ಮೇಕಪ್ ಕಡ್ಮೆ ಹಾಕಿ, ವಿಗ್ ತೆಗಿರಿ, ಸಿಂಪಲ್ ಸೀರೆ ಮ್ಯಾಚೇ ಆಗದ ಬ್ಲೌಸ್: ಗುಲ್ಜರ್ ಮಾತಿಗೆ ನಮ್ಮಮ್ಮನೇ ಶಾಕ್ ಆಗಿದ್ರು

By Anusha KbFirst Published Jan 11, 2024, 3:33 PM IST
Highlights

ಇತ್ತೀಚೆಗೆ ಗುಲ್ಜಾರ್ ಅವರ ಆತ್ಮಕತೆ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಹೇಮಾ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಇದೇ ವೇಳೆ ಅವರು ಹಲವು ಕುತೂಹಲಕಾರಿ ಅಂಶಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಗುಲ್ಜಾರ್ ಸಾಬ್ ಎಂದೇ ಖ್ಯಾತಿ ಗಳಿಸಿರುವ ಹಿಂದಿ ಚಿತ್ರಗಳ ಗೀತಾ ಸಾಹಿತಿ, ಖ್ಯಾತ ನಿರ್ಮಾಪಕ , ಉರ್ದು ಕವಿ ರಾಕಿ ಗುಲ್ಜರ್ ಅವರೊಂದಿಗಿನ ಒಡನಾಟವನ್ನು ನಟಿ ಹೇಮಾ ಮಾಲಿನಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಗುಲ್ಜಾರ್ ಅವರ ಆತ್ಮಕತೆ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಹೇಮಾ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. ಇದೇ ವೇಳೆ ಅವರು ಹಲವು ಕುತೂಹಲಕಾರಿ ಅಂಶಗಳನ್ನು ನೆನಪು ಮಾಡಿಕೊಂಡಿದ್ದಾರೆ.

1975ರ ಖುಷ್ಬು ಸಿನಿಮಾ ಮಾಡುವ ವೇಳೆ ಗುಲ್ಜರ್ ಅವರು ಹೇಮಾರನ್ನು ಗ್ಲಾಮರಸ್ ಅಲ್ಲದ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದರು. ಆದರೆ ಆ ಸಮಯದಲ್ಲಿ ನಾನು ವಿಭಿನ್ನವಾಗಿ ಬೇರೇನೋ ಮಾಡಬೇಕು ಎಂದು ಬಯಸಿದ್ದೆ.  ಆ ದಿನಗಳಲ್ಲಿ ಹಿರೋಯಿನ್‌ಗಳು ತಮ್ಮ ಕೇಶವಿನ್ಯಾಸ ಹಾಗೂ ಭಾರಿ ಮೇಕಪ್‌ಗೆ ಹೆಸರುವಾಸಿಯಾಗಿದ್ದರು.  ಆದರೆ ಗುಲ್ಜರ್ ಮಾತ್ರ ತನ್ನ ಸಿನಿಮಾದ ಪ್ರಮುಖ ಮಹಿಳಾ ಪಾತ್ರಧಾರಿಯನ್ನು ಆ ರೀತಿ ನೋಡಲು ಬಯಸಿರಲಿಲ್ಲ, ಆ ದಿನಗಳಲ್ಲಿ ನಮಗೆ ದೊಡ್ಡ ರೀತಿಯ ಕೇಶ ವಿನ್ಯಾಸವನ್ನು ಹೊಂದಿದ್ದೆವು. ಭಾರವಾದ ವಿಗ್ ಅನ್ನು ನಾವು ಧರಿಸುತ್ತಿದ್ದೆವು. ನಾನು ಅವರ ಸೆಟ್‌ಗೆ ಬಂದಾಗ ಅವರು ಹೇಳಿದ ಮೊದಲ ಪದ ನೋ, ನೀವು ಸಹಜವಾಗಿ ಹೇಗಿದ್ದಿರೋ ಹಾಗಿರಿ ಯಾವುದೇ ವಿಗ್ ಬೇಡ ಏನು ಬೇಡ ಎಂದಿದ್ದರು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ ಕನಸಿನ ಕನ್ಯೆ.
 

Latest Videos

ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!

