
ಬಾಲಿವುಡ್‌ನ ಸದ್ಯದ ಸೆಲೆಬ್ರಿಟಿ ಕಿಡ್ ರಾಹಾ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮುದ್ದಾದ ಮಗಳ ಫೋಟೋವನ್ನು ಕ್ರಿಸ್ಮಸ್ ಹಬ್ಬದಂದು ರಿವೀಲ್ ಮಾಡಿಬಿಟ್ಟರು. ನೋಡಲು ತಾತನಂತೆ ಇರುವ ರಾಹಾ ಹುಟ್ಟಿದ ಕ್ಷಣ ಹೇಗಿತ್ತು? ಆಕೆಯನ್ನು ಮೊದಲು ಎತ್ತಿಕೊಂಡ ಕ್ಷಣ ಹೇಗಿತ್ತು ಎಂದು ಕರೀನಾ ಕಪೂರ್ ನಡೆಸುವ ಕಾರ್ಯಕ್ರಮದಲ್ಲಿ ರಣಬೀರ್ ಖುಷಿ ಹಂಚಿಕೊಂಡಿದ್ದಾರೆ.
'ಆರಂಭದಲ್ಲಿ ಎರಡು ತಿಂಗಳು ನಮಗೆ ಸಹಾಯ ಮಾಡಲು ಮನೆಯಲ್ಲಿ ಜನರಿದ್ದರು. ಮೊದಲ ಮಗು ವಿಚಾರದಲ್ಲಿ ಹೆಚ್ಚಿಗೆ ಕಾಳಜಿ ವಹಿಸುತ್ತೀವಿ. ನಮ್ಮ ನಡುವೆ ಆಕೆ ಮಲಗಿದ್ದರೂ ಸಣ್ಣದಾಗಿ ಕೈ ಕಾಲು ಸರಿಸಿದರೂ ಎಚ್ಚರವಾಗುತ್ತದೆ. ಎಷ್ಟೇ ಡೀಪ್ ನಿದ್ರೆಯಲ್ಲಿ ಇದ್ದರೂ ಎಚ್ಚರವಾಗುತ್ತದೆ. ಮೊದಲು ಭಯದಲ್ಲಿ ಆಕೆಯ ಮೂಗಿನ ಕೆಳಗಿ ಬೆರಳು ಇಟ್ಟು ಉಸಿರಾಡುತ್ತಿದ್ದಾಳಾ ಎಂದು ಚೆಕ್ ಮಾಡುತ್ತಿದ್ದೆ. ಆ ಸಮಯದಲ್ಲಿ ನಿದ್ರೆ ಗೆಟ್ಟರೂ ಅದು ತುಂಬಾ ಪಾಸಿಟಿವ್ ಸನ್ನೆ ಎನ್ನಬಹುದು. ಮದುವೆ ಆಗುತ್ತಿದ್ದೀವಿ ಮಗು ಹುಟ್ಟುತ್ತಿದ್ದಾಳೆ ಅನ್ನೋ ಕಲ್ಪನೆ ಕೂಡ ನನಗೆ ಇರಲಿಲ್ಲ. ರಾಹಾ ಹುಟ್ಟಿದ ದಿನ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿತ್ತು. ಆಕೆ ನಮ್ಮ ಜೀವದಲ್ಲಿ ದೊಡ್ಡ ಬ್ಲೆಸಿಂಗ್ ಮತ್ತು ಗಿಫ್ಟ್. ರಾಹಾ ಹುಟ್ಟಿದ ಕ್ಷಣವೇ ಆಕೆಯನ್ನು ಎತ್ತಿಕೊಳ್ಳುವ ಅವಕಾಶ ಸಿಕ್ಕಿತ್ತು. ಅಲ್ಲಿ ಆಕೆ ಕರಳನ್ನು ಕಟ್ ಮಾಡಿದೆ ನೋಡಿದೆ. ನನ್ನ ಜೀವನದ ಅದ್ಭುತ ಕ್ಷಣ ಹಾಗೂ ನೆನಪು ಎನ್ನಬಹುದು' ಎಂದು ರಣಬೀರ್ ಕಪೂರ್ ಮಾತನಾಡಿದ್ದಾರೆ.
ಆಲಿಯಾ ರಣಬೀರ್ ಲಿಟಲ್ ಡಾರ್ಲಿಂಗ್ ರಾಹಾ ಕಪೂರ್ ಹುಟ್ಟುವಾಗಲೇ ಬಿಲಿಯನೇರ್?
