ನಟಿ ಪರಿಣಿತಿ ಚೋಪ್ರಾ ಅವರ ಜೊತೆ ನಿಶ್ಚಿತಾರ್ಥವಾದ ಬಳಿಕ ತಮ್ಮ ಬದುಕಿನಲ್ಲಾದ ಬದಲಾವಣೆ ಕುರಿತು ಆಪ್ ನಾಯಕ ರಾಘವ್ ಚಡ್ಡಾ ಹೇಳಿದ್ದೇನು?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡರು. ಪಂಜಾಬಿ ಶೈಲಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್ ನಡೆದಿದೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥದ ನಂತರ, ಅವರ ಅಭಿಮಾನಿಗಳು ಅವರ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮದುವೆಯ ಕುರಿತಂತೆಯೂ ಕಳೆದ ತಿಂಗಳು ಅಪ್ಡೇಟ್ ಹೊರಬಂದಿತ್ತು. ಅದೇನೆಂದರೆ, ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆಯಾಗಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಮದುವೆಯ ಸಂಬಂಧ ಕುಟುಂಬಸ್ಥರು ಉದಯಪುರದ ಉದಯವಿಲಾಸ್‌ಗೆ ಲೀಲಾ ಪ್ಯಾಲೇಸ್ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪರಿಣಿತಿ ಜೊತೆಗೆ ರಾಘವ್ ಚಡ್ಡಾ ಅವರೂ ಇದ್ದು, ಇಬ್ಬರೂ ಸೇರಿ ರಾಜಸ್ಥಾನದಲ್ಲಿ ತಮ್ಮ ಮದುವೆಯ ಸ್ಥಳವನ್ನು ಅಂತಿಮಗೊಳಿದ್ದಾರೆ ಎನ್ನಲಾಗುತ್ತಿದೆ. ಮದುವೆಯ ದಿನಾಂಕದ ಕುರಿತು ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಈ ನಡುವೆಯೇ, ತಮ್ಮ ನಿಶ್ಚಿತಾರ್ಥರ ಬಳಿಕ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಯ ಕುರಿತು ರಾಘವ್ ಚಡ್ಡಾ (Raghav Chadda) ಮಾತನಾಡಿದ್ದಾರೆ. ಪರಿಣಿತಿ ಚೋಪ್ರಾ ಅವರ ಜತೆ ನಿಶ್ಚಿತಾರ್ಥವಾದ ಮೇಲೆ ಸಹೋದ್ಯೋಗಿಗಳು ಮತ್ತು ಹಿರಿಯರು ಮಾಡುತ್ತಿರುವ ಟೀಕೆ ಕಡಿಮೆಯಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲದೇ ನನ್ನ ಜಿವನದಲ್ಲಿ ಸಾಕಷ್ಟು ಬದಲಾಗಿದೆ. ನನ್ನ ಬದುಕಿನ ಅರ್ಥವೂ ಬದಲಾಗಿದೆ. ನಾನು ಈಗ ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಸಹೋದ್ಯೋಗಿಗಳು ಮತ್ತು ಹಿರಿಯರು ಯಾವಾಗ ಮದುವೆ, ಏನೋ ಮದುವೆಯಾಗೋಲ್ವ ಎಂದೆಲ್ಲ ಕಿಚಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಪರಿಣಿತಿ ಜೊತೆ ತಿರುಗಾಡಿದ್ದ ತಿಳಿದಾಗ ತಮಾಷೆ ಮಾಡುತ್ತಿದ್ದರು. ಎಂಗೇಜ್‌ಮೆಂಟ್ ಬಳಿಕ ಕಿಚಾಯಿಸುವುದು ಕಡಿಮೆಯಾಗಿದೆ ಎಂದಿದ್ದಾರೆ. ಸದ್ಯ ಮದುವೆಯ ಬಗ್ಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ.
Parineeti Chopra Engaged: ಗುಸುಗುಸುಗೆ ಕೊನೆಗೂ ತೆರೆ- ಪ್ರೇಮಪಕ್ಷಿಗಳ ಎಂಗೇಜ್‌ಮೆಂಟ್
ಅಂದಹಾಗೆ ನಟಿ (Parineeti Chopra), ಈ ಮೊದಲು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿದ್ದರು. ಅದರ ವಿಡಿಯೋ ಈಚೆಗೆ ಸಕತ್ ವೈರಲ್ ಆಗಿತ್ತು. ಸಿನಿಮಾವೊಂದರ ಪ್ರಚಾರದ ಸಂದರ್ಭದಲ್ಲಿ ಪತ್ರಕರ್ತರು ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ ಪರಿಣಿತಿ, ಒಬ್ಬ ರಾಜಕಾರಣಿ ನನ್ನ ಗಂಡನಾಗಲು ಸಾಧ್ಯವಿಲ್ಲ. ಅದು ನನ್ನ ಮೊದಲ ಆಯ್ಕೆಯಾಗುವುದಿಲ್ಲ ಎಂದಿದ್ದರು. ನಾನು ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವು ಉತ್ತಮ ಆಯ್ಕೆಗಳು ಇರುವಾಗ ರಾಜಕಾರಣಿಯನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರು. ಸ್ವಯಂ ನಿರ್ಮಿತ ಪುರುಷನನ್ನು ಜೀವನ ಸಂಗಾತಿಯನ್ನಾಗಿ ಬಯಸುತ್ತೇನೆ. ನಾನು ಸ್ವಾಭಿಮಾನ ಹೊಂದಿರುವ, ತಮ್ಮನ್ನು ತಾವು ರೂಪಿಸಿಕೊಂಡ ಪುರುಷರನ್ನು ಇಷ್ಟಪಡುತ್ತೇನೆ. ರಾಜಕಾರಣಿ ನನ್ನ ಆಯ್ಕೆಯಾಗಲು ಸಾಧ್ಯವಿಲ್ಲ ಎಂದಿದ್ದರು.
ಎಂಗೇಜ್ಮೆಂಟ್ಗಳು ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದಾಗ ಸುದ್ದಿ ಮತ್ತಷ್ಟು ಹರಡಿತ್ತು. ಕೊನೆಗೆ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಟ್ವೀಟ್ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದರೂ ಜೋಡಿ ಮಾತ್ರ ಮೌನ ತಾಳಿತ್ತು. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು.
ರಾಜಸ್ಥಾನಕ್ಕೆ ಹಾರಿದ ಪರಿಣಿತಿ ಚೋಪ್ರಾ- ಮದುವೆ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