಎಲ್ಲವೂ ಇಲ್ಲಿ ಮೋಡಿ ಮಾಡ್ತಿದೆ. ಹೆಂಡತಿಗೆ ಒಬ್ಬ ಗಂಡ ಹೇಗಿರಬೇಕು ಎಂದು ಎಂದು ತೋರಿಸೋದೇ ಸಿನಿಮಾದ ಜೀವಾಳ. ಅಲ್ಲದೇ ಖುಷಿ ಸಿನಿಮಾದ ಫಸ್ಟ್ ಲುಕ್, ಸಾಂಗ್ಸ್ ಎಲ್ಲವೂ ಈಗಾಗಲೇ ಅಭಿಮಾನಿಗಳನ್ನ ಮೋಡಿ ಮಾಡುತ್ತಿದೆ. ವಿಜಯ್- ಸ್ಯಾಮ್ ಕಾಂಬೋದ ಟ್ರೈಲರ್ ಝಲಕ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಹಲವಾರು ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು! ಒಂದು ವೇಳೆ ಜಿರಳೆ ಕೊಂದ್ರೆ ನೀನು ಹೀರೋ, ಅದೇ ಚಿಟ್ಟೆ ಕೊಂದ್ರೆ ಪಾಪಿ, ನೈತಿಕತೆ ಸುಂದರ ಮಾನದಂಡಗಳನ್ನು ಹೊಂದಿದೆ ಎಂಬ ಸಾಲುಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಈ ಸ್ಟೋರಿಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು, ಸಮಂತಾಗೆ ಏನಾಯ್ತು, ಎಲ್ಲವೂ ಸರಿಯಿದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ನಟಿಯ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಮಯೋಸಿಟಿಸ್ ವಿರುದ್ಧ ಹೋರಾಡುತ್ತಿರುವ ನಟಿ ಸಮಂತಾ ಪ್ರಸ್ತುತ ಆರೋಗ್ಯ ಚೇತರಿಕೆಗೆ ಗಮನ ಕೊಟ್ಟಿದ್ದು, ಇತ್ತೀಚೆಗೆ ನಟಿ ಯಾವ ಹೊಸ ಸಿನಿಮಾಗಳನ್ನೂ ಘೋಷಿಸಿಲ್ಲ.
ಸಮಂತಾಗೆ ಕಾಯೋ ಟೈಮಲ್ಲಿ ಇಡ್ಲಿ ಹೊಟೇಲ್ ತೆಗೀಬೇಕು ಅಂದುಕೊಂಡಿದ್ರಂತೆ ವಿಜಯ ದೇವರಕೊಂಡ!
ಚಿತ್ರೀಕರಣಗಳಲ್ಲಿ ಭಾಗಿಯಾಗುತ್ತಿಲ್ಲ. ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾ ಕೆಲಸಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ. ಸದ್ಯ ಸೆಪ್ಟೆಂಬರ್ 1ರಂದು ಕನ್ನಡ, ತೆಲುಗು, ತಮಿಳು ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಖುಷಿ ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.