'ರಾಹಾ ಹುಟ್ಟಿದ ಕ್ಷಣ ಆಕೆಯನ್ನು ಆಲಿಯಾ ಬಳಿ ಕರೆದುಕೊಂಡು ಹೋದರು. ಅಲ್ಲಿ ಒಬ್ಬೊರನ್ನೊಬ್ಬರು ತಬ್ಬಿಕೊಂಡರು ಕ್ಷಣ ಮ್ಯಾಜಿಕಲ್ ಆಗಿತ್ತು. ರಾಹಾ ಹುಟ್ಟಿದ ತಕ್ಷಣ ಅಳುತ್ತಿದ್ದಳು ಆದರೆ ಆಲಿಯಾ ಪಕ್ಕ ಬಂದ ತಕ್ಷಣ ಸುಮ್ಮನಾದಳು. ವಿಡಿಯೋ ರೆಕಾರ್ಡ್ ಮಾಡಿಲ್ಲ ಆದರೆ ಒಂದು ಫೋಟೋ ಇದೆ. ಆ ಕ್ಷಣವನ್ನು ಎಂಜಾಯ್ ಮಾಡುವುದು ಅಷ್ಟೇ ನನ್ನ ಕೆಲಸ ಆಗಿತ್ತು...ಮೊಬೈಲ್ ಮೇಲೆ ಗಮನ ಇರಲಿಲ್ಲ' ಎಂದು ರಣಬೀರ್ ಹೇಳಿದ್ದಾರೆ.
ಮೊದಲ ಬಾರಿಗೆ ಮಗಳ ಮುಖ ತೋರಿಸಿದ ರಣಬೀರ್ ಆಲಿಯಾ : ಅಜ್ಜ ರಿಷಿ ಕಪೂರ್‌ಗೆ ಹೋಲಿಸಿದ ಫ್ಯಾನ್ಸ್
'ರಾಹಾ ಡೈಪರ್‌ನ ನಾನು ಬದಲಾಯಿಸಿದ್ದೀನಿ. ಆದರೆ ಆಕೆಗೆ 20 ಸೆಕೆಂಡ್‌ಗಳಲ್ಲಿ ತೇಗು ಬರುವಂತೆ ಮಾಡುತ್ತೀನಿ ಹಾಗೂ ಬೇಗ ಮಲಗಿಸುತ್ತೀನಿ. ಈ ವಿಚಾರದಲ್ಲಿ ನಾನು ನನ್ನನ್ನು ರೇಟ್ ಮಾಡಿಕೊಂಡರೆ...ಡೈಪರ್ ಬದಲಾಯಿಸುವುದರಲ್ಲಿ 1 ಅಂಕ, ತೇಗು ವಿಚಾರದಲ್ಲಿ 7 ಅಂಕ ಹಾಗೂ ನಿದ್ರೆ ವಿಚಾರದಲ್ಲಿ 7 ಸಾವಿರ ಅಂಕ. ಮಗಳ ವಿಚಾರದಲ್ಲಿ ಆಲಿಯಾ ತುಂಬಾ ತಲೆ ಕೆಡಿಸಿಕೊಳ್ಳುತ್ತಾಳೆ ಹೀಗಾಗಿ ನಾನು ಅತಿ ಹೆಚ್ಚು ಶಾಂತಿ ಇರುವ ವ್ಯಕ್ತಿಯಾಗಿ ಇರಬೇಕು. ಮತ್ತೊಬ್ಬರನ್ನು ಭೇಟಿ ಮಾಡಿದರೆ ಹೇಗೆ, ಅದು ಮುಟ್ಟಬೇಡ ಇದು ಮುಟ್ಟಬೇಡ ಅನ್ನೋ ವಿಚಾರಗಳನ್ನು ನಾನು ನಂಬುವುದಿಲ್ಲ. ಏಕೆಂದರೆ ಮನುಷ್ಯರು ಮತ್ತೊಬ್ಬರ ಜೊತೆ ಬೆರೆತರೆ ಸುಲಭವಾಗಿ ಹ್ಯಾಂಡಲ್ ಮಾಡಬಹುದು ಅವರ ಇಮ್ಯೂನಿಟಿ ಚೆನ್ನಾಗಿ ಇರಲಿದೆ. ದೊಡ್ಡವರಾಗುತ್ತಿದ್ದಂತೆ ಅವರಿಗೆ ಖುಷಿ ಜೀವನ ಅನಿಸಬೇಕು' ಎಂದಿದ್ದಾರೆ ರಣಬೀರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.