ಆದರೆ ನನ್ನ ತಾಯಿಯೂ ನನ್ನ ಜೊತೆಗೆ ಇರುತ್ತಿದ್ದರು. ನಾವು ಮೇಕಪ್‌ ರೂಮ್‌ಗೆ ಹೋದಾಗ ಅಲ್ಲಿ ಇನ್ನೊಂದು ಶಾಕ್ ಕಾದಿತ್ತು. ನಾನು ಮೇಕಪ್ ರೂಮ್‌ಗೆ ಹೋದಾಗ ಅಲ್ಲಿ ನಾನು ಉಡಬೇಕಿದ್ದ ಸೀರೆಯನ್ನು ನೋಡಿದೆ. ಅದೊಂದು ಸಿಂಪಲ್ ಸೀರೆಯಾಗಿತ್ತು. ಜೊತೆಗೆ ಮ್ಯಾಚೇ ಆಗದ ಬ್ಲೌಸ್.  ನಾನು ಅದನ್ನು ಧರಿಸಲು ತುಂಬಾ ಖುಷಿಯಾಗಿದ್ದೆ. ಆದರೆ ನನ್ನ ಅಮ್ಮ ಮಾತ್ರ ಶಾಕ್ ಆಗಿದ್ದಳು. ಇದು ಇನ್ನೂ ಚೆನ್ನಾಗಿದ್ದಿದ್ದಾರೆ ಚೆಂದವಿರುತ್ತಿತ್ತು ಎಂದು ಹೇಳಿದ್ದರು. ಆದರೆ ಗುಲ್ಜರ್ ಅವರು ಸಾಧ್ಯ ಇಲ್ಲ ಎಂದು ಬಿಟ್ಟಿದ್ದರು. ಮೇಕಪ್ ಕೂಡ ಕಡಿಮೆ ಇರಬೇಕು ಎಂದಿದ್ದರು ಎಂದು ಹೇಳುತ್ತಾ ನಕ್ಕಿದ್ದಾರೆ ಹೇಮಾಮಾಲಿನಿ.

ಅದಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಅದು ತಮಾಷೆಯಿಂದ ಕೂಡಿರುತ್ತಿತ್ತು. ಅಲ್ಲದೇ ನನಗೆ ಕ್ಯಾಮರಾ ಮುಂದೆ ವೇಗವಾಗಿ ಮಾತನಾಡುವ ಅಭ್ಯಾಸವಿತ್ತು. ಆದರೆ ಗುಲ್ಜರ್ ಅವರು ನನ್ನ ವೇಗ ತಗ್ಗಿಸುತ್ತಿದ್ದರು. ನಾನು ವೇಗವಾಗಿ ಮಾತನಾಡುವಾಗಲೆಲ್ಲಾ ಎಲ್ಲಿಗೆ ಹೋಗಬೇಕು ನಿಂಗೆ ಎಂದು ಕೇಳುತ್ತಿದ್ದರು. ನಾನು ಮುಂದಿನ ಶೂಟ್‌ಗೆ ಎನ್ನುತ್ತಿದೆ. ಆಗ ಶೂಟ್ ಮುಂದೆ ನಡೆಯುತ್ತೆ ನೀನು ಮೊದಲು ಇಲ್ಲಿ ನಿಧಾನವಾಗಿ ಮಾತನಾಡು ಎನ್ನುತ್ತಿದ್ದರು. ಆದರೆ ನನ್ನ ವೇಗವನ್ನು ನಿಧಾನಗೊಳಿಸುವುದು ನನಗೆ ತುಂಬಾ ಕಷ್ಟವೆನಿಸುತ್ತಿತ್ತು. ಎಂದು ಹೇಳಿಕೊಂಡಿದ್ದಾರೆ ಕನಸಿನ ಕನ್ಯೆ.

ಪ್ರಕಾಶ್ ರೈ ಮಾಡಿದ ಸಂದರ್ಶನದಲ್ಲಿ ಹೇಮ ಮಾಲಿನ ಜೊತಗಿನ ಸ್ನೇಹ ತೆರೆದಿಟ್ಟ ಬಾಲಿವುಡ್ ಶ್ರೀದೇವಿ!

ಒಬ್ಬ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ನಾನು ನನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವ ವೇಳೆ ನನ್ನ ಕಣ್ಣುಗಳು ಹಾಗೂ ಹುಬ್ಬು ಹೆಚ್ಚಾಗಿ  ಚಲಿಸುತ್ತಿದ್ದವು. ಆದರೆ ಗುಲ್ಜರ್‌ಗೆ ಇದು ಬೇಕಾಗಿರಲಿಲ್ಲ, ಅವರು ನನ್ನ ಹುಬ್ಬಗಳು ನಿಧಾನವಾಗಿ ಚಲಿಸುವವರೆಗೆ ಹಲವು ಬಾರಿ ರೀಟೇಕ್ ಮಾಡುತ್ತಿದ್ದರು. ಅಲ್ಲದೇ ಅವರು ನಿನ್ನ ಹುಬ್ಬುಗಳು ಡಾನ್ಸ್ ಮಾಡುತ್ತಿವೆ ಎನ್ನುತ್ತಿದ್ದರು. ನಂತರ ನಾನು ನನ್ನನ್ನು ನಿಯಂತ್ರಿಸಿಕೊಂಡು ನಿಧಾನವಾಗಿ ಮಾತನಾಡುತ್ತಿದೆ ಎಂದು ಹೇಮಾ ಮಾಲಿನಿ ಗುಲ್ಜರ್ ಜೊತೆಗಿನ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಫ್ಯಾನ್ಸ್ ಸೆಲ್ಪಿ ಕೇಳಿದ್ದಕ್ಕೆ ಗೊಣಗಾಡುತ್ತಾ ಮುಖ ಊದಿಸಿಕೊಂಡ ಕನಸಿನ ಕನ್ಯೆ

click me